Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆಯಾದ ಮನಸ್ಸು

ನಿನ್ನ ಕಳೆದುಕಂಡ ನೋವು
ಬೇವಿನ ಕಹಿಯಾಗಿದೆ
ಆ ನೋವಿನ ಕಲೆಯು
ನನ್ನೆದೆಗೆ ಅಳಿಸದ ಮಸಿಹಾಕಿದೆ

ನಗಲು ಆಗದೆ ಬಾಳಲು ಬಿಡದೆ
ಕಣ್ಮುಚ್ಚಿ ಕಣ್ಣೀರಿಗೆ ಕರೆ ಮಾಡಿದೆ
ನನ್ನೊಲವ ಜೀವದ ಗೆಳೆಯ ನೀನು
ನೀ ಮರೆತರೆ ಜೀವನವಿರುವುದೇ

ಹನಿ ಹನಿ ಕಣ್ಣೀರಿನ ಭಾವದಲಿ
ಪದಗಳು ಜೋಡನೆಯಾಗಿವೆ
ಪದಗಳು ಸೇರಿ ಸಾಲಾಗಿ
ಮನಸ್ಸಿನ ಪುಟದಲಿ ಕವನ ಮೂಡಿದೆ.

- kirti

07 Mar 2017, 12:15 pm

ಬೇಡ‌ ನಿನಗೆ ಬೇಸರ

ಬೇಸರವಾಗದಿರು ಮನವೇ
ಬೇರೆಯವರ ಬಯಕೆಗಾಗಿ
ಅವರಾಡುವ ಮಾತಿಗಾಗಿ
ಸಂಬಂಧಗಳ ಕಹಿತನಕ್ಕಾಗಿ

ಬೇಸರವಾಗದಿರು ಮನವೇ
ಬಯಸದೆ ಬಂದಿರುವ ದು:ಖಕ್ಕಾಗಿ
ಸ್ನೇಹದಲಿ ಹುಳಿಹಿಂಡುವ ಜೀವಕ್ಕಾಗಿ
ನಂಬಿಕೆದ್ರೋಹ ಮಾಡುವ ಪ್ರೀತಿಗಾಗಿ

ಬೇಸರವಾಗದಿರು ಮನವೇ
ಕಾರಣ ತಿಳಿಯದೆ ಬರುವ ಕಣ್ಣೀರಿಗಾಗಿ
ಬವನೆಯ ಅರಿಯದ ಮನಗಳಿಗಾಗಿ


ನೀನೆ ಅವರ‌ ಬೇಸರಕ್ಕೆ ಕಾರಣವಾಗಿ
ಬೇಸರವಾಗದಿರು ಮನವೇ

- kirti

07 Mar 2017, 12:12 pm

ವಾಸ್ತವಿಕತೆ

ಕಣ್ತುಂಬ ನಿದ್ದೆ
ಕಣ್ಣಿನ ರೆಪ್ಪೆಯಡಿ ಕನಸಿನ ಕನವರಿಕೆಗಳು
ನಾ ಮುಂದು‌ ನೀ ಮುಂದು
ಮನದ ಬಾಗಿಲು ತಟ್ಟುವ
ಕನಸಿನ ಕಳ್ಳ ಕ್ಷಣಗಳು

ಕಣ್ತೆರೆದು‌ ನೋಡಿದರೆ
ಅಧ್ಬುತ ಜಗತ್ತು
ಒಮ್ಮೆಲೆ ಮುತ್ತಿಗೆ‌ ಹಾಕುವ
ಜವಾಬ್ದಾರಿಯ ಕಸರತ್ತು
ಸಂಬಂಧಗಳ ಜಂಜಾಟ
ಭಾವನೆಗಳ ಪರದಾಟ‌
ಸ್ವಾರ್ಥಿಗಳ ದೊಡ್ಡಾಟ
ಅಹಂಕಾರಿಗಳ ಬಯಲಾಟ ನೋಡುವಂತದ್ದು

ಕಲ್ಪನೆಯ‌ ಕನಸಿನಲ್ಲೂ
ವಾಸ್ತವಿಕತೆಯ ಬದುಕಿನಲ್ಲೂ
ಒಂದೇ ಬಿರುಗಾಳಿ ಬೀಸಿದೆ
ಅದು ಆಸೆಯ ಬಿರುಗಾಳಿ

ಬಿರುಗಾಳಿಯಲಿ ಸಿಲುಕಿದ
ಮನುಜರು ನಾವು
ಅಜ್ಞಾನದಿಂದ ಬಳಲುತಿರುವ
ರೋಗಿಗಳು ನಾವು
ಸ್ವಾರ್ಥಕ್ಕಾಗಿ ಬದುಕ್ಕುತ್ತಿರುವ
ಜೀವಿಗಳು ನಾವು

Siddhkirti

- kirti

07 Mar 2017, 11:46 am

ಬದುಕು

ಬದುಕು‌ ಬದುಕು ಬದುಕು

ಬದುಕಿನಲ್ಲಿ ಸುಂದರವಾಗಿ ಬದುಕುವರಿಗಿಂತ
ಬದುಕಿಗಾಗಿ‌ ಬಳಲುವರೇ ಹೆಚ್ಚು..

ಬದುಕೊಂದು ರಂಗೋಲಿಯಂತೆ ಹಲವು ಕ್ಷಣಗಳ ಬಣ್ಣದ ರಂಗೋಲಿ ಬಿಡಿಸಿದಂತೆ ...

ಬದುಕೊಂದು ಭಾವಗೀತೆ ಇದ್ದಂತೆ ರಾಗಕ್ಕೆ ತಾಳ ತಾಳಕ್ಕೆ ಲಯ ಹಾಗೆಯೇ ಸಂಬಂಧಕ್ಕೆ ಪ್ರೀತಿ ಪ್ರೀತಿಯಲ್ಲಿ ನಂಬಕೆ ಇರಲೇಬೇಕು...

ಬದುಕೆಂದ ಮೇಲೆ ಸುಖವು ದು:ಖವು ಎದುರಿಸಬೇಕು ಧೈರ್ಯದಿಂದ ಬದುಕು ಗೆಲ್ಲುವ ಹಠವಾದಿ ನಾವಾಗಿರಬೇಕು..

ಬದುಕಿನಲಿ ಕನಸು ಕಾಣಬೇಕು ಗುರಿ ಸಾಧಿಸಲು ನಿದ್ದೆಗೆಡಬೇಕು ಸಾಧಿಸಿದ ಆನಂದಕೆ ಹರುಷದಿಂದಿರಬೇಕು

ನಮ್ಮ ಬದುಕನ್ನ ನಾವು ಬಹುಸುಂದರವಾಗಿ ಬದುಕಿ ಭವ್ಯವಾಗಬೇಕು..

- kirti

07 Mar 2017, 11:43 am

ಜೀವನದ ಸೆರೆ

ಬದುಕಿನಲಿ ಇರಲೊಂದು ಸೂತ್ರ
ಸಹಕಾರ ಸಹಬಾಳ್ವೆ ಯಾಗಬೇಕು ನಮ್ಮ ಮಂತ್ರ
ಎಂದೂ ಸುಳಿಯದಿರಲಿ ತಂತ್ರ ಕುತಂತ್ರ
ಅಂದಿಗೆ ನಮ್ಮ ಬದುಕು ಸ್ವತಂತ್ರ ಸ್ವತಂತ್ರ

- ಮೈನುಸಾಬ

07 Mar 2017, 11:29 am

ಕುರುಚಲು ಗಡ್ಡ

ಕುರುಚಲು ಗಡ್ಡವಿದು ನಿನಗಾಗಿ ಗೆಳತಿ,
ಬಿಟ್ಟುರುವೆನು ತಿಂಗಳಿಂದ ನಿನ್ನ ಕಾಳಜಿಯಲ್ಲಿ.

ಕೇಳು ಗೆಳತಿ ಕಾರಣವ ಯಾಕೆಂದು,
ಹೇಳುವೆ ನಾ ಬಿಡಿಸಿ ನಿನಗಾಗಿ.

ನೀ ನನ್ನ ಕಳಚಿದಂತೆ...ನಿನ್ನ ಕಳಚಿದರೆ ಯಾರಾದರೂ
ಶೋಕದಲಿ ನೀನಿರಲು ತೋರಿಕೆಗಾಗಿ ಬಾರವು
ನಿನಗೀ ಗಡ್ಡ......ಹೆಣ್ಣಲ್ಲವೇ ನೀ....

ಅದಕ್ಕಾಗಿ ನಿನಗೆಂದು
ಸಣ್ಣ ಕಾಣಿಕೆ ನನ್ನದೊಂದು

ನಿನ್ನಯ ಒಪ್ಪಿಗೆ ಬೇಡ
ನಿನ್ನದಿದು, ನಿನಗಾಗಿಯೇ ಅರ್ಪಣೆ ಗೆಳತಿ ಸದಾ
ಈ ಕುರುಚಲು ಗಡ್ಡ......

ಈ ಹೃದಯವ ಮತ್ತೆ ಕೇಳಬೇಡ
ಮೀಸಲಾಗಿದೆ ನನ್ನ ಗೆಳೆಯರಿಗೆ
ನನ್ನ ನನಗಿಂತ ಹೆಚ್ಚು ಪ್ರೀತಿಸುವವರಿಗೆ
ಕ್ಷಮೆಯಿರಲೇ.....

-ನಿನ್ನವನಲ್ಲಾ....

- MK Reddy

06 Mar 2017, 11:07 pm

ಬಿಸಿಲಿನ ಬರೆ

ಎಲ್ಲಾರಿಗೂ ಸಾಕಾಗಿದೆ ಬಿಸಿಲಿನ ಬರೆ
ಮಳೆಗೂ ಬೇಕಿದೆ ಭೂಮಿಯ ಕರೆ
ತಕ್ಷಣವೇ ಒಪ್ಪಿಗೆ ನೀಡಿದೇ ಧರೆ..
ಆದರು ಇನ್ನೂ ತುಂಬಬೇಕು ನಮ್ಮೂರ ಕೆರೆ..

- ಮಂಜುನಾಥ.ಪಿ

06 Mar 2017, 10:24 pm

ನೀಲಕಂಠ

ನೀಲಕಂಠ ಏನೇಂದು ವರ್ಣಿಸಲಿ
ನಿನ್ನ ಗುಣ ಗಾನದ ಲೀಲೆಯನ್ನು .
ಅಮೃತವ ದೇವತೆಗಳಿಗಿಟ್ಟು
ಆಲಾಹಲವ ನೀ ಸ್ವೀಕರಿಸಿ ನೀಲಕಂಠನಾದೆ.
ಸತಿಯ ಪ್ರಾಣ ಹೋದೊಡೆ
ಸರ್ವಸ್ವ ಕಳೆದುಕೋಂಡು
ವೈರಾಗಿ ನೀನಾದೆ .

ಅವಳು ಪಾರ್ವತಿಯಾದಾಗ
ಪ್ರೀತಿಯಿಂದ ಪ್ರಕೃತಿಯೆOದೆ ಹೆಸರಿಟ್ಟೇ .
ನಿನ್ನ ಪ್ರೀತಿಯ ತಿಳಿಸಲು ನಿನ್ನಲ್ಲಿನ
ಅರ್ಧಭಾಗ ಅವಳಿಗಿಟ್ಟು ಅರ್ಧನಾರಿಶ್ವರನಾದೆ .

ಪಂಚಾಕ್ಷರಿ ಮಂತ್ರ ನೀಡಿ
ಸರ್ವದುಃಖ ಕ್ಷಯಿಸಿಹೋದೆ.
ಭಗೀರಥನ ಕೋರಿಕೆಯಂತೆ
ಗಂಗೆಯ ಜಡೆಯಲಿಟ್ಟು
ಗಂಗಾದರನಾದೆ .

ಚಂದ್ರನ ಶಾಪ ಕಳೆಯಲೇಂದು
ಶಿರಸಲ್ಲಿ ಧರಿಸಿ ಶಶಿದರನಾದೆ ಶಂಕರನಾದೆ .
ನಮ್ಮ ಮನದಲ್ಲಿ ನೆಲೆಯಾಗಿ
ಮಹೇಶನಾದೆ ,ಮಂಜುನಾಥನಾದೆ .

- ಚುಕ್ಕಿ

06 Mar 2017, 09:38 pm

ಉಸಿರಲ್ಲಿ ಉಸಿರಾಗು...!!!

ಓ ನನ್ನ ಒಲವೇ
ಹೃದಯದ ಪುಟದಿಂದ ಹಾಕದಿರು ನನ್ನ ಅಳಿಸಿ
ಉಸಿರಿರುವ ತನಕ ಜೊತೆಗಿರುವ ಮಾತುಕೊಟ್ಟು
ನನ್ನ ನಡು ನೀರಲ್ಲಿ ಕೈ ಬಿಟ್ಟು ಹೋಗುವೆಯಾ...???
ನನ್ನೊಲವೆ ನನ್ನಾಸೆ ಏನೆಂದು ಕೇಳೆಯಾ...?
ನನ್ನ ಹೃದಯ ಬಡಿತ ನೀನು
ನನ್ನ ಪ್ರಾಣ ನೀನು ನನ್ನುಸಿರು ನೀನು
ಸಾವು ಬರುವತನಕ ಉಸಿರು ನಿಲ್ಲುವತನಕ
ದೇಹ ಉರುಳುವ ತನಕ
ನನ್ನ ಜೊತೆಗಿರಲಾರೆಯಾ ನೀನು ...???
ನಿನ್ನ ಉಸಿರಲ್ಲಿ ಉಸಿರು ನಾನಾಗುವ ಆಸೆ
ನಿನ್ನ ಪ್ರತಿ ಕನಸಲ್ಲಿ ನಾ ಕಾಣುವ ಆಸೆ
ನಿನ್ನ ನೆನಪಲ್ಲಿ ಸವಿ ನೆನಪಾಗುವ ಆಸೆ
ನನಗೊತ್ತು ನಿನಗೂ ಅದೇ ಆಸೆ
ಈ ದೇಹ ನಿನಗಾಗಿ ಈ ಪ್ರಾಣ ನಿನಗಾಗಿ
ನನ್ನ ಈ ಹೃದಯ ನಿನಗಾಗಿ
ಈ ಉಸಿರು ನಿನಗಾಗಿ 
ನೀ ಇಲ್ಲದ ಬದುಕು ನನಗೆ ಬೇಡದ ಬದುಕು
ಯಾರಿಗೆ ಹೇಳಲಿ..? ನನ್ನ ಮನಸ್ಸಿನ ವೇದನೆ
ಹೇಗೆ ಹೇಳಲಿ..? ನನ್ನ ಮನದ ತಳಮಳ
ಗುರಿಯ ಬಗ್ಗೆ ನನಗಿಲ್ಲ ಅರಿವು 
ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ
ಸಾಗಿದೆ ಜೀವನ...
ಸಾವಲ್ಲಿ ಮುಗಿಯುವುದೊಂದೆ
ಈ ಬದುಕಿನ ಪ್ರೀತಿಯ
ಪಯಣ??????

- Pb

06 Mar 2017, 09:27 pm

ಗೆಲ್ಲುವ ಭರವಸೆ

ಅಂದವೊಂದಿದೆಡೆ ಸರ್ವವೂ ನಮದಾಗದು
ಚಂದದಿಂದ ಮೆರೆದರೆ ಸಕಲವೂ ನಮದಾಗದು|
ಮಂದಬುದ್ಧಿಯಿದ್ದರೆ ಜ್ಞಾನ ಸಂಪಾದನೆಯಾಗದು
ಕೋಲಾರದ ಕಂದನ ಯುಕ್ತಿಯೊಂದಿದೆಡೆ ಸರ್ವವೂ ವಶವಾಗುವವು||೧||

ಹಣವೊಂದಿದ್ದರೆ ಸುಖಜೀವಿಯಾಗನು
ಗುಣವೊಂದಿದ್ದರೆ ಕಾರ್ಯಸಾಧನೆಯಾಗದು|
ಮನವೊಲಿಸಿ ದುಡಿದರೆ ಗುರಿಸಾಧನೆಯಾಗುವುದು
ಕೋಲಾರದ ಕಂದನ ಯುಕ್ತಿಯೊಂದಿದೆಡೆ ಸರ್ವವೂ ವಶವಾಗುವವು||೨||

ವದೆ ತಿಂದರೆ ಸೋತವನಾಗನು
ಪದೇ-ಪದೇ ಪ್ರಯತ್ನವಿದ್ದರೆ ಗೆಲ್ಲುವನು|
ಎದೆಗುಂದದೆ ನಿಂತರೆ ಜಯಶೀಲನಾಗುವನು
ಕೋಲಾರದ ಕಂದನ ಯುಕ್ತಿಯೊಂದಿದೆಡೆ ಸರ್ವವೂ ವಶವಾಗುವವು||೩||

ಅರಿತು ನುಡಿದರೆ ಮಾತಿಗೆ ಬೆಲೆ
ಕಲಿತು ನುಡಿದರೆ ಕಲಿಕೆಗೆ ಬೆಲೆ|
ಮರೆತು ನುಡಿದರೆ ಮಾತಿಗಿಲ್ಲ ಬೆಲೆ
ಕೋಲಾರದ ಕಂದನ ಯುಕ್ತಿ ಮರೆತರೆ ಪ್ರಿತಿಗಿಲ್ಲ ಬೆಲೆ||೪||

ಕುರುಡನಿಗೆ ದಾರಿ ಕಾಣದು
ಕಾಮಾಂಧನಿಗೆ ಕಣ್ಣು ಕಾಣದು|
ಪ್ರೀತಿ ಮರೆತವನಿಗೆ ಈ ಲೋಕನೇ ಕಾಣದು
ಕೋಲಾರದ ಕಂದನ ಯುಕ್ತಿ ಮರೆತವನಿಗೆ ಅವನೇ ಕಾಣನು||೫||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

06 Mar 2017, 07:29 pm