Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೊಂದ ಪ್ರೇಮಿ

ಪ್ರೀತಿಯಲ್ಲಿ ಮೋಸವು ನಾ ಹೋದೆ
ಹೃದಯವು ಒಡೆದು ಚೂರಾಗಿದೆ

ಪ್ರೀತಿ ಮಾಡುವಾಗ ನಗುತಿತ್ತು ನನ್ನ ಮನ
ಪ್ರೀತಿಯಲ್ಲಿ ಸೋತಾಗ ಅಳುತಿದೆ ನನ್ನ ಮನ

ಕೇಳುತ್ತಿಲ್ಲ ನನ್ನ ಮಾತೇ ನನ್ನ ಹೃದಯ
ಅವಳದೆ ವಿಚಾರದಲ್ಲಿ ಮುಳುಗಿದೆ
ನನ್ನ ಹೃದಯ

ಯರಾದರು ಹೇಳಬನ್ನಿ ಇದಕ್ಕೆ ಬುದ್ಧಿ
ಅದಕ್ಕಾಗಿಯೇ ಬರೆದಿರುವೆ ಈ ಸುದ್ದಿ

- ಮೈನುಸಾಬ

10 Mar 2017, 10:38 am

ಸ್ವಗತ

ಕೊನೆಯುಸಿರಿನಲ್ಲೂ ಕೊನೆಯಾಗದ,
ಕನಸಿನಲ್ಲೂ ಕನವರಿಸುವ,
ಕಲ್ಲೆದೆಯನ್ನೂ ಕರಗಿಸಲ್ಲ,
ಕಾನನದಲ್ಲೂ ಕಾಡುವ,
ಕಿವಿಮುಚ್ಚಿದರೂ ಪಿಸುಗುಡುವ,
ತುಸು ನಗೆಯ, ನಸು ನಾಚಿಕೆಯ,
ಮುದ್ದು ಮೊಗದ ಮೋಹನಾಂಗಿ,
ಮರು ಮಾತಿಲ್ಲದೇ ಮರೀಚಿಕೆಯಾದಾಗ,
ಮನವು ಮರುಗುತ್ತಿತ್ತು,
ಮಾತು ಮೂಕವಾಗುತ್ತಿತ್ತು,
ಭಾವವು ಬತ್ತುತ್ತಿತ್ತು,
ಜೀವನವೇ ಸುಸ್ಥೆನಿಸಿತ್ತು.

ಕಿರುನಗೆಯಿಂದ ಕಂಬನಿಯನೊರಸಿದೆ,
ಪ್ರೀತಿಯನು ಜೀವಧಾರೆಯಾಗಿ ಹರಿಸಿದೆ,
ಜೀವಧಾರೆಯಾಗಿ ಹರಿದ ಜೀವನವನ್ನು,
ಸಾಗರದ ರೌದ್ರ ನರಕಕ್ಕೆ ನೂಕಿದೆ,
ಬಾಳು ಮೌನಗೀತೆಯಾಗಿ ನಲುಗುವ ಸ್ಥಿತಿ,
ಇದೇ ನನ್ನ ಮನೋ ವ್ಯಾಕುಲದ ಬೀಭತ್ಸ ರೀತಿ,
ನಿನ್ನ ಮೋಹಕ ಭಾಷೆಗೆ ಮಾರುಹೋದೆ,
ನನ್ನನ್ನೇ ನಾನು ಮಾರಿಕೊಡೆ.

ನಾನು ದಡ್ಡನೆಂಬ ಅರಿವು ಬಂದದ್ದು ಆಗಲೇ,
ಎಂತಹ ಸ್ಥಿತಿಯಲ್ಲೂ ನಲುಗದ ನಾನು,
ನಿನ್ನ ಮನೋ ವಿಕಾರದ ಅಪದೆಸೆಯಿಂದ,
ನರಳುವ ಸ್ಥಿತಿ ತಂದುಕೊಂಡೆ.

ಕಣ್ಮುಚ್ಚಿದರೂ ನಿರಂತರ ಸುಳಿಯುವ
ಆ ನಿನ್ನ ಚಿರಂತನ ಮೋಹಕ ಪ್ರತಿಮೆ.
ಹೆಣ್ಣಿನ ಬಣ್ಣದ ಮನಸ್ಸನ್ನು ಅರ್ಥ ಮಾಡಿಕೊಳ್ಳದ ನಾನು ಬುದ್ಧಿವಂತನೇ? ಅಲ್ಲ ದಡ್ಡ.
ಅಲ್ಲ ಬುದ್ಧಿವಂತ.
ಬುದ್ಧಿ ಬಂದ ಮೇಲಾದರೂ ಬದುಕು, ಬದುಕಿಸು.
ಬಾಳು ಇಂದು-ನಾಳೆ ಮುಗಿದು ಹೋಗುವದಲ್ಲ.,
ಅದು ನಿರಂತರ, ನಿತ್ಯ ನೂತನ..

ಬಾ.ಸಂ.ಪಾ....

- ಅಭಿರಾಮ್

10 Mar 2017, 09:35 am

ಸುಮಧುರತೆ

ಗುಣದಲಿ ಸಿಹಿತನ
ಹೃದಯದಿ ಸಿರಿತನ
ಮಾತಿನಲಿ ಮಾಧುರ್ಯ
ನೀ ಬೆಳೆಸಿಕೊ

ದಯೆಯನು‌ ತೋರು‌ ಬಾ
ಕ್ಷಮೆಯ ಕೇಳು ಬಾ
ಬದುಕಲಿ ಬಾಂಧವ್ಯ‌ ನೀ ಬೆಳೆಸಿಕೊ

ಮನದಲಿ ಭಾವವು
ಬದುಕಲು ಪ್ರೀತಿಯು‌
ಸಂಬಂಧ ಉಳಿಯಲು‌ ಸಹನೆ ಬೆಳೆಸಿಕೊ

ನಿನ್ನವರು ಯಾರಿಲ್ಲ
ನಿನಗೆ ನೀನೆ ಎಲ್ಲ
ಬದುಕಲು ಒಳ್ಳೆತನ ನೀ ಬೆಳೆಸಿಕೊ

ಬದುಕಿನ ಬಣ್ಣವು
ಹಲವು ವಿಧ ವಿಧ
ನಿನ್ನಾಸೆ ಬಣ್ಣವ ನೀ ಹುಡುಕಿಕೋ

ನೊಂದದೆ ಮುನ್ನಡಿ
ನಲಿಯುತ ಜೊತೆಗೂಡಿ‌
ಮಣ್ಣಾಗೋ‌ ಮುನ್ನವೆ ಕೀರ್ತಿ ಗಳಿಸಿಕೊ...

- kirti

10 Mar 2017, 06:49 am

ಅಂತರಂಗ

ಹಾರುವ ಹಕ್ಕಿ
ಮನುಜನ ಮನಸ್ಸು
ಒಂದೆ ತರ
ಸದಾ‌ ಹಾರುವಾಸೆ
ಎತ್ತರೆತ್ತರ ಹಾರಿ
ಗಗನ ಮುಟ್ಟುವಾಸೆ
ಮನುಜನಲ್ಲಿ
ಸ್ವಾರ್ಥದ ಅತಿ ಆಸೆ
ಬಯಸಿದಷ್ಟು ಬಯಕೆಗಳ
ತಲುಪಲು ಮಾನವೀಯತೆ
ಮರೆಯುವ ದುರಾಸೆ

ಹಾರುವ ಹಕ್ಕಿಗೆ‌
ತಿಳಿದಿಲ್ಲ
ಅದು‌ ತಲುಪಿರುವುದು
ಬಿಳಿ ಮೋಡ
ಅಜ್ಞಾನದಲಿ ಮಾನವನಿಗೆ
ತಿಳಿದಿಲ್ಲ
ಬದುಕೆಂಬುದು ಚದುರಂಗದಾಟ
ತನ್ನ ಆತ್ಮ ದೊರೆತರೆ
ಗೆಲುವು
ದೊರಯದೆ ಹುಡುಕಾಡುತಿರೆ
ಸೋಲು

ಬದುಕು ಭವ್ಯವಾಗಲು
ನಿನ್ನನ್ನು ಮೊದಲು ನೀ‌ ಅರಿ
ತ್ಯಾಗದಲ್ಲಿರೊ ಸುಖವ ಅರಿ
ಬಯಕೆಯೆಂಬ ನೀರ್ಗುಳ್ಳೆ ಮರಿ
ಮಾನವೀಯತೆ ನಿನಗೊಂದೆ ಸರಿ
ಸಾಯುವ ಮುನ್ನ‌ ಆತ್ಮವ‌ ಅರಿ

- kirti

10 Mar 2017, 06:48 am

ಕೆOಪಾದ ಕನ್ನಿOದೆ

ಕೆOಪಾದ ಕನ್ನಿOದೆ ಬಚ್ಚಿಟ್ಟ ಮಾತೋಂದು
ನಿನಗೆ ತಿಳಿಯದ ಹಾಗೆ ನಾ ನೊಡ್ಲ .

ಪ್ರತಿಯೊOದು ಪದವನ್ನು ಮುತ್ತಾಗಿ ನಾ ಮಾಡಿ
ನಿನ್ನ ಅಭಿಷೇಕದ ಹಾಗೆ ಅರ್ಚಿಸ್ಲ .

ನಿನಗೆದುರಿ ನಿನ್ನಿOದೆ ನಿoತಂತ ನೆರಳನ್ನು
ನನ್ನ ರೂಪದಲಿ ಇಂದು ನಾ ತೊರ್ಲ.

ಕಿರು ಕೋನೆ ಅಂಚಲ್ಲಿ ಅಡಗಿರುವ ನಗುವನ್ನು
ಕೆಲವು ಮಾತನು ಹೇಳಿ ಹೊರತರ್ಲ .

ನಿನ್ನ ಕೋಪವನಿಂದು ಗಾಳಿಗೆ ನಾ ತೂರಿ
ನನ್ನ ಮೇಲಿನ ಪ್ರೀತಿ ಕರೆತರ್ಲ .

ನಿನ ರೂಪ ನನಗಿಟ್ಟು ಅದಕೋಂದು ಹೆಸರಿಟ್ಟು
ನಿನ್ನನ್ನು ನನ್ನಲ್ಲಿ ನಾ ಕಣ್ಲಾ .

ಅಡಿಗಡಿಗೆ ಮಣ್ಣಾಗಿ ಪ್ರತಿ ಹೆಜ್ಜೆಗುವ್ವಾಗಿ
ಕಾಲು ಸವಿಯದ ಹಾಗೆ ನಾ ಕಾಯ್ಲ.

ಆ ನೀಲಿ ಗಗನದಲ್ಲಿ ಮಿನುಗುವ ತಾರೆ ನಿನಾದಗ
ನಿನ್ನ ಪ್ರತಿನಿತ್ಯ ನೋಡುವ ಪ್ರೇಯಸಿ ನಾನಾಗ್ಲ.

ಕಡೆವರೆಗೂ ನಿನ್ನ ಹ್ರುದಯದಲ್ಲಿನ ಬಡಿತವಾಗಿ
ನಿನ್ನ ಜೀವನದಲ್ಲಿನ ಪ್ರತಿಯೋಂದು ಕ್ಷಣಕ್ಕೂ
ಜೊತೆಯಾಗ್ಲ ನಿನ್ನ ಅರ್ಧಾoಗಿಯಾಗ್ಲ .

- ಚುಕ್ಕಿ

09 Mar 2017, 11:54 pm

ಯಾಕಿಷ್ಟು ದ್ವೇಷ ನನಗೆ....?

ಯಾಕಿಷ್ಟು ದ್ವೇಷ ನನಗೆ ಪ್ರೀತಿಯ ಮೇಲೆ?
ಏನು ತಪ್ಪು ಪ್ರೀತಿಯದು?
ಸ್ವತಂತ್ರವದು ಪ್ರೇಮಿಗಳದು
ಹಂಚಲು ಪ್ರೀತಿಯ ಜಗಕೆ..

ಯಾರು ನಾ ಕೇಳಲು?
ಯಾರು ನಾ ಅಡ್ಡಿಪಡಿಸಲು?
ಕೊಂಬೊಂದು ಮೂಡಿರಲು ನನಗೆ,
ಮರುಳಾಗಿ ಯಾವುದೋ
'ಪ್ರೀತಿ ಪ್ರೇಮಗಳಿವು ಪುಸ್ತಕದ ಬದನೆಕಾಯಿ'
ಎಂಬ ಸಿದ್ಧಾಂತಕೆ.

ತಾತ ಹೇಳಿಕೋಟಿಲ್ಲವೇ ನಮಗೆ ?
ಗೆಲ್ಲುವುದು ಹೇಗೆ ಜಗವ ಪ್ರೀತಿಯಲ್ಲೇ.....
ಮತ್ತೆನು ಬೇಕು ನಮಗೆ ಪ್ರೀತಿಸಲು ಪ್ರೀತಿಯಾ?
ಕಿವಿಗಳಿವು ಮುಚ್ಚಿಕೊಳ್ಳೊಣ
ಬೊಗಳೆ ಸಿದ್ಧಾಂತ ರಾಮಣ್ಣರಿಗೆ.

ಪ್ರೀತಿಯದು ಮಧುರ
ಪ್ರೀತಿಯದು ಸುಂದರ
ಪ್ರೀತಿಯದು ನಿಸ್ಕಲ್ಮಶ
ಪ್ರೀತಿಯದು ಪರಿಶುದ್ಧ
ಸಾಲವು ಪದಗಳು ವರ್ಣ್ಣಿಸಲು ಪ್ರೀತಿಯ
ಪ್ರೀತಿಯದು ಅನಂತ.

ಕೊನೆಯದಾಗಿ ಒಂದೇ ಒಂದು ಕೋರಿಕೆ
ಮಾಡದಿರಿ ಪ್ರೀತಿಯ ವ್ಯಾಪಾರ
ಪ್ರೀತಿಯೊಂದೇ ಈ ಜಗಕೆ
ನಿಸ್ಸ್ವಾರ್ಥ ಆಧಾರ.....

- MK Reddy

09 Mar 2017, 09:26 pm

ಮಾತಾಡೋಣ

ಎರಡು ಎತ್ತು ಮೇಯಿಲಿಕ್ಕೆವೆ
ಎರಡು ಬೆಕ್ಕು ಊಟಕ್ಕೆ ಕುಂತಿವೆ
ಎತ್ತು ಮೇಯಿತಿಲ್ಲ ತಲೆ ಎತ್ತಿದೆ...
ಬೆಕ್ಕು ತಿನ್ತಿಲ್ಲ ತಲೆ ತಗ್ಗಿಸಿದೆ..
ಎರಡು ಮಾತಾಡೋದಿಕ್ ನಿಂತಿವೆ


ಮೂರು ಗಿಣಿ ಬಂದಿವೆ
ಆರು ಕೋಗಿಲೆ ಜೋತೆಲಿ ಬಂದಿವೆ
ಒಂದು ಆನೆ ಎಳ್ಕೋಂಡ್ ಬಂದಿವೆ
ನೋಡ್ತಿವೆ ನೋಡ್ತಿವೆ......
ಮಾತಡ್ಲಿಕ್ಕೆ ಶುರು ಮಾಡಿವೆ

ಮೋಲಗಳು ಒಡೋಡಿ ಬರ್ತಿವೆ
ಆಮೆಗಳು ನಿದಾನ್ಕೆ ಬರ್ತಿವೆ
ಜಿರಾಪೆ ಜಿಂಕೆ ಕೂಗ್ತಿವೆ
ಸಿಂಹ ಹುಲಿ ಘರ್ಜಿಸ್ತಿವೆ
ಮಾತಾಡೋಣ ಮಾತಾಡೋಣ ಅಂತಿವೆ


ಯಾರು ಮಾತಾಡ್ಲೆಯಿಲ್ಲ....
ಮಾತಾಡ್ಲಿಕ್ಕೆ ಎನು ಇಲ್ಲ....
ಇದನ್ ರಾತ್ರಿ ಮಾತಾಡೋಣ ಅಂತಿವೆ
ರಾತ್ರಿ ಮುಗಿದೆ ಹೋಗಿದೆ...
ಬೆಳಗ್ಗೆ ಕೋಳಿಗಳು ಕೂಗಿವೆ...


ಬೆಳಗ್ಗೆ ಸೂರ್ಯ ಬಂದಾಗಿದೆ....
ಕೋತಿ ಒಂದು ಬೇಗ ಎದ್ದಿದೆ
ಎಲ್ಲೆಲ್ಲೂ ಎಲ್ಲೆಲ್ಲೂ ಸದ್ದು ಸದ್ದು ಅಂತಿದೆ
ಕುರಿ ಮೇಯಿಸುವ ಎದ್ದಾಗಿದೆ
ಇಲ್ಲಿಗೆ ಎಲ್ಲ ಮುಕ್ತಾವಾಗಿದೆ.....

- ಅಗಸ್ತ್ಯ

09 Mar 2017, 08:30 pm

ಮನೋಸ್ಥಿತಿ.

ಈ ಜಗಕೆ ನಾನೇಕೆ ಬಂದಿಹೆನೋ ತಿಳಿಯದದು,
ಇಚ್ಛೆ ಕೇಳುವವರಿಲ್ಲ, ಗುಟ್ಟು ಬಿಚ್ಚುವವರಿಲ್ಲ,
ಮರುಭೂಮಿಯಲಿ ಗೋಳಿಡುವ ಬಿರುಗಾಳಿ ನಾನು, ಬರಿಗಾಳಿ ನಾನು.

ಬಾ. ಸಂ. ಪಾ.

- ಅಭಿರಾಮ್

09 Mar 2017, 07:08 pm

ಆಶ್ವಾಸನೆಗಳ ಮಹಾಪೂರ

ಆಶ್ವಾಸನೆಗಳ ಮಹಾಪೂರ,
ಅಷ್ಲೀಲ ಮನದ ನೋಟ,
ಬೇಡಿ ಕಾಲ್ ಮುಗಿದು,
ಗದ್ದುಗೆ ಗಿಟ್ಟಿಸಿಕೊಂಡಮೇಲೆ,
ಗುಟ್ಟಾಗೇ ಉಳಿದೀತು,
ಆಶ್ವಾಸನೆಗಳ ಮಹಾಪೂರ.

ಅನುದಾನದ ಭರವಸೆ,
ಶ್ವೇತ ವರ್ಣದ ಉಡುಪು ನೈದು,
ಬಿಳಿ ಬಣ್ಣವ ಮೈಲಿಗೆ ಗೈದು,
ಅಂತರಾಳದಿ ಕ್ರೌರ್ಯವನೊಯ್ದು,
ಸುಟ್ಟು ಬೂದಿ ಯಾಗಿದೆ,
ಅನುದಾನದ ಭರವಸೆ.

ನಡು ಇರುಳಲೂ ಸ್ತ್ರೀ ಭದ್ರತೆ,
ಮಡದಿಯರ ಕೊರಳು ತುಂಬಿಸಲು,
ಜರದಾರಿ ಉಡುಪಿನಾಸೆ ಮೆರೆಸಲು,
ಡಾಬು ಕಟ್ಟಿ, ಮಗಳಿಗೆ ನಾಲ್ಕಾರು ಬಂಡಿಗಳು,
ಸಾಮಾನ್ಯ ಹೆಣ್ಣಿನ ಹರಣ ಇರುಳು ಕರಾಳ,
ಇನ್ನೆಲ್ಲಿಂದಾದೀತು ಸ್ತ್ರೀ ಭದ್ರತೆ.

ಸಮಾಜಮುಖಿ ಇಲ್ಲಾರೂ?
ನಾಡ ಜನತೆಯ ಪ್ರತಿನಿದಿಯು ಯಾರು?
ಮನಸು ಕೂಗಿ ಹೇಳದೆ ಇವರಿಗೆ?
ಅಶ್ವಾಸನೆಗಳ ಕಿಂಚಿತ್ತು ಕಾಳಜಿ ಇಲ್ಲವೇ?
ಕರ್ಮವಿಹುದು ಸಾಹೇಬ ಎಚ್ಚೆತ್ತುಕೊ,
ತಡವಾದೀತು, ಸಮಯ ಬಾರದಾದೀತು,
ಅನ್ಯಾಯಗಳಿಗೆ ಇನ್ನಾದರೂ ಕೊನೆ ಕಂಡುಕೋ...

-ಕನ್ನಡದ ಭಕ್ತ

- ಕನ್ನಡದ ಭಕ್ತ

09 Mar 2017, 05:00 pm

ನಾನಾತ್ಮ.

ನಾನು ಈ ಜಗತ್ತಿಗೆ ಪಾದಾರ್ಪಣೆ ಮಾಡಿದಾಗ,
ಅರಿವೇ ಇಲ್ಲದೇ ಅಮ್ಮನುಡಿಯಲ್ಲಿ ಅತ್ತತ್ತು ಹೊರಳಾಡುವಾಗ ಈ ಜಡ ಜಗತ್ತಿನ ಪರಿವೇ ಇರಲಿಲ್ಲ.
ಮುಂಜೋಲಿ ಹೋಗುವಂತ ಪುಟ್ಟ ಹೆಜ್ಜಗಳನ್ನಿಡುವಾಗಲೂ ಅಮ್ಮನ ಕೋಮಲ ತೋಳುಗಳ ತಬ್ಬುಗೆಯ ಒಡನಾಟ,
ಕಾಲೂರಿ ಈ ಜಗತ್ತನ ಸಲುಗೆ ಪಡೆವ ಮನಸ್ಸಿಗೆ
ಶಾಲೆಯ ಸಂಸ್ಕೃತಿಯ ಪರಿಪಾಠ,
ಎದ್ದು ನೋಡುವ ಕಂಗಳಲಿ ಸೂಪ್ತವಾಗಿರುವ ಕನಸಿನ ಛಾಯೆ,
ಕಲಿವ ಬುದ್ಧಿಗೆ ಕಾಣುವ ಸೆಳಕೆಲ್ಲ ವಾಸ್ತವದಂತೆ ಭಾಸವಾದ ಪರಿ,
ಕಾಣುವ ಕಣ್ಣಿಗೆ ನೋಡುವ ಬೆಳಕೆಲ್ಲ ನಸುಕಿನ ಮಸುಕು, ಬೆಳೆಯುವ ಮನಸ್ಸಿಗೆ ಬದುಕಿನ ಸಂಕೀರ್ಣತೆ ಅರಿವು, ಇವೆಲ್ಲದರ ಮಧ್ಯೆ ಬೆಳೆಯುವ ನಾನಾತ್ಮ.

ಬಾ.ಸಂ.ಪಾ

- ಅಭಿರಾಮ್

09 Mar 2017, 04:44 pm