ಇಬ್ಬರು ಪ್ರೇಮಿಗಳು ಅವರ
ವಯಸ್ಸು ಆಗಿತ್ತು ಅರವತ್ತು.
ತಾತ ಇದ್ದರು ಊರಿನಲ್ಲಿ
ಅಜ್ಜಿ ಇದ್ದರು ಮಗನ ಮನೆಯಲ್ಲಿ.
ತಾತ ದಿನ ಕರೆ ಮಾಡುತ್ತಿದ್ದರು ಅಜ್ಜಿಗೆ
ಅಜ್ಜಿ ದಿನಾಲು ತಾತ ಕರೆ ಬರುವ ಸಮಯಕ್ಕೆ
ಸರಿಯಾಗಿ ಚನ್ನಾಗಿ ರೆಡಿಯಾಗಿ ಕೂರುತ್ತಿದ್ದಳು
ಫೋನ್ ನಲ್ಲಿ ಮಾತಾಡಲು.
ಇದನ್ನು ದಿನಾ ಗಮನಿಸುತ್ತಿದ್ದ ಮಮ್ಮಗಳು
ಕೇಳಿದಳು ಅಜ್ಜಿಯಾಕೆ ನೀನು ದಿನ ಕರೆಬರುವ
ಸಮಯಕ್ಕೆ ರೆಡಿಯಾಗಿ ,ಹೂ ಮುಡಿದು ,ಬೊಟ್ಟಿಟ್ಟು,ಬಳೆ ತೊಟ್ಟು
ಕೂರುತ್ತಿಯಾ ಎಂದು.
ಅಜ್ಜಿ ಹೇಳಿದಳು ಮಗು ನಿಮ್ಮ ತಾತ
ನನ್ನನು ಮದುವೆಯಲ್ಲಿ ಈ ರೀತಿಯೆ
ನೋಡಿದರು ಅವಗಿಂದ ದಿನಾಲು ಈಗೆ
ಅವರಿಗಾಗಿ ರೆಡಿಯಾಗೋದು ನನಗಿಷ್ಟ ಎಂದು.
ಆಗ ಮಮ್ಮಗಳು ಆದ್ರೂ ಅಜ್ಜಿ ನೀನು
ತಾತನಿಗೆ ಕಾನಲ್ವಲ್ಲ ಅದ್ರಲ್ಲೂ ಅವ್ರಿಗೆ
ಈಗ ಕಣ್ಣು ಸಹ ಕಾಣಲ್ಲ ಎಂದಳು.
ಹಾಗ ಅಜ್ಜಿ ನಗುತ್ತ ಮಗು ನಂಗೂ ಗೊತ್ತಮ್ಮ
ತಾತನಿಗೆ ನಾನು ಕಾಣಲ್ಲ, ಕಣ್ಣು ಕಾಣಲ್ಲ ಅಂತ ಅವ್ರು ನನ್ನಕಣ್ಣಿಂದ ನೋಡಿ ಇಷ್ಟ ಪಟ್ಟಿಲ್ಲ ಮನಸ್ಸಿನಿಂದನೋಡಿ ಇಷ್ಟ ಪಟ್ರು
ಈಗ್ಲೂ ಹಾಗೇ ನೋಡ್ತಾರೆ.
ಅವ್ರು ನೋಡಿದ್ರು ನೋಡಿಲ್ಲ ಅಂದ್ರು ನಾನು
ಅವರಿಗಾಗಿ ರೆಡಿ ಆಗ್ತೀನಿ ಅವ್ರು ನನಗಾಗಿ
ಕರೆ ಮಾಡ್ತಾರೆ ಫೋನ್ ನಿಂದ ಅಲ್ಲ
ಪ್ರೀತಿಯಿಂದ ಎಂದಳು.
ಅಷ್ಟರಲ್ಲಿ ತಾತನ ಕರೆ ಬಂತು ಅಜ್ಜಿ
ಓಡಿ ಹೋದಳು ಮಾತಾಡಲು.
ಪ್ರೀತಿ ಇಬ್ಬರು ವ್ಯಕ್ತಿಗಳ ಮಧ್ಯೆ ಅಲ್ಲ
ಎರಡು ಹೃದಯಗಳ ಮಧ್ಯೆ.........
ಕೈ ತುತ್ತ ತಿಂದ ಶ್ವಾನವು
ಯಜಮಾನನ ಕಾಲೇ ಕಡಿವಂತೆ
ಬೆವರೆ- ನೀರಾಗಿ ಹರಿದು
ಬೆಳೆದ ಮರವು,ಒಡೆಯನ
ಶಿರದ ಮೇಲೆರಗುವಂತೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಹಿಂಡಿನಿಂದ ಕುರಿ ಕದ್ದ ತೊಳದಂತೆ
ಮನೆಯಿಂದ ಅಗಲಿಸಿತು ಮನವ
ಗಾಂಧಿತಾತ! ಗಾಂಧಿತಾತ!
ನಿಂತುಬಿಟ್ಟೆಯೇ ನಗುತ! ನಗುತ!
ಆಳುವವರಿಂದಲೆ ನಿನಗೆ ಮೌಲ್ಯ
ಅಧಿಕಾರ ಉಳ್ಳವರಿಂದಲೆ ನಿನ್ನ ಅಪಮೌಲ್ಯ
ಮೆರೆಯುತಿದ್ದೆ ಆರ್ಥಿಕತೆಯ ಅರಸನಾಗಿ
ಸದ್ದಿಲ್ಲದೆ, ಸಮಾದಿಯಾದೆ ಮೌನವಾಗಿ
ನಿನಗಾಗಿ ಅಲೆಯುವವರು ಒಂದುಕಡೆ
ನಿಂತಲ್ಲಿಯೆ ನಿಂತು ಕೊಳೆಯುವೆ ಇನ್ನೊಂದುಕಡೆ
ಉಳ್ಳವರ ಬಾಳಲ್ಲಿ
ಇಲ್ಲದವರ ಮನದಲ್ಲಿ
ಇಳೆಯಲ್ಲ ನೆರಳಾಗಿ
ನಿನಗೆಲ್ಲ ಮರುಳಾಗಿ
ಬೆಳಗಿದೆ ಎಲ್ಲರ ಬೆಳಕಾಗಿ
ಕ್ಷಣಹೊತ್ತಿನ ಆಣಿಮಾತಿನಲ್ಲಿ
ಕರಗಿದೆ ಮಸುಕಾಗಿ
ಎಲ್ಲಿ ಸೇರಿವೆ? ಏಕಾಂಗಿಯಾಗಿ!
ಬಹುಜನರ ಹವಣಿಸುತ್ತಿದ್ದ ನೀಗಿಸಲು
ಹಲವರ ಅಡಗಿಡು ಮಾಡಲು
ಕಪ್ಪನ್ನು - ಬಿಳಿಯಾಗಿಸಿ
ದೇಶವ ಮುನ್ನುಗ್ಗಿಸಿ
ವಿಜಯದ ಕಹಳೆ ಮೊಳಗಿಸಲೆಂದು
ನಿನ್ನ ಬಣ್ಣವ ಬದಲು ಮಾಡಿ
ನಿನಗೊಂದು ಆಕಾರ ನೀಡಿ
ಹಲವು ನಿಯಮಗಳ ಮಾಡಿ
ಕರೆದರು, ಕರೆಮಾಡಿ
ಇದೇ ಜನನಾಕನ ನುಡಿ.
ಸೀಮಿತ ಪ್ರಪಂಚದಲ್ಲಿ ಬೆಂದು ..
ಪಂಜರದ ಪಕ್ಷಿಯಾಗಿ ಬೆಳೆದು ..
ಕೋಮಲ ಹೃದಯಕ್ಕೇ ಗಾಸಿಮಾಡಿ ..
ಅರಿಯಲಾರದ ಮನಸ್ಸುಗಳೊಂದಿಗೆ ಬೆಳೆದು ..
ಗಡಿಯ ನೆರಳಲ್ಲಿ ಅಂಚಲೆಯಾಗಿ ಬೆಳೆದು..
ಎತ್ತರಕ್ಕೆ ಮೆರೆಯುವ ಬಾಣಗಲದವಳು..
ಬರಿ ಸೀಮಿತ, ಗಡಿಯವಳಲ್ಲ ಅವಳು ಅಂಚಲೆ ಬಾನೆತ್ತರದ ಅಂಚಲೆ..