Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದುಗುಡ...!

ಕಳೆದ ದಿನಗಳ ಮೆಲಕು ಹಾಕುತ ನನ್ನ ನಾ ಹುಡುಕುತಿರುವೆ....!
ಜೀವನದ ಅತೀ ಮುಖ್ಯ ಘಟ್ಟದಿ ನನ್ನನೇ ನಾ ಮರೆತಿರುವೆ....!
ಕುಂದಿದ ಆತ್ಮಸ್ಥೈರ್ಯಕೆ ಹೆಗಲು ಕೊಟ್ಟು ಮೇಲೆತ್ತುವುದು ಹೇಗೋ....!
ಮರೆತ ನನ್ನ ನಾ ಮರಳಿ ಪಡೆಯುವುದು ಹೇಗೋ....!
ರಾಜ್.S.

- ರಾಜ್. S

24 Feb 2017, 08:20 am

ಚಂದ್ರ....

ಆಗಸದಲ್ಲಿನ ರಾತ್ರಿ ಚಂದ್ರ ಕಣ್ಮುಂದೆ ...
ಕಣ್ಮುಚ್ಚಲು ಮನಸ್ಸಾಗುತ್ತಿಲ್ಲ...

ನೆನಪಿನಲ್ಲಿನ ಪ್ರೀತಿ ಚಂದ್ರ ನನ್ಮುಂದೆ...
ಹೃದಯ ತೆರೆಯಲು ಮನಸ್ಸಾಗುತ್ತಿಲ್ಲ...

ಆ ರಾತ್ರಿ ಚಂದ್ರ ಪೂಣ೯ವಾದಂತೆಲ್ಲಾ
ಹುಣ್ಣಿಮೆ....

ಈ ಪ್ರೀತಿ ಚಂದ್ರ ನೆನಪಾದಂತೆಲ್ಲಾ
ಅಮವಾಸ್ಯೆ....

- B.Shree

23 Feb 2017, 11:50 pm

ಮುಂಗುರುಳ ಒಂದು ಸುತ್ತು.!!

ಮುಂಗುರುಳು ಹುಬ್ಬನ್ನು ಮುತ್ತುವಾಗ ನನ್ನ ಸಾಚಾತನ ಕಟ್ಟೆ ಒಡೆಯಬೇಕೆಂದೆನಿಸುತ್ತದೆ
ಕಪ್ಪು ಕಾಡಿಗೆ ಇನ್ನೂ ಸೆಳೆಯುತಿರಲು ಮತ್ತೊಮ್ಮೆ ಮೌನಿಯಾಗುತ್ತೇನೆ
ವಕಾಲತ್ತಿಗೆ ಕಣ್ಣ ಭಾಷೆಗಳು ಬರುವಾಗ ವಯಸ್ಸಿನ ಪರಧಿ ತೆರೆ ಎಳೆದು ಬಿಡುತ್ತದೆ

ಏಕಾಂತಕ್ಕೆ ಒಲವೆಂದು ನಾಮಕರಣ
ಮಾಡಿದ್ದು ನಾನೇ ಅವಳಂತೆ ಹೊಸತು
ಮೊದಲ ವಾರೆ ನೋಟ ಅನಾಮಿಕ ಸೆಳೆತ ಮುಂಗುರುಳು ಬಿರಿದ ಮಲ್ಲಿಗೆ ಹೇಳದೇ ಕೊಲ್ಲುವ ಆಯುಧ
ಅರ್ಥವೇ ಆಗದ ಹಲ್ಕಾ ಕವನ ಭಾಷೆ ಕೇಳದ ಜಾಣ ಕಿವಿ ಮತ್ತು ಅವಳು

ಪರಿಮಿತ ಆಸೆಯವನು ಅನಂತದೆಡೆಗೆ ನೋಡುವಾಗ ದುಂಬಿಯಾಗತ್ತಾಳೆ
ಕಡಲಾಚೆಯ ಅದಿರು ನಾಡಿನವಳು ಉಪ್ಪೆಂದರೆ ಇಷ್ಟವಿರಬೇಕು
ಬೇಕಾಬಿಟ್ಟಿ ಮನಮೋಡಿಯಂತೆ ಕಣ್ಣಿನೊಳಗೆ ತುರುಕಿಸಿ ಹೊರಟಿದ್ದಾಳೆ

ಬ್ರಹ್ಮಚರ್ಯ ಕೊನೆಯಾಗಿಸುವ ತಂತ್ರ ಹೆಣೆದದ್ದು ಅವಳೇ
ಕೌಮಾರ್ದನ ಎದೆಯಲ್ಲೊಂದು ಸಣ್ಣ ಮಟ್ಟಿನ ಕಂಪನ ಆಗೂ ಹೀಗೂ ಪ್ರಥಮ ಸೋಲು
ಅಂದಿನಿಂದ ವಿಹರದ ಹೊತ್ತಗೆಯಲ್ಲಿ ಹಾಳೆ ಒದ್ದೆಯಾಗಲು ಶುಭಾರಂಭ

ಹಲ್ಕಟ್..

ಅವಿಜ್ಞಾನಿ

- ಅವಿಜ್ಞಾನಿ

23 Feb 2017, 07:56 pm

ಬಾಲ್ಯವಿವಾಹಿತೆಯ ಪತ್ರ...

ಜಗತ್ತೇನೆಂದೇ ಅರಿಯದ ಪೋರಿ ನಾ ಅಂದು...
ಬಣ್ಣ ಬಣ್ಣದ ಆಟಿಕೆಗಳೇ ನನ್ನ ಜಗತ್ತಂದು...
ಆದರೆ...
ಈ ಬಣ್ಣದ ಜಗತ್ತೇನೆಂದು ಅರಿತ ..ಈ ದಿನ ನನ್ನ ಸನಿಹವಷ್ಟೇ ಅಲ್ಲ ...ನನ್ನ ಬಾಳಿನಲ್ಲೇ ನೀನಿಲ್ಲ ಇಂದೂ.....
ನಿನ್ನ ಮುಖ ಪರಿಚಯವೇ ಅಸ್ಪಷ್ಟವಾಗಿರುವ ನನಗಿಂದು ....
ನಿನ್ನ ಮುಖಪಟದ ಛಾಯಾ ಚಿತ್ರವೇ ಗತಿ ನನಗಿಂದು.....
ಇದೆಲ್ಲವನ್ನೂ ಅರಿತಿದ್ದರೂ ಬಾಳುತ್ತಿರುವೇ...
ಎಂದಾದರು ನನ್ನ ಅಳಲು ಕೇಳಿ ಮರು ಜನ್ಮವ...........
ಪಡೆಯುವೆ.......ಎಂದು.............


ಏನೆಂದು ಬರೆಯಲಿ ಸಂಗಾತಿ ....ಈ ಅರೆದು ಹೋಗುವ ಹಾಳೆಯ ಮೇಲೆ....ಎಷ್ಟು ಬರೆದರೂ ಸಾಲದು ...ನನ್ನ ಸಾಯುವಂತೆ ನೆನಪಿಸೋ.....ನಿನ್ನ ನೆನಪಿನ ಬಗ್ಗೆ.........


ಇಂತಿ ನಿನ್ನ ಬರುವ ಹಾದಿಯನ್ನೇ ಕಾಯುತ್ತಿರುವ ನಿನ್ನ ಸಂಗಾತಿ......................

- happy(kushi)

23 Feb 2017, 07:46 pm

ನನ್ನ ಕೈ ಹಿಡಿಯಲು

ಏಬ್ಬೇರಳಷ್ಟು ಪ್ರೀತಿ ಇದೆ
ತೋರು ಬೆರಳಷ್ಟು ಆಸೆ ಇದೆ
ಮಧ್ಯ ಬೆರಳಷ್ಟು ನಿರೀಕ್ಷಣೆ ಇದೆ
ಉಂಗುರ ಬೆರಳಷ್ಟು ಉತ್ಸಾಹ ಇದೆ
ಕಿರು ಬೆರಳಷ್ಟು ಕೋಪವಿದೆ .

ಆದರೇ ನನ್ನ ಕೈ ಹಿಡಿಯಲು
ನೀನೇ ನನ್ನ ಬಳಿ ಇಲ್ಲ ..........!!!!!

- ಚುಕ್ಕಿ

23 Feb 2017, 06:56 pm

ಸ್ನೇಹ...

ಬಿಸಿಲಿಗೆ ಬಾಡದ ಹೂವಿಲ್ಲ...
ಹೃದಯ ಗೆಲ್ಲದ ಪ್ರೀತಿ ಇಲ್ಲ....
ಆಸೆಗೆ ಮೀರಿದ ಕನಸಿಲ್ಲ...
ದೈವನಿಲ್ಲದೆ ಜಗತ್ತಿಲ್ಲ...
ಸೂಯ್ಯನಿಲ್ಲದೆ ಹಗಲಿಲ್ಲ..... ಚಂದ್ರನಿಲ್ಲದೆ
ಇರುಳಿಲ್ಲ...
ಭೂಮಿ ಇಲ್ಲದೆ ಫಲವಿಲ್ಲ.....
ಬಡಿತವಿಲ್ಲದೆ ಉಸಿರಿಲ್ಲ...
ತಾಯಿ ಇಲ್ಲದೆ ಮಗುವಿಲ್ಲ...
ಗುರುವಿಲ್ಲದ ಶಿಶ್ಯನಿಲ್ಲ....
ಸಾವಿಲ್ಲದ ಮನುಕುಲವಿಲ್ಲ...
ಹಾಗೇ..................................ಅರಿಯದೆ ಬರುವ ನಿಶ್ಕಲ್ಮಶವಾದ ಸ್ನೇಹಕ್ಕೆ ಎಂದೇಂದಿಗೂ ಸಾವಿಲ್ಲ.........................

- happy(kushi)

23 Feb 2017, 06:34 pm

ಮುಟ್ಟಾದಾಗ

ಮೊದಲ ಮುಟ್ಟು ನಿಂತಾಗಲೇ ತಾನೊಂದು ಉಚ್ಛ ಬಿರುದು ಪಡೆಯ ಹೊರಟವಳೆಂಬ ಹೆಮ್ಮೆಯಲ್ಲಿ ಮುಂಗುರುಳನ್ನು ಬೆರಳ ಸಂಧಿಗೆ ಸಿಕ್ಕಿಸೋ ಹೊಸ ಖಯಾಲಿ ಶುರು ಮಾಡಿದ್ದಳು

ಅದೇನೋ ಹೊಡೆತದ ಸದ್ಧು ಕೇಳೊತ್ತೆಂದು ಏಕಾಂತಲ್ಲಿ ಹೊಟ್ಟೆಗೆ ಕಿವಿಯಾಗಿಸುವಾಗ ಪಂಚಭೂತವನ್ನು ಕಟ್ಟು ಪಾಡಿನಲ್ಲಿಡುವವಳಂತೆ ಕಂಡಿದ್ದಳು

ಅಪ್ಪನಂತೆ ಪೋಲಿ ಎನುತಾ ಸೊಂಟ ಮುಂದಾಗಿಸುವಾಗ ಹೆಣ್ತನದ ಭರಪೂರ ಸುಖ ಮೊಗದಲ್ಲಿ ಅಳಿಸಲಾಗದ ಕಿರು ನಗು ಹುಟ್ಟಿ ಬಿಡುತ್ತಿತ್ತು

ಸೀಮಂತದ ಶಾಸ್ತ್ರಕ್ಕಿಂತ ಹೆಚ್ಚು ಅವಳ ಬಯಕೆ ನಿಂತದ್ದು ಅವನು ಹೊಟ್ಟೆಯೊಳಗಿನ ತದ್ರೂಪಿಯೊಂದಿಗೆ ಸಂಭಾಷಣೆ ನಡೆಸಿದಾಗಲೆಲ್ಲ ನಿಲ್ಲುತ್ತಿತ್ತು

ಎಲ್ಲಾ ಪ್ರೇಮಿಗಳಂತೆ ಅವಳೂ ಹೇಳಿದ್ದಳು ನಿನಗಾಗಿ ಸಾಯಲು ಸಿದ್ದ ಅಂತೆಯೇ ತಯಾರು ಇದ್ದಲೂ ಕೂಡ
ಹೆರಲು ಹೊರಟವಳು ಜೀವ ಹೋಗಬಹುದೆಂಬ ಸಂಶಯಕ್ಕಿಂತ ಹೊಸ ಜೀವ ಬರುವ ಖುಷಿಯನ್ನೇ ಹೆಚ್ಚು ಆಸ್ವಾದಿಸುತ್ತಿದ್ದಳು
ಪಕ್ಕದಲ್ಲಿ ಇರುವ ಹೊಸ ಅಳು ಕೇಳಿದಾಗ ಬಂದ ನಗು ಅವಳಿಗೆ ಹಿಂದೆಂದೂ ಮೂಡದ್ದೇ ಆಗಿತ್ತು...


ಅವಿಜ್ಞಾನಿ

- ಅವಿಜ್ಞಾನಿ

23 Feb 2017, 12:16 pm

ಮೊದಲ ಪ್ರೇಮ....!

ಅವಳ ಕಂಗಳ ಕ್ಷಣದ ನೋಟಕೆ ದಿನವೆಲ್ಲ ಕಾಯುವ ಹಂಬಲ....!
ಆ ತುಟಿಗಳು ಚೆಲ್ಲುವ ಮುಗುಳುನಗೆಗೆ ಪ್ರತಿದಿನವೂ ಸೋಲುವ ಹಂಬಲ....!
ರಾಶಿ ಕನಸುಗಳ ಹೃದಯದ ಪೆಟ್ಟಿಗೆಗೆ ಬೀಗ ಅವಳು....!
ಪ್ರತಿ ಕನಸಿಗೂ ಪ್ರೀತಿಯ ಅಮೃತವ ಸೇರಿಸಿದವಳು....!
ಮಾತನಾಡದೆಯೇ ಮಧುರ ಭಾವನೆಗಳು ಮನದುಂಬಿ ಮೂಡಿರಲು, ಓರೆ ನೋಟ ಬೀರಿ ನಗುಮೊಗದಿ ಎಲ್ಲ ಅರಿತವಳು....!
ನೋಟಗಳು ಸೇರಿದಾಗ ಎದೆಯಲಿ ಹೂವಿನ ನಂದನ....!
ಮನಗಳು ಸೇರಿದಾಗ ಹೃದಯದಲಿ ಪ್ರೀತಿಯ
ಬಂಧನ....!
ಮೊದಲ ಪ್ರೇಮ, ಮೃದು ಮನಸುಗಳ ಸುಂದರ ಮಿಲನ....!
ರಾಜ್.S.

- ರಾಜ್. S

22 Feb 2017, 10:50 pm

ಪಗಡೆ

ಪಗಡೆಯ ಅಟಕೆ ಕುಳಿತಿವೇ
ಸಾವು ಮತ್ತು ಉಸಿರು
ದಾಳದಂತೆ ನನ್ನ ಬಳಸಿ

ಅಗೋಮ್ಮೆ ಇಗೋಮ್ಮೆ
ಸಾವು ಗೆಲ್ಲುತಿತ್ತು
ಜೀವಾ ಸೋಲುತ್ತಿತ್ತು
ದೇವರು ನಿರ್ಣಾಯಕನಾಗಿ
ಕುಳಿತಿದ್ದ ನಕ್ಕು ನೋಡುತ
ನನ್ನ ತೋಳಲಾಟ

ದಾಳವ ಉರುಳಿಸಿ
ನೋವುಗಳ ಪೆಟ್ಟ ನೀಡಿತ್ತಿತ್ತು
ಪಗಡೆಯಾಟದ ಜೀವನದ ಪಟ
ಅತ್ತ ಸಾವು ಕರಿನೆರಳು
ಇತ್ತ ಅರಿಯದ ಜೀವನದ ಉಸಿರು
ಸೂತ್ರಧಾರನೆ ದಾಳವ ಗಾಳದಂತೆ ಬಳಸಿದ್ದ

ಉಸಿರ ಸೋಲಿಸಿ ಅತ್ಮ ವಾಯುವ
ನೀಲಾಗಸದ ಗಾಳಿಯಲಿ ಚೆಲ್ಲಿದ್ದ ಪ್ರಾಣ ಪಕ್ಷಿಯ
ದೇವರೆ ನೀ ಇರುವ ವಿಳಾಸವ ತಿಳಿಸು
ಅಗೀರೋ ಮೋಸಕೆ ನ್ಯಾಯವ ಕೇಳಬೇಕಿದೆ
ದೂರೋಂದನು ದಾಖಲಿಸಬೇಕಿದೇ
ಉಸಿರ ಕದ್ದೋಯಿದ ಜವರಾಯನ ಮೇಲೆ

- ಸುಪ್ರೀತ್ ಕ೦ಚಿಬೈಲ್(ಸುಕ)

22 Feb 2017, 09:35 pm

ಶಿಕ್ಷಕ

ಎತ್ತ3 ಸಾಗುತಲಿರುವೆ
ಈ ಬೆತ್ತಲ ಜಗದಲ್ಲಿ|
ಬಿತ್ತಲು ಜ್ಞಾನ ಬೀಜವ
ಮುತ್ತಲು ಈ ಜಗವ ಪ್ರೀತಿಯ||೧||

ಎತ್ತ3 ಸಾಗುತಲಿರುವೆ
ಈ ಅರಿಯದ ಜಗದಲ್ಲಿ|
ಅರಿವು ಮೂಡಿಸ ಹೊರಟಿಹೆ
ಬೆರೆತು ಬದುಕಲು ನೀನು||೨||

ಎತ್ತ3 ಸಾಗುತಲಿರುವೆ
ಆ ಇನಿಯಾ ಪಥ ಬದಲಿಸದಿದ್ದರೆ|
ಜಗವು ಬೆಳಕು ಕಾಣದೆಂದು
ನೀನು ಅವನ ಮಾರ್ಗವೇ ತುಳಿದೆ||೩||

ಎತ್ತ3 ಸಾಗುತಲಿರುವೆ
ಈ ಕಗ್ಗತ್ತಲ ಸಮಾಜದಿ|
ಕತ್ತಲ ಕಡೆಗೆ ಸಾಗುತಿದೆ ನಿನ್ನ ಪಯಣ
ಪ್ರಜ್ವಲಿಸುವ ದೀವಿಗೆಯಾಗಿ ಬೆಳಕು ನೀಡುತಾ||೪||

ಎತ್ತ3 ಸಾಗುತಲಿರುವೆ
ಭವ ಬಂಧಗಳ ಬಂಧಿಯಾಗಿ|
ಆದರ್ಶ ಪುರುಷನಾಗಿರುವೆ ನಮಗೆಲ್ಲ
ಎಂದೆಂದಿಗೂ ನಿನ್ನ ಅಭಯವಿರಲಿ ನಮ್ಮೊಂದಿಗೆ||೫||

ಎತ್ತ3 ಸಾಗುತಲಿರುವೆ
ಅಜ್ಞಾನವ ತುಂಬಿರುವ ಸಮಾಜದಿ|
ಜ್ಞಾನದ ದೀವಿಗೆಯನ್ನು ಪಸರಿಸುತ್ತಾ
ಈ ವಿಶ್ವವನ್ನೇ ಎಚ್ಚರಿಸುತ್ತಾ||೬||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

22 Feb 2017, 09:20 pm