Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸದ್ದು

ಕಣ್ಣ ರೆಪ್ಪೆಯ ಸದ್ದು ಹೃದಯ
ಬಡಿತಕ್ಕೆ ಸಮನಾಗಿದೆ.
ಭಯದಿ ಹೆದರಿದ ನನ್ನ ಹೃದಯ
ಕಣ್ಣಲ್ಲಿ ನೀರಾಗಿ ಹರಿದು ಹೋಗಿದೆ.

- ಚುಕ್ಕಿ

26 Mar 2017, 09:58 am

ನನ್ನವರಾರು

ಮುಖದ ಮೇಲೆ ಗುಣ ಕಾಣದು
ಬಟ್ಟೆಯ ಮೇಲೆ ಅಂದ ಕಾಣದು
ಬರಿ ಮಾತುಗಳ ಮೇಲೆ ಪ್ರೀತಿ ಕಾಣದು
ಮೈಮೇಲಿನ ಹಚ್ಚೆಯಿಂದ ನೆನಪು ಕಾಣದು
ಎಲ್ಲ ನಗುವಿನ ಹಿಂದಿನ ಅಳಲು ಕಾಣದು
ಪ್ರೀತಿ ಇಲ್ಲದ ಹೃದಯದಿಂದ ನಮ್ಮವರಾರೆಂದು ಕಾಣದು...

- Irayya Mathad

26 Mar 2017, 08:56 am

ಅರಿವು

ಬೆಲ್ಲದ ರುಚಿಯ ಬಲ್ಲದವರಾರು
ಪ್ರೀತಿಯ ಆಳವ ತಿಳಿಯದವರಾರು..
ಕಾಣದ ದಾರಿಯ ಹುಡುಕದವರಾರು
ಗುರು ಇರದ ವಿದ್ಯೆಯ ಕಲಿತವರಾರು..
ನಿದ್ದೆ ಮಂಪರಿನಲಿ ತೊದಲದವರಾರು
ಕನಸಿನ ಲೋಕದಲಿ ವಿಹರಿಸದವರಾರು..
ನಡೆವಾಗ ಎಡವಿ ಬೀಳದವರಾರು
ಅತ್ತಾಗ ಕಣ್ಣೀರು ಹರಿಸದವರಾರು..
ತಾಯಿಗಿಂತ ಮಿಗಿಲಾದವರಾರು..
ಅಂತರಂಗದೊಳು ದೇವರ ಕಾಣದವರಾರು..||

- ನಮಿತ ಗಟ್ಟಿ

25 Mar 2017, 10:59 pm

ಪ್ರೀತಿ ಎಂದರೆ(ಏನು)...

ಪ್ರೀತಿಯ ಅರ್ಥ ಗೊತ್ತಾ
ಅಂತ ಕೇಳಿದೆ ನೀನು
ಪ್ರೀತಿ ಅಂದರೆ ಏನು ಅಂತ
ಮೊದಲೇ ಗೊತ್ತಿದ್ದರೆ
ನಾನೇಕೆ
ನಿನ್ನನ್ನು ಪ್ರೀತಿಸುತ್ತಿದ್ದೆ.....
ಅನು..

- Anu...

25 Mar 2017, 09:31 pm

ಭಾವದ ಪರಿಯ ಹೇಗೆ ಹುಡುಕಲಿ..

ಕಾಣದ ದೇವರ ಹುಡುಕುತಲಿರುವೆ
ಭಾವದ ಪರಿಯ ಅರಿಯಲಾಗದೆ..
ಸುತ್ತ ಸುತ್ತಿರುವ ಸ್ವಾರ್ಥದ ಬೇಲಿಗೆ
ನಾನೇ ಹಾಕಿರುವೆ ದಾರದ ಹೊಲಿಗೆ..
ಪಂಜರದೊಳಗೆ ಗೋಗರೆಯುವ ಮನಸಿಗೆ
ಹೃದಯದ ಮಾತು ಅರ್ಥವಾಗದು..
ಇಂದಿನ ಬದುಕು ತಿಳಿಯಲಾಗದೆ
ನಾಳಿನ ದಿನವ ಕಾಯುತ್ತಲಿರುವೆ.

- ನಮಿತ ಗಟ್ಟಿ

25 Mar 2017, 07:50 pm

ಬೆಳಕಾಗಿರಲಿ::::::::#

ಒಂದು "ನೆನಪು" ನೋವಾಗಿ ಕಾಡೋ ಮುಂಚೆ,
ಒಂದು "ಕನಸು" ನಗುವಾಗಿ ಬರಲಿ.
ಒಂದು "ಪ್ರೀತಿ" ಕಣ್ಣೀರಲ್ಲಿ ಕರಗುವ ಬದಲು,
ಒಂದು "ಸ್ನೇಹ" ಕಣ್ಣಿಗೆ ಬೆಳಕಾಗಿ ಬರಲಿ.
*RS*

- *RS*

25 Mar 2017, 03:12 pm

ಕನಸಿನ ರಾಜಕುಮಾರ

ಹೃದಯದ ಬಾಗಿಲಿಗೆ ತೋರಣವೆ ನೀನು
ಕನಸಿನ ಲೋಕಕೆ ಮಾಹಾರಾಜನೆ ನೀನು
ಮತ್ತೆ ಮತ್ತೆ ಹಾಡುವೆ ನಿನ್ನ ಜೊತೆಗೂಡಿ...ಪ

ಯಾವುದೋ ಲೋಕವೂ ಯಾವುದೋ ಶಾಕವೂ
ನನ್ನಯ ಮನಸಿಗೆ ಬಿಸಿಗಾಳಿ ತಾಕಿದೆ
ನಿನ್ನೊಲಗೂಡುವ ಇರಾದೆ ಮೂಡಿದೆ

ಹೂವಿನ ಹಾಗೆ ನಾ ನಾಚುತಲಿರುವಾಗ
ದುಂಬಿಯಾಗಿ ನೀ ಬರಲು ಮೈಮನ ಮರೆತೆ ನಾ
ಮರೆತು ಬೆರೆತೆ ನಾ ನಿನ್ನಲ್ಲಿ ಜೇನಾಗಿ

ನಿನ್ನ ಪ್ರೀತಿಗೆ ಸರಿಸಾಟಿ ಇಲ್ಲ ಏನೂ
ಬೇರೆನು ಬೇಡೆನು ಆ ದೇವ ನಾನಿನ್ನೂ
ಬಳಿಯಲಿ ನೀನಿರಲು ಬದುಕೆ ಬಂಗಾರವೂ

ನನ್ನ ಈ ಜಗದಲಿ ತುಂಬಿರುವೆ ನೀನು
ಒಂಟಿಯಾಗಿರಲು ನಾ ಬಯಸೆನು ಇನ್ನೆಂದು
ಕಣ್ಣಲ್ಲಿ ಕಣ್ಣಾಗಿ ನೀನೆ ತುಂಬಿರಲು...

- Irayya Mathad

25 Mar 2017, 01:47 pm

ಹುಡುಕಬೇಡ ಪ್ರಾಸವ......

ಹುಡುಕಬೇಡ ಪ್ರಾಸವ
ನಾ ಬರೆದಿರುವ ಚಿಂದಿಯಲ್ಲಿ
ಬರೆಯಲು ಕವಿತೆಯ
ನಾನೇನು ಕವಿಯಲ್ಲ.

ತಲೆಗೆ ಬಂದ ಪದಗಳ
ಜೊತೆಗೊಂದು ಹಾವು ಏಣಿಯಾಟ,
ಮನಬಂದಂತೆ ಗೀಚಿದೆ,
ಆಳವಾದ ಮಾತುಗಳ ಬಣ್ಣಿಸುತ.

ಸ್ವಲ್ಪ ನೈಜ್ಯತೆಯೂ,
ಕೆಲವೊಮ್ಮೆ ಚಪಾಳೆ ಗುಂಗ್ಗಲಿ
ಮಸಾಲವು... ಬೆರಸಿ ಮಾಡಿದ
ಪೋಲಿಯೋಗರೆ ಈ ನನ್ನ
ಚಿಂದಿ ಬರಹವು.

ಸಂಧಿ ಸಮಾಸಗಳ ಅರಿವಿಲ್ಲ ,
ಲಘು ಗುರುವಿನ ಮಾರ್ಗದರ್ಶನವಿಲ್ಲ,
ಕವನದ ಗಂಧ ಗಾಳಿಯೂ ಗೋತಿಲ್ಲ.
ಆದರೂ ಹಿಂಗುತಿಲ್ಲ ಈ
ಮೊಂಡು ಬರೆಯುವ ಹುಚ್ಚು.

- MK Reddy

25 Mar 2017, 03:28 am

ಸ್ನೇಹ

ಕಣ್ಣೀರಿನಿಂದ ಬರೆಯಲಾಗುತ್ತಿಲ್ಲ
ನಿನ್ನ ಹೆಸರ ,,,,,,,,,,,,,,,,,,,,,,,✍
ನಿನ್ನನ್ನು ಮರೆಯಲಾಗುತ್ತಿಲ್ಲ,,,,,,,,,,,,,

ಇಷ್ಟೆಲ್ಲ ನೆನಪುಗಳು ನೀ
ನನ್ನಲ್ಲಿ ಬಿಟ್ಟುಹೋದ ಮೇಲೆ
ನಾ ಹೇಗೆ ನಿನ್ನ ಮರೆಯಲಿ,,,,,,,,,,,,,,,

ಮಾತು ನನ್ನ ಮನದಲ್ಲೇ ಉಳಿದರೂ
ಕಣ್ಣೀರು ಮಾತ್ರ ಕಣ್ಮರೆಯಾಗುತ್ತಿಲ್ಲ
ನಿನ್ನ ನೋಡುವ ಆಸೆಯಿಂದ,,,,,,,,,,,,,,,

ನಿನಗಾಗಿ ಕಾಯುವೇನೋ,,,,,,,,,,,,,,,,,,
ನನ್ನನ್ನೇ ನಾ ಮರೆಯುವೇನೋ
ತಿಳಿಯುತ್ತಿಲ್ಲ,,,,,,,,,,,,,,,,,,

ನನ್ನ ನೋವೆಲ್ಲಾ ಸೇರಿಸಿ ಮಾಡಿದರೆ
ಒಂದು ಪ್ರಪಂಚ ಅದರಲ್ಲಿ ನಿನ್ನ ಹೊರೆತು
ಬೇರೆ ಯಾರು ಇರಲಾರರು ,,,,,,,,,,,,,,,,,,,,,,,,,

ಏಕೆಂದರೆ ಅದು ನಿನ್ನ ಸ್ನೇಹಕ್ಕೆ
ಮುಡುಪಿಟ್ಟ ನನ್ನ ಮನಸಿನ ಪ್ರಪಂಚ,,,,,,,,,,,,,,

- ಚುಕ್ಕಿ

24 Mar 2017, 11:43 pm

ನೀನು...

ನಿನ್ನ ಧ್ವನಿಯ ಕೇಳಿದಮೇಲೆ
ಸವಿಗಾನದ ಕೋಗಿಲೆ ಎಕೆ ?
ನೀ ನಗುವ ಅಂದ ನೋಡಿದಮೇಲೆ
ಆ ಚಂದ್ರನ ಬೆಳದಿಂಗಳೇಕೆ ?
ಜೋತೆಗೆ ನೀನೇ ನಡೆಯುವಾಗ
ಆ ಹಂಸದ ನೆನಪು ಯಾರಿಗೆ ?
ಕಣ್ಣು ತೆರೆದ ಕ್ಷಣವೇ
ನೀನೇ ಇರಲು ಬದುಕಿನಲ್ಲಿ
ನೋವು ಎಲ್ಲಿದೆ ?

- Anu...

24 Mar 2017, 09:32 pm