Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಓ ಕನಸೆ ನೀ ಮನದ ಬಿಸಿತುಪ್ಪ
ನುಂಗಲಾರದೆ ಉಗುಳಲಾರದೆ
ತೊಳಲಾಡಿದೆ ಜೀವ ತಾಳಲಾರದೆ ನೋವ
ಬಾಯ ಗವಿತುಂಬ ಹೊಗೆ ತುಂಬಿ
ಸ್ಫೋಟವಾಗಲು ಕಾಯುತಿದೆ ಕ್ಷಣ
ನಿನ್ನೊಂದು ನೋಟಕೆ ಕರಗುತಿದೆ ಮನ
ಕರೆಗಂಟೆಯ ಮೀಟದೆ ನೀ ಮಾಡಿದೆ
ಅತಿಕ್ರಮ ಪ್ರವೇಶ
ನಿನ್ನ ದಾಳಿಗೆ ಮನದ ಬನದ ತರುಲತೆಗಳೆಲ್ಲ ಸರ್ವನಾಶ
ತೋಟದ ಮಾಲಿ ಬಂದರೇನು ಗತಿ
ಬೇಡ ಹೋಗು
ಬೇಲಿಯ ಮೀರಲು ಮಾಡಿಹೆಯಾ
ಕಪಟತನದ ಸೋಗು
ಮನಸಿನಾ ಮಾತಿಗೆ ಕನಸೆಂದಿತು
ಸೋಗಲ್ಲ ಚನ್ನೆ ನಿನ್ನದೇ ನೆರಳಿದು
ಸುತ್ತ ಮನಸಿನ ಬಯಕೆ ನಿನ್ನದೇ ಕನಸಿದು
ಕನಸಿನಾ ಮಾತಿಗೆ ಮನ ನಾಚಿ ಕೆಂಪೇರಿತು
ತಲೆಬಾಗಿ ಕಾಲ್ಬೆರಳಲಿ ನೆಲ ಗೀರಿತು
ಹಂಸಿನಿ
- ವಿಸ್ಮಯ
22 Mar 2017, 09:52 pm
1.
ನೀ ತೋರಿದ ಪ್ರೀತಿಯ
ಸವಿನೆನಪುಗಳು ಮಾಸದೆ
ಹೃದಯದ ಮೂಲೆಯಲಿ
ಹಚ್ಚ ಹಸಿರಾಗಿವೆ ನಲ್ಲ
ಕೆನ್ನೆಯಿಂದಿಳಿದ ಕಣ್ಣೀರ
ಒರೆಸುತ್ತಿದ್ದ ಪರಿಗೆ
ಇಬ್ಬನಿಯ ಹಾಗೆ
ಕರಗಿ ಹೋಗುತ್ತಿದ್ದೆನಲ್ಲಾ!
ಆದರಿಂದು ನನ್ನಾಸೆಗಳಿಗೆಲ್ಲಾ
ಒತ್ತಾಸೆಯಾಗಿದ್ದ ಗೆಳೆಯಾ
ಯಾರದೋ ಮಾತಿಗೆ ಕಿವಿಗೊಟ್ಟು
ಅಪಾರ್ಥದಲಿ ದೂರಾದೆಯಲ್ಲಾ
ಇದು ಯಾರ ತಪ್ಪು?
- ಮಾದುಜಗದಾಳ
22 Mar 2017, 09:44 pm
ನಾ ಕವಿತೆ ಬರೆಯುವಾಗೊಮ್ಮೆ
ಆಕಾಶದ ನೀಲಿ ಕಪ್ಪಿಡುತ್ತದೆ!
ಸೊಂಟ ಮುರಿದುಕೊಂಡ ಕಾಮನಬಿಲ್ಲು
ಅಧ೯ ಚಂದ್ರನ ತುದಿಗೆ ನೇಣು ಬಿಗಿದುಕೊಳ್ಳುತ್ತದೆ!
ಹಸಿದ ಹೊಟ್ಟೆಗೆ ಅಗುಳು ಅನ್ನವಾಗದ
ನನ್ನ ಕವಿತೆಯ ಪದಗಳು
ಉರಿಯೋ ಸೂಯ೯ನಿಗೆ ಕೆಂಡವಾಗುತ್ತವೆ!
ನಕ್ಷತ್ರಗಳು ಎದೆಯಿರಿಯುವ ಸಿಟ್ಟಿನಲಿ
ಅಲ್ಲಿಂದಲೇ ಕಣ್ಣು ಕೊರೆಯುತ್ತವೆ!
ನಾ ಕವಿತೆ ಬರೆಯುವಾಗೊಮ್ಮೆ
ಹೂವು ಗಭ೯ಪಾತಕ್ಕೊಳಗಾಗುತ್ತದೆ!
ನೊಂದವರ ಸತ್ತ ಕಣ್ಣುಗಳೊಳಗೆ
ಬೆಳದಿಂಗಳ ಬಿತ್ತದ ನನ್ನ ಕವಿತೆಯ ಕಂಡು
ದೀಪದ ಬತ್ತಿ ಬಾಣವಾಗಿ ನಾಟುತ್ತದೆ
ಅದರೊಳಗಿನ ಎಣ್ಣೆ ಉಸಿರುಗಟ್ಟಿಸಿ ಕೊಲ್ಲುತ್ತದೆ!
- ಮಾದು ಜಗದಾಳ (ಚಿಮ್ಮಡ )
- ಮಾದುಜಗದಾಳ
22 Mar 2017, 09:42 pm
ಜಗದ ಜನರ ಮೆಚ್ಚಿಸಬೇಕಿಲ್ಲ ....
ನನ್ನ ನಾನು ಅರಿತರೆ ಸಾಕು....
ಜಗದ ಜನರ ನಂಬಬೇಕಿಲ್ಲ....
ನನ್ನ ನಾನು ನಂಬಿದರೆ ಸಾಕು...
ಯಾರಿಗೆ ಯಾರು ಏನು ಅಲ್ಲ ....
ನನಗೆ ನಾನೇ ಎಲ್ಲಾ ....
ನನ್ನವರು ಎಂದು ನಂಬಿ ಕೇಡಬೇಡ ...
ನನ್ನವರತರ ನೀ ...
ನಟನೆಯ ನಂಬಿಕೆ ಮಾತ್ರ ಸಾಕು ಇನ್ನೂ ...
ರಚನೆಃಮಾದು ಜಗದಾಳ
- ಮಾದುಜಗದಾಳ
22 Mar 2017, 09:37 pm
ನಿನ್ನ ನಗುವ ನೋಡಿದ
ಮೊದಲ ಕ್ಷಣವೇ ನನ್ನ
ಕಣ್ಣಲ್ಲಿ ಸೆರೆಯಾದೆ ನೀನು.
ನಿನ್ನಲ್ಲಿ ಮಧುರವಾದ
ಸ್ನೇಹವೆಂಬ ಭಾವನೆಯ
ಬಯಸುವ ಗೆಳತಿ ನಾನು.
ಇರಬಹುದೇ ಸ್ನೇಹಿತೆಯಾಗಿ ನಾನು
ಒಂದು ಜನ್ಮವ ಕಳೆದರೂ
ಮರೆಯುವುದಿಲ್ಲ ನಿನ್ನ ಗೆಳೆತನವ ನಾನು.
- ಚುಕ್ಕಿ
22 Mar 2017, 09:15 pm
ಪ್ರೇಮದ ದುಂಬಿ
ಕಂಗಳ ತುಂಬಿ
ಅಳುತ್ತಾ ಕೂತಿಹುದು ಯಾಕಮ್ಮ
ಹೂವನು ನಂಬಿ
ಪ್ರೀತಿಯ ತುಂಬಿ
ಹಾಳಾಯಿತು ದುಂಬಿಯ ಬದುಕಮ್ಮ
ಬುದ್ಧಿಯ ಬಿಟ್ಟು
ನಿದ್ದೆಯ ಗೆಟ್ಟು
ಪ್ರೇಮದ ಲೋಕದಿ ತೇಲಾಡಿ
ಕೊನೆಗಿದೋ ಮೋಸ
ಒಣ ವನವಾಸ
ಮರೆಯಿತು ಹೂವದು ಓಡೋಡಿ
ದುಂಬಿಯ ಪ್ರೀತಿ
ಮುಗಿಯದ ಬ್ರಾಂತಿ
ಬದುಕಲಿ ತಲ್ಲಣ ಚೆಲ್ಲಾಟ
ಒಣಗಿತು ಕಣ್ಣು
ಮರುಗಿತು ಮಣ್ಣು
ಮರಳಲಿ ಹೂವಿನ ಮುನ್ನೋಟ.
- ಶ್ರೀಗೋ.
22 Mar 2017, 05:35 pm
ಕೈಲಾಸೆಶ್ವರನೇ
ನಿನ್ನ ಬಲ್ಲವರಾರು?
ಆಡಂಬರದ ಭಕ್ತಿಯಲ್ಲಿ
ಅಡಗಿಸಿ ಭಜಿಸುವರು ನಿನ್ನ
ವರುಷಕ್ಕೊಮ್ಮ
ಲಿಂಗೇಶ್ವರನೇ
ನಿನ್ನ ಬಲ್ಲವರಾರು?
ಭಯ ತುಂಬಿದ ಭಕ್ತಿಯಲಿ
ಸುತ್ತುತ್ತ , ಭಜಿಸುವರು ನಿನ್ನ
ಸಂವತ್ಸರಕ್ಕೊಮ್ಮೆ
ಅಧ್ರನಾರೇಶ್ವರನೇ
ನಿನ್ನ ಬಲ್ಲವರಾರು?
ಜಿದ್ದಿನ ಹಣಾಹಣಿಯಲ್ಲಿ ,ವೈರಿಯ
ಕೋಡುಮುರಿಯಲು ಭಜಿಸುವರು
ನಿನ್ನ ವರ್ಷಕ್ಕೊಮ್ಮೆ
ವಿಶ್ವನಾಥನೇ
ನಿನ್ನ ಬಲ್ಲವರಾರು?
ಮದ್ಯಾದಿ ವ್ಯಸನಗಳ, ತೊರೆದು
ಭಜಿಸುವರು ತೋರಿಕೆಯ ಭಕ್ತಿಯಲ್ಲಿ
ಒಂದುದಿನಕ್ಕೆ ಮಾತ್ರ
ವೈಕುಂಠೇಶ್ವರನೇ
ನಿನ್ನ ಬಲ್ಲವರಾರು?
ಮಲಿನ ತುಂಬಿದ ಮನಸ್ಸನ್ನು
ಮಡಿಯುಟ್ಟು ಭಜಿಸುವರು ನಿನ್ನ
ದಿನವಿಡೀ ವರ್ಷಕ್ಕೊಮ್ಮೆ
ವಿಷಕಂಠೇಶ್ವರನೇ
ನಿನ್ನ ಬಲ್ಲವರಾರು?
ಉಳ್ಳವರನ್ನು ಉಪ್ಪರಿಗೆಗೆ ಏರಿಸಿ
ಸನ್ಮಾನಿಸಿ ನಾಮಮಾತ್ರದಲಿ ನಿನ್ನ
ಜಪಿಸುವರು ವರ್ಷಾಂತ್ಯದಲ್ಲಿ
ಶಾರದ
- ಶಕುಂತಲಾ
22 Mar 2017, 04:40 pm
ನಂಬುವುದೊ ನಿನ್ನ
ನಂಬದಿರುವುದೊ ನಿನ್ನ
ನಂಬಿಕೆಯೆ ಸತ್ಯ
ಅಪನಂಬಿಕೆಯೆ ಮಿತ್ಯ
ನೀ ನಲಿಯುವೆ
ನಾಕದಲ್ಲಿ
ನರರಿಗೆ ತೊರುವೆ
ನರಕವನಿಲ್ಲಿ
ಮುತೈದೆಯರ
ಮುತ್ತಿನಂಥ ತಾಯೆ!
ನೀ,ಹೊತ್ತ ನಾಮ
ದೊಡ್ಡಮ್ಮ ತಾಯೆ!
ಕಷ್ಟ - ನಷ್ಟ ಎಂದು
ನಿನ್ನ ಬಳಿ ಬಂದು
ಬಾಗೀನ ತಂದು
ಬೇಡುವರು ಪರಿಹರಿಸೆಂದು
ನಮ್ಮ ಕರೆಗೆ ಓಲೈಸಿ
ನಾಕವ ನೀ ತೊರೆವೆ
ಆಲಯವ ಆಶ್ರಯಿಸಿ
ನಮ್ಮೆಲ್ಲರ ನೀ ಪೊರೆವೆ
ನರನ ಭಕ್ತಿಗೆ ಮೆಚ್ಚಿ
ನರನ ಕಾಯವ ಹೊಕ್ಕು
ಸಂ-ಕಷ್ಟಕ್ಕೆ ಪರಿಹಾರ ನೀಡುವೆ
ಕಲಿಯುಗದಲ್ಲಿ ಇದು ಸಾಧ್ಯವೆ?
- ಶಾರದ
- ಶಕುಂತಲಾ
22 Mar 2017, 01:18 pm
ಕಲ್ಪನೆಯ ಕಡಲಲ್ಲಿ
ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ
ರಾತ್ರಿಯ ಸೊಬಗಿನ ಆಕಾಶದ
ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ .......
ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿದೆ
ಓ ನನ್ನ ಕಂದಮ್ಮ ನಿನ್ನ ಚೆಲುವ ನಾ ಹೇಗೆ ಬರೆಯಲಿ
ಈ ನನ್ನ ಪುಟ್ಟ ಕವನದಲಿ
ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ ...... ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ, ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು ......
- basavarajsirnayakpreethu
22 Mar 2017, 08:57 am
ಅಪ್ಪ ಪ್ರತಿಕ್ಷಣವೂ
ಇಚ್ಛಿಸುತ್ತೇನೆ ನಿನ್ನ
ಮಗಳಾಗಿ ಗುರ್ತಿಸಿಕೊಳ್ಳಲು.
ನೀನು ಕೊಡುವ ಪ್ರೀತಿಗೆ
ಸಾಟಿಯಿಲ್ಲ ಆ ಕೋಟಿ
ತಾರೆಗಳ ಬೆಳಕು.
ನಿನ್ನ ಕೈಯಿಡಿದು
ನಡೆವ ಕ್ಷಣ ಲೋಕದಲ್ಲಿ
ಯಾವ ಪ್ರೀತಿಯೂ ಬೇಕಾಗಿಲ್ಲ.
ಅಪ್ಪ ನಿನ್ನ ನೆನೆದರೆ ನನ್ನಲ್ಲಿ
ಮೂಡುವ ಆ ಪ್ರೀತಿಯ ಭಾವನೆ
ಯಾರಿಂದಲೂ ಕೊಡಲು ಸಾಧ್ಯವಿಲ್ಲ.
ಲೋಕವೆಲ್ಲಾ ನನ್ನ ತೊರೆದರೂ
ಸಂತೋಷದಿ ಮಲಗುವೆ
ನಿನ್ನ ಎದೆಯ ಗೂಡಲ್ಲಿ ಗುಬ್ಬಿಯ ಹಾಗೆ.
ಅಪ್ಪ ನನ್ನ ಪ್ರೀತಿಯ ಅಪ್ಪ
ಎಂದಿಗೂ ನಿನ್ನ ಮಗಳಾಗೆ ಇರುವೆ
ನಿನ್ನ ಮಮತೆ ಮನೆಯಲ್ಲಿ.
ನಿನ್ನ ಪುಟ್ಟ ಯುವರಾಣಿಯಾಗಿರುವೆ
ಮುದ್ದು ಮುದ್ದು ಮಾತನೇಳುತ.
ಮನೆಯಂಗಳದಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಡುತ.
- ಚುಕ್ಕಿ
21 Mar 2017, 09:58 pm