Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಕಾಶವಾಣಿ... ವಾರ್ತೆಗಳು

ಒಂದಾನೊಂದು ಕಾಲದಲ್ಲಿ
ಹಳೇ ಕಾಲದ ರೇಡಿಯೋದಲ್ಲಿ
ಉಪೇಂದ್ರ ರಾವ್, ರಂಗ ರಾವ್
ಸುಧಾ ದಾಸ್ ಅವರುಗಳು
ವಾರ್ತೆ ಓದುತ್ತಿದ್ದುದು
ಬಹಳಾ ಚೆಂದವಿತ್ತು..

ಆರ್ಕೆ ದಿವಾಕರ
ಚಿತ್ತರಂಜನ್ ದಾಸ್
ಮುಂತಾದವರ ಪ್ರದೇಶ ಸಮಾಚಾರ
ಮುದವಾಗಿ ಕಿವಿಗೆ ಅಡರುತ್ತಿತ್ತು.

ಮುಂದೇನಾಯ್ತೆಂದರೆ..
ರೇಡಿಯೋಗಳ ಜಾಗದಲ್ಲಿ ಬಂದು ಕುಳಿತ
ಮೂರ್ಖರ ಪೆಟ್ಟಿಗೆಯಲ್ಲಿ
ದೂರ ದರ್ಶನವನ್ನು
ಅಡಚಣೆಗಾಗಿ ಕ್ಷಮಿಸುತ್ತ
ಹತ್ತಿರ ಮಾಡಿಕೊಂಡಂತೆಯೇ...
'ಉದಯ'ವಾದವು ಹೊಸ
ಖಾಸಗಿ ವಾಹಿನಿಗಳು...

ವಾರ್ತೆಗಳನ್ನು ಓದುತ್ತಿದ್ದವರ
ಕಾಲ ಸರಿದು..
ವಾಕರಿಕೆ ಬರುವಂತೆ ವದರುವವರ
ಕಾಲ ಸುರುವಾಯ್ತು.
ಸುದ್ದಿ ಹೆಕ್ಕಿ ತರುವವರೇ
ಸುದ್ದಿಯನ್ನು ಸೃಷ್ಟಿಸಲಾರಂಭಿಸಿ..
ಸುದ್ಧಿಗಿಂತ ಹೆಚ್ಚಾಗಿ
ಸದ್ದುಗಳೇ ತುಂಬಿ ಹೋಗಿ...

ಸಂದರ್ಶನಕ್ಕೆ ಕೂತರೆ..
ಉತ್ತರಕ್ಕಿಂತ ಪ್ರಶ್ನೆಗಳೇ ಉದ್ದವಾಗಿ..
ಮುಗಿಯದ ಪ್ರಶ್ನೆಗೆ ಉತ್ತರಿಸಲು
ಅತಿಥಿಗೆ ಸಮಯ ಸಾಲದೇ ಎದ್ದು ಹೋಗಿ...
ನೋಡುಗರ ತಿಥಿ ಆಗುವ ಹೊತ್ತಿಗೆ
ವಾರ್ತಾ ಪ್ರಸಾರ ಮುಕ್ತಾಯವಾಯಿತು !

- ಶ್ರೀಗೋ.

24 Mar 2017, 09:04 pm

ಜೀವನ --- ಪ್ರೀತಿ

ಜೀವಕ್ಕಿಂತ "ಜೀವನ" ಮುಖ್ಯ.
ಪ್ರೀತಿಗಿ೦ತ "ಪ್ರೀತ್ಸೋರ್" ಮುಖ್ಯ.
ಅದಕ್ಕೆ
ಪ್ರೀತಿಗೆ "ಜೀವ" ಕೊಡಿ.
ಪ್ರೀತ್ಸೋರಿಗೆ "ಜೀವನ" ಕೊಡಿ.
*RS*

- *RS*

24 Mar 2017, 06:59 pm

ನಿನ್ನೊಳಗಿರುವೆ ನಾನು

ದೇವಾ ಓ ದೇವಾ ನಿನ್ನ ಕಾಣಬಯಸುವೆ ಆ ಸರ್ವ ಶಕ್ತಿಯ
ದಯಮಾಡಿ ಕಣ್ತೆರೆಯಿಸು ಕಾಪಾಡು ನನ್ನನು
ಕರುಣಾಳು ಬಂಧುವೆ ಕಾರುಣ್ಯ ಸಿಂಧುವೆ...ಭಕ್ತ

ಗುಡಿಯಲಿಂದು ಪೂಜೆ ಮಾಡಿ
ಮಸೀದಿಯಲ್ಲೂ ನಮಾಜು ಮಾಡಿ
ಚರ್ಚಿನಲ್ಲಿ ಪ್ರಾರ್ಥಿಸಿ ನಿನಗಾಗಿ ಕಾಯುವೆ
ನಿನ್ನನೆ ಭಜಿಸುವೆ...ಭಕ್ತ

ನಿನ್ನ ಪ್ರಾರ್ಥನೆಯ ಎಲ್ಲ ಮೂಲ ಒಂದೆ
ನಿನ್ನ ಭಕ್ತಿ ಭಾವದಲ್ಲಿ ತುಂಬಿರಲಿ ನಿಸ್ವಾರ್ಥವು
ಅದುವೆ ನನಗೆ ಸಲ್ಲುವ ಮೊದಲ ಭಕ್ತಿ ಕಾಣಿಕೆ...ದೇವರು

ಅ‌ನುದಿನವು ನಿನ್ನ ಜಪಿಸುವೆ ಹರಿಯುವ ಜರಿಯಂತೆ
ಕಾಣದು ಇನ್ನಿಂದು ನಿನ್ನಯ ಆ ರೂಪವೂ
ಬದುಕಿದರೇನರ್ಥವು ಈ ನನ್ನ ಜನ್ಮವು...ಭಕ್ತ

ನಿನ್ನ ಕಾಯಕವೆ ಸ್ವರ್ಗದ ದಾರಿಯು ಅದರಲಿ ತೋರು ನೀ ಪ್ರಾಮಾಣಿಕತೆಯ
ಶ್ರದ್ಧೆಯ ಶಕ್ತಿಯು ಶುಭವೆ ನಿನಗದು
ಮರೆಯದಿರು ನೀ ನಿನ್ನ ಕಾಯಕವ...ದೇವರು

ಯಾವ ಧರ್ಮವು ಯಾವ ಕರ್ಮವು
ನಿನ್ನ ನೋಡಲು ನಾ ಪಾಲಿಸ ಬಯಸಲಿ
ಭವಬಂಧನದಲಿ ಮುಕ್ತಿಯ ಪಡೆಯಲು ಮಾರ್ಗವ ತೋರಿಸು ಸಾರ್ಥಕಗೊಳಿಸು ನನ್ನ ...ಭಕ್ತ

ನೀ ಕರೆಯುವ ಎಲ್ಲ ನಾಮವು ಒಂದೆ ನನಗೆ
ಜಾತಿ ಕುಲಗಳ ಬಣ್ಣವು ಇಲ್ಲ ನನಗೆ
ಮಾನವತೆಯ ಸಾರುವ ಸಂಕೇತವೆ ಧರ್ಮವು ನನಗೆ
ನಿನ್ನಲಿ ಇರುವೆ ನಾ ಎಲ್ಲೆಲ್ಲು ತುಂಬಿಹೆ ನಾ
ಬಡವ ಬಲ್ಲಿದ ಅರಿತುಕೊ ಗುಣದಲಿ ಬರದು ಧನಕನಕ ನಿನ್ನ ಕೊನೆ ಕ್ಷಣದಲಿ...ದೇವರು

ಧನ್ಯನಾದೆನು ಧನಿಕನಾದೆನು ನೀ ತೋರಿದ ದಾರಿಯ
ನಾನಿನ್ನು ಮೀರೆನು
ಕತ್ತಲೆ ಕಳೆಯಿತು ನನ್ನ ಮತಿ ಬೆಳಗಿತು
ಅರಿವಾಯಿತು ನನಗೆ ಬದುಕಿನ ಸಾರವು
ಎಲ್ಲೆಲ್ಲೂ ಹರಡುವೆ ಪ್ರಿತಿಯ ಪುಷ್ಪವ
ಎಲ್ಲವೂ ಗೆಲ್ಲುವೆ ಪ್ರೇಮದಿ ಈ ಜಗವ...ಭಕ್ತ

- Irayya Mathad

24 Mar 2017, 05:57 pm

ನನ್ನ ಹೃದಯ

ನನ್ನ ಹೃದಯ ಎಲ್ಲಿ ಜಾರಿ ಬಿತ್ತು
ಬಹುಶಃ ನಿನ್ನ ನಗುವಲ್ಲಿ
ಕಳೆದೊಗಿದಿಯೇನೋ...!!!

ಬಾರೆ ಮರಳಿ ಹೃದಯವೇ
ನಾನೆಗೊ ಅವನಲ್ಲೇ ಮರೆಯಾಗಿರುವೆ
ನೀನಾದರು ನನ್ನಲ್ಲಿರು...!!!

ಅವನ ಒಂದು ನೋಟಕ್ಕೆ ನಾ ಮನಸೋತೆ .
ಅವನಂದ ಒಂದು ಮಾತಿಗೆ
ನನ್ನ ಜೀವವೇ ಕೊಟ್ಟೆ...!!!

ನನ್ನ ಮೇಲೆ ನನಗೇ ಇಲ್ಲದ
ನಂಬಿಕೆ ಅವನಲ್ಲಿ ನಾ ಕಂಡೇ.
ನಾನಂದೇ ಒಂದು ಮಾತು ಅವನಲ್ಲಿ.....!!!

ನಾ ಕೇಳಿದೆ ಅವನಿಗೆ ನಾನೆದಾರು ತಪ್ಪು
ಮಾಡುತಿರುವೆನಾ ಎಂದು........
ಅವನಂದ ನನ್ನ ಹೃದಯ ಎಂದಿಗೂ
ಯಾವ ತಪ್ಪು ಮಾಡಲ್ಲವೆಂದು...!!!

ಕಂಬನಿಯು ನನ್ನ ಕೆನ್ನೆಯ
ಮೇಲೆ ನಿಂತಿತ್ತು ನೋವಿನಿಂದಲ್ಲ...
ನನಗಾಗಿ ಒಬ್ಬರಿರುವರೆಂಬ ಸಂತೋಷದಿಂದ...!!!

- ಚುಕ್ಕಿ

24 Mar 2017, 10:59 am

ಮನಸoದ ಮಾತು

ಮನಸoದ ಮಾತು ನನ್ನ
ಮೌನಿ ಮಾಡಿತು.
ನಿನ್ನ ನೆನದಾಗ ನನ್ನಲ್ಲೇ
ನಾನಿರುವುದಿಲ್ಲ ಎಂದು
ನನಗೆ ತಿಳಿಸಿತು.......

- ಚುಕ್ಕಿ

24 Mar 2017, 10:58 am

ಬಿತ್ತನೆ ಬೆಳೆ

ಹೊಲದಲ್ಲಿ ಮಣ್ಣ ಉತ್ತಿ
ನೆಲದಲ್ಲಿ ಭತ್ತ ಬಿತ್ತಿ
ಹೊನ್ನಿನ ಬೆಳೆ ಬೆಳೆಯುವ
ಬೆಳೆಯುವ ನಾವು ಬೆಳೆಯುವ!!

ಬಾನಿಂದ ಮಳೆಯನಿತ್ತು
ಭೂಮಿಲಿ ಹಸಿರನಿತ್ತ
ಆ ದೇವರ ಇಂದು ನೆನೆಯುವ
ನೆನೆಯುವ ನಾವು ನೆನೆಯುವ!!

ನೆಲದಲ್ಲಿ ಫಲವ ಪಡೆವ
ಭಾಗ್ಯವ ನಮಗೆ ಕೊಟ್ಟ
ಭೂ ತಾಯಿಗೆ ನಾವು ನಮಿಸುವ
ನಮಿಸುವ ನಾವು ನಮಿಸುವ!!

ಸಿರಿ ಸಂಪತ್ತು ತುಂಬಲಿ
ತುಂಬಿ ತುಳುಕಾಡಲಿ
ಸಂತಸದಿ ಕುಣಿದು ನಲಿಯುವ
ನಲಿಯುವ ನಾವು ನಲಿಯುವ!!

ಭತ್ತದ ಗಿಡ ಬೆಳೆದು
ತೆನೆದೂಗಿ ನಲಿವಾಗ
ಸಂತಸದಿ ಪದವ ಹಾಡುವ
ಹಾಡುವ ನಾವು ಹಾಡುವ!!

ಏನಿಲ್ಲ ಯೇಕಿಲ್ಲ
ಎಂಬುದು ನಮಗಿಲ್ಲ
ಶ್ರಮದಿಂದ ಕೂಡಿ ದುಡಿಯುವ
ದುಡಿಯುವ ನಾವು ದುಡಿಯುವ!!

- ಪಿ.ಜಿ.ಜ್ಯೋತಿ

24 Mar 2017, 10:40 am

ಅಯ್ಯೋ ಸೈನಿಕ...

ಅಯ್ಯೋ ಸೈನಿಕಾ..
ನಿನಗ್ಯಾಕೆ ಬೇಕಿತ್ತು
ಭ್ರಷ್ಟ ತನವ ಜಗ ಜಾಹೀರು ಮಾಡುವ ಕಾಯಕ ?
ಅದನ್ನೇ ತಿಂದು, ಮೆದ್ದು, ಹೊದ್ದು
ಮಲಗಿರುವ ಕೂಳ ಕೂಟ
ಬಿಟ್ಟಾವೆಯೇ ನಿನ್ನ
ದೇಶ ಭಕ್ತಿಯ ಕಂಡು ?

ಎಲವೋ ಪಾಪಿ ಬಡವ
ನೀ ದಂಡಿಗೆ ಸೇರಿದ್ದೇ
ಗುಂಡಿಗೆ ಗುಂಡಿಗೆಯೊಡ್ಡಿ
ಗುಡ್ಡ ಬಂಡೆಗಳ ಮೇಲೆಲ್ಲೋ
ಅನಾಥವಾಗಿ ಸತ್ತು ಮಲಗಲು...
ಆದರೆ...
ಅಯ್ಯೋ ಸಹೋದರನೆ
ನಿನ್ನ ಕೊಂದೇ ಬಿಟ್ಟರೇನೋ ಕಾಣೆ
ನಮ್ಮವರೇ ನಿನ್ನ ಬೆನ್ನಿಗೆ
ಮೋಸದ ಬಂದೂಕನಿಟ್ಟು !

ಅದೇನೂ ಹೊಸದಲ್ಲ ಬಿಡು ಅವರಿಗೆ
ದೇಶ ಭಕ್ತಿಯ ಹೆಸರಲ್ಲಿ ಹರಿಸಿದ ನೆತ್ತರನು
ಲೆಕ್ಕವಿಟ್ಟು ಹಿಡಿದಿಟ್ಟವರಾರು ?
ನಿನ್ನಂತ ಮಗ್ಗುಲ ಮುಳ್ಳು
ತೊಲಗಿದರೇನೇ ಅಲ್ಲವೇ
ಬಣ್ಣದ ದೇಶ ಭಕ್ತಿ ಮುಖವಾಡಕ್ಕೆ ಒಂದು ಬೆಲೆ ?

ಸಮಾಜದ ಕೋರೆ ತಿದ್ದಲು ಹೊರಟ
ಗಂದೆಡೆಯ ಶೂರನೆ...
ನಿನ್ನ ಸಾವಿನ ಸುದ್ದಿ ಸುಳ್ಳಾಗಲಿ..
ನಂಜು ಹುಳುಗಳ ಎದೆಗೆ
ನಿನ್ನ ದೈರ್ಯವೆ ಮುಳ್ಳಾಗಲಿ.

- ಶ್ರೀಗೋ.

24 Mar 2017, 09:57 am

ಮುಗಿಲ ಪ್ರೇಮ

ಚಿಟ್ಟೆಯ ಬೆನ್ನೇರಿ
ಹೋಗುವ ಬಾ ಬಾಲೆ!!
ಹೂ ಮನದ ಪಿಸು ನುಡಿಯ
ಆಲಿಸುವ ನೀ ಬಾರೆ!!

ಚಿಟ್ಟೆಯ ಬೆನ್ನೇರಿ
ಹೋಗುವ ಬಾ ಬಾಲೆ!!
ಆ ಮುಗಿಲಿಗೆ ಸಾಗಿ
ಕಳೆಯುವ ನಮ್ಮ ನಾಳೆ!!

ಹೊಂಬಿಸಿಲಿನಲ್ಲಿ ಪ್ರೀತಿ
ಬೆಸುಗೆಯ ಬೆಸೆಯುವ!!
ಆ ಬಾನಿನೆಡೆಗೆ ಜಿಗಿದು
ತೆಲುತ ನಾವು ಸಾಗುವ!!

ಮೋಡಕೆ ಚುಂಬನವಿತ್ತು
ಮಳೆ ಹನಿಯ ಭೂಮಿಗೆ ಕರೆವ!!
ಮುಗಿಲಿಗೆ ಬಣ್ಣವ ಬಡಿದು
ಕಾಮನ ಬಿಲ್ಲನು ಬರೆವ!!

ತಾರೆಯ ಬಳಗಕೆ ಚಲಿಸಿ
ತಾವರೆಯ ಕನಸನು ನುಡಿವ!!
ಚಂದಿರನ ಲೋಕದಲ್ಲಿ
ಸುಂದರ ಇರುಳನು ಕಳೆವ!!

- ಪಿ.ಜಿ.ಜ್ಯೋತಿ

24 Mar 2017, 09:25 am

ಕುಣಿವ ಹೃದಯ

ಕುಣಿಯುವ ಹೃದಯವದು
ಕುಣಿದಿದೆ ನಿನ್ನ ಕಂಡು!!
ಮಿಡಿಯುವ ಸ್ವರದಲದು
ಕರೆದಿದೆ ನಿನ್ನನ್ನು ಇಂದು!!

ವಲಿಯುವ ಬಯಕೆಯಲಿ
ವಲಿದು ಬಾ ನನ್ನವಳೇ!!
ಸಂಭಾವನೆ ಇಲ್ಲದ
ದಾಸ ನಾ ನಿನ್ನವನೇ!!

ಮೊದಲನೋಟದಲ್ಲೇ ನೀನು
ಸೆಳೆದುಕೊಂಡೆ ನನ್ನನ್ನು!!
ಕಳೆದು ಹೋದ ನನ್ನನ್ನು ಈಗ
ಹುಡುಕಲಿ ನಾ ಎಲ್ಲಿ!!

ನಿಲ್ಲಲಾರೆ ಭೂಮಿಯ ಮೇಲೆ
ತೇಲಿ ನಡೆವೆ ಗಾಳಿಯ ಮೇಲೆ!!
ಇಲ್ಲ ಹಿಡಿತ ಮನಸಿನ ಮೇಲೆ
ಮರೆತೆ ಇಂದು ನನ್ನನ್ನು ನಾನೇ!!

- ಪಿ.ಜಿ.ಜ್ಯೋತಿ

24 Mar 2017, 09:09 am

ನೀ...ನನ್ನ...

ನಿನ್ನ ನೆನಪು ನನ್ನ
ಮೋಡಿ ಮಾಡಿ ಕರೆದದ್ದು ಚೆನ್ನ
ನಿನ್ನ ಮಾತು ನನ್ನ
ಮೌನಿ ಮಾಡಿ ಹೊರಟದ್ದು ಚೆನ್ನ
ನೀ ಬರದೇ ನನ್ನ
ಕಾಡಿದ ಪರಿ ಇನ್ನೂ ಚೆನ್ನ

ಆದರೇ................................

ಕಾರಣವಿಲ್ಲದೇ ನೀ ಏಕೆ
ತೊರೆದು ಹೋದೆ ನನ್ನ...........!!

- ಪಿ.ಜಿ.ಜ್ಯೋತಿ

24 Mar 2017, 08:52 am