" ಈ ಮಳೆಗೆ ಏನೋ ಸೆಳೆತ ಇದೆ "
"ಅದೇನೆಂದು ತಿಳಿಯಲು ಹೋದರೆ......
"ಒಮ್ಮೇಲೆ ನೆನಪಾಗುತ್ತವೆ
ನಿನ್ನ ಸಾವಿರಾರು ನೆನಪುಗಳು !!
ಆ ನೆನಪುಗಳಲ್ಲಿ ನಿನ್ನ ನೆನಪೇ ಪ್ರಥಮ..
ನಿನ್ನ ನೆನಪುಗಳೆ ಅಂತಿಮ....................... Feel my Love...
ಅನು...
ಹುಟ್ಟು ಹಬ್ಬಕ್ಕೆ ಬರುವ
ಅಪ್ಪನ ಗೊಂಬೆಗೆ
ಮಗಳು ಕಾಯುತ್ತಿದ್ದಾಳೆ..!
**
ಅವನಲ್ಲಿ ದಿನಾಲೂ ಚಳಿಗೆ
ಮೈಯೊಡ್ಡಿ ರಕ್ತದ ಚಲನೆಯಲ್ಲಿ
ಏರುಪೇರಾಗಿದೆ ಈಗ ಯುದ್ಧ
ಕಿಟ್ ಜೋಡಿಸುತ್ತಿದ್ದಾನೆ..!
**
ಯುದ್ಧ ಭೂಮಿಯ ಇರುವೆಗಳು
ಪಲಾಯನ ಮಾಡುತ್ತಿವೆ
ಶ್ಶ್!!!ಯುದ್ಧ ನಡೆಯುವಾಗ
ಮನುಷ್ಯರ ಕಣ್ಣು ನೆತ್ತಿಯಲ್ಲಿ
ಹೃದಯ ಬಂದೂಕಿನ ತುದಿಯಲ್ಲಿ
ಎನ್ನುತಿದೆ ಮುದಿ ಇರುವೆ..!
**
ರಣಹದ್ಧುಗಳು ಸಂಗಡಿಗರಿಗೆ
ಆಮಂತ್ರಣ ಕೊಟ್ಟು ಬಂದಿದೆ
ಇನ್ನೆರಡು ದಿನದಲ್ಲಿ
ಭೂರಿ ಭೋಜನ ವ್ಯವಸ್ಥೆಯಿದೆ
ಗಿಡಿರಾಜನ ಅಂಬೋಣ..!!
**
ಹಸಿರೆಲೆಗಳು ಯಾಕೋ ಸುಖಾ
ಸುಮ್ಮನೇ ಉದರುತ್ತಿದೆ
ಹಸಿರೆಂದರೆ ಸಮಾಧಾನವಂತೆ.!!
***
ಯುದ್ಧ ನಡೆಯಿತು,ನಡೀತಿದೆ
ನಡೆಯುತ್ತದೆ,ಗಳಿಸಿದ್ದು
ಯೋಧನಿಗೆ ಹುತಾತ್ಮ ಬಿರುದು
ಮುತ್ತೈದೆಗೆ ವಿಧವೆ
ಮಗಳಿಗೆ ಅನಾಥೆ...!!!
ಮೋಡ ಮತ್ತು ಸೂರ್ಯನ ನಡುವೆ ನಡೆಯುವ ಕಾಳಗ ...
ಮೋಡ ನಾ ಬಿಡೆನು ಎನ್ನುವ ಸಮಯದಲ್ಲಿ,
ಸೂರ್ಯ ತನ್ನ ಪ್ರಖರತೆಯಿಂದ ಭೂಮಿಗೆ ಬೆಳಕ ನೀಡುವ ಕಾಯಕ ಮರೆತಿಲ್ಲ.
ಸೂರ್ಯನ ಬಂದು ಹೋಗುವ ಮೋಡಗಳೊಡನೆ ಈ ಆಟ,
ಕಾಣುವ ಕಣ್ಣುಗಳ ಆಳದ ಆನಂದ ಹೇಳಲು ಅಸಾಧ್ಯವೆ ಸರಿ.
ಹೂವೇ ನಗುವ ಕನಸು ತಪ್ಪಲ್ಲ
ಆಗಲೇ ಬಿರಿಯುವ ತವಕ ಸರಿಯಲ್ಲ
ನಿನ್ನ ರೂಪು ರಂಗು ಮುಚ್ಚಿಡುವಂತಿಲ್ಲ
ಕಂಪಂತೂ ಹಿಡಿಯಲು ಸಿಗಲ್ಲ
ಪೆದ್ದು ನಿನಗೇನಿಷ್ಟೂ ಗೊತ್ತಿಲ್ಲ
ವನವೀಗ ಮೊದಲ ತರವಿಲ್ಲ
ಮಾಲಿಯೂ ನಿನ್ನ ಪರವಾಗಿಲ್ಲ
ಮುಳ್ಳಿಗೂ ನಿನ್ನ ರಕ್ಷಕನೆಂಬ ಅರಿವಿಲ್ಲ
ತಂಗಾಳಿಯೆಂದೂ ನಿನಗೆ ಆಪ್ತನಿರಲಿಲ್ಲ
ಈ ಕಾಣುವ ಹುಲ್ಲು ಹಸಿರುಂಟಲ್ಲ
ನಿನ್ನ ನೋವು ಯಾರಿಗೂ ತಿಳಿದಿಲ್ಲ
ಸರಿ ಇರುಳಿಗೇನೂ ತೋಚಿರಲಿಲ್ಲ
ಶುಭ್ರ ಸುಪ್ರಭಾತವೂ ಇಲ್ಲ...
ಅನು..