Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರೀತಿಯ ಮೇಣದ ಬತ್ತಿ ಕರಗುವ ಮುನ್ನ
ಮುಗಿಲ ಹೆಗಲ ಏರಿ ಕುಳಿತೆ ನೀನು!!
ನನ್ನ ಕಣ್ಣೀರಿನ ಹನಿ ಹುಡುಕುತ್ತಿದೆ ನಿನ್ನ
ಮುಗಿಲಿಂದ ಜಾರಿ ಒಮ್ಮೆ ಎದಿರು ಬಾ ಸಾಕು!!
ಬರಡಾಗುತ್ತಲಿ ಇರುವ ಈ ಬದುಕಿನಲ್ಲಿ
ಮತ್ತೊಮ್ಮೆ ನೀ ಬಲಗಾಲಿಟ್ಟು ಒಳಗೆ ಬಾ!!
ಹಿಂದೆ ಆಗಿರುವ ತಪ್ಪು ಮತ್ತೆಂದೂ ಆಗದೆಂದು
ಭರವಸೆಯ ನೀಡಿ ನಿನ್ನ ಬರಮಾಡುತ್ತೇನೆ!!
ಮುಂಜಾವಿನ ಇಬ್ಬನಿಯಂತೆ ನೀ ಬಾ
ಬರದಿದ್ದರೆ ಸಂಜೆಯಲಿ ತುಂತುರುವಾಗಿ ಬಾ!!
ಮರುಭೂಮಿಯಲ್ಲಿ ನೀರಿನ ಹನಿಗಾಗಿ
ಅಲೆಯುತ್ತಿರುವ ಬದುಕಲ್ಲಿ ಹನಿ ನೀರಾಗು ಬಾ!!
ಚಳಿಯೇ ಇರದೇ ನನ್ನಲ್ಲಿ ಏಕೆ ಈ ನಡುಕ
ನೀನು ಇರದೇ ನಾ ಒಬ್ಬಂಟಿ ಈ ಬದುಕು ನರಕ!!
ಎದೆಯ ವಳಗೆ ಏಕಾಂತದ ಅಳಲು ಸಾಕು
ಸಂಗಾತಿ ನೀ ದಯಮಾಡಿ ಹಿಂತಿರಿಗಿ ಬಾ ಸಾಕು!!
- ಪಿ.ಜಿ.ಜ್ಯೋತಿ
18 Mar 2017, 11:26 am
'ಕಲೆಗಾರ ನಾನಲ್ಲ'
'ಕವಿಗಾರ ನಾನಲ್ಲ'
'ಭಾವನೆಗಳೊಂದಿಗೆ ಬದುಕುತ್ತಿರುವುದನ್ನು ಬಿಟ್ಟು ಬೇರೇನು ಗೋತ್ತಿಲ್ಲ'
'ಆಸ್ತಿಯೂ ನನಗಿಲ್ಲ'
'ಆಸೆಯೂ ನನಗಿಲ್ಲ'
*ನಿಮ್ಮ ಸ್ನೇಹ - ಪ್ರೀತಿ ಬಿಟ್ಟು
ಬೇರೇನು ಬೇಕಿಲ್ಲ*:
(RS)
- *RS*
18 Mar 2017, 06:58 am
ಈಗಿನ
ಕಾಲದ ಹುಡುಗಿಯರ
ಬಗ್ಗೆ ಬಣ್ಣಿಸಲು
ನಿಂತರೆ ಬಿಳಿ
ಹಾಳೆಯು ವಣಗಿ
ಲೇಖನಿ ಇಕ್ಕುವ
ಮುನ್ನವೇ
ಪದ ಕಿಚ್ಚು ಹತ್ತಿ
ಹಾಳ್ಗಚ್ಚಿಗೆ
ಬುದಿಯು ಸಿಕ್ಕದಾಗಿತು,,,
ಹುಡುಗಿಯರ
ಹಿಂದೆ ಬಿದ್ದಾ
ಮನಸು
ನಿಲ ನಕನದ
ಮರು ಭೂಮಿಯಲ್ಲಿ
ಮೌನ ಪದಗಳೊಂದಿಗೆ
ಬಿಕ್ಕಳಿಸಿ
ಅತ್ತತ್ತು ಸೊರಗಿತು,,,,,
ಪ್ರವೀಣ್ ಯಾದವ್
- ಪ್ರವೀಣ್ ಯಾದವ್
17 Mar 2017, 11:24 pm
ಏನನ್ನೊ ಕಳೆದುಕೊOಡ ಭಾವನೆ ನನ್ನಲಿ.
ಅನಿಸುತ್ತಿದೆ ನನ್ನನ್ನೇ ನಾ ನಿನ್ನಲ್ಲಿ
ಕಳೆದುಕೊOಡೆನಾ ಎಂದು .
ಹುಡುಕಲೇ ನನ್ನನ್ನು ನಾ ನಿನ್ನ
ಉಸಿರಲ್ಲಿ ....ಸಿಗಬಹುದೇನೊ
ನನ್ನ ಬಿOಬವಾದರೂ ನಿನ್ನ ಕಣ್ಣಲ್ಲಿ .
ಯಾರಿಗೆ ಗೊತ್ತು ನೀನೇ ನನ್ನ
ನಿನ್ನ ಹ್ರುದಯದಲ್ಲಿ ಬಚ್ಚಿಟ್ಟು
ನಗುತಿರುವೆಯೆನೊ ..........******
- ಚುಕ್ಕಿ
17 Mar 2017, 08:55 pm
ಮನಸಿನ ತುಂಬ ನೀನೇ ನೀನೇ
ಗೀಚಿದೆ ಪ್ರೀತಿಯ ಬರಹದ ಸಾಲು!!
ಹೃದಯದ ತುಂಬಾ ನೀನೇ ನೀನೇ
ನುಡಿಸಿದೆ ಪ್ರೀತಿಯ ರಾಗದ ಹಾಡು!!
ಗೀಚಿದ ಆ ಸಾಲಿಗೆ
ಬೆರೆಯಿತು ಈ ರಾಗ!!
ಹಾಡಿದ ಆ ಹಾಡಿಗೆ
ಮಿಡಿಯಿತು ಅನುರಾಗ!!
ಇಂದು ನಿನ್ನ ಸೇರೋ
ಬಯಕೆಯಿಂದ ಬರೆದ ಸಾಲು!!
ನಿನ್ನ ವಿನಹ ಬೇರೆ ಇಲ್ಲ
ಎಂದೂ ನುಡಿದ ರಾಗ!!
ನಿನ್ನ ಹೆಸರು ಗೀಚಿ
ಕಲ್ಪನೆಗಳ ಬರೆದು ನುಡಿದಮೇಲೆ
ಆಗಿ ಹೋಯ್ತು ಬರಹ
ಸ್ವರದಿ ಬೆರೆತು ಪ್ರೇಮ ರಾಗ!!
- ಪಿ.ಜಿ.ಜ್ಯೋತಿ
17 Mar 2017, 06:34 pm
ಕರಿಯ ಮೋಡದ ಮೇಲೆ
ಜರಿಯ ಸೀರೆಯನ್ನು ಉಟ್ಟು
ನಿಂತ ನಾರಿಯ ನೆರಳ
ಅರಸಿ ಹೊರಟಿದೆ ಮನವು!!
ಪ್ರೀತಿ ಕಾಮನೆಯ ಮದದಲ್ಲಿ
ಮೈ ಮರೆತು ಹುಡುಕುತಲಿ ನೆರಳ
ಅಲೆದಿರುವುದು ಮನವು
ಇರುಳು ಎಂಬುದನ್ನು ಮರೆತು!!
ಮೋಹದ ನಾರಿಯ
ಮಾದಕ ಮೈಮಾಟ ಕಂಡು
ತಲ್ಲಣಗೊಂಡು ಮನವು ಜಾರಿತು
ಇಂದು ಹರಯದ ಬಯಕೆಯಲಿ!!
ಮೋಹದಿ ಆ ನಾರಿಯ
ನೆರಳ ಅಪ್ಪಲು ಹೋಗಿ
ತಿಳಿಯದೇ ತಾ ಜಾರಿ ಬಿದ್ದಿತು
ಮನವು ಆಳ ಕಂದಕದಲ್ಲಿ!!
ಮೋಡದಿ ತಾ ನಿಂತು ನಗುತಿರುವ
ಮಾಯೆ ಅವಳು ಚದುರಿ ಹೋದಳು
ಅಲ್ಲೇ ಮೋಡದೋಡನೆ
ಕರಗಿತು ಆ ನೆರಳು ಕನಸಿನಂತೆ!!
- ಪಿ.ಜಿ.ಜ್ಯೋತಿ
17 Mar 2017, 06:30 pm
ತಡರಾತ್ರಿ ಎಚ್ಚೆತ್ತ ಮಗಳಿಗೆ
ಸುಳ್ಳುಗಳನ್ನು ಪೋಣಿಸಿ ನಿದ್ದೆ ಹತ್ತಿಸ
ಬೇಕಾಗಿ ಹವಣಿಸುವ ಇವಳ ಉಮೇದು ನೋಡಿ ನಾನು ಒಂದೆರಡು ಮಗ್ಗುಲು ಬದಲಾಯಿಸಿದ್ದಲ್ಲದೇ ಮತ್ತೇನೂ ಮಾಡಿಲ್ಲ
ನಿತ್ಯ ಅಪರಾತ್ರಿಯಲ್ಲಿ ಮೊಲೆಕೊಟ್ಟು
ಕೂಸಿನ ಕನಿಷ್ಟ ಕೂಗನ್ನು ನನ್ನ ಕಿವಿಯೊಳಗೆ ಬರದಂತೆ ಮಾಡುವ ಇವಳ ಜಾಣ್ಮೆಗೆ ನಾನಂತೂ ಒಮ್ಮೆಮ್ಮೆ ಹುಬ್ಬೇರಿಸಿದ್ದುಂಟು
ಹೆಣ್ಣಿನ ಪೇಚಾಟ ರಾತ್ರಿಗಳಲ್ಲಿ ಒಮ್ಮೆ
ಎಚ್ಚೆತ್ತು ನೋಡಿ ಸೂರ್ಯನಿರದ ರಾತ್ರಿಯಲ್ಲಿ ಮಗುವಿಗೆ ಸೂರ್ಯ ಕಿರಣ ತೋರಿಸುವ ಜಾಣತನಕ್ಕೆ ಬಿಗಿದಪ್ಪಿ ಕೃತಜ್ಞತೆ ಸಲ್ಲಿಸಿ ಬಿಡಿ
ನಿಮ್ಮಗಳ ಜವಾಬ್ದಾರಿ ತೀರಿಸಿ
ಸುಖನಿದ್ರೆಗೆ ಜಾರಿದರೂ ಹೆಣ್ತನದ
ಪಾಡು ಮಗುವಿಗೆ ಅಲ್ಪ ಜ್ವರ ಬಂದಾಗ ರುಜುವಾತು ಆಗುತ್ತದೆ
ನಿಮ್ಮಲ್ಲಿ ತೋರಿಸದ ಒಂದು ವೈದ್ಯೆ
ಸರಿಸುಮಾರು ಮುಕ್ಕಾಲು ರಾತ್ರಿ ಸರಿದ ಮೇಲೆ ಹುಟ್ಟಿಕೊಳ್ಳುತ್ತಾಳೆ
ಗಂಡಸರೇ,ಹೆಣ್ಣೆಂದರೆ ಸರ್ವಾಂತರ್ಯಾಮಿ
ಅವಿಜ್ಞಾನಿ
- ಅವಿಜ್ಞಾನಿ
17 Mar 2017, 03:06 pm
ಮರಳಿ ನೀ ಬರುವ ದಿನದ
ನಿರೀಕ್ಷೆಯಲ್ಲಿ ಎಷ್ಟೂಂದು
ಸಡಗರ ಗೊಂಡಿದೆ ನನ್ನ ಮನ
ನಿನ್ನಿಗಿಷ್ಟದ ಸಂಗಂತಿಗಳ ಸಂತೋಷ
ಗಳ ಬೇಕು ಬೇಡಗಳ ಸಂಗ್ರಹದಿ
ಮೆಲುಕು ಹಾಕುತ್ತಿದೆ ಆ ದಿನಗಳ
ನೆನಪಿನ ಅಂಗಳದಿ ಅಡ್ಡಾಡುತ್ತಿದೆ
ನಿನ್ನ ಕಂಡ ಮೊದಲ ದಿನದ ಆಭೂತ
ಪೂರ್ವ ಆ ಕ್ಷಣ
ಅಯಸ್ಕಾಂತ ಸೆಳೆತದ ಕಂಗಳು
ಕೆಂಪು ರಂಗಿನ ತುಟಿಗಳು ಹೊಂ
ಬಣ್ಢದ ಕದಪುಗಳು
ಅಂದದ ಮೊಗದಲ್ಲಿ ಪೂರ್ಣ
ಚಂದಿರನ ಕಳೆ ತುಂಬಿಕೊಂಡಿದ್ದ
ಚಂದ್ರಮುಖಿ
ಸೌಂದರ್ಯದ ಗಣಿ ನೀ ಅಂದೇ
ಆದೆ ನನ್ನ ಎದೆ ಅರಮನೆಯ
ಮಹಾರಾಣಿ.....
ಅನು...
- Anu...
17 Mar 2017, 02:10 pm
ಅಮ್ಮ ನಿನ್ನ ನೆನಪುಗಳು ಕಾಡುತಿಹೆ ನನ್ನ
ಕ್ಷಣ ಕ್ಷಣ ಕಳೆದರು ಯುಗದಂತೆ ಹೋಗುತಿಹೆ
ನಿನ್ನ ನೋಡಲು ಈ ಮನ ಹಂಬಲಿಸಿ
ಪ್ರತಿದಿನ ನಿನ್ನ ಕನಸು ಕಾಣಿದೆ ಓ ಅಮ್ಮ
ಜೋಗುಳ ಹಾಡದು ಕಿವಿಗೆ ಇಂಪದು
ಜೊತೆಯಲಿ ನೀನಿರಲು ಜಗವನು ಮರೆವೆ ನಾ
ಜಗದೊಳಗೇನಿದೆ ನಿನ್ನಯ ಹೊರತುಪಡಿಸಿ
ಜಗವೆ ತುಂಬಿರಲು ನಿನ್ನಯ ಮಡಿಲೊಳಗೆ.
ನಿನ್ನ ಕರುಳಬಳ್ಳಿಯ ಕುಡಿಯು ನಾನು
ಆಸರೆ ಬಯಸುವೆ ನಿನ್ನಯ ಒಡಲೊಳಗೆ
ನಿನ್ನ ಕಾಣದೆ ಇನ್ನೂ ಕಂಬನಿ ತುಂಬಿರಲು
ಕಣ್ಣೇಕೊ ಕಾಣದೆ ಕಳೆದೋಗಿರುವೆ ನಾ
ಕಷ್ಟದ ಕಹಿ ಇಲ್ಲ ಸುಖದ ಸುದೆ ಎಲ್ಲ
ನಿನ್ನ ದುಃಖ ಮರೆತೆ ನೀ ನನ್ನ ನಗು ಬಯಸಿದೆ
ಮೂರೊತ್ತು ಕೈತುತ್ತು ತಿನಿಸಿದೆ ನೀ ನನಗೆ
ಮರೆಯಲಾರೆನು ಆ ಕೈತುತ್ತಿನ ಸುಖ
ನೂರಾರು ದೇವರು ಕಣ್ಮುಂದೆ ಬಂದರು
ಅಮ್ಮ ನಿನಗೆ ಸರಿಸಾಟಿ ಇಲ್ಲವರು
ನಿನ್ನಯ ನೋಡಲು ಬಂದರು ದೇವರು
ನಿನ್ನಯ ಮಮತೆಗೆ ದೇವರೆ ಸೋತರು
ಸೋತು ಶರಣಾಗಿ ಕೈಮುಗಿದರು..
- Irayya Mathad
17 Mar 2017, 12:51 pm
ತಿದ್ದಿ ತೀಡಿದಷ್ಟು ಸೊಕ್ಕು ಆ ನರಿಗೆಗೆ
ಕೊಂಚ ಕೋಪ ಮುರಿಯುತ್ತಿತ್ತು ಮೂಗುತಿ
ಕಾಡಿಗೆಗೆ ಮೌನದ ಬಿನ್ನಾಣ
ಕಳ್ಳ ಕೆನ್ನೆಗುಳಿಗೆ ಕೆಂಪಾದ ರಸತಾವರೆ
ರಂಗಾದ ತುಟಿಗೆ ಕಿರುನಗೆಯ ತೋರಣ
ಮುಂಗುರುಳಿನ ನೋಟಕೆ ಸನಿಹ ಜಾರಿದೆ ಮತ್ತು
ಚಿಕ್ಕದೊಂದು ಕೂದಲಿನ ಎಳೆ
ಕೆನ್ನೆ ಸವರಿ ಜಾರಿದೆ ಅವಳ ಬಿಸಿಯುಸಿರು ದೂರ ತಳ್ಳಿದೆ
ಶಾಂತ ಕೋಪ ಕೋಮಲ ಕೈ ಬೆರಳು ಕಿವಿಹತ್ತಿರ
ತೀಡಿದೆ ಕಪ್ಪು ಕೂದಲೆಳೆಯ
ಕೊನೆಯ ಸೆರಗಂಚು ಇಮ್ಮಡಿ ಸವರಿದರೆ
ಕೈ ಯಲ್ಲಿನ ಮದರಂಗಿ ನರಿಗೆ ಹಿಡಿದಿದೆ...
- ರವಿಕುಮಾರ
17 Mar 2017, 08:45 am