Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀಡು ನನಗೆ ಅಭಯ
ಸ್ನೇಹಕ್ಕಾಗಿ ನನ್ನ ಉದಯ|
ಮೀಸಲಿಡಲು ನನ್ನ ಹೃದಯ
ಎಂದೂ ದೂರ ಸರಿಯದೇ ಎಲ್ಲರ ಪ್ರೀತಿಯ||೧||
ಎಲ್ಲರ ಮನದ ನಂಟು ಈ ಸ್ನೇಹ
ಇಲ್ಲ ಇದರ ಬಗ್ಗೆ ನನ್ನ ಪ್ರಸ್ತಾಪ|
ಎಲ್ಲರಿಗೂ ತುಂಬುವುದು ಇದು ಉತ್ಸಾಹ
ನನ್ನಲ್ಲಿ ಅವಿತಿದೆ ಬರೀ ಭಯದ ಸಂದೇಹ||೨||
ಓದು ಮುಗಿಸುವವರೆಗೂ ವಿದ್ಯಾರ್ಥಿ
ಮುಗಿಯದು ಇದು ಜೀವನ ಪೂರ್ತಿ|
ನೀಡುವುದು ಉತ್ತಮ ಜೀವನಕ್ಕೆ ಸ್ಫೂರ್ತಿ
ಇದರ ಸದ್ಬಳಕೆಯಿಂದ ಹಬ್ಬುವುದು ನಮ್ಮ ಕೀರ್ತಿ||೩||
ಇಲ್ಲಿಗೆ ಬಂದು ರೂಪಿತವಾಯಿತು ಗುರಿ
ದಯಮಾಡಿ ಕರುಣೆಯ ತೋರಿ|
ಸ್ನೇಹವ ಮಾಡಿ ಮನ ಜಾರಿ
ತಪ್ಪು ಮಾಡಿದ್ದರೆ ಐ ಆಮ್ ವೆರಿ ಸಾರೀ||೪||
ಇಷ್ಟು ದಿನದ ಜೀವನ
ಒಂದು ರೀತಿಯ ಸೋಜುಗ|
ಪಣತೊಟ್ಟೆನು ಎಲ್ಲರೊಂದಿಗೆ ಬೆರೆಯಲು
ಎಂದೂ ಹೇಳದಿರಿ ಸ್ನೇಹಕ್ಕೆ ವಿದಾಯ||೫||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
06 Mar 2017, 06:39 pm
ಸಾಗರದ ಅಲೆಗಳ ಸದ್ದಿನಂತೆ
ಹಕ್ಕಿಗಳ ಕಲರವಗಳ ಗಾನದಂತೆ
ಕೋಳಳಿನ ಇಂಪಾದ ನಾದದಂತೆ
ಹಾಗೆ ನೀ ನನ್ನ ಸೇಳೆದೆ ನಿನ್ನ ಧ್ವನಿಯಿಂದ
- ಮಂಜುನಾಥ.ಪಿ
06 Mar 2017, 06:28 pm
ನೀ ನನ್ನ ಮರೆತರೂ
ನಾ ನಿನ್ನ ಮರೆಯಲ್ಲ|
ಮರೆತರೆ ನಾ ಉಳಿಯಲ್ಲ
ಉಳಿದರೆ ಈ ಪ್ರೀತಿ ಎಂದೂ ಸಾಯಲ್ಲ|
ಸತ್ತರೆ ನಿನ್ನ ಪ್ರೀತಿಗಾಗಿ ಮತ್ತೆ ಜನಿಸುವೆ
ಜನಿಸಿ ನಿನ್ನ ಹೃದಯ ಗೆಲ್ಲುವೆ|
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
06 Mar 2017, 06:20 pm
ಹದ್ದು ಮೀರಿದೆ ಹರೆಯದ ಅವಾಂತರ
ಅದು ನೀಡುವ ತೊಂದರೆಗಳು ಮಾತ್ರ ನಿರಂತರ.
ಈ ಬಾರಿ ಅದು ತಂದಿಟ್ಟ ತೊಂದರೆಯೇ ಪ್ರೀತಿ
ಇದೊಂಥರ ಕುಡಿಯಲೇಬೇಕೆನಿಸುವ ವಿಷದ ರೀತಿ
ಅತ್ತ ಮೈಯೆಲ್ಲ ನಂಜೇರಿಸಿ ಕೊಲ್ಲುವುದೂ ಇಲ್ಲ
ಇತ್ತ ಹೃದಯ ಬಡಿತ ಹೆಚ್ಚಿಸಿ ಬದುಕಿಸುವುದೂ ಇಲ್ಲ.
ಇನ್ಮುಂದೆ ನನ್ನ ಬದುಕಾಗಲಿದೆ ಗೊಂದಲಮಯ
ನನ್ನೀ ಪರಿಸ್ಥಿತಿ ಕಂಡು ನಗುತ್ತಿದೆ ಹಾಳು ಹರೆಯ.
- ಅಕವಿ
06 Mar 2017, 05:13 pm
ನಡಿಯುತ ಆಡುತ ನೋಡಿದೆ,,,,
ಅ ಹುಡುಗಿನಾ
ಕೆದುಕಿದೆ ಬೆದುಕಿದೆ ಅವಳ
ಅಂತರಂಗದಾಳದ ಮನಸ್ಸನ್ನ.
ಬಯಸಿದೆ ಬೆದುಕಿದೆ ನನ್ನಲ್ಲಿನ,,,,
ಆಕೆಯ ಮೇಲಿನ ಪ್ರೀತಿಯ ಹುಟ್ಟನ್ನ
ಕೊನೆ ಕೊನೆಗೆ ಪಡೆದೆ ಅವಳ
ಸ್ವಚ್ಚಂದ ಪ್ರೀತಿನಾ.........
- Rajfrom Raj
06 Mar 2017, 03:03 pm
ಏನು ವ್ಯತ್ಯಾಸ ಹೇಳು ನೀ ....
ನಿನಗೂ, ನನ್ನ ಉಸಿರಿಗೂ...
ಬದುಕಲಾರೆ ಎರಡೂ ಇಲ್ಲದೆ.
ಏನು ವ್ಯತ್ಯಾಸ ಹೇಳು ನೀ
ನನ್ನ ಈ ರಕ್ತಕು, ನೀ ಕೋಟ್ಟ ನಿನ್ಯೆದೆಯಾ ಜೀವಾಮೃತಕು
ಜೀವವಿದು ನಿನ್ನ ಭೀಕ್ಷೆ ಅಲವೇ.
ಮೂರ್ಖ ನಾ ನಿನ್ನ ಪ್ರೀತಿಯ
ಪದಗಳಲ್ಲಿ ಅಳೆಯುವ
ವ್ಯರ್ಥ ಪ್ರಯತ್ನದಲ್ಲಿ.
ಅಳೆಯುವ ಪ್ರೀತಿ ನಿನ್ನದಲ್ಲ
ಮರೆವ ಜೀವ ನೀನಲ್ಲಾ
ಬದುಕ ಸವೆಸಿ, ನನ್ನ ಸಾಕಿ ಸಲುಗಿದ
ತಾಯಿ ನಿನಗಿಂತ ದೇವರಿಲ್ಲ.
- MK Reddy
06 Mar 2017, 10:00 am
ಎದೆಯೊಳಗೇ ಉಳಿದಿವೆ
ಆಡದ ಮಾತುಗಳು,
ಅಡೆತಡೆಗಳು ಕಾಡಿವೆ
ಕೂಡಲು ಆಸ್ಪದವಿಲ್ಲವೇ?
ಅವೆತಿವೆ ಬಯಕೆಯ ಸಾಲುಗಳು,
ಬಾರದಾಗಿವೆ ಮನಸಿನ ಮಾತುಗಳು,
ಬರಿ ತೊದಲು ತುಟಿಯ ಅಂಚಲ್ಲಿ,
ಲಯವು ತಪ್ಪಿದೆ ಎದೆಯಲ್ಲಿ,
ಶ್ರುತಿಯಿರದ ಹಾಡಲ್ಲಿ,
ಆಲಾಪವಾಗುವುದು ಇನ್ನೆಲ್ಲಿ,
ನಿನ್ನನೊಲಿಸುವ ಮಾತೆಲ್ಲಿ.
ನಿನ್ನ ಬಿಟ್ಟುಕೊಟ್ಟು ,
ಹೃದಯದ ಬಡಿತ ನನ್ನ ಬಿಟ್ಟು,
ಇಳಿಸಂಜೆಯೆಡೆ ಮುಖಮಾಡಿದೆ,
ತುಸುಮಾತನ್ನೂ ಆಡದೆ,
ಭಾರವಾದ ಮಾನಸ್ಸನೂತ್ತು,
ಅರಳುವ ಮೊದಲೇ ಪ್ರೀತಿ ಹೂವು ಸತ್ತು.
-ಕನ್ನಡದ ಭಕ್ತ
- ಕನ್ನಡದ ಭಕ್ತ
06 Mar 2017, 06:38 am
ಸುಡುವ ಬೇಸಿಗೆಯಲಿ ತಂಗಾಳಿಯ ತಂಪಂತೆ ನೀನು
ಬೆಂದು ಬಸವಳಿದ ಬಡಜೀವಕೆ ಅಮೃತದ ಜಲದಂತೆ ನೀನು
ಜಗನೋಡದೆ ಕುಳಿತಿರುವ ನನಗೆ ಕಣ್ಣಂತೆ ನೀನು
ದುಃಖಿತ ಜೀವನದ ಕ್ಷಣ ತೊರೆಯುವ ಆನಂದ ಚಿಲುಮೆಯಂತೆ ನೀನು
ಹಾಡಲಾಗದೆ ಕುಳಿತಿರುವ ಕೋಗಿಲೆಯ ಧ್ವನಿ ಸ್ಪೂರ್ತಿ ನೀನು
ಕಾನನದ ಸೌಂದರ್ಯಕ್ಕೆ ಹಸಿರು ಸೀರೆಯಂತೆ ನೀನು
ಸಪ್ತಸ್ವರ ನುಡಿಗಳ ನಾದವಿನೋದ ಆಲಾಪದಂತೆ ನಿನ್ನ ನುಡಿಗಳು
ನನ್ನ ಬದುಕಿನ ಕಥೆಯಲಿ ಬಂದ ನನ್ನ ಜೀವನ ಜ್ಯೋತಿಯು ನೀನು....
- Irayya Mathad
06 Mar 2017, 06:30 am
ಇಳಿ ಸಂಜೆ ಹೊತ್ತಲ್ಲಿ ಮರೆತುಹೋದ
ಮಾತೊOದು ನೆನಪಾಯಿತೇ ಗೆಳಯ .....
ನೂರು ಬಾರಿ ನೋಡಿರುವೆ
ಜೀವ ನಿನಗೆ ನೀಡಿರುವೆ ಆದರೂ
ನೀ ಕೊಡುವ ಸಮಾದನಕ್ಕಾಗಿ ಕಾದಿರುವೆ .
ಎಲ್ಲೆಲ್ಲೋ ಸುತ್ತಾಡಿ ಯಾರಾರನ್ನೋ ಕಂಡು
ನಿನ್ನ ಬಳಿ ಬಂದು ಸೇರಿರುವೆ .
ಇನ್ನಾದರೂ ಅರಿತುಕೊ ಮನದಲ್ಲಿನಾ ಮಾತು .
ಈ ಜನ್ಮದ ಕಡೆವರೇಗು ಕೈ ಹಿಡಿದು ನಡೆಯುವೆ.
ನೀನಿಲ್ಲದ ಕ್ಷಣ ಜೀವವೇ ನಿಂತೋಗಿ
ನಿನ್ನ ಜೊತೆಗೂಡಿ ನಾ ಬರುವೆ .........
ಚಿತೆಯಲ್ಲದರೂ ,ವ್ಯಥೆಯಲ್ಲದರೂ .
ಅOಬರದಿ ನಿನ ನೋಡಿ ನಗಲೆನಗೆ ಆಸೆಯಿಲ್ಲ
ನಿನ ನಗುವಿಗೆ ಹೆಸರಾಗಿ ,ಮೆರೆಯದ ನೆನಪಾಗಿ
ನಿನ್ನಲ್ಲೇ ಉಲಿಯವ ಪ್ರೀತಿಯಾಗಲು
ಅನುಮತಿ ನೀಡುವೆಯಾ ಇನಿಯ...........
- ಚುಕ್ಕಿ
06 Mar 2017, 04:19 am
ಎದೆಯೊಳಗೇ ಉಳಿದಿವೆ
ಆಡದ ಮಾತುಗಳು,
ಅಡೆತಡೆಗಳು ಕಾಡಿವೆ
ಕೂಡಲು ಆಸ್ಪದವಿಲ್ಲವೇ?
ಅವಿತಿವೆ ಬಯಕೆಯ ಸಾಲುಗಳು,
ಬಾರದಾಗಿವೆ ಮನಸಿನ ಮಾತುಗಳು,
ಬರಿ ತೊದಲು ತುಟಿಯ ಅಂಚಲ್ಲಿ,
ಲಯವು ತಪ್ಪಿದೆ ಎದೆಯಲ್ಲಿ,
ಶ್ರುತಿಯಿರದ ಹಾಡಲ್ಲಿ,
ಆಲಾಪವಾಗುವುದು ಇನ್ನೆಲ್ಲಿ,
ನಿನ್ನನೊಲಿಸುವ ಮಾತೆಲ್ಲಿ.
ನಿನ್ನ ಬಿಟ್ಟುಕೊಟ್ಟು ,
ಹೃದಯದ ಬಡಿತ ನನ್ನ ಬಿಟ್ಟು,
ಇಳಿಸಂಜೆಯೆಡೆ ಮುಖಮಾಡಿದೆ,
ತುಸುಮಾತನ್ನೂ ಆಡದೆ,
ಭಾರವಾದ ಮಾನಸ್ಸನೂತ್ತು,
ಅರಳುವ ಮೊದಲೇ ಪ್ರೀತಿ ಹೂವು ಸತ್ತು.
-ಕನ್ನಡ ಭಕ್ತ
- ಕನ್ನಡದ ಭಕ್ತ
06 Mar 2017, 12:02 am