Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ಮರೆತರೆ ತಾಯಿ

ನಿನ್ನ ಮರೆತರೆ ತಾಯಿ
ಮರು ಜನ್ಮವಿಲ್ಲ ನನಗೆ|
ಜನ್ಮ-ಜನ್ಮ ನಿನಗಾಗಿ
ಜನಿಸುವೆನು ನಿನ ಸೇವೆಗೆ||ಪಲ್ಲವಿ||

ಕರುಳ ಬಳ್ಳಿಯ ಕಿತ್ತು
ನನಗೆ ಜನುಮವೆತ್ತು|
ಪ್ರೇಮದಿ ಹಾಲನುಣಿಸಿ
ನೀ ಹೃದಯದಿ ನನ್ನಿರಿಸಿ||೧||

ಮೊದಲು ಗುರುವು ಆಗಿ
ಅಕ್ಷರ ಕಲಿಸಿ ನನಗೆ|
ಪ್ರೀತಿಯ ಅರಿವು ಮೂಡಿಸಿ
ಬದುಕಲು ದಾರಿ ತೋರಿಸಿ||೨||

ತಂದೆಯು ನೀನಾದೆ ನನ ಬಾಳಿಗೆ
ನೀ ಕಷ್ಟಗಳ ಬೆನ್ನಟ್ಟಿ ಹೋರಾಡಿದೆ|
ನೀ ಧೈರ್ಯದಿ ಮುಂದೆ ಸಾಗುತಾ
ಸಂಸಾರ ಸಾಗರವ ಈಜುತಾ||೩||

ನೆತ್ತಿಯ ಮೇಲೆ ಉರಿಬಿಸಿಲು
ಗಾಳಿ,ಮಳೆಯನು ಲೆಕ್ಕಿಸದೆ|
ನೀ ದುಡಿಯುತಲಿದ್ದೆ
ಏನು ಪ್ರತಿಫಲವ ಯಾಚಿಸದೆ||೪||

ಎತ್ತು ಹೊತ್ತವರ ಸುಖವಿಲ್ಲ
ಗಂಡನ ಆಸರೆಯಿಲ್ಲ|
ಮಕ್ಕಳ ಬದುಕಿಗಾಗಿಯೇ
ನಿನ್ನ ಬಾಳು ಮುಡುಪಾಗಿಟ್ಟೆ||೫||

ನೀ ಮುಳುಗಿದೆ ದುಃಖ ಸಾಗರದಿ
ಎಂದು ತೇಲುವೆ ಸಂತೋಷದ ಆಗಸದಿ|
ಬಾಳಲ್ಲಿ ಬೆಳಕು ಮೂಡಿಸುತಾ
ಎಂದು ನಡಿವೆ ನೀ ಸುಖಜೀವನ ಪಥದಲ್ಲಿ||೬||

ಏನೇ ಆದರೂನುವೆ
ನಾ ಎಂದಿಗೂ ತಾಯಿಯ ಮರೆಯಲ್ಲ|
ಒಮ್ಮೆ ಮರೆತರೆ ನಾನೆಂದು ಉಳಿಯಲ್ಲ
ಉಳಿದರೂನು ಬದುಕಿಲ್ಲ||೭||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

08 Mar 2017, 07:59 pm

ಸಮಾಜ ಸೇವೆ

ಕೋಟಿ ಸುರಿದು
ಓಟು ಪಡೆದು
ಲೂಟಿ ಮಾಡುವ ಕೆಲಸಕ್ಕೆ
ಲೂಟಿಕೋರರು ಕೊಟ್ಟ ಹೆಸರು
ಸಮಾಜ ಸೇವೆ.

- ಮೈನುಸಾಬ

08 Mar 2017, 07:44 pm

ಹೆಣ್ಣು ಬಾಳಿಗೆ ಕಣ್ಣು

ಹೆಣ್ಣಿಗೆ ಸ್ವಾತಂತ್ರವೆಲ್ಲಿ ?
ಸ್ವತಂತ್ರತೆ ಇಲ್ಲದ ಬದುಕಿನಲಿ
ಬಣ್ಣವೆಲ್ಲಿ ?
ನಿನ್ನ ಮನಸ್ಸೀಗಾಕಿರುವ
ಬೇಲಿಯ ಕಿತ್ತೆಸೆದು ಬಾ.
ನಿನ್ನ ಭಾವನೆಗಳ ಕಣ್ಣೀರಿಗೆ
ಬೆಲೆಯಿರದು ಈ ಜಗದಲ್ಲಿ
ಸ್ತ್ರೀಶಕ್ತಿ ತೋರಲು ನೋವಿಸುವ
ಭಾವಗಳ ಕಿತ್ತೆಸೆದು ಬಾ .
ಎಲ್ಲಿರುವೆ ನೀನು ಬಚ್ಚಿಕೊಂಡಿರುವೆ
ನಿನ್ನಲ್ಲಿಯೇ ನಿನ್ನನು ಹುಡುಕಾಡುತಿರುವೆ
ಮೌನದಿಂದ ಮನಸ್ಸಿನಡಿ ಬಳಲಬೇಡ .
ನಿಜರೂಪವ ನಿನ್ನಾಕಲೆಯ
ನಿನ್ನ ಜೀವನದ ಮರ್ಮವ
ಹೊರಗೆಳೆದು ತಾ.
ಗಂಡು‌-ಹೆಣ್ಣು ಮೇಲೂ ಕೀಳಿಲ್ಲ
ಹೆಣ್ಣಿರದೆ ಗಂಡಿಗೆ
ಗಂಡಿರದೆ ಹೆಣ್ಣಿಗೆ
ಒಳ್ಳೆಯ ಸಾಟಿಯಾರಿಲ್ಲ.
ಕೊಂದುಬಿಡು ಹೆದರಿಸುವ ಹೆಬ್ಬಾವನು
ಸುತ್ತಿಕೊ ದೈರ್ಯದಿಂದ‌ ಹೋರಾಡುವ ಹಾವನು
ವಿಷಉಣ್ಣಿಸದಿರು ನೀ ಹೆಮ್ಮೆಯ‌ ಹೆಣ್ಣು
ಸಂರಕ್ಷಿಸು ಹುಟ್ಟುವ ಮುಂಚೆಯೆ ಕಿತ್ತೆಸೆಯುವ ಭ್ರೂಣವನ್ನು .

ಬಾಳಿನಲಿ ಗೌರವದಿಂದಿರು
ದೇವರ ಕಿರೀಟದ ಹಾಗೆ
ಸಂಬಂದದಲಿ ಪ್ರೀತಿ ತುಂಬಿರು
ಕರುಣಾಮಯಿ‌ ನೀನಾಗಿರುವೆ
ಮನ ಮನಗಳ ಜೊತೆ
ಮನೆ ಮನೆ ಬೆಳಗುವ
ಹಣತೆ ನೀನು
ಸಂಸಾರಕೆ ಸೊಬಗು ನೀನು
ಸೌಂದರ್ಯದ‌ ಶಿಲೆ ನೀನು
ಸಂತೋಷಕೆ ಶಿಖರ ನೀನು
ಕ್ಷಮಿಸುವಲ್ಲಿ ಎತ್ತಿದ ಕೈ ನೀನು
ಗುಣದಲ್ಲಿ ಬಂಗಾರ ನೀನು
ಸಂಸ್ಕಾರದಲಿ ಕೀರ್ತಿ ನೀನು
ಗೌರವದಿ‌ ಕಾಣುವ ಮೂರ್ತಿ ನೀನು
ಹೆಣ್ಣೆ - ನೀನು ಹೊಣ್ಣು
ಹೊಳೆಯುತಿರು ಈ ಜಗದಲ್ಲಿ
ತುಕ್ಕ ಹಿಡಿಯದ ಎಲ್ಲ ಗುಣ,ಶಕ್ತಿ ನಿನ್ನಲ್ಲಿದೆ
ನಾರಿ ಶಕ್ತಿಯನ್ನು ನಾಡಿಗೆ ತೋರುಸು
ನಿನ್ನ ಒಳ್ಳೆತನದಿ
ಸ್ತ್ರೀಕುಲದ ಜೊತೆ ಮನುಕುಲವ ಸ್ವರ್ಗವಾಗಿಸು

ಮಹಿಳಾ ದಿನಾಚರಣೆಯ ಶುಭಾಷಯಗಳು

- kirti

08 Mar 2017, 04:01 pm

ನೆನಪು

ಬದುಕಿನ ಅರಮನೆಯಲ್ಲಿ ಹೃದಯದ ಬಾಗಿಲ
ಮೇಲೆ ನೀ ಬಿಡಿಸಿದ ಭಾವನೆಗಳ ಚಿತ್ರ,
ನಿನ್ನ ಮರೆಯಲಾಗದಂತೆ ಕಟ್ಟಿಹಾಕಿದೆ
ನೀನೆ ಬರೆದ ಪ್ರಾಸಗಳ ಪತ್ರ,
ಮಾತುಗಳ ಜೊತೆಗೆ ನೋಟ ಬೆರೆಸಿ
ಸೆಳೆದುಕೊಂಡೆ ನಿನ್ನ ಹತ್ರ,
ಹುಚ್ಚು ಮನಸಿನ ಸಾಗರದಲ್ಲಿ ಉಳಿದದ್ದು
ನಿನ್ನ ನೆನಪುಗಳು ಮಾತ್ರ,
ನೆನಪುಗಳ ಹಾಯುತ್ತಿದಾಗ ಮತ್ತೆ ಮತ್ತೆ
ಕಂಡದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ!

ಪ್ರೀತಂ

- basavarajsirnayakpreethu

08 Mar 2017, 11:37 am

ಎಷ್ಟು ಜೇಪುಣಿ ನೀ.......

ಎಷ್ಟು ಜಿಪುಣಿ ನೀ
ಏನನ್ನು ಬಿಡುವುದಿಲ್ಲ
'ಏನು ಬೇಕು' ಎಂದು ಕೇಳುವ ಅವಕಾಶವೇ ನನಗಿಲ್ಲಾ.

ನಾ ಕೇಳಿ ಕೊಡುವುದು ಹಾಗಿರಲಿ
ನೀನೇ ಕಸಿದುಕೊಳ್ಳುವೆ
ಹೃದಯವ ಬಾಡಿಗೆಗೆಂದು ಕೇಳಿ
ಮುಂಗಡವು ಇಲ್ಲ, ಬಾಡಿಗೆಯು ಇಲ್ಲ
ಖರೀದಿ ಎಂದು ಮಾಡಿಬಿಟ್ಟೆ
ಮನವ ಮೂರಾಬಟ್ಟೆ.

ನನ್ನ ಉಸಿರ ನಿನ್ನದಾಗಿಸಿಕೊಂಡಿರುವೆ
ನನ್ನ ಕನಸೆಲ್ಲಾ ನೀ ತುಂಬಿರುವೆ
ಜಿಪುಣತನಕೆ ರಾಯಬಾರಿ ನೀ
ಎಷ್ಟು ಜಿಪುಣಿ ನೀ
ಓ ನನ್ನ ಮುದ್ದಾದ ಅರಗಿಣಿ.....

- MK Reddy

08 Mar 2017, 11:23 am

ಅವಳೆಂದರೇ...!

" ಅವಳೆಂದರೇ...!
ಹೀಗೆ
ಪ್ರೀತಿ ತುಂಬಿದ ಕಡಲು,
ಅವಳ ಒಡಲು
ಸ್ನೇಹ ತುಂಬಿದ ಮುಗಿಲು,
ಅವಳ ಮಡಿಲು
ನೂರುಕಾಲ
ಸುಖವಾಗಿರಲಿ
ನನ್ನವಳು."
#HRD#

- RAMAPPA DUMMADI

08 Mar 2017, 11:18 am

-:ಮನವು ಮಾತಾಡುವ ಮುನ್ನ:-

ಮನವು ಮಾತಾಡುವ ಮುನ್ನ,
ಕಣ್ಣಲಿ ಕನಸಿತ್ತು, ಮನಸಲಿ ಛಲವಿತ್ತು,
ಮಾತಲಿ ಧ್ರುಡತೆ ಇತ್ತು, ನಿರ್ದಾರದಲಿ ಅಛಲತೆ ಇತ್ತು.
ಮನವು ಮಾತಾಡುವ ಮುನ್ನ,
ನಾನು ನಾನಾಗಿದ್ದೆ, ಬಾನು ಮನದುಂಬಿ ನೋಡುತ್ತಿದ್ದೆ,
ತನುವನು ಸೋನೆಮಳೆಗೆ ಚಾಚುತ್ತಿದ್ದೆ,
ಬಾಳನು ಸಂಭ್ರಮಿಸುತ್ತಿದ್ದೆ.
ಮನವು ಮಾತಾಡಿದಾಗ,
ಬಾವದ ಅಲೆಯಲ್ಲಿ ಒಲವು ಮೂಡಿದಾಗ,
ಕಳೆದು ಹೋದೆ, ಕರಗಿ ಹೋದೆ,
ಗುಲಾಮನಾಗಿ ಹೋದೆ.
ನನ್ತನ ನನ್ನಲಿ ಅಳಿಸಿ ಹೋಯಿತು.
ಮನವು ಮಾತಾಡಿದಾಗ,
ಮನವು ಮನದೊಡಗೂಡಿ,
ಮೂಕ ಭಾವಗಳಿಗೆ ಅರ್ಥ ಹುಡುಕುತ್ತಿತ್ತು,
ವ್ಯರ್ಥ ಆಶೆಗಳಿಗೆ ಜೀವ ತುಂಬುತ್ತಿತ್ತು,
ಕನಸು-ನನಸುಗಳ ಅಂತರವನ್ನು ಅಳಿಸಿ ಹಾಕಿತ್ತು.
ಮನವು ಮಾತಾಡಿದಾಗ,
ಮೂರ್ಖ ಮನಕೆ ತನ್ನ ಅಸ್ತಿತ್ವದ ಚಿಂತೆ,
ವಾಸ್ತವದ ಕ್ರೂರತೆಯ ಪರಿ ಮನದ ಭಾವವ ಕದಡಿತ್ತು.
ಎದ್ದು ನೋಡಿದಾಗ ಎಲ್ಲವೂ ಅಯೋಮಯ,
ಭಾವಶೂನ್ಯತೆ ಸಂಧಿಗ್ಧತೆ.
ಎದ್ದೆ, ಹೊರನಡೆದೆ,
ಒಲುಮೆ-ಕಂಗಳ ಚಲುವೆಯೊಡಗೂಡಿ,
ಚಹ ಕುಡಿದು "ಉಫ" ಎಂದೆ.
ಮತ್ತದೇ ಕಣ್ಸಮರ,
ಮತ್ತೆ ಮಾತಾಡಿತು ಮನ,
ಅದು ಯಾವತ್ತು ಹೊತ್ತೊಯ್ಯುವುದೋ ನನ್ನ ಹೆಣ.
ಬಾ.ಸಂ.ಪಾ

- ಅಭಿರಾಮ್

08 Mar 2017, 11:13 am

ಜಾತಿ

ಎಲ್ಲಿದೆ ಜಾತಿ ತಿನ್ನುವ ಅನ್ನಕ್ಕಿಲ್ಲದ ಜಾತಿ...
ಕುಡಿಯುವ ನೀರಿಗಿಲ್ಲದ ಜಾತಿ...
ಉಸಿರು ನೀಡುವ ಗಾಳಿಗಿಲ್ಲದ ಜಾತಿ...
ಸುಡುವ ಬೆಂಕಿಗಿಲ್ಲದ ಜಾತಿ...
ಉಡುವ ಬಟ್ಟೆಗಿಲ್ಲದ ಜಾತಿ...
ನೀಡುವ ಕೈಗಳಿಗಿಲ್ಲದ ಜಾತಿ...
ಪ್ರಾಣಿ ಪಕ್ಷಿಗಳಿಗಿಲ್ಲದ ಜಾತಿ...

ತಿನ್ನುವ ಅನ್ನಕ್ಕೆ ಕೇಳುವೀರಾ ಯಾವ ಜಾತಿಯ ರೈತ ಬೆಳೆದಿರುವನೆಂದು
ಬೀಸುವ ಗಾಳಿಗೆ ಕೇಳುವೀರಾ ನಿನ್ನದು ಯಾವ ಜಾತಿ ಎಂದು
ಕುಡಿಯುವ ನೀರಿಗೆ ಕೇಳುವೀರಾ ನಿನ್ನದು ಯಾವ ಜಾತಿ ಎಂದು
ಉಡುವ ಬಟ್ಟೆಗೆ ಕೇಳುವೀರಾ ನೀನು ಯಾವ ಜಾತಿಯ ಕಾರ್ಮಿಕನ ಕಲೆ ಎಂದು


ಹಸಿವು ನೀಗಿದರೆ ಸಾಕು...
ದಾಹ ತೀರಿದರೆ ಸಾಕು...
ಮಾನ ಮುಚ್ಚಿದರೆ ಸಾಕು...
ಕಷ್ಟಕ್ಕೆ ದಾರಿ ಸಿಕ್ಕರೆ ಸಾಕು...
ಬೆಚ್ಚಗಿದ್ದರೆ ಸಾಕು...
ಮತ್ತೇಕೆ ನಮಗೆ ಜಾತಿ ಎಂಬ ಪದ ಬೇಕು?

- ಮೈನುಸಾಬ

08 Mar 2017, 11:11 am

ನಾನೊಂದು ಹೆಣ್ಣು

ನಾ ಬರೀ ಭ್ರೂಣವಲ್ಲ
ನಿನ್ನ ಬಯಕೆಗಳ ಪೊಟರೆಯಲ್ಲಿ ಹೊತ್ತಿದ್ದ ಬೆಂಕಿಆರಿಸಲು ಗರ್ಭಕೋಶವ ಪಣಕಿಟ್ಟು ನನ್ನತನವೆಂಬ ನನ್ನನ್ನೆ ಕಳೆದುಕೊಂಡವಳು ನಾನು

ನೀ ಕೊಟ್ಟು ಬಿಟ್ಟುಹೋದ ಕೂಸಿಗೆ ತುತ್ತಿಕ್ಕಲು ಹೆಣಗಾಡಿ ಕೀಚಕರ ದಾಹಕೆ ನೀರೆರೆದು ಕೆಟ್ಟವಳೆಂಬ ಪಟ್ಟ ಹೊತ್ತುವಳು ನಾನು

ಯಾರಿಗೂ ಕಾಣದಂತೆ ದುಃಖಗಳ ಮಗುಚಿಟ್ಟು ಜೀವನದ ಜರಡಿಯಲಿ ಹನಿಗಳು ಮೂಡದಂತೆ ಎದೆಗಪ್ಪಿ ಮುತ್ತಿಟ್ಟು ಮುಸುಕಿನಲಿ ನಿಂತು ಅತ್ತವಳು ನಾನು

ಪುಟ್ಟಕೂಸು ದೊಡ್ಡದಾಗಿ ನಾನಿಂದು ಬೇಡವಾಗಿ ಮುಪ್ಪಿನಲಿ ಮಗನ ನೆನೆದು ಅತ್ತು ಕಣ್ಣೀರಿಟ್ಟು ಜೀವನದ ಪಯಣವ ಮುಗಿಸಿ ಎಲ್ಲರನು ಕ್ಷಮಿಸಿ ಹೊರಟವಳು ನಾನು

ನನ್ನ ಗರ್ಭದಲ್ಲೆ ನನ್ನ ಉಳಿಸಿಕೊಳ್ಳಲು ಸೋತು ಸತ್ತವಳು ನಾನು
ಹೌದು ನಾ ಬರಿ ಭ್ರೂಣವಲ್ಲ ನಾನೊಂದು ಹೆಣ್ಣು

-ಹಂಸಿನಿ

- ವಿಸ್ಮಯ

08 Mar 2017, 09:30 am

ನನ್ನ ಪ್ರೀತಿಗೆಂದೂ ಸಾವಿಲ್ಲ...!!!

ಬೇಸಿಗೆಯ ಬೇಗೆಯಲಿ ಸೂರ್ಯ ಇಂದೇಕೋ
ಮೋಡಗಳ ಮರೆಯಲಿ ಅವಿತಿದ್ದಾನೆ
ಮಳೆ ಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ ವರುಣರಾಜ
ಮತ್ತೆ ಸುಮಧುರ ನೆನಪುಗಳ
ಹೊತ್ತು ತಂದಿದ್ದಾನೆ...
ಮಳೆಯಲಿ ನೆನೆಯುತ ನಿನ್ನನು ನೆನಸುತ
ತಂಪು ಗಾಳಿಯಲಿ ಬಿಸಿ ಅಪ್ಪುಗೆ ಬಯಸುತ
ಮುತ್ತಿನ ರೂಪದಲಿ ಮಳೆ ಹನಿ
ಭೂಮಿಯ ಚುಂಬಿಸಿದಾಗ
ಮತ್ತೆರಿಸಿದ ನಿನ್ನ ಚುಂಬನ ನೆನಪಾಯಿತು
ನನ್ನಿಂದ ದೂರ ನೀನಿದ್ದರೆ ಏನಂತೆ...?? 
ನನ್ನೆದೆಯಲಿ ಉಸಿರಾಗಿ ನಿನ್ನದೇ ಉಸಿರಿದೆ... 
ಜೀವನದ ಪ್ರತಿ ಪುಟದಲೂ ನಿನ್ನದೇ ಹೆಸರಿದೆ...
ಹಗಲು ರಾತ್ರಿ ಒಂದೇ ಯೋಚನೆ..
ಮುಗಿಯದ ಮೋಹ ತೀರದ ದಾಹ
ಋತುಗಳು ಬದಲಾಗಬಹುದು.
ನೀ ನನ್ನ ಮರೆಯಲೂಬಹುದು
ನೋವಲ್ಲಿ ನಾನು ಸಾಯಲೂ ಬಹುದು
ಆದರೆ...
ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!!!

- Pb

07 Mar 2017, 09:23 pm