Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀ ಬೀಸಿ ಬರುತ್ತಿರಲು ಮರಗಳು ನಮಿಸುತಿವೆ
ನಿನ್ನ ಬರುವಿಕೆಗಾಗಿ ಹಲವು ಮನ ಕಾಯುತಿವೆ
ಬರುವೆ ಯಾವಾಗ ಎಂದು ಮನದಲ್ಲೇ ತವಕಿಸಿವೆ
ಹಣ್ಣಾದ ಎಲೆಗಳು ಉದುರಲು ಕಾಯುತಿವೆ||
ನೀ ಹಸಿರೆಲೆ ಮೇಲೆ ಹಾಯ್ದು ಬರುತಿರಲು
ಮುಖದಲಿ ಮಂದಹಾಸ ಬೀರುತಿರಲು
ಕಳೆದ ನೆನಪುಗಳು ಹಾಗೇ ಸುಳಿಯುತಿರಲು
ಮನದಲಿ ಸಂತಸ ಗರಿಗೆದರುತಿರಲು..
- ನಮಿತ ಗಟ್ಟಿ
26 Feb 2017, 08:01 pm
ಗಾಳಿ ಬಿಸಲಿ ಮೋಡ ಸುರಿಯಲಿ
ಮಳೆಯು ಮೂಡಿದು ಬಂದಿದು ಬಂದಿತು,
ಹಸಿರು ಗಾಳಿಯು ತಂಪು ಧರೆಯಿತು
ಪಚ್ಚ ಎಲೆಗಳು ಹೊಳೆಯಲಿ.
ಸೂರ್ಯ ಮೂಡಲಿ ಜಗವ ಬೆಳಗಲಿ
ಬೆಳಗು ತಾನದಿ ಹೊಳೆಯಲಿ,
ಕಿರಣ ಕಾಂತಿಯು ಮೂಡಿಬಂದಿತು
ಸೂರ್ಯ ಕಾಂತಿಯು ತಿರುಗಿತು.
ಜನದಿ ಮನಗಳ ದನಿಯ ಕೂಗು
ಕೇಳಿ ಬಂದಿತು ಗಾಳಿಲಿ,
ಒಮ್ಮೆ ತಿರುಗಿ ನೋಡಿದಾಗ, ಅಲ್ಲಿ ನಗು
ಬಳಿಯ ಬಂದಿತು ಮೊಗದಲಿ.
ರೈತ ನೆತ್ತರ ಬಿಜವನೊತ್ತು
ಸಾಗಿ ಸಾಗಿ ನಡೆದು ಬಂದನು ಮುಂದೆ,
ಎತ್ತು ಬಂಡಿಯನು ಹೊಡೆದುಕೊಂಡು, ಎತ್ತ
ನೊಡದೆ ಬಂದಿತು ಮುಂದೆ ಮುಂದಗೆ.
ನಾಗರಾಜ್ ಎಸ್ ಟಿ
ಹೊಸದಡಗೂರು (ಪೊ)
ಮೊಳಕಾಲ್ಮೂರು (ತಾ)
ಚಿತ್ರದುರ್ಗ (ಜಿಲ್ಲೆ)
577540
- ST
26 Feb 2017, 07:50 pm
ಕತ್ತಲ ದಾರಿ ಬಲುದೂರ
ಒಬ್ಬಂಟಿಯಾಗಿ ನಡೆಯಲಂಜಿ
ಹಚ್ಚಿದೆ ಒಂದು ಪ್ರೀತಿಯ ಹಣತೆ
ದೃಷ್ಟಿ ಇರದವರಿಗೆ ಹಗಲೇನು ಇರುಳೇನು
ಎಂದೆನುತ ಅದು ಮಿಂಚುಹುಳುವಾಗಿ
ಹಾರಿಹೋಗಿ ಮತ್ತೆ ನಾನು ಒಬ್ಬಂಟಿ
ಈಗ ಉಳಿದಿರುವುದಿಲ್ಲಿ ಕತ್ತಲೆ ಮತ್ತು ನಾನು ಮಾತ್ರ
ಕತ್ತಲೆಗೆ ಕಂಡ ಕಂಬನಿ ಬೆಳಕಿಗೆ ಕಾಣಲಿಲ್ಲ
ಕತ್ತಲೆಯನ್ನೇ ಪ್ರೀತಿಸಲು ಆರಂಭಿಸಿರುವೆ
-- ಹಂಸಿನಿ
- ವಿಸ್ಮಯ
26 Feb 2017, 07:46 pm
ಸಂತೋಷದಲ್ಲಿರುವ ಸಾವಿರ
ಸ್ನೆಹಿತರಿಗಿಂತ ಕಣ್ಣೀರು
ಬರದೇ ಒಂದು ಕ್ಷಣ ಕೈಯೋಡ್ಡುವ
ಒಂದು ಜೀವಿಯ ಸ್ನೆಹವಿದ್ದರೆ ಸಾಕು .
ಎಲ್ಲಾರೂ ಬಂದುಗಳೆ,ಎಲ್ಲಾರೂ
ಮಿತ್ರರೇ ಆದರೂ ಈ ಕಣ್ಣೀರಿಗೆ
ಕಾರಣಿಭೂತರದರೂ.......
ನಾನೇನ ನಿಮ್ಮ ದುಕ್ಕಕ್ಕೇ
ಕಣ್ಣೀರು ಹಾಕುವುದು ......?
ನನಗೂ ಮನಸಿದೆ ಅದಕ್ಕೂ
ನೋವಾಗುತ್ತೆ ತಿಳಿದುಕೊಳ್ಳಿ .
ನಿಮಗಾಗಿ ನಾನು ಮಾಡಿದಷ್ಟು
ನನಗೆ ಮಾಡಬೇಡಿ .......
ದಯವಿಟ್ಟು ನನ್ನ ನೋವಿಗೆ
ಕೆಲವು ಕಣ್ಣೀರ ಹನಿಗಳನ್ನು
ನನ್ನ ಕಣ್ಣಲ್ಲಿ ಉಳಿಸಿ ........!!!!
- ಚುಕ್ಕಿ
26 Feb 2017, 07:35 pm
ಜೀವನದ ಹಾದಿ ಬಲ್ಲವರಾರು
ಎಲ್ಲಗೆ ನಡೆಸುವುದೋ ಅರಿತವರಾರು
ಏರಿಳಿತದ ಯಾನಕೆ ಜೊತೆಯಾರು
ಬಾಯಾರಿದ ಹೃದಯಕೆ ಪ್ರೀತಿಯ ತಂಪೆರೆವರಾರು
ಸ್ನೇಹದ ತಂಗಾಳಿಯ ಬೀಸುವವರಾರು
ತುತ್ತಿನ ಚೀಲಕೆ ಆಶ್ರಯದಾತರಾರು
ಒಂಟಿತನವ ನೀಗಿಸುವವರಾರು
ಸಂಕಟ ಸಮಯದಲಿ ಕೈ ಹಿಡಿವವರಾರು
ಮೇಲಾರು ಕೀಳಾರು
ನಮ್ಮವರಾರು ಪರರಾರು
ಜೀವನದ ಹಾದಿ ಬಲ್ಲವರಾರು
ಹಾದಿಯ ಅಂತ್ಯವ ಕಂಡವರಾರು...
- Indushekar Chinivar
26 Feb 2017, 06:16 pm
ಕಣ್ಣೀರ ಹನಿಯೂ ನಗುತ
ಕೇಳುತಿದೆ ಎಂದಿಗೂ ನಾ
ನಿನ್ನ ಸಂತೋಷದಲ್ಲಿ
ಕಾಣುವುದಿಲ್ಲವೇ ಎಂದೂ .
ನಾ ಹೇಗೆ ತಿಳಿಸಲಿ ನಿನಗೆ
ನನ್ನ ಬದುಕಿನಲ್ಲಿ ನಗು
ಕಾಮನಬಿಲ್ಲoತೆ .ಕೆಲವು
ನಿಮಿಷಗಳು ಮಾತ್ರ
ಇರುತ್ತದೇಂದು.
ಇದ್ದಷ್ಟು ಸಮಯ ಏಳು
ಬಣ್ಣಗಳನ್ನು ತೋರಿಸಿ
ಎಲ್ಲರ ಮನ ಗೇಲ್ಲುತ್ತದೇಂದು.
ಒಂದು ಬಾರೀ ಮಾಯವಾದರೆ
ಮತ್ತೆ ಸಿಗುವುದು ಕಷ್ಟವೇಂದು.
ಕಣ್ಣೀರೇ ಎಂದಿದ್ದರು ನೀನೇ
ನನ್ನ ಪ್ರಾಣ ಸ್ನೆಹಿತೆ ಎಂದಿಗೂ
ನಾ ನಿನ್ನ ಬಿಟ್ಟು ಹೋಗುವುದಿಲ್ಲ ....
- ಚುಕ್ಕಿ
26 Feb 2017, 05:36 pm
ಗೆಳೆತನದ ಸವಿರುಚಿಯ ಕಂಡೆ ನಾ
ನಿನ್ನ ಪರಿಚಯದಲ್ಲಿ ..........
ನಿನ್ನ ಅಕ್ಕರೆಗೆ ನಾನೇನು
ಕೊಡಲಾಗುತ್ತದೆ ನನ್ನ ಜೀವನದಲ್ಲಿ
ನನ್ನ ಸ್ನೆಹ ಬಿಟ್ಟರೆ...............
ನೀನು ನನ್ನ ಮೊದಲ ಸ್ನೆಹಿತನಲ್ಲ
ಆದರೂ ನನ್ನ ಜೀವನದಲ್ಲಿ
ನಿನ್ನ ಜಾಗ ಯಾರಿಂದಲು
ಪೂರ್ತಿಗೊಳಿಸಲಗುವುದೀಲ್ಲ ..
ನಿನ್ನ ಅಭಿಮಾನದ ಮಾತು
ಅದು ಮನಕೆ ಕೊಡುವ
ಸಂತೋಷದ ತುತ್ತು .........
ನಿನ್ನ ನಗೇಯಲ್ಲಿನ ಸದ್ದು
ಕೇಳುವ ಕಿವಿಗಳಿಗೆ ನವನೀತ
ಚೋರನ ಮುರಳೀಗಾನಕ್ಕಿಂತಲೂ
ಮಧುರ ಭಾವನೆ ತಂದಿರುವುದು
ಇಂದೂ ............!!!!
- ಚುಕ್ಕಿ
26 Feb 2017, 05:21 pm
ಬಿಟ್ಟು ಹೋದವರ ಬಗ್ಗೆ ನೆನದು ಯಾಕೆ ಬೇಜಾರ್ ಮಾಡ್ಕೊಬೇಕು ಕನ್ನಡಿ ಶುದ್ದವಾಗಿದ್ರೆ ಮುಖನೋಡಿಕೊಳ್ಳೋರು ಇದ್ದೆ ಇರ್ತಾರೆ ಮನಸು ಚೆನ್ನಾಗಿದ್ರೆ ನಮಗೆ ಅಂತ ಒಬ್ರು ಸಿಕ್ಕೆಸಿಕ್ತಾರೆ.
- Rahul manoj v r
26 Feb 2017, 03:41 pm
ಎಲ್ಲೆಲ್ಲೂ ಫೇಸ್‌ಬುಕ್ ಹಾವಳಿ
ಯಾರಿಗೂ ಇಲ್ಲ ಸಮಾಜದ ಕಳಕಳಿ,
ಕೂಡಿ ಎಲ್ಲರೂ ಫೇಸ್‌ಬುಕ್‌ನ ಸಂಗ,
ಹಾಳಾಗುತ್ತಿದೆ ಇಂದು ಯುವಜನಾಂಗ.
ಮನೆ ಮನಗಳಲ್ಲೊಂದು ಕಂಪ್ಯೂಟರ್,
ಜೋಡಿಸಿಹರು ಅಂತರ್ಜಾಲದ ಕನೆಕ್ಟರ್,
ತೆರೆದಿಹರು ಫೇಸ್‌ಬುಕ್ ನಲ್ಲೋಂದು ಅಕೌಂಟ್,
ಕಂಡಕಂಡವರೊಂದಿಗೆ ನಡೆಸಿಹರು ಚಾಟ್.
ಪ್ರತಿ ಕೈಯಲ್ಲಿ ನಲಿದಾಡುತಿಹುದು ಮೊಬೈಲ್,
ಓಡಾಡುತಿಹುದು ಪರದೆಯ ಮೇಲೆ ಬೆರಳ್,
ಅಕ್ಕಪಕ್ಕದಲ್ಲಿ ದ್ದರು ತಂದೆ-ತಾಯಿ,
ದೂರದಲ್ಲಿರುವರಿಗೆ ಹೇಳುವರು ಹಾಯ್.
ಸಿಕ್ಕ ಸಿಕ್ಕ ಇಮೇಜ್ ಗಳ ನೋಡುತ,
ಇಷ್ಟ ಬಂದಂತೆ ಲೈಕ್ ಮಾಡುತ,
ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ,
ಸಾಗುತಿದೆ ಇಂದು ಸಮಯವ ಹಾಳುಗೆಡುತ.
ಇನ್ನಾದರು ನಿಲ್ಲಲಿ ಫೇಸ್‌ಬುಕ್ ಹಾವಳಿ,
ಸ್ವಲ್ಪ ವಾದರು ಇರಲಿ ಸಮಾಜದ ಕಳಕಳಿ,
ಹೀಗಾಗದಿರಲಿ ನಮ್ಮ ಜೀವನ ವ್ಯರ್ಥ,
ಜೀವನಕ್ಕೊಂದು ಬರಲಿ ಪರಿಪೂರ್ಣ ಅರ್ಥ.
- ರವೀಂದ್ರಬಾಪೂರ(GNL)
26 Feb 2017, 03:12 pm
ನಿನ್ನ ಬಗ್ಗೆ ಎಲ್ಲ ತಿಳಿದೂ
ನಿನ್ನ ಪ್ರೀತಿಸುತ್ತಿರುವೆ....
ಎಂದಿಗೂ ಸಾಯದ ಕೆಲವು ನೆನಪುಗಳು....
ಹೃದಯದಲ್ಲಿ ಮುಚ್ಚಿಟ್ಟ ಕೆಲವು ಸತ್ಯಗಳು....
ಇನ್ನು ಜೀವಂತ ವಾಗಿರುವ ಕೆಲವು ಬಾವನೆಗಳು....
ನೋಡಿಯೂ ನೋಡದಂತೆ ಕಣ್ಣು ಮುಚ್ಚಿಕೊಂಡ ಕ್ಷಣಗಳು....
ರಾತ್ರಿ ಎಲ್ಲ ಅತ್ತು ಬೆಳಗ್ಗೆ ನಕ್ಕ ದಿನಗಳು....
ನೋವಿನಿಂದ ಬಳಲಿದ ಅದೆಷ್ಟೋ ಸರಿ....
ನನ್ನ ಹೃದಯ ಕೇಳುತ್ತೆ....
ಓ ಮನಸೇ....!!
- RAjESH D
26 Feb 2017, 01:36 pm