Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಂದಿರನಾಗಿ ಬಂದನಾ ನೇಸರ...?

ಮುಂಜಾನೆ ಮಂಜಲಿ...
ತಂಗಾಳಿ ತಂಪಲಿ...
ಸುಮಗಳು ಕಿಲ ಕಿಲನೆ ನಗುತಿರಲು...
ಹಕ್ಕಿಗಳ ಚಿಲಿ ಪಿಲಿ ನಾದ ಸ್ವರ ಕೇಳುತಿರಲು...
ಮೂಡನದಿ ಮೂಡಿ ಬಂದನು ನೇಸರ ನಿಗಿ ಕೆಂಡದಂತೆ...
ಕರಗಿ ನೀರಾಗಲು ಮಂಜು
ತಂಗಾಳಿ ಬಿಸಿಯೂಸಿರಿನಂತಾಗಲು...
ಓಡುತಿವೆ ಹಕ್ಕಿಗಳು ತಮ್ಮ ಗೂಡಿನೆಡೆಗೆ...
ಸೂರ್ಯ ದೇವನಿಗೆಕೋ ತುಸು ಬೇಸರ ಮನದಲಿ....
ನಾ ಬರಲು ಮರೆಯಾಗುವರೆಲ್ಲ
ತಪ್ಪು ನನ್ನಲ್ಲಿದೆ ಎಂದು ಜಾರಿದನು ಮೆಲ್ಲನೆ ಪಡುವನದಿ ನೇಸರ...
ಮರಳಿ ಚಂದಿರನಾಗಿ ಬಂದನಾ ನೇಸರ...
ಎಲ್ಲರ ಸಂಭ್ರಮಕ್ಕೆ ಸಾಕ್ಷಿಯಾಗಲು
ಬೆಳದಿಂಗಳ ಚೆಲ್ಲಿ ನಿಂತನಾ....??ಚಂದಿರ...!

- chinmayi

24 Mar 2017, 07:56 am

ಪ್ರಾತ:ಕಾಲ

ಬೆಚ್ಚನೆಯ ಹೊದಿಕೆಯನು
ಬೇಸರದಿ ತೆಗೆದು ‌
ಕಷ್ಟದಿ ಕಣ್ಣುಜ್ಜುತ
ನಿನ್ನ ನಾಮವ ನೆನೆದು

ಜೀವನವೆ ಯಂತ್ರವಾಗಿ
ಸೃಜನಶೀಲತೆ ಮರೆಯಾಗಿ
ಮನಸ್ಸು ಭಾರವಾಗಿ
ತಲೆಯೊಂದು ಚಿಂತೆಗೂಡಾಗಿ

ಮೂಡಣವು ಮೌನವಾಗಿ
ಬೆಳಗುತಲಿದೆ
ತರು-ಲತೆಗಳು ಮುತ್ತಿನಾರದಿ
ಹೊಳೆಯುತಲಿವೆ

ಬಾನಂಗಳಲಿ ಬೆಳ್ಳಕ್ಕಿಯ
ಸಾಲು.…ಸಾಲು....
ಭಾನಿಗೆ ಆರತಿ ಬೆಳಗುತ್ತ
ಸಾಲು....ಸಾಲು....

ಕೋಟಿ ನಾಮವ ಹೊತ್ತ
ನಿನ್ನ ಜಪಿಸುತ್ತ ನಾವು
ಮುಂದಡಿ ಇಡುತ್ತ
ದಿನದ ಆಧಿಯತ್ತ

ಅಕ್ಕರದಿ ಅಡಿಗೆ ಮಾಡುತ್ತ
ಸಕ್ಕರೆಯ ನುಡಿಯನಾಡುತ್ತ
ಮನೆ-ಮನವ ತೊಳೆಯುತ್ತ
ಬೆಳಗುತಿರುವಳು ಅವ್ವಾ....


-ಶಾರದ

- ಶಕುಂತಲಾ

24 Mar 2017, 03:25 am

ಏನೆನ್ನುವುದು ಇದಕ್ಕೆ?

ತಿರುಗಿ ತಿರುಗಿ ನೀ ನನ್ನ ನೋಡದಿದ್ದರು,
ತಿರುತಿರುಗಿ ನೀ ನನ್ನ ಆಸುಪಾಸಿನಲ್ಲೇ
ನಡೆದಾಡುತ್ತಿರುವೆ
ಏನೆನ್ನುವುದು ಇದಕ್ಕೆ?
ಮನವು ಪ್ರೀತಿ ಎಂದು ನಾಮಕರಣ ಮಾಡಿದೆ
ತಿರಸ್ಕರಿಸುವ ಧೈರ್ಯ ನನಗಿಲ್ಲ.

ನೀ ತುರುಬು ಕಟ್ಟಿ ನೋಡಿದ ನೋಟಕೆ,
ನೀ ಮುಂಗುರುಳ ಸರಿಸಿ ಮಾಡಿದ ಮೋಡಿಗೆ
ಹೃದಯವಿದು ಹುಚ್ಚೆದ್ದು ಕುಣಿದಾಡಿದೆ.
ಬಾವಿಗೆ ಬೀಳುವ ಭಯದಲ್ಲಿ ನಾನಿರುವೆ,
ಆದರೂ ಇಸಿ ಜಯಿಸಬಲ್ಲೆ ಎಂಬ
ಮೊಂಡು ಹಠವೊಂದು ನನ್ನಲ್ಲಿದೆ.

ಹೇಳಬೇಕಿಲ್ಲ ನಿನಗೆ ನಾ ವರ್ಣಿಸಿ ಈ ಕವನಗಳಲ್ಲಿ
ಕೇಳು ಗೆಳತಿ ಒಮ್ಮೆ ನನ್ನ ಮನದ ಬಡಿತ
ನೀನೇ ನಿನ್ನ ಪ್ರೀತಿಸುವಷ್ಟು ಸುಂದರವಾಗಿದೆ
ಈ ನನ್ನ ಹೃದಯದ ಸಂಗೀತ....

- MK Reddy

23 Mar 2017, 09:39 pm

ಕರುನಾಡು

ಕವಿ ಕೋಗಿಲೆಗಳು ಜನಿಸಿದಂತ ನಾಡು ಇದು.
ಹಸಿರಿನಿಂದ ಉಸಿರಾಡುವ ನಾಡು ಇದು.
ಪಾವನ ಕಾವೇರಿ ಹರಿಯುವ ನಾಡು ಇದು.

ಪ್ರೀತಿಯಿಂದ ಎಲ್ಲರನ್ನು ಕಾಣುವ ನಾಡು ಇದು.
ನವ ನವೀನ ಕಲೆಗಳನ್ನು ಹೊಂದಿರುವ ನಾಡು ಇದು.
ದವಸ ಧಾನ್ಯಗಳನ್ನು ಹಿಡಿದು ಚೆಲ್ಲುವ
ನಾಡು ನಮ್ಮದು ಕರುನಾಡು ನಮ್ಮದು.

- ಚುಕ್ಕಿ

23 Mar 2017, 07:32 pm

ಅಮ್ಮ

ಕಣ್ತೆರೆಯದ ಕಂದನನ್ನು
ಮಡಿಲಲ್ಲಿ ಅಡಗಿಟ್ಟು
ಪೃಥ್ವಿಯ ಬಣ್ಣಗಳನ್ನು
ಅದ್ವಿತೀಯವಾಗಿ ಕಣ್ಮುಂದಿಟ್ಟಿರುವೆ.

ನನ್ನ ಬಾಳ ನಂದನ ವನವಾಗಿಸಿ
ನನ್ನ ಬದುಕಿನ ಆಶಾ ಜ್ಯೋತಿಯಾಗಿರುವೆ.

ವಿದ್ಯಾಭ್ಯಾಸದ ದಾರಿ ತೋರುತ್ತಾ
ವಾಗ್ದೇವಿಯಾದೆ.
ವರ್ಣನಾತೀತ ನಿನ್ನ ವಾತ್ಯಲ್ಯ.

ಕ್ಷಣ ಕ್ಷಣವೂ ಕಳೆಯಲಿ ನಿನ್ನ ನೆನಪಲಿ.
ಮಾತಲೂ ಮನದಲೂ ಸ್ಪೂರ್ತಿಯ ತುಂಬಿರುವೆ
ಮುಂದಿಡುವ ಪ್ರತಿ ಹೆಜ್ಜೆಗೂ ಧೈರ್ಯವ ನೀಡಿರುವೆ.

- ಚುಕ್ಕಿ

23 Mar 2017, 07:00 pm

ನೀನು...

ಕಣ್ಣಲ್ಲಿ ನೀ ತುಂಬಿರಲು ಕತ್ತಲಿಗೆ ಬೆಳಕಾದಂತೆ,
ಹೃದಯದಿ ನೀ ತುಂಬಿರಲು ಮರುಭೂಮಿಯು ಹಸಿರಾದಂತೆ,
ಮನದಲಿ ನೀ ತುಂಬಿರಲು ದೇಹಕ್ಕೆ ಉಸಿರಾದಂತೆ,
ಕನಸಲಿ ನೀ ತುಂಬಿರಲು ನನ್ನ ಗೆಲುವಿಗೆ ಹೆಸರಾದಂತೆ.

- basavarajsirnayakpreethu

23 Mar 2017, 03:48 pm

ಬದುಕೆಂದರೆ....

ಬದುಕೆಂದರೆ....
ಅನಿಶ್ಚಿತ,
ಅಲಿಖಿತ ಸಂವಿಧಾನ.
ವೈರುಧ್ಯಗಳ ಕದನ ಮುಗಿದ ಮೇಲಿನ ಸಂಧಾನ.
ಬದುಕೆಂದರೆ....
ನನಸಾಗಲೂ ಬಹುದಾದ ತಿರುಕನ ಕನಸು.
ಹತೋಟಿಗೆ ಸಿಗದ ಹದಿಹರೆಯದ ಹೆಣ್ಣಿನ ಮನಸು.
ಬದುಕೆಂದರೆ....
ತಪ್ಪೇ ಮಾಡದೆ,ಅಪರಾಧಿಯಾದಂತಹ ಖೈದಿ.
ಸತ್ತ ಮೇಲೆ ಪ್ರಖ್ಯಾತವಾದವನ ಸಮಾಧಿ.
ಬದುಕೆಂದರೆ....
ಬಯಸಿದ್ದನ್ನು ಪಡೆದೇ ತೀರುವ ಕೆಟ್ಟ ಹಠಮಾರಿ.
ಯಾರ ಮಾತನ್ನೂ ಕೇಳದ, ತನ್ನಿಚ್ಛೆಯಂತೆ ನಡೆವ ಸರ್ವಾಧಿಕಾರಿ.

- basavarajsirnayakpreethu

23 Mar 2017, 03:43 pm

ಕನಸುಗಳು

ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.

ಹಗಲು ಕನಸಲ್ಲವಿದು
ಗೆಳತಿ ಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ

ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು.

- basavarajsirnayakpreethu

23 Mar 2017, 03:18 pm

ಲೆಕ್ಕ ತಪ್ಪಿದ ಅಲೆ

ಸೆರಗ ನೆರಿಗೆಯಲ್ಲಿಟ್ಟ ಮೊಹಬ್ಬತ್ತನ್ನು ಬಿಡಿಸುವ ನನ್ನ ಉಮೇದಿಗೆ ಅವಳೊಂದು ಕಿರು ನಗೆಯಿಟ್ಟು ಮಾಯಿಸುತ್ತಾಳೆ
ಮದಿರೆಯಂತಹ ನನ್ನ ಹೊಗಳಿಕೆಯ
ಅಮಲಿನ ಧಾವಂತಕ್ಕೆ ನಾಚುವುದು
ಮರೆಚುತ್ತಾಳೆ ಹಾಗೆಯೇ

ಎಳೆಯಲಣುವಾದ ಎದೆ ತೇರಿನ
ಮುಹೂರ್ತವೆಲ್ಲಾ ಕನಸಿನಲ್ಲೇ ಆಗುತ್ತದೆ
ಎಣಿಕೆಗೆ ಸಿಗದ ನಭದೂರಿನ ಚುಕ್ಕಿಯವಳು ಮಿನುಗುತ್ತಾಳೆ ಮುತ್ತಿಟ್ಟಷ್ಟು
ಕಾವಲು ಹೃದಯದ ಕಿಮ್ಮತ್ತಿಲ್ಲದ ಒಲೈಕೆ ಕತ್ತಲಂತೆ ಸರಿದು ಹೋಗುತ್ತದೆ ಗೊತ್ತಾಗದೆ

ವಾಸ್ತವ ಒಲವಿನ ತಲಾಶೆಯ ಕೊನೆ ಇಶ್ಕ್ ಎಂದಾಗಲು ಕಡಲಲೆಯನ್ನು ಉಪಮೆಯಾಗಿಸುತ್ತೇನೆ
ಅವಳೊಳಗಿನ ಹುಣ್ಣಿಮೆ ನಾನಾಗಿರಬೇಕು ಉಬ್ಬಿಬಿಡುತ್ತೇನೆ ಕಂಡಾಗಲೆಲ್ಲ

ಮುಗಿಲೂರಿನ ಸರಕನ್ನು ಅಂಗೈಯಲ್ಲಿಟ್ಟು
ಮುದ್ದಾಡಿಸುವ ನನ್ನ ಪ್ರಬಲ ಆಸೆಯೊಂದು ಟಿಸಿಲೊಡೆಯುವುದು ಆವಾಗಲೇ
ಹೆಜ್ಜೆ ಜಾಡಿನ ಪರಾಮರ್ಶಿಸುವ ನನ್ನ ವಯಸ್ಸಿನ ಪರಿಧಿ ಗೊತ್ತಿಲ್ಲದೇ ಪ್ರಬುದ್ಧವಾಗುತ್ತದೆ ಸುದ್ಧಿಯಿಲ್ಲದೇ



ಅವಿಜ್ಞಾನಿ

- ಅವಿಜ್ಞಾನಿ

23 Mar 2017, 12:50 am

ಅಂಗನವಾಡಿ ಅಕ್ಕಂದಿರೆ..

ಅಂಗನವಾಡಿ ಅಕ್ಕಂದಿರೇ
ಬೆಂಗಳೂರ ರಸ್ತೇ ಬೀದೀಲಿ
ಅನ್ನಕ್ಕೆ ಕೈ ಒಡ್ಡಿ ನಿಂತೀರೆ?
ನಮ್ಮ ಪುಟ್ಟ ಕೂಸುಗಳ
ಸಂಬಾಳಿಸಲು ನೀವು ಪಟ್ಟ ಕಷ್ಟಗಳ
ಸರ್ಕಾರದ ಕಿವಿ ತುಂಬೀರೇ ?

ಮಂತ್ರಿ ಮಹೋದಯರಿಗೆ
ಕಂತ್ರಿ ಅಧಿಕಾರಿಗಳಿಗೆ
ಕುಂತುಂಡರೂ ತೀರದಷ್ಟು
ಕಂತೆ ಕಂತೆ ಹೊಂದಿರುವವರಿಗೆ
ಈ ಲೋಕ, ಈ ದೇಶ ಕಾಣಿರೆ.

ಪುಡಾರಿಗಳಿಗೆ ಸಾಕಾಗದಾಗ
ಲಕ್ಷ ಲಕ್ಷ ಗಿಂಬಳ
ರಾತ್ರೋ ರಾತ್ರಿ ಐದೇ ಮಿನಿಟಿನಾಗೆ
ಏರಿಸಿಕೊಳ್ವರು ತಮ್ಮ ಸಂಬಳ.
ನೀವೊ ಅ ಆ ಇ ಈ ಹೇಳಿ ಕೊಡೋ
ಬೇಲಿ ಬದಿಯ ಪಾಪದ ಹೂವುಗಳು
ಕೊಟ್ಟಾರೆಯೇ ನಿಮಗೆ
ಬಿಡಿಗಾಸು..
ತಾಕದಿರಲಿ ಈ ನೆಲಕೆ ನಿಮ್ಮ ನಿಟ್ಟುಸಿರು.

ಅಯ್ಯೋ ಅಕ್ಕಂದಿರಾ,
ದೂರದೂರಿಂದ ಇಷ್ಟು ದೂರ
ಬೇಡಿಕೆಯನೊತ್ತು ಯಾಕ ಬಂದೀರಾ?
ಮುಗಿಲಾಗೆ ಬಿದ್ದಿರಲಿಲ್ಲವೇ
ನಿಮ್ಮೂರಾಗೂ ಹಾಳು ಚಂದಿರಾ ?

- ಶ್ರೀಗೋ.

22 Mar 2017, 10:53 pm