Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆ ದಿನಗಳು

ಬಣ್ಣ ಬಣ್ಣದ ಹಬ್ಬ ಹೋಳಿ ಹಬ್ಬ...
ಬಾಲ್ಯದಲ್ಲಿ ಆಡುತ್ತಿದ್ದೆವು...
ಗಂಡು ಹೆಣ್ಣೆಂಬ ಬೇಧವಿಲ್ಲದೆ...
ಜಾತಿ ಮತವೆಂಬ ಮಾತಿಲ್ಲದೆ...
ಮೇಲು ಕೀಳೆಂಬ ಗರ್ವವಿಲ್ಲದೆ...
ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ...
ಬಂಧು ಬಾಂಧವರೆಲ್ಲ ಒಂದೆಡೆ ಸೇರಿ...
ಹಬ್ಬದ ಅಡುಗೆಯ ಮಾಡಿ ಉಣಬಡಿಸುವರು...
ಇಂದು ಮರುಕಳಿಸಿದಂತೆ ನೆನಪುಗಳು...
ಮರಳಿ ಬರಲಿ ಆ ದಿನಗಳು.....

- chinmayi

12 Mar 2017, 05:31 pm

ಮೂರು ದಿನದ ಆಟದಲ್ಲಿ

೧)ಜನನ
೨)ಸಾಧನೆ
೩)ಮರಣ

೧) ಜನನ:

‌* ತರಲಿಲ್ಲವೇನು ನಾನು ನನ್ನ ಸ್ವಂತದೆಂಬುವುದನ್ನು
‌* ಕಣ್ತೆರೆದು ನೋಡಿದೆ ನನ್ನ ತಾಯಿಯ ಮುಖವನ್ನು
‌ * ಆರಂಭವಾಯಿತು ಅಂಬೆಗಾಲಿನ ದಿನಗಳಂದು
‌ * ಮುನ್ನುಡಿ ಬರೆಯಿತು ತಾಯಿಯ ಮೊದಲ ಪಾಠವು "ಅಮ್ಮ" ಎಂಬ ಸ್ವರ್ಣದ ಅಕ್ಷರದಿ
‌ * ತುಂಟತನದಿ ಸಾಗಿತು ಅಮ್ಮನ ಜೊತೆಯಾಟವು
‌ * ಸಾಗಿತು ಬಾಲ್ಯದಿಂದ ಯವ್ವನದೆಡೆಗೆ ನನ್ನ ಅಂಬೆಗಾಲಿನ ಓಟವು

೨) ಸಾಧನೆ:

‌ * ಮುಗಿಯಿತು ಬಾಲ್ಯದ ದಿನಗಳಂದು ಶುರುವಾಯಿತು ಜಟಿಲ ಜೀವನದ ಹೆಜ್ಜೆಗಳು
‌ * ಪಡೆದೆ ನಾನು ಸ್ನೇಹ ಪ್ರೀತಿಯನ್ನು ಸಾಗಿತು ಸಾಧನೆಯ ಪಯಣವು
‌ * ಏರಿಳಿತಗಳು ಬಂದವು ಸಾಧನೆಯ ಕಡಲಲ್ಲಿ
‌ * ಅಳುಕಿತು ಮನವು ಗುರಿ ಮುಟ್ಟುವೆನಾ? ಎಂಬ ಆತಂಕದ ಆಳದಲ್ಲಿ
‌ * ಮುನ್ನುಗ್ಗಿದೆ ನಾ ಅಲೆಗಳೆತ್ತರವ ಮೆಟ್ಟಿ ನಿಂತು
‌ * ಜೊತೆಗೂಡಿ ಬಂದಿರಲಿಲ್ಲ ಕೈ ತುತ್ತು ತಿಂದೆನಲ್ಲ. ನನ್ನ ಗೆಳೆತನವೆಂಬ ದೇಗುಲದಲ್ಲಿ
‌ * ಭಯವೆಂಬ ಮಾಯಾ ನಗರಿಯಲ್ಲಿ ಒಂಟಿ ಇರಲು ಬಯಸಲಿಲ್ಲ
‌ * ಸ್ವಾಭಿಮಾನದ ಬಟ್ಟೆ ತೊಟ್ಟು, ಸಾಧನೆಯ ಶಿಖರದತ್ತ ಧೈರ್ಯವೆಂಬ ಆಯುಧ ಹಿಡಿದು ಸಾಧಿಸಲು ಅಣಿಯಾದೆನಂದು
‌ * ಸಾಗುತಲಿದೆ ಸಾಧನೆಯ ಪಯಣವು ಇಂದಿಗೂ

೩) ಮರಣ:

‌ * ಸಂಸಾರದ ಸಂಕಟಗಳು, ಜೀವನದ ಜಿಗುಪ್ಸೆಗಳನ್ನು ದಾಟಿ ನಡೆದೆನು ಏಕಾಂಗಿಯಾಗಿ ಇರುಳಿನ ಮನೆಗೆ
‌ * ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ ಕಂಡೆನು ಅನಂತ ದೀವಿಗೆಯ ಬೆಳಕನ್ನು
‌* ನಾನು ನನ್ನದು ಎಲ್ಲವನ್ನೂ ಮೀರಿ ಜಯಿಸಿದೆ ನನ್ನವರನ್ನು
‌* ಜೀವನವು ಸಾಕಾರವಾಯಿತು ಸ್ನೇಹ ಜೀವಿ ನಾನಾಗಿ
‌ * ಎಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾಗಿ ಎಲ್ಲವರಿಯುವ ಲೋಕಕ್ಕೆ ನಡೆದೆನು ನಾನಿಂದು.....

- Irayya Mathad

12 Mar 2017, 04:43 pm

ಬಾ(ಳ)ನು ಬೆಳಗುವೆಯಾ ಹುಣ್ಣಿಮೆ

ಕನಸೆಂಬ ಕುದುರೆಯನೇರಿ
ಹೊರಟಿದೆ ಪಯಣ...
ಕಾನದೂರಿನ ಕಡೆಗೆ...
ನನಗಂತ ಯಾರಿಲ್ಲ ನೀನೆ ನನಗೆಲ್ಲಾ...
ಬರುವೆಯಾ ಜೊತೆಯಾಗಿ...
ಜೀವನವೆಂಬ ದಾರಿಯಲ್ಲಿ...
ಕಲ್ಲಿರಲಿ ಮುಳ್ಳಿರಲಿ ಉಸಿರಿರುವರೆಗು
ಸಾಗುವೆನು ಜೊತೆ ಜೊತೆಯಾಗಿ...
ಬೆಳಕೆ ಕಾನದ ನನ್ನ ಬಾಳ ದಾರಿಯಲ್ಲಿ...
ಹುಣ್ಣಿಮೆಯ ಚಂದಿರನ ಹಾಗೆ ಬರುವೆಯಾ
ಎನ್ನ ಬಾಳಲಿ......

- chinmayi

12 Mar 2017, 11:19 am

ಹೋಳಿ

ಕಾಲೇಜು ಎಂಬುವುದು ರಸದೂಟ
ಕಾಲುಜಾರಿ ಬಿದ್ದರೆ ವಿಷದಾಟ
ಹೊರಗಡೆ ಗೆಳೆಯರ ಕಾಟ
ಕ್ಲಾಸನಲೀ ಗುರುಗಳ ಪಾಠ.
ಪೇಲಾದ್ರೆ ಮನೆಯವರ ಕಾಟ
ಪಾಸ ಆದರೆ ಕೆಲಸದ ಹುಡುಕಾಟ
ಇದು ವಿದ್ಯಾರ್ಥಿಯ ಜೀವನದ ಗೇೂಳಾಟ
ಇದ್ದಂನೇಲ್ಲ ಮರೆತು ಆಡಿರಿ ಹೇೂಳಿ ಆಟ.....

ಹ್ಯಾಪಿ ಹೋಳಿ

- anil

12 Mar 2017, 11:06 am

ಬಣ್ಣಗಳ ಬಣಿವೆ ನೀ....

ಹಿಂದೆ ಬರುವೆ ನಾ ನಿನ್ನ ಹಿಂದೆ ಬರುವೆ ನಾ
ನಗುತ ನಗುತ ನಾಚಿ ನನ್ನ ಮನವ ಕೆಣಕಿದೆ ನೀನು ನನ್ನ ಕನಸ ಕನ್ಯೆಯಾಗಿ ಬಂದೆ ಈ ದಿನ....!!ಪ!!

ಕಣ್ಣ ರೆಪ್ಪೆ ಮಿಟಿಕುತ ಕಣ್ಣ ಸನ್ನೆ ಮಾಡುತ
ಅತ್ತ ಇತ್ತ ನೋಡದೆ ಎತ್ತಲು ಹೋಗದೆ ನಿನ್ನಯ ಕನಸು ಕಾಣೊ ಮನಸು ಮಾಡಿದೆ....ಪ

ನಿನ್ನ ತಂದೆ ತಾಯಿಗೆ ಆ ದೇವ ಬ್ರಹ್ಮಗೆ ನನ್ನದೊಂದು ಸಲಾಮ ಹೇಳೊ ಬಯಕೆ ಮೂಡಿದೆ
ಅಂದ ಚೆಂದ ತುಂಬಿದ ಮಿರಿ ಮಿತಿ ಮಿಂಚುತ ನನ್ನ ಸೆಳೆದು ಮೂಖನಾಗಿ ಮಾಡಿದೆ ಈಗ...ಪ

ನನ್ನ ಮನದಗಂಳ ರಂಗೋಲಿಯಾಗಿ ನೀ ನನ್ನ ಕಣ್ಣ ತುಂಬ ತುಂಬಿದೆ ನೀನು
ಬೇರಾವ ಲೋಕವ ಹುಡುಕಿದರುನು ನಾ
ನಿನ್ನಂತ ಚೆಲುವೆಯಾ ಕಾಣೆನು ನಾನು...ಪ

- Irayya Mathad

12 Mar 2017, 10:58 am

ಆಸೆ

ನಿನ್ನ ಕುಡಿಗಣ್ಣ ಕಡಲಲ್ಲಿ
ನಾ ಮೀನಾಗುವ ಆಸೆ.
ನಿನ್ನ ಹೃದಯದ ಹಡಗಲಿ
ನಾ ನಾವಿಕಳಾಗುವ ಆಸೆ.

ನಿನ್ನ ಮನಸಿನ ಮಹಲಲಿ
ನಾ ರಾಣಿಯಾಗುವ ಆಸೆ.
ನಿನ್ನ ಕನಸಿನ ಕಾಮನಬಿಲ್ಲಲಿ
ಅಷ್ಟೂ ಬಣ್ಣ ನಾನಾಗುವ ಆಸೆ.

ನಿನ್ನ ಮೌನದ ಮಾಯೆಯಲಿ
ನಾ ಮಂತ್ರಮುಗ್ಧಳಾಗುವ ಆಸೆ.
ನಿನ್ನ ಪ್ರೀತಿಯ ಪರದೆಯಲಿ
ನಾ ಪ್ರತಿಬಿಂಬವಾಗುವ ಆಸೆ.

ನಿನ್ನ ಹೆಸರ ಆಸರೆಯಲಿ
ನಾ ನನ್ಹೆಸರ ಉಸುರುವ ಆಸೆ.
ನಿನ್ನ ಮುತ್ತಿನ ಮಳೆಹನಿಯಲಿ
ನಾ ಮತ್ತೆಮತ್ತೆ ಚಿಗುರೊಡೆಯುವ ಆಸೆ.

ನಿನ್ನ ಬಾಳಿನ ಬಿಳಿಹಾಳೆಯಲಿ
ನಾ ಬಣ್ಣಬಣ್ಣದ ಚಿತ್ತಾರವಾಗುವ ಆಸೆ.
ನಿನ್ನ ತೆರೆದ ತೋಳಿನ ತಲ್ಪದಲಿ
ನಾ ತಲೆಯಾನಿಸಿ ನಿದ್ರಿಸುವ ಆಸೆ.

ನನ್ನ ಆಸೆಗಳ ಸಂಕೋಲೆಯೊಳಗೆ
ನಿನ್ನನ್ನು ಬಂಧಿಸಿ ಕಾಡಿಸುವ ಆಸೆ.
ನನ್ನ ಬಯಕೆಗಳ ಸೆರೆಯೊಳಗೆ
ನಿನ್ನ ಸಜೆಯಾಗಿಸಿ ಮಜ ನೋಡುವ ಆಸೆ.

ಆದರೆ
ಒಂದೇ ಒಂದು ಬಿನ್ನಹ ನಿನ್ನಲಿ
ಈ ನನ್ನೆಲ್ಲಾ ಅಪೇಕ್ಷೆಗಳಿಗೆ
ನೀ ತೋರದಿರು ಉಪೇಕ್ಷೆ......

- ಮಾಧುರಿ

11 Mar 2017, 11:27 pm

ನೀ  ನನ್ನಲಿಲ್ಲ..!!

ಮರೆತ ನಿನ್ನ ನೆನಪೊಂದು ಜ್ಞಾಪಕವಾಯಿತು
 ಮರೆಯಲಾಗುತ್ತಿಲ್ಲ; ಬೇರೆಯಲಾಗುತ್ತಿಲ್ಲ.

ಕರೆದ ನಿನ್ನ ಹೆಸರೊಂದು ಕೇಳಿಬಂತು
ಕೇಳಲಾಗುತ್ತಿಲ್ಲ ;ಕರೆಯಲಾಗುತ್ತಿಲ್ಲ .

ನಿನ್ನೊಡನೆ ಕಳೆದ ಕ್ಷಣವೊಂದು ಕರಗಿಬಂತು
ಸ್ಮರಿಸಲಾಗುತ್ತಿಲ್ಲ.ಸ್ವೀಕರಿಸಲಾಗುತ್ತಿಲ್ಲ.

ಕಣ್ಣು ಹನಿಗಳಿಂದ ತುಂಬಿ ಬಂತು
ಒಣಗಿಸಲಾಗುತ್ತಿಲ್ಲ ;ಜಿನುಗಿಸಲಾಗುತ್ತಿಲ್ಲ.

ಬರೆದ ಸಾಲೊಂದು ಮೂಡಿಬಂತು 
ಅಳಿಸಲಾಗುತ್ತಿಲ್ಲ;ಮತ್ತೆ ಬರೆಯಲಾಗುತ್ತಿಲ್ಲ.

ಪ್ರೀತಿ ಎಂಬುದು ಮಾಯಾ ಜಿಂಕೆಯಂತೆ
ನಿನ್ನಲ್ಲೂ ಇಲ್ಲ;ಈಗ ನನ್ನಲ್ಲೂ ಇಲ್ಲ.
                                             -ಮನು

- ಮನು

11 Mar 2017, 10:17 pm

ಯಾಂತ್ರಿಕ...

ಬರಡಾಯಿತು ಮನ, ಬರೆಯಲು ಕವಿತೆ
ಇಲ್ಲವಾದವು ಪದಗಳು.
ಕಡಲಾಚೆಗೆ ಮನ, ಬಯಸಲು ರಂಗು
ಇಲ್ಲವಾಯಿತು ಚೈತನ್ಯ.
ಜಗವ ದೂಡಲು ಮನಸ್ಸು,
ಜಂಜಾಟದಲಿ ಕಾಣೆಯಾದವು ಕನಸು.

#ಯಾಂತ್ರಿಕತೆ

- MK Reddy

11 Mar 2017, 09:59 pm

ನಿನ್ನ ಪ್ರೀತಿಯ ಸೆರೆಯಲಿ...!

ನಿನ್ನ ಉಸಿರು ನನ್ನ ಉಸಿರಾಗುತ
ನಿನ್ನಲಿ ನನ್ನ ನಾ ಮರೆಯುತ
ನೂರೆಂಟು ಕವನ ಗೀಚುತ
ಈ ಹೃದಯ ನಿನ್ನನೆ ನೆನೆಯುತಿದೆ
ಪದೆ ಪದೆ ನೆನಪಾಗುವ ನೀನು
ನಿನ್ನ ಪ್ರತಿ ಘಳಿಗೆ ಬಿಡದಂತೆ
ನಿನ್ನನೆ ಹುಡುಕುತ್ತಿದೆ ಈ ಮನಸ್ಸು
ನೀನೆ ಬೇಕೆಂದು ಹಂಬಲಿಸುತಿದೆ
ನಿನ್ನ ಪ್ರೀತಿಯ ಸೆರೆಯಲಿ
ನನ್ನ ನಾ ಮರೆತು
ಬಂಧಿಯಾಗಿರುವೆ ನನಗರಿವಿಲ್ಲದೆ...
ನೀ ಬಿಟ್ಟು ಹೋಗದಿರು ನನ್ನ
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲದೆ
ನನ್ನ ನಾ ಮರೆತಿರುವೆ
ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ನನ್ನ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಓ ಒಲವೇ ಉಳಿಸು ಈ
ಹೃದಯದ ಬಡಿತ ನಿಲ್ಲುವ ಮುನ್ನ
ನನ್ನಲಿ ಬೆರೆತು ಒಂದಾಗು
ಪ್ರಾಣ ಪಕ್ಷಿ ಹಾರುವ ಮುನ್ನ...

- Pb

11 Mar 2017, 05:46 pm

ನಿನ್ನ ಪ್ರೀತಿಯ ನಲ್ಲೆ

ನಿನ್ನ ಎದೆಯ ಬಾಗಿಲಿಗೆ
ನಾ ಬಂದು ನಿಂತಿರುವೆ.
ಕದ ಬಡಿಯುವ ಆಸೆಯು ನನಗೆ
ಆದರೂ ಏನೋ ತಿಳಿಯದ
ಅಂಜಿಕೆ ಎದೆಯೊಳಗೆ.

ನಿನ್ನ ಮೊದಲ ನೋಟಕೇ
ಮರುಳಾಯ್ತು ನನ್ನ ಮನ.
ತುಡಿತ ತುಂಬಿದ ಮನದ
ಮಿಡಿತ ಮುನಿಯುವ ಮುನ್ನ
ಕದವ ತೆರೆದು ಬಾಚಿ ತಬ್ಬಿಕೋ ಎನ್ನ.

ನಿನ್ನೆದೆಯ ಕದವನು ತಟ್ಟಿ
ಸದ್ದು ಮಾಡುವ ದೈರ್ಯ ಎನಗಿಲ್ಲ.
ನೀನಾಗೆ ಮನಸು ಮಾಡಿ
ಸ್ವಾಭಿಮಾನದ ಚಿಲಕವ ಬದಿಗೆ ಸರಿಸಿ
ನನ್ನನು ನಿನ್ನೊಳು ಬರಮಾಡಿಕೋ.

-- ನಿನ್ನ ನೆರಳು ಮೂಡಿದ
ದಾರಿಯನೇ ಹಿಂಬಾಲಿಸುತ.
ನಿನ್ನ ಮೌನಯಾನದ ಪ್ರತೀ ಹೆಜ್ಜೆಯ ಸದ್ದು
ನಾನಾಗಬೇಕೆಂದು ಹಂಬಲಿಸುತ.
ನಿನ್ನ ಹೃದಯರಾಗದ ನಲುಮೆಗಾನವನೇ
ಅನುಕ್ಷಣವೂ ಆಲಾಪಿಸುತ.
ನಿನ್ನೆದೆಯ ಬಾಗಿಲಲೇ ಕಾದು ಕಳಿತಿರುವ
ನಿನ್ನ ಪ್ರೀತಿಯ ನಲ್ಲೆ.
-ಮಾಧುರಿ

- ಮಾಧುರಿ

11 Mar 2017, 03:55 pm