Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
"ಅನ್ಯಾಯಕ್ಕೆ ಎಷ್ಟು ಆತುರವೋ ನ್ಯಾಯಕ್ಕೆ ಅಷ್ಟೇ ಸಹನೆ ಬೇಕು .
ಅನ್ಯಾಯಕ್ಕೆ ತಲೆಯನ್ನು ಚೆಂಡಾಡುವಾಸೆ ಇದ್ದರೆ ನ್ಯಾಯಕ್ಕೆ ಹೃದಯವನ್ನು ಗೆಲ್ಲುವಾಸೆ ಇರಬೇಕು .
ತಾಳ್ಮೆ ನ್ಯಾಯದ ಬುನಾದಿ .
ಕರುಣೆ ಅದರ ಕಿರೀಟ .."
- anand
09 Mar 2017, 01:38 pm
ಕಣ್ಣಂಚಿನಲಿ ತೊಟ್ಟಿಕ್ಕುವ ಕಂಬನಿ ಹಣಿಗಳು
ಮುತ್ತಿನಂತೆ ಮಿಟುಕಾಡಿ, ಅಳುಕಿ, ಬಳುಕಿ ಬಿರುಬಂಡೆಗೆ ಬಡಿದು, ಬಿರಿದು ಹೋದವು.
ಕ್ಷಣಮಾತ್ರದಲಿ ಮನವು ತೇವಭರಿತವಾಯಿತು.
ಬಿರಿದು ಛಿದ್ರಗೊಂಡ ಹನಿಗಳು,
ಒಳಮನಸ್ಸಿನ ಬೇಗುದಿಗೆ ಹಿಡಿದ ಕನ್ನಡಿಯಂತಿದ್ದವು,
ಮನದ ಭಾರ ತಳಮಳಗಳಿಗೆ
ಕಂಬನಿ ಮತ್ತು ಲೇಖನಿ ಸ್ಪಂದಿಸಿದವು.
ಆದರೂ ಲೇಖನಿಯ ಅವಸರಕ್ಕೂ ನಿಲುಕದಂತಹ ಮನೋಸಮರಗಳಿಂದ ನಾನು ಜರ್ಜರಿತನಾಗಿಬಿಟ್ಟೆ,
ಕೊನೆಗೆ ಲೇಖನಿಯ ಅವಸರಕ್ಕೂ ಪೂರ್ಣವಿರಾಮವನ್ನಿಟ್ಟುಬಿಟ್ಟೆ.........
ಬಾ. ಸಂ. ಪಾ.
- ಅಭಿರಾಮ್
09 Mar 2017, 12:30 pm
ಮನವು ಮಾತಾಡುವ ಮುನ್ನ,
ಕಣ್ಣಲಿ ಕನಸಿತ್ತು, ಮನಸಲಿ ಛಲವಿತ್ತು,
ಮಾತಲಿ ಧ್ರುಡತೆ ಇತ್ತು, ನಿರ್ದಾರದಲಿ ಅಛಲತೆ ಇತ್ತು.
ಮನವು ಮಾತಾಡುವ ಮುನ್ನ,
ನಾನು ನಾನಾಗಿದ್ದೆ, ಬಾನು ಮನದುಂಬಿ ನೋಡುತ್ತಿದ್ದೆ,
ತನುವನು ಸೋನೆಮಳೆಗೆ ಚಾಚುತ್ತಿದ್ದೆ,
ಬಾಳನು ಸಂಭ್ರಮಿಸುತ್ತಿದ್ದೆ.
ಮನವು ಮಾತಾಡಿದಾಗ,
ಬಾವದ ಅಲೆಯಲ್ಲಿ ಒಲವು ಮೂಡಿದಾಗ,
ಕಳೆದು ಹೋದೆ, ಕರಗಿ ಹೋದೆ,
ಗುಲಾಮನಾಗಿ ಹೋದೆ.
ನನ್ತನ ನನ್ನಲಿ ಅಳಿಸಿ ಹೋಯಿತು.
ಮನವು ಮಾತಾಡಿದಾಗ,
ಮನವು ಮನದೊಡಗೂಡಿ,
ಮೂಕ ಭಾವಗಳಿಗೆ ಅರ್ಥ ಹುಡುಕುತ್ತಿತ್ತು,
ವ್ಯರ್ಥ ಆಶೆಗಳಿಗೆ ಜೀವ ತುಂಬುತ್ತಿತ್ತು,
ಕನಸು-ನನಸುಗಳ ಅಂತರವನ್ನು ಅಳಿಸಿ ಹಾಕಿತ್ತು.
ಮನವು ಮಾತಾಡಿದಾಗ,
ಮೂರ್ಖ ಮನಕೆ ತನ್ನ ಅಸ್ತಿತ್ವದ ಚಿಂತೆ,
ವಾಸ್ತವದ ಕ್ರೂರತೆಯ ಪರಿ ಮನದ ಭಾವವ ಕದಡಿತ್ತು.
ಎದ್ದು ನೋಡಿದಾಗ ಎಲ್ಲವೂ ಅಯೋಮಯ,
ಭಾವಶೂನ್ಯತೆ ಸಂಧಿಗ್ಧತೆ.
ಎದ್ದೆ, ಹೊರನಡೆದೆ,
ಒಲುಮೆ-ಕಂಗಳ ಚಲುವೆಯೊಡಗೂಡಿ,
ಚಹ ಕುಡಿದು "ಉಫ" ಎಂದೆ.
ಮತ್ತದೇ ಕಣ್ಸಮರ,
ಮತ್ತೆ ಮಾತಾಡಿತು ಮನ,
ಅದು ಯಾವತ್ತು ಹೊತ್ತೊಯ್ಯುವುದೋ ನನ್ನ ಹೆಣ.
ಬಾ.ಸಂ.ಪಾ...
- ಅಭಿರಾಮ್
09 Mar 2017, 12:04 pm
ನನ್ನ ದೇಹದಲ್ಲಿರುವ ಎಲ್ಲ ರಕ್ತವನ್ನು
ಅರ್ಪಿಸಿದೆ ಭಾರತ ದೇಶಕ್ಕೆ
ಒಂದು ಚಿಕ್ಕ ಕಣವು ಕೂಡ
ಉಳಿಸಲಿಲ್ಲ ನನ್ನ ದೇಹಕ್ಕೆ
ಪ್ರಪಂಚದಲ್ಲಿ ಸಾಕಷ್ಟು ಜನ ಸಾಯುತ್ತಾರೆ
ಆದರೆ,ದೇಶಕ್ಕಾಗಿ ಸಾಯುವವರು ಮಾತ್ರ ಹುತಾತ್ಮರೆನಿಸುತ್ತಾರೆ.
- ಮೈನುಸಾಬ
09 Mar 2017, 09:43 am
ನಾ ಕಂಡ ವಿಶ್ವದ ಮೊದಲ ಮಹಿಳೆ ನನ್ನಮ್ಮ...
ಹಸಿವಾದರೆ ತನ್ನೆದೆಯ ಕ್ಷೀರಾಮೃತ ಉಣಿಸಿದ ಮೊದಲ ಮಹಿಳೆ ನನ್ನಮ್ಮ...
ಅಂಬೆಗಾಲಿಟ್ಟು ಎಡವಿದಾಗ ಕೈಹಿಡಿದು ನಡೆಸಿದ ಮೊದಲ ಮಹಿಳೆ ನನ್ನಮ್ಮ...
ನಾ ಕಂಡ ವಿಶ್ವದ ಮೊದಲ ಮಹಿಳೆ ನನ್ನಮ್ಮ...
ತೊದಲು ನುಡಿಯುವಾಗ ತಿದ್ದಿ ಮಾತನಾಡಲು ಕಲಿಸಿದ ಮೊದಲ ಮಹಿಳೆ ನನ್ನಮ್ಮ...
ವಿದ್ಯೆ ಕಲಿಸಿದ ಮೊದಲ ಗುರು ನೀನೆ...
ಬದುಕಲು ದಾರಿ ತೋರಿದ ತಂದೆಯು ನೀನೆ...
ನನ್ನ ಮೊದಲ ಸ್ನೇಹಿತೆಯು ನೀನೆ...
ನಿನ್ನ ಸಮನಾರು ಇಹರು ಈ ಜಗದೊಳು ಸರ್ವವೂ ನೀನೆ ತಾಯಿ.......
- chinmayi
08 Mar 2017, 10:50 pm
ಪರಿಶುದ್ಧ, ನಿಷ್ಕಲ್ಮಶ, ಭ್ರಸ್ಟುಚಿತವಿದು ಪ್ರೀತಿ
ಆದರೂ ಗೆಳೆಯರಲೊಂದು ವಿನಂತಿ ,
ಮಾಡದಿರಿ ಪ್ರೀತಿಯ ,
ಹೃದಯವಿದು ಕನ್ನಡಿಯಂತೆ......
ಕವನವಿದು ಮೊಂಡು
ತೀರುಳಿದೆಯೋ ಇಲ್ಲವೋ ಗೋತಿಲ್ಲ,
ಅನುಭವವಿದು ನನ್ನದಲ್ಲಾ, ಆದರೂ
ಹಂಚಿಕೊಂಡಿರುವೆ.....
- MK Reddy
08 Mar 2017, 10:20 pm
ಕದ್ದುಮುಚ್ಚಿ ಆಡೋ ಆಟ
ಕಣ್ಣ ಮುಚ್ಚಿ ನೋಡೋ ನೋಟ
ನಿಲ್ಲದ ಹೃದಯದ ಓಟ
ಕಾಣದ ಕನಸಿನ ಆರ್ಭಟ
ಮಾತಿಲ್ಲದ ಮೌನದ ಪಾಠ
ಮಂತ್ರವಿಲ್ಲದೆ ಮಾಡಿದ ಮಾಟ
ತಲ್ಲಣಗೊಳಿಸುವ ನಗುವಿನ ಕಾಟ
ಮುಗ್ಧ ಮನಸಿನ ನಿರಂತರ ತೊಳಲಾಟ
ಹೃದಯದ ಬೆಂಬಿಡದ ಹಠ
ನಿದ್ದೆಗೆಡಿಸುವ ಹರೆಯದ ಹುಡುಗಾಟ
ನಿಲ್ಲದೇ ಏರುವ ನೆನಪುಗಳ ಪುಟ
ಇವೇ ಅಲ್ಲವೇ ಪ್ರೀತಿಯೊಳಗಿನ ಜಂಜಾಟ.
- ಅಕವಿ
08 Mar 2017, 10:16 pm
ಈತ ದೇವ ಅಂದೆ
ಮನುಷ್ಯ ಜಾತಿ ಒಂದೆ
ಈತ ಇಲ್ಲದಿದ್ದಾಗ ನೊಂದೆ
ನನ್ನ ಜೀವ ನನ್ನ ತಂದೆ.... ಸಂಚಾರಿ
- preetam
08 Mar 2017, 08:33 pm
ಜಗಕೆ ಸಾರುವೆನು ಯುಗವಾಣಿ
ವಿವೇಕಾನಂದರ ಯುವವಾಣಿ||ಪಲ್ಲವಿ||
ದುಡಕದಿರಿ ಎಂದಿಗೂ
ಧೈರ್ಯದಿ ಬಾಳಿರಿ|
ಭಯದಿ ಅಂಜದಿರಿ
ಧೈರ್ಯದಿ ಮುನ್ನುಗ್ಗುತ್ತಿರಿ||೧||
ವಿಶ್ವಾಸ ಬಿಡದಿರಿ
ಆಕ್ರೋಶ ಪಡೆಯದಿರಿ|
ಶಾಂತಿಯೇ ಎಲ್ಲದರ ಮೂಲ ಮಂತ್ರ
ಪ್ರೀತಿಯೇ ಮನ ಗೆಲ್ಲುವ ಯಂತ್ರ||೨||
ದೇಶಕ್ಕೆ ರಕ್ಷಣೆಯು ಈ ಯುವಜನತೆ
ಎಂದಿಗೂ ನೀವು ಕುಗ್ಗದಿರಿ|
ಗುರಿಯಿರಲಿ ಉತ್ತಮ ಸಾಧನೆಯೆಡೆಗೆ
ನಡೆಯಿರಲಿ ಈ ಕಾರ್ಯಪ್ರವೃತ್ತಿಗೆ||೩||
ಐಕ್ಯತೆಯೇ ನಮ್ಮ ಧ್ಯೇಯವು
ಜಾತಿ-ಭೇದ ತೊರೆಯಿರಿ|
ಲಿಂಗಸಮಾನತೆ ತನ್ನಿರಿ
ಎಲ್ಲರಿಗೂ ಪ್ರೀತಿಯ ತೋರಿರಿ||೪||
ಹುಚ್ಚಿನ ರಚ್ಚಲಿ ಬೀಳದಿರಿ
ಕಾಮದ ಬಲೆಯಲ್ಲಿ ಸಿಲುಕದಿರಿ|
ಆಗಲಿ ಹೃದಯಗಳ ಸಂಗಮ
ಪ್ರೀತಿಯೇ ಎಲ್ಲದರ ಮೂಲ||೫||
ದೇಶಕ್ಕಾಗಿ ಹೋರಾಡಿ
ರಕ್ತ ಕಣ-ಕಣ ಚೆಲ್ಲಿರಿ|
ಇತಿಹಾಸದ ಪುಟಪುಟದಿ
ಎಂದಿಗೂ ಎದೆಗುಂದದೆ ಮೆರೆಯಿರಿ||೬||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
08 Mar 2017, 08:23 pm
ಹೆಣ್ಣಿಗೆ ಹೊನ್ನಾಗಿ ಕಾಣಿರಯ್ಯ
ಹೆಣ್ಣಿಲ್ಲದಿದ್ದರೆ ಬಾಳು ಬರುಡು ಕನಯ್ಯ
ಒಂದು ಗಂಡಿನ ಏಳಿಗೆಯ ಹಿಂದೆ
ಹೆಣ್ಣಿರುವಳೆಂಬುದು ನಿಜವಯ್ಯ
ಸತ್ಯ ನೀತಿಯು ಬಿಡದೆ ಬಾಳಿರಯ್ಯ
ಅನ್ನ ನೀರಿಗಾಗಿ ದಿನ ದುಡಿಯಿರಯ್ಯ
ನಾನು ನನ್ನದು ಎಂಬುದು ಮರೆಯಿರಯ್ಯ
ನಾವು ನಮ್ಮದು ಎಂದು ಬಾಳಿರಯ್ಯ
ನಮ್ಮೊಳಗೆ ಹೋರಾಟ ಬೇಡಿರಯ್ಯ
ದೇಶದ ಏಳಿಗೆಗಾಗಿ ಹೋರಾಟ ಮಾಡಿರಯ್ಯ
ಹೆಣ್ಣು ಮೇಲಿನ ದೌರ್ಜನ್ಯ ತಡೆಯಿರಯ್ಯ
ದೇಶದ ಏಳಿಗೆಯು ಕಣ್ಣಾರೆ ಕಾಣಿರಯ್ಯ
- ಮೈನುಸಾಬ
08 Mar 2017, 07:59 pm