Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದರಿದ್ರನೆ ದಯನು

ದರಿದ್ರರುಎಂದು ಅವರು ದೂರಿದರು
ದಯವೆ ಕಾಪಾಡುವುದು ನಮ್ಮನೆಂದರು
ದಯವೆ ಧರೆಯಲಿ ದರಿದ್ರರನು ಹೊರದುರಲಿ
ಎಂದೆನುತನುತ......

ಪ್ರಾಣವನೆಂದು ತೊರೆಯವು ನಾವು
ನಮ್ಮನು ದೋಷಿಸಬಾರದು ಈ ಜಗದಲ್ಲಿ
ಬರುವುದು ಭರದಲಿ ತರುವುದು ತರದಲಿ
ಕೈ ಬಿಡದು ಎಂದಿಗೂ ಈ ಜಗವಣ್ಣ

ಈ ಜಗದ ತಂದೆ ಭರಮ ದೇವರು
ನೊಡಣ್ಣ.........

- Rajfrom Raj

05 Mar 2017, 11:17 pm

ಉಳಿಯುವುದೋ ಅಳಿಯುವುದೋ ತಿಳಿದ

ಹಾಡಾಗಿ ಉಳಿಯುವುದೋ ಹಾಳಾಗಿ ಅಳಿಯುವುದೋ ತಿಳಿದಿಲ್ಲ ಈ ಕವನ.
ಅರಳಿ ಹಿಗ್ಗುವುದೋ ನರಳಿ
ಕುಗ್ಗುವುದೋ ತಿಳಿದಿಲ್ಲ ಈ ಕವನ.
ಆದರೂ ಬರೆಯುತ್ತಿರುವೆ ಇದನ್ನು
ನೆನಪಿಸಿಕೊಳ್ಳುತ್ತ ನಿನ್ನನ್ನ.(೧)

ಅದು ನನ್ನ ಜೀವನದ ಮರೆಯಲಾಗದ ದಿನ
ಅಂದೇ ಕಂಡದ್ದು ನಾ ನಿನ್ನ
ನೋಡುತ್ತಲೇ ಇದ್ದೆನು ನಾ ನಿನ್ನ
ಮಿಟುಕಿಸದೆ ಕಣ್ಣ
ಮೊದಲ ನೋಟಕ್ಕೆ ಮರೆತೇ ಮೈಮನ
ಬೆರೆತೆ ನೀ ನನ್ನ.(೨)

ಪ್ರೀತಿಯ ನಿವೇದನೆ ಮಾಡಲು
ಸಜ್ಜಾಗಿತ್ತು ನನ್ನ ಮನ.
ಆದರೂ ಏಕೋ ಅಳುಕಿತ್ತು ನೀ ಒಪ್ಪದಿದ್ದರೆ
ನಾ ಸೇರಬೇಕಿತ್ತು ಮಸಣ.
ಅಂತೂ ಹೃದಯದ ಹಠಕ್ಕೆ ಸೋತು
ತಿಳಿಸಿಯೇ ಬಿಟ್ಟಿದ್ದೆ ನನ್ನ ಪ್ರೀತಿಯನ್ನ.(೩)

ಈಗಲೂ ಪುಳಕಿತಗೊಳ್ಳುವೆ ನೆನೆಯುತ್ತ
ನೀ ನನ್ನ ಪ್ರೀತಿಯ ಒಪ್ಪಿದ ಕ್ಷಣ.
ಅಂದೇ ಅಲ್ಲವೇ ಶುರುವಾಗಿದ್ದು
ನಮ್ಮ ಒಲುಮೆಯ ಪಯಣ.
ಆ ಪ್ರಯಾಣಕ್ಕೆ ಬೇಕಿರಲಿಲ್ಲ
ನಮಗಾವುದೇ ಕಾರಣ.(೪)

ಈ ಪಯಣ ಸಾಗುತ್ತ
ತುಂಬಾ ಬದಲಾಗಿತ್ತು ನನ್ನ ಜೀವನ.
ಅದು ಎಷ್ಟೆಂಬುದು ತಿಳಿದದ್ದು
ಬಿಟ್ಟೋದಾಗಲೇ ನೀ ನನ್ನ.
ಕಳೆದೇ ಹೋಗಿದ್ದೆ ನಾ ನನ್ನ ಜೀವನದಿಂದ
ತುಂಬಿಹೋಗಿದ್ದೆ ನೀ ನನ್ನ ಜೀವನವನ್ನ.(೫)

ಬರೀಗೈಲಿ ನೀ ಬಿಟ್ಟುಹೋಗಲಿಲ್ಲ ನನ್ನ
ಕೊಟ್ಟು ಹೋಗಿದ್ದೆ ಸಾಲು ಸಾಲು ನೆನಪುಗಳನ್ನ
ಅದರಿಂದಲೇ ಆಗುತ್ತಿದೆ ಪ್ರತಿ ಕ್ಷಣ
ನೋವಿನ ಜನನ ಕಣ್ಣೀರಲಿ ಸ್ನಾನ.
ಇಷ್ಟಾದರೂ ನಾ ಕಾಣುತ್ತಿರುವೆ
ಮತ್ತೆ ನೀ ಬರುವೆ ಎಂಬ ನನಸಾಗದ ಕನಸನ್ನ.(೬)

ನಾ ಮಾಡದ ತಪ್ಪುಗಳಿಗೆ ಮನ್ನಿಸೆನ್ನ
ಮತ್ತೆ ಸೇರು ಬಾ ನನ್ನ.

- ಅಕವಿ

05 Mar 2017, 10:36 pm

ದುರ್ಗದಾ ಸಿರಿ

ಹೇಗೆ ವರ್ಣಿಸಲಿ ತಿಳಿಯದಾಗಿದೆ ಗಂಡುಮೆಟ್ಟಿದ ನಾಡನು
ಏಳು ತುತ್ತಿನ ಕೋಟೆಯನು
ನೊಡಲಿದು ಬರಿ ಕಲ್ಲಿನ ಕೋಟೆ
ಒಳ ಇಣುಕಿ ನೋಡಲು ಕಲ್ಲು ಕಲ್ಲು
ಹಾಡುವುದು ಕವಿತೆ

ನೋಡಲ್ಲಿ ನಿಂತಿಹರು ಅಲಮೇಲು_ರಾಮಾಚಾರಿ
ಅದುವೇ ಝಂಡಾ ಬತೇರಿ
ಚಾಮಯ್ಯ ಮೇಷ್ಟ್ರು ಬಿದ್ದಾಸ್ಥಳ
ಅದುವೇ ನೋಡು ತುಪ್ಪದ ಕೊಳ

ಹೇಗೆ ವರ್ಣಿಸಲಿ ತಿಳಿಯದಾಗಿದೆ.....

ಹಳೇಶಿಲಾಯುಗದ ಮಾನವನ ನೆಲೆಎಂದೋ?
ರಾಮನ ಅಜ್ಞಾತ ವಾಸದ ಸ್ಥಳವೆಂದೊ?
ಅಶೋಕ ಮಯೂರರ ಶಾಸನವಿದು ಎಂದೋ?
ಗಂಡುಗಲಿ ಮದಕರಿಯ ನಾಡೆಂದೋ?
ವೀರವನಿತೆ ಓಬವ್ವಳ ಬೀಡೆಂದೋ?

ಏನೆಂದು ವರ್ಣಿಸಲಿ ತಿಳಿಯದಾಗಿದೆ.....

ನೋಡಲ್ಲಿ ಸ್ವಾಗತಿಸುತ ನಿಂತಿಹಳು ಬನಶಂಕರಿ
ಅಲ್ಲೆ ತುಸುದೂರದಿ ಕುಲದೇವತೆ ಉಚ್ಚಂಗಿ
ಬರಗೇರಮ್ಮ_ತಿಪ್ಪಿನಕಟ್ಯಮ್ಮ ಭೇಟಿ ಉತ್ಸವ
ಇದಕೆ ಸಾಕ್ಷಿ ನಗರದೇವತೆ ಏಕನಾಥೇಶ್ವರಿ ಅವ್ವ

ಒಂದಾನೊಂದು ಕಾಲದಿ ಇದಾಗಿತ್ತು ರಾಜಬೀದಿ
ಇಂದಾಗಿದೆ ಪಬ್ಬು ಬಾರು ಸೇಂದಿಯಂಗಡಿ
ಒಂದಾನೊಂದು ಕಾಲದಿ ಹೇಗಿತ್ತು ನಾಯಕರ ಗೈರತ್ತು
ಇಂದಾಗಿದೆ ಗಣಿಮಾಲೀಕರ ಸ್ವತ್ತು

ಆದರೇನಂತೆ ಎಷ್ಟು ಬಾರಿ ಬರೆದರೂ ನವಯೌವ್ವನೆಯು ಕವಿ ಸಾಹಿತಿಗಳಿಗೆಲ್ಲ
ಅದೆಷ್ಟುಬಾರಿ ಹತ್ತಿಇಳಿದರೂ ಜೋತಿರಾಜ್
ಅಲಿಯಾಸ್ ಕೋತಿರಾಜ್ ಮನಸಿಗೆ ತೃಪ್ತಿಯೇಇಲ್ಲ

ದಿನಮಣಿಯು ಪಡುವಣಕೆ ನೀಡಲು ಚುಂಬನ ನಾಚಿನೀರಾದ ನಲ್ಲೆಯ ಕೆಂಪುಕೆನ್ನೆಯಂತೆ ಕಂಗೊಳಿಸುವ ಕೋಟೆಯನು ನೋಡುವುದೇ ಸುಮಧುರವಾದ ಕ್ಷಣ

ಕ್ಷಮಿಸಿ ಇನ್ನೇನು ಹೇಳಲಾರೆ ಕರ್ಪೂರದ ಗೊಂಬೆ ನಾನು
ದುರ್ಗಾಸ್ತಮಾನವಾಗುತಿದೆ ಮುಗಿಸಲೇ ಈ ಹಂಸಗೀತೆಯನ್ನು

_ಹಂಸಿನಿ

- ವಿಸ್ಮಯ

05 Mar 2017, 06:58 pm

ಕಿರುದಾರಿಯಲಿ ಪ್ರೀತಿ ಹುಡುಕಿ

------- ಕಿರುದಾರಿಯಲಿ ಪ್ರೀತಿ ಹುಡುಕಿ --------



ಕಿರುದಾರಿಯಲಿ ಬಚ್ಚಿಟ್ಟ ಪ್ರೀತಿ
ಅಲೆಯಾಗಿ ನನ್ನು ಸಾಗಿದೆ ಈ ರೀತಿ
ಮನಸ್ಸೆಂಬ ಪ್ರೀತಿಯ ಕಲೆಯಲ್ಲಿ ನಾನ್ನು
ಚಿತ್ರ ಬಿಡಿಸಿದೇ ನನ್ನಾಸೆಯಲ್ಲಿ
ಕಿರುದಾರಿಯಲಿ ಬಚ್ಚಿಟ ರೀತಿ
ಈ ಹಾಡಿನಲ್ಲಿ ನನ್ನ ಮನಸ್ಸೆಂಬ ಪ್ರೀತಿ..........

- Ajay

05 Mar 2017, 03:39 pm

ಏನು ಬೇಕು ಪ್ರೀತಿಗೆ...?

ಆ ಸಂಜೆಯ ಮಬ್ಬುಗತ್ತಲು
ನನ್ನವಳು ನಡೆದುಬರಲು,
ಬಾಯ್ತೆರೆದು ನಾ ಅವಳ ನೋಡಲು
ಮೌನವು ಆವರಿಸಿತೇನಗೆ
ಆ ಗಜಿಬಿಜಿ ಸಂತೆಯಲು.

ಮೂರು ಬೆರಳಿನ ಹಣೆಯ ಮೇಲೆ
ಸಣ್ಣದೊಂದು ಕುಂಕುಮದ ಬೊಟ್ಟು
ಮಾರುದ್ದದ ಜಡೆಯಲಿ
ಮಲ್ಲಿಗೆ ಹೂವಿನ ಜುಟ್ಟು.

ಹೇಳಬೇಕೆಂದಿರುವೆ ಅವಳಿಗೆ ನನ್ನ ಪ್ರೀತಿ
ಆದರೆ ಗೋತಿಲ್ಲ ಅವಳ ಕುಲ ಗೋತ್ರ ಜಾತಿ
ಆದರೇನಂತೆ ,
ಅವಳದು ಹೆಣ್ಣು ಜಾತಿ
ನನ್ನದು ಗಂಡು ಜಾತಿ
ಬಿಟ್ಟು ಬೇರೇನು ಬೇಕು ಪ್ರೀತಿಗೆ......

- MK Reddy

05 Mar 2017, 03:00 pm

ನನ್ನ ಕವನ

ನಾ ಬರೆಯುವ ಮುನ್ನ,
ಕೇಳಿತೆನಗೆ ಎನ್ನ ಮನ,
ಯಾರಿಗಾಗಿ ಈ ಕವನ?

ಕ್ಚಣಕಾಲ ಯೋಚಿಸಿತು ನನ್ನ ಮನ,
ಹೌದಲ್ಲ, ಯಾರಿಗಾಗಿ ಈ ಕವನ?
ನನಗಾಗಿ, ನನ್ನ ಮನ ತೃಪ್ತಿ ಗಾಗಿ,
ಆಸಕ್ತಿ ತುಂಬಿದ ಓದುಗರಿಗಾಗಿ,
ಓದಿ ಮನಸೂರೆಗೊಂಡು ಹರಸುವರಿಗಾಗಿ.

ಕವನ ಬರೆಯಲು ನಾನೇನು ಕವಿಯಲ್ಲ,
ಶಬ್ದಗಳ ಭಂಡಾರ ನನ್ನಲ್ಲಿಲ್ಲ ,
ಕಾವ್ಯಲೋಕದ ಅರಿವು ನನಗಿಲ್ಲ ,
ನಾ ಬರೆಯುವುದು ನನ್ನ ಸವಿನೆನಪಿಗಾಗಿ,
ಅರ್ಥಪೂರ್ಣ ವಾದ ಕಾಲ ಹರಣಕ್ಕಾಗಿ.

ಇದು ಕವನವಲ್ಲ, ನನ್ನ ಅನುಭವ,
ಅಂದು ನಾ ಕಂಡ ವಾಸ್ತವ,
ನನಗನಿಸಿತು ಸತ್ಯ ಸಂಗತಿಯ ಬಿಚ್ಚಿಡುವ,
ಈ ಸಾಲುಗಳಲ್ಲಿ ಬರೆದ ಹಲವು ನುಡಿ,
ನಾ ನಡೆದು ಬಂದ ಭೂತಕಾಲದ ಕನ್ನಡಿ.

- ರವೀಂದ್ರಬಾಪೂರ(GNL)

05 Mar 2017, 09:57 am

∆! ಧರೆಗೆ ದೊಡ್ಡವಳು... !∆

" ಸಕಲ ಕೋಟಿ ಜೀವರಾಶಿಯ ಪೊರೆಯಲು
ತಾಯ ಸೃಷ್ಟಿಸಿದ ಬ್ರಹ್ಮ
ಆ ತಾಯಿಯ ಋಣ ತೀರಿಸಲಾಗದು ನೀ!
ಎತ್ತು ಬಂದರೂ ಹತ್ತು ಜನ್ಮ
ಹಲವು ಧರ್ಮಗಳಿಗಿಂತ ಮಿಗಿಲೋ!
ಈ ಮಾನವನ ಮಹಾಜನ್ಮ
ಸಾರ್ಥಕಪಡಿಸಿಕೋ ಅದೇ ನಿನ್ನ ನಿತ್ಯ ಕರ್ಮ."

ಬರಹ../
@(ರಾಮಲಿರಾಮ)(ಹೆಚ್.ಆರ್.ಡಿ)@

- RAMAPPA DUMMADI

04 Mar 2017, 10:34 pm

ಸಹನ

ನನ್ನ ಸನಿಹದಲ್ಲಿ ಕೂತು
ನೀನು ನನ್ನ ಸ್ನೆಹಿತಳಾದೆ .
ಧರಣಿಯ ಮಗಳು
ನೀನಲ್ಲದಿದ್ದರು ........

ನನ್ನ ನೋವಿಗೆ ಸ್ಪಂದಿಸಿದೆ
ನನ್ನ ನಲಿವಲ್ಲಿ ನಗುವಾದೆ
ಎಂದೇOದಿಗೂ ಮರೇಲಾಗದ
ಪ್ರಾಣ ಸ್ನೆಹಿತೆ ನೀನಾದೆ ಸಹನಾ.......

- ಚುಕ್ಕಿ

04 Mar 2017, 07:14 pm

ಪಲ್ಲವಿ

ತಿಲಿಸಲಾಗದ ಭಾವ ನನ್ನೊಳಗಿರುವ ನಿನಗೆ.
ಗೆಳತಿ ನಾಳೆಯ ದಿನಕೆ ಕಾಲಿಡುವ ಆಸೆ ನನಗೆ ನಿನ್ನ ಜೊತೆ ಸೇರಿ ........
ಪ್ರತಿ ಕ್ಷಣ ನಿನ್ನ ನಗುವಿನ ಜೊತೆ ಸಮಯ ಕಳೆಯಲು ಆಸೆ ನನಗೆ .

ಪ್ರೀತಿಯ ಚಿಲುಮೆಯಲಿ ಮುತ್ತಿಗಾಗಿ
ಪರದಾಡೋ ಜವಾನ ನಾನು .
ನಕ್ಷತ್ರ ಮಂಡಲದಲ್ಲಿ ನನ್ನ ನಗುವಿಗಾಗಿ
ಹುಡುಕಾಡೋ ನವನೀತೆ ನೀನು .

ಮತ್ತೆ ಮತ್ತೆ ಹುಡುಕುತಿರುವೆ
ನೆಪವೋಂದು ನಿನ್ನ ನೋಡಲು .
ಕೋಟಿ ನಿಮಿಷಗಳು ಸಾಲಲ್ಲ
ನಿನ್ನ ನೆನೆಯಾಲು .

ಒಮ್ಮೊಮ್ಮೆ ಅನಿಸುತ್ತೆ ನನಗೆ ಸಮಯವೆOಬ
ಶತ್ರುವನ್ನು ಹಿOದಕ್ಕೆತಲ್ಲಿ ನಾನುಟ್ಟಿದ ಮೊದಲ
ಕ್ಷಣವೆ ನಿನ್ನ ಪರಿಚಯ ಮಾಡಿಕೋಂಡಿರ ಬೇಕೇಂದು ......

ಮಗುವಂತೆ ನಿನ್ನ ಮುಗ್ದವಾದ ಮಾತು
ಏಷ್ಟು ಕೇಳಿದರು ಸಾಲಲ್ಲ ಅದರ ಮತ್ತು.
ಪಲ್ಲವಿಯಾಗೆ ಪರಿಚಯವಾಗಿ
ನನ್ನ ಹ್ರುದಯ ಬಡಿತಕ್ಕೆ ಅನುಪಲ್ಲವಿಯಾದೆಯಾ
ಪ್ರೀತಿಯ ಗೆಳತಿ ...................!!!

- ಚುಕ್ಕಿ

04 Mar 2017, 06:38 pm

ಒಲವಿನ ಕವನ..‌‌

ಕನಸಿನ ತಾರೆ,
ಒಲವಿನ ಮಾಯೆ ಅವಳು.
ವಿಶ್ವ ಸುಂದರಿಯೂ ,
ವಿಶ್ವ ಮಾತೆಯೂ ಅವಳು...
ಕವಿತೆಯ ಅನುಪಲ್ಲವಿ,
ಅವಳೇ ನನ್ನ ಪ್ರೀತಿಯ ಪಲ್ಲವಿ..........

- sharanu

04 Mar 2017, 06:25 pm