Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.
- ಮೈನುಸಾಬ
07 Mar 2017, 07:33 pm
ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.
- ಮೈನುಸಾಬ
07 Mar 2017, 07:33 pm
ನೀ ಯಾರೆಂದು ಅರಿಯೆನು ನಾ
ಮನ್ನಿಸು ಗೆಳತಿ .....ಹೃದಯಹೀನ ನಾ
ನೆನಪುಗಳ ತಿರುವಿಹಾಕಲಾರೆ
ತಾಳೆನು ಭಾರವ.....ಶಕ್ತಿ ಹೀನ ನಾ
ಸಹಜ ಮಾನವ ಭಾವನೆಗಳು
ಪ್ರೀತಿ ಪ್ರೇಮಗಳಿವು....
ಹುಳಿ ಖಾರ ಉಪ್ಪು ತಿಂದ ದೇಹವಿದು
ಅದರ ಗಾಳಕೆ ಸಿಕ್ಕಿರುವುದು.....
ನನ್ನ ಹೃದಯವಿಗ ನನ್ನ ಕೈಯಲ್ಲಿಲಾ
ಹುಚ್ಚು ಸ್ನೇಹಿತರು ನನ್ನವರು
ಕಸಿದುಕೊಂಡಿರುವರು ಜೋಪಾನ ಮಾಡಲು...
ನೀ ಯಾರೆಂದು ಅರಿಯೆನು ನಾ
ಮನ್ನಿಸು ಗೆಳತಿ .....ಹೃದಯಹೀನ ನಾ
- MK Reddy
07 Mar 2017, 07:08 pm
ಅರಿವಿನ ಮನೆಯೊಳು ಗುರುವಿನ ಹುಡುಕಾಟ,ಅರಿಯದೇ ಕೂತ ಮನಸೊಳು ಪೊಳ್ಳು ಯೋಚನೆಗಳ ಅಲೆದಾಟ!
ಎಲ್ಲ ಬಲ್ಲವ ಮೇಲಿರುವಾಗ ನಮ್ಮದು ನಿಮ್ಮದು ಬರಿ ಚದುರಂಗದಾಟ!!
- ಮಲ್ಲಿಕಾರ್ಜುನ
07 Mar 2017, 06:54 pm
ಪದಗಳ ಹುಡುಕಲಾಗದು ನಿನ್ನ ವರ್ಣಿಸಲು
ಬಳಿಯಲ್ಲೆ ನೀನರಲು ಬದುಕಿಗೆ ಭಯವಿಲ್ಲ
ತೃಣಮಾತ್ರ ನಿನ್ನ ಮಾತಿನ ಸಿಹಿ ಸಾಕು ತಣಿದು ತಂಪಾಗಲು ನಾನು
ವಿಷಾದವಿಲ್ಲ ವಿನೋದವೆಲ್ಲ ವಿನಮ್ರತೆಯ ವೈಣಿಕೆ ನೀನಿರಲು
ಪ್ರೀತಿಯೊಳಗಿನ ಜೇನ ಹುಡುಕಲು ಕಾಯಲಿಲ್ಲ ಸಾವಿರ ದಿನ ನೋಡಿದಾಕ್ಷಣ ಸವಿದೆನು ಆ ಜೇನ ಸವಿಯನು
ನಲುಮೆಯ ಗೆಳತಿ ಸೌಂದರ್ಯದೊಡತಿ ಕಾಡದಿರು ನೀ ನನ್ನ ಪ್ರತಿದಿನ ಕನಸಲಿ....
- Irayya Mathad
07 Mar 2017, 06:45 pm
ನುಡಿದರೆ ನಾಲಿಗೆಯ ಪಾಪ ಕಳೆದಂತೆ,
ಆಲಿಸಿದರೆ ಕರ್ಣಗಳಿಗೆ ಪುಣ್ಯ ದೊರೆತಂತೆ,
ಬರೆದರೆ ಹಸ್ತಕ್ಕೆ ಬಲವು ಬಂದಂತೆ,
ಕರುನಾಡಲ್ಲಿ ಇದ್ದರೆ ಸ್ವರ್ಗದಲಿ ನಿಂತಂತೆ,
ಅನ್ಯ ಭಾಷೆಯ ಮೋಹಕ್ಕೆ ಸಿಲುಕಿ,
ಕನ್ನಡವನ್ನು ಮರೆಯುವಿರಲ್ಲ,
ಏನಿದು ಅವಕೆ?
- ಮೈನುಸಾಬ
07 Mar 2017, 06:17 pm
ಯುಗ-ಯುಗ ಸಾಗಲಿ ಯುಗಾದಿ
ಬಾಳಿಗೆ ಹಾಕುವೆನು ಇಂದೇ ಬುನಾದಿ||ಪಲ್ಲವಿ||
ಬೇವು-ಬೆಲ್ಲದ ಹಂಚಿಕೆ
ಕಷ್ಟ-ಸುಖದ ಪತಾಕೆ|
ಭಾರತೀಯರೆಲ್ಲರ ಹೊಸ ದಿನ
ಸಂತಸವೂ ಮನೆ-ಮನೆಗೂ ಈ ದಿನ||೧||
ಅರಿಯರು ಯಾರು ಈ ದಿನ
ಜನವರಿಯೇ ಎಲ್ಲರ ದೃಷ್ಟಿಯಲಿ ಹೊಸದಿನ|
ಕುಣಿಯೋಣ ಬನ್ನಿ ಈ ದಿನ
ನಲಿಯೋಣ ಬನ್ನಿ ಹೊಸದಿನ||೨||
ಎಲ್ಲಾರೂ ಒಟ್ಟಾಗಿ ಸೇರೋಣ
ಸಂತಸವೂ ಎಲ್ಲಾರಿಗೂ ಹಂಚೋಣ|
ಮೂಡಿ ಬರುವೆನು ರವಿ ಇಂದು
ಹೀಗೆ ಇರಲಿ ಬಾಳಲ್ಲೆಂದು||೩||
ದುಃಖವ ಇಂದು ಮರೆಮಾಡಿ
ಸುಖದಿಂದ ಸಂತಸದಿ ಕುಣಿದಾಡಿ|
ಎಲ್ಲರ ಒಡಗೂಡಿ ಹೋರಾಡಿ
ಯುಗಾದಿಗೆ ಶುಭ ಹಾಡಿ||೪||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:54 pm
ಬಾ ಬಾ ಚಿಟ್ಟೆ
ಬಣ್ಣದ ಚಿಟ್ಟೆ
ಹೂವಿನ ರಸವನು
ನೀ ಹೀರಲು ಬಾ||೧||
ಬಾ ಬಾ ನವಿಲೇ
ಚಿನ್ನದ ನವಿಲೇ
ಗೆರೆಯನು ಬಿಚ್ಚುತ್ತಾ ಹಾಡುತಾ
ನಮ್ಮೊಡನೆ ನಲಿಯಲು ಬಾ||೨||
ಬಾ ಬಾ ಕೋಗಿಲೆ
ಸುಂದರ ಕೋಗಿಲೆ
ಕುಹೂ-ಕುಹೂ ಹಾಡನ್ನು
ಹಾಡಲು ಬಾ||೩||
ಬಾ ಬಾ ಗಿಳಿಯೇ
ಪಂಜರ ಗಿಳಿಯೇ
ಸುಂದರ ಭವಿಷ್ಯವು
ಹೇಳಲು ನೀ ಬಾ ಬಾ||೪||
ಬನ್ನಿ ಬನ್ನಿ ಮಕ್ಕಳೇ
ಪುಟಾಣಿ ಮಕ್ಕಳೇ
ಆಟವ ಆಡಲು ನೀವು ಬನ್ನಿ
ಆಡುತ್ತಾ ನಲಿಯೋಣ ಎಂದೆಂದೂ||೫||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:36 pm
ವೇಷ ನೋಡಿ ಭಾಷೆ ನೋಡಿ ನಮ್ಮ ದೇಶ ಭಾರತ
ಭಾರತ ಮಾತೆಯ ಮಕ್ಕಳೆಂದು ನಮಗೆಲ್ಲ ಸಂತಸ ||ಪಲ್ಲವಿ||
ಭಾರತ ಮಾತೆಯ ಮುದ್ದಿನ ಮಕ್ಕಳು
ನಮ್ಮ ತಾಯಿ ಭಾರತಿ|
ಸಿಂಹದಂತೆ ಮೆರೆಯುತ್ತಿದೆ
ನಮ್ಮ ದೇಶದ ಸಿಂಹಲಾಂಛನ||೧||
ಮೂರು ಬಣ್ಣ ಮಧ್ಯೆ ಒಂದು ಚಕ್ರ
ಒಳಗೊಂಡ ಬಾವುಟ ನಮ್ಮ ಕೇತನ|
ನೀರಿನಲ್ಲಿ ಬೆಳದಿರುವ ಕಮಲ
ನಮ್ಮ ರಾಷ್ಟ್ರ ಪುಷ್ಪ ಇದೇ ನಮ್ಮ ಚೇತನ||೨||
ಮುಂದೆ ಮುಂದೆ ಸಾಗುತಿದೆ
ನಮ್ಮ ದೇಶದ ಪ್ರಾಣಿ ಹುಲಿ|
ಗೆರೆ ಬಿಚ್ಚಿ ಆಡುತ್ತಿದೆ
ನಮ್ಮ ದೇಶದ ಪಕ್ಷಿ ನವಿಲು||೩||
ಕಂಠ ಬಿಚ್ಚಿ ಹಾಡುತಿದೆ
ನಮ್ಮ ದೇಶದ ಹಿಂದೂಸ್ತಾನಿ ಸಂಗೀತ|
ಸಪ್ತ ಸ್ವರಗಳು ಬಾಜಿಸುತ್ತಿವೆ
ನಮ್ಮ ತಾಯಿ ನೆಲದಲ್ಲಿ||೪||
ಕೈ ಕಾಲು ಆಡಿಸುತ್ತಿದೆ
ನಮ್ಮ ದೇಶದ ಭರತನಾಟ್ಯ|
ಭಾರತಾಂಬೆಯ ಮುದ್ದಿನ ಮಕ್ಕಳ ರುದ್ರನಾಟ್ಯ
ನಮ್ಮ ತಾಯಿ ಮಡಿಲಲ್ಲಿ||೫||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:16 pm
ನಕ್ಕಾಗ ನೀ ಹೂಗೊಂಚಲು,
ಸಿಗ್ಗು ನಿನ್ನಪ್ಪಿ ಮುದ್ದಿಡಲು,
ಮೂಕವಿಸ್ಮಿತನಾದಂತೆ ಮನವು ಹಾಲ್ಗಡಲು,
ನಳ ನಳಿಸಿ ನಲಿದಿವೆ ಕೆಂಪು ಅದರಗಳು,
ಎವೆ ಬಿಡದೆ ದಿಟ್ಟಿಸಿವೆ ಕಂಗಳು,
ಮೂಗುತಿಯು ಮಿಂಚಿಹಳು,
ಮಾದವನ ಮನವಿರುಳು,
ತೊಳೆದಿರಲು ಕತ್ತಲು,
ಇನ್ನೆಲ್ಲಾ ಬರಿ ಹಗಲು,
ಗುಳಿ ಕೆನ್ನೆಯಾ ಹೊರಳು,
ಕರೆದಿರಲು ಇನಿಯನನು,
ಚುಂಬನವನಿತ್ತು ಶೃಂಗಾರವಿರಲು.
ಗಲ್ಲವಿನ್ನಷ್ಟು ಸೆಳೆಯುತಿರಲು,
ಬೆರಳು ಸೇರಿಸಿ ಬೆರೆತಿಹಳು,
ಒಂದಷ್ಟು ಚೆಲುವ ವರಿಸಿಹಳು,
ಪ್ರೇಮವಿತ್ತು ಬರಸೆಳೆದಿಹಳು,
ಬಾಳಿಗೊಂದು ಮೌಲ್ಯವಿವಳು,
ಮಿನುಗಿ ಹೊಳೆವ ಹರಳು...
-ಕನ್ನಡದ ಭಕ್ತ
- ಕನ್ನಡದ ಭಕ್ತ
07 Mar 2017, 12:18 pm