Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಯಸುವೆನು ನಿನ್ನ ಸನಿಹ...

ಗೆಳತಿಯು ನೀ ಎನ್ನ
ಹಗಲಿರುಳು ಪೊರೆವೆ
ಬಾಳೆಂಬ ವೀಣೆಯನು
ಸಂತಸದಿ ನುಡಿಸುವೆ

ಗೊಂಬೆಯಂತೆ ಮೃದುವಾಗಿ ಅಪ್ಪಿದೆ
ಮುದ್ದಿನಲಿ ಸಿಂಗರಿಸಿ ಮೈಮರೆತೆ
ಕಾಣದ ಅನುಬಂಧ ನೀ ಬೆಸೆಯುತಾ
ಪ್ರೀತಿಯ ಸೆರೆಯಲಿ ಬಚ್ಚಿಟ್ಟೆ
ನೋವು ನಲಿವಲಿ ಒಂದಾಗಿ ಬೆರೆಯುತಾ
ಬದುಕ ಯಾನಕೆ ದಿಕ್ಸೂಚಿಯಾದೆ

ಬಯಸುವೆನು ನಿನ್ನ ಸನಿಹ
ಈ ಉಸಿರ ಕೊನೆತನಕ
ಬೇಡುವೆನು ನಿನ್ನ ಒಲವ
ಈ ಜನುಮ ಇರುವತನಕ...

- Indushekar Chinivar

04 Mar 2017, 06:04 pm

ಗೆಳಯ

ಕಳೆದು ಹೋಗಿದೆ ನನ್ನ ಗಮನ
ನಿನ್ನ ನೆನೆವ ಕೆಲಸದಲ್ಲಿ .
ನನ್ನಲ್ಲೇ ನಾನಿಲ್ಲ ನಿನ್ನ
ಹುಡುಕುವ ಪ್ರಯತ್ನದಲ್ಲಿ .

ನಿನ್ನನ್ನು ಪ್ರತಿಕ್ಷಣ ನೆನೆಯಲು
ನಾ ನಿನ್ನ ತಾಯಿಯಲ್ಲ .....
ಅನುದಿನ ನಿನ್ನ ಜೊತೆಗಿರಲು
ನಾ ನಿನ್ನ ಗೆಳತಿಯಲ್ಲಾ ....

ನಾನು ಕೇವಲ ನಿನ್ನ ಹ್ರುದಯ
ನಿನ್ನ ಪ್ರೀತಿಯೆOಬ ಉಸಿರಿನಿಂದ
ಜೀವಿಸುತ್ತಿರುವ ಗೆಳಯ ........

- ಚುಕ್ಕಿ

04 Mar 2017, 05:10 pm

ಉಳಿಯುವುದೋ ಅಳಿಯುವುದೋ ತಿಳಿದ

ಹಾಡಾಗಿ ಉಳಿಯುವುದೋ ಹಾಳಾಗಿ ಅಳಿಯುವುದೋ ತಿಳಿದಿಲ್ಲ ಈ ಕವನ.
ಅರಳಿ ಹಿಗ್ಗುವುದೋ ನರಳಿ
ಕುಗ್ಗುವುದೋ ತಿಳಿದಿಲ್ಲ ಈ ಕವನ.
ಆದರೂ ಬರೆಯುತ್ತಿರುವೆ ಇದನ್ನು
ನೆನಪಿಸಿಕೊಳ್ಳುತ್ತ ನಿನ್ನನ್ನ.(೧)

ಅದು ನನ್ನ ಜೀವನದ ಮರೆಯಲಾಗದ ದಿನ
ಅಂದೇ ಕಂಡದ್ದು ನಾ ನಿನ್ನ
ನೋಡುತ್ತಲೇ ಇದ್ದೆನು ನಾ ನಿನ್ನ
ಮಿಟುಕಿಸದೆ ಕಣ್ಣ
ಮೊದಲ ನೋಟಕ್ಕೆ ಮರೆತೇ ಮೈಮನ
ಬೆರೆತೆ ನೀ ನನ್ನ.(೨)

ಪ್ರೀತಿಯ ನಿವೇದನೆ ಮಾಡಲು
ಸಜ್ಜಾಗಿತ್ತು ನನ್ನ ಮನ.
ಆದರೂ ಏಕೋ ಅಳುಕಿತ್ತು ನೀ ಒಪ್ಪದಿದ್ದರೆ
ನಾ ಸೇರಬೇಕಿತ್ತು ಮಸಣ.
ಅಂತೂ ಹೃದಯದ ಹಠಕ್ಕೆ ಸೋತು
ತಿಳಿಸಿಯೇ ಬಿಟ್ಟಿದ್ದೆ ನನ್ನ ಪ್ರೀತಿಯನ್ನ.(೩)

ಈಗಲೂ ಪುಳಕಿತಗೊಳ್ಳುವೆ ನೆನೆಯುತ್ತ
ನೀ ನನ್ನ ಪ್ರೀತಿಯ ಒಪ್ಪಿದ ಕ್ಷಣ.
ಅಂದೇ ಅಲ್ಲವೇ ಶುರುವಾಗಿದ್ದು
ನಮ್ಮ ಒಲುಮೆಯ ಪಯಣ.
ಆ ಪ್ರಯಾಣಕ್ಕೆ ಬೇಕಿರಲಿಲ್ಲ
ನಮಗಾವುದೇ ಕಾರಣ.(೪)

ಈ ಪಯಣ ಸಾಗುತ್ತ
ತುಂಬಾ ಬದಲಾಗಿತ್ತು ನನ್ನ ಜೀವನ.
ಅದು ಎಷ್ಟೆಂಬುದು ತಿಳಿದದ್ದು
ಬಿಟ್ಟೋದಾಗಲೇ ನೀ ನನ್ನ.
ಕಳೆದೇ ಹೋಗಿದ್ದೆ ನಾ ನನ್ನ ಜೀವನದಿಂದ
ತುಂಬಿಹೋಗಿದ್ದೆ ನೀ ನನ್ನ ಜೀವನವನ್ನ.(೫)

ಬರೀಗೈಲಿ ನೀ ಬಿಟ್ಟುಹೋಗಲಿಲ್ಲ ನನ್ನ
ಕೊಟ್ಟು ಹೋಗಿದ್ದೆ ಸಾಲು ಸಾಲು ನೆನಪುಗಳನ್ನ
ಅದರಿಂದಲೇ ಆಗುತ್ತಿದೆ ಪ್ರತಿ ಕ್ಷಣ
ನೋವಿನ ಜನನ ಕಣ್ಣೀರಲಿ ಸ್ನಾನ.
ಇಷ್ಟಾದರೂ ನಾ ಕಾಣುತ್ತಿರುವೆ
ಮತ್ತೆ ನೀ ಬರುವೆ ಎಂಬ ನನಸಾಗದ ಕನಸನ್ನ.(೬)

ನಾ ಮಾಡದ ತಪ್ಪುಗಳಿಗೆ ಮನ್ನಿಸೆನ್ನ
ಮತ್ತೆ ಸೇರು ಬಾ ನನ್ನ.

- ಅಕವಿ

04 Mar 2017, 04:51 pm

ಕಾದಿರುವೆ ನಿನಗಾಗಿ

ಮನದ ಮಂದಿರವ ತೆರೆದಿರುವೆ ನಿನಗಾಗಿ ನಾನು
ಒಳಗೆ ಬರಲಾರೆಯಾ ಒಮ್ಮೆಯಾದರೂ ನೀನು..
ಕಣ್ಣುಗಳು ಮನದ ಮಾತನ್ನು ಕೇಳದು
ಹೃದಯ ಒಳಗಿನ ಭಾವನೆ ಹೇಳದು..
ಆಸರೆಯ ಬಯಸಿ ಬಂದವಳು ನಾನು
ನಿರಾಸೆ ಮೂಡಿಸಿ ಹೊರಟವನು ನೀನು..
ರೆಕ್ಕೆ ಬಿಚ್ಚಿ ಹಾರುತ್ತಿದ್ದವಳು ನಾನು‌
ಹಾರಲಾರದ ನನ್ನ ಬಿಟ್ಟು ಹೋದವನು ನೀನು..

- ನಮಿತ ಗಟ್ಟಿ

03 Mar 2017, 09:46 pm

ಪಾತರಗಿತ್ತಿ

ರಂಗು ಹೆಪ್ಪುಗಟ್ಟಿ,
ರವಿಕೆಯ ಮೇಲೊಟ್ಟಿ,
ಮುದವ ತಂದಿದೆ,
ಮನವು ನೋವಮರೆತಿದೆ.
ಮೊಗ್ಗಿಗಿತ್ತು ಚುಂಬನ,
ಪ್ರೇಮಪತ್ರ ನೀಡಿದೆ,
ಹೂವ ಎದೆಯ ಹೊಕ್ಕಿದೆ...

ಬಳ್ಳಿ ಬಳುಕಿ ನಿಂತಿದೆ,
ಮೇಘಮಾಲೆಯ ಕಾದಿದೆ,
ಬಳ್ಳಿ ಕಾದು ನೊಂದಿದೆ,
ಬಳಿಗೆ ಬಂದು ನೆರವಿಗೆ,
ಬಾಳಿಸುವಾಸೆ ಹೂಡಿದೆ.
ಮಾತ ಕೇಳಿ ನಲಿದಿದೆ,
ಮರಳಿ ಜೀವ ಬಂದಿದೆ,
ಮುತ್ತನಿತ್ತು ಪೊರೆದಿದೆ,
ಪಾತರಗಿತ್ತಿಯೊಂದರ ನೆರವಿದೆ.

-ಕನ್ನಡದ ಭಕ್ತ

- ಕನ್ನಡದ ಭಕ್ತ

03 Mar 2017, 06:00 pm

ರಾಜ - ರಾಣಿ

ರಾಜ ರಾಣಿ ನಾವು ನಮ್ಮಿ ದುನಿಯಾಗೆ
ಯಾರು ಏಕೆ ಬೇಕು ನಮ್ಮ ಸೇವೆಗೆ
ಸೂರ್ಯ ಬರುವ ಹಗಲಲಿ ಜೊತೆಗೆ
ಚಂದ್ರ ಸಾಕಲ್ಲವೇ ಇರುಳಲಿ ನಮಗೆ
ರಾಜ ರಾಣಿ .. ... ...

- ಕುಮಾರ ಸಿದ್ದರಾಜ

03 Mar 2017, 05:28 pm

ಮೊದಲ ಮುತ್ತು

ನಿನೆನೂ ಹೊರಟು ಹೋದೆ ಕೊಟ್ಟು
ಪ್ರೀತಿಯ ಮೊದಲ ಮುತ್ತನು
ಸಾಕಾಗೊತ್ತಿಲ್ಲ ಜಾಗ ಎದಯಲಿ ನಲ್ಲೇ
ತುಂಬಿಕೊಳ್ಳಲು ಆ ಸವಿಯನು.

- ಕುಮಾರ ಸಿದ್ದರಾಜ

03 Mar 2017, 05:16 pm

ಹೇಳು ಅದು ನೀನೇನಾ?

ಕಾಣೆಯಾಗಿದೆ ಹೃದಯ
ಹೇಳು ಕದ್ದಿದ್ದು ನೀನೇನಾ?
ಹುಡುಕಿದರೂ ಸಿಗದ ಹಾಗೆ
ಎಲ್ಲಿ ಬಚ್ಚಿಟ್ಟಿರುವೆ ಅದನ್ನ ?

ಮಾಯವಾಗಿದೆ ಮನಸ್ಸು
ಹೇಳು ಮಾಯ ಮಾಡಿದ್ದು ನೀನೆನಾ?
ಶಂಖೆಯೊಂದು ಮೂಡುತಿದೆ
ನೀ ಉಪಯೋಗಿಸಿದ ಮಂತ್ರ ಪ್ರೀತಿನಾ?

ಮೌನವಾಗಿದೆ ಮಾತು
ಹೇಳು ಮೂಕಾಗಿಸಿದ್ದು ನೀನೇನಾ?
ಪ್ರೀತಿಯನ್ನು ವ್ಯಕ್ತಪಡಿಸಲು
ಸೂಕ್ತ ಭಾವನೆ ಮೌನವೇನಾ?

- ಅಕವಿ

03 Mar 2017, 05:13 pm

ಹುಚ್ಚ ಬ್ರಹ್ಮ

ಸುಮ್ಮ ಸುಮ್ಮನೆ ನಿನ್ನ ಹಿಂದೆ ಬರೋಕೆ
ನಾನೇನೋ ಹುಚ್ಚನಾ..
ಆ ಹುಚ್ಚ ಬ್ರಹ್ಮ ಗಿಚಿದಾ
ನಿನ್ನ ಹೆಸರ, ನನ್ನ ಹಣೆಯಲಿ
ನಾನೇನು ಮಾಡಲಿ ಚಿನ್ನ!

- ಕುಮಾರ ಸಿದ್ದರಾಜ

03 Mar 2017, 05:13 pm

ರಾಜನಲ್ಲ ನಾನು....

ರಾಜನಲ್ಲ ನಾನು ಯಾವ ಊರಿಗೋ
ಯಾವ ಅಸ್ತಿ ಇಲ್ಲ ನನ್ನ ಹೆಸರಿಗೂ
ಪುಟ್ಟ ಹೃದಯವಿದೆ ಎದೆಯೊಳಗೆ
ಸಾಗರದಷ್ಟು ಪ್ರೀತಿ ಇದೆ ಅದರೊಳಗೆ
ಅಲೆಯಾಗಿ ಬಾ, ನದಿಯಾಗಿ ಬಾ
ಜೊತೆಯಾಗಿರು ನೀ ಎಂದೆಂದೂ ನನಗೆ.

- ಕುಮಾರ ಸಿದ್ದರಾಜ

03 Mar 2017, 03:31 pm