Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನಯ ಬಾಳಲಿ ಬಂದೆ,
ಬಾಳಲಿ ಹೊಸ ನಗುವನು ತಂದೆ,
ಬಾಳಲಿ ಬಂದ ಆ ದಿನದಿಂದ ನನ್ನಲ್ಲಿದ್ದ ನಿರಾಸೆಯ ಕೊಂದೆ,
ಆದರೂ ತಿಳಿಯಲಿಲ್ಲ ನನ್ನ ಕನಸಲಿ ಬರುವ ನೀನ್ಯಾರೆಂದೆ.
- Ashoka
28 Mar 2017, 09:35 pm
ಅವ್ವ ಮಲಗಿದ್ದಳು
ಕುಡಿದೀಪದೆದುರು
ಬದುಕ ಬೆಳಕಾಗಿ ಸೂಸಿ
ಉರಿಉಂಡು ನೊಂದು...
ನೀರವ ಮೌನದ
ನಡುವೆ ಬೆಚ್ಚಿಸಿದ
ಮಿಂಚು ಗುಡುಗು
ಅವ್ವನ ಎಬ್ಬಿಸದಾದವು
ಕುಯ್ಗುಡ್ಲು ಹಿಡಿದು
ಹೊಲದಲ್ಲಿ ಕಳೆಕಿತ್ತು
ನೆತ್ತಿ ಸುಡುವ ಬಿಸಿಲಲ್ಲಿ
ಹಣೆ ತುಂಬ
ಹನಿಮುತ್ತ ಹೊತ್ತು
ಅವ್ವ ದಣಿದಿದ್ದಳು ಆಗ...
ಹನಿಮುತ್ತ ಚೆಲ್ಲೈತೆ
ಹೊಲವೆಲ್ಲಾ ರಾಶಿರಾಶಿ
ತೆನೆಹೊತ್ತು ನಿಂತೈತೆ
ತಲೆಬಾಗಿ;
ಅವ್ವ ಮಲಗಿದ್ದಾಳೆ
ಅಲ್ಲೀಗ...
ಹೊಲ ಕುಯ್ದು
ಹೊಲ ಕಟ್ಟಿ
ಉಸಿರ ಬಿಗಿಹಿಡಿದು
ಹೊರೆ ಹೊತ್ತಿದ್ದಳು
ಅವ್ವ ಪ್ರತಿಸಾರಿ...
ಈಗ ಹೀಗಿಲ್ಲ
ಈಗಷ್ಟೆ ಮಲಗವಳೇ
ಹೊತ್ತು ಮುಳುಗುವ ಮುನ್ನ
ಬೆಚ್ಚಗೆ ಈ ಮಣ್ಣಿನ ಒಡಲಲ್ಲಿ...
- ram purshi
28 Mar 2017, 12:05 pm
ಬದಲಾದದ್ದು
ಜಗತ್ತಲ್ಲ;
ನಾನು ನೀನು...
ಚಿವುಟಿದಷ್ಟು
ಗರ್ಭದ ಕಾವಿನಿಂದ
ಹಡೆಯುವ ಆಸೆಗಳು...
ಮೈಗೆ ಮೈ ಅಂಟಿ
ಉಸಿರುಗಟ್ಟುತ್ತಾ
ತೆರೆದುಕೊಳ್ಳುವ ಬಯಕೆಗಳು...
ಬದಲಾದದ್ದು;
ಎದೆಬಿರಿದು ನೊಂದ
ನಿನ್ನ ಕಣ್ಣಿನಲ್ಲಿ ಹರಿದ
ರಕ್ತಸಿಕ್ತ ಹನಿಗಳು..
ಈಗ...
ಬಚ್ಚಿಟ್ಟ ನೋವು, ನಗು
ತುಂಬಿ ಹೇಸಿಗೆ ಹುಟ್ಟಿಸುತ್ತಿವೆ...
ಯಾಕೆ? ಏನು? ಹೇಗೆ?
ಎಂಬ ಪ್ರಶ್ನೆಗಳು ಪ್ರಶ್ನೆಗಳಾಗೇ
ಊಳಿಡುತ್ತಾ...
ಮತ್ತೆ ನಗಬೇಡ
ಗುಳಿಬಿದ್ದ ಕೆನ್ನೆಯ
ಮೇಲೆ ರಕ್ತ ಕಲೆಗಳಂಟಿವೆ!
ಮುಡಿಯೇರಿದ ಹೂ
ನರಳಿ ಘಮಲು ಕಳೆದು ಹೊಸಕಿವೆ!
ಗೂಡು ಕಟ್ಟಿದ ನಿನ್ನೆದೆಯಲಿ
ಮಾಗದ ಗಾಯಗಳೇ ಹೆಚ್ಚು
ಬರೀ ಎದೆಗಪ್ಪಿ ನಟಿಸಬೇಡ
ಒಂದಷ್ಟು ತಾ
ನೋವು, ಯಾತನೆ
ಕರಗಲಿ ನಿನ್ನ ದುಗುಡ
ಕತ್ತಲೊಳಗೆ ಬೆತ್ತಲಾಗುತ್ತಾ
ದಿಗಿಲುತನಗಳನ್ನು ಕೊಡವಿ
ಮನುಷ್ಯರಾಗುವ
ನಾನು ನೀನು..
ಮಳೆ ಹನಿ ತೊಯ್ದ ಕನಸುಗಳಲಿ
ಜೀವಂತ ಉಸಿರಾಟದಲಿ
ನೊಂದ ನೆನಪುಗಳಿಗೆ ಮುಲಾಮು ಹಚ್ಚುತ್ತಾ....
- ram purshi
28 Mar 2017, 12:01 pm
ನಿನ್ನ ನಗುವಿನಲಿ
ಇಲ್ಲದ ನಾನು
ಕಣ್ಣಂಚಿನಲಿ
ಕರಗುವ
ನಿರಾಸೆಯ
ಹನಿಗಳಲಿ
ಜಿನುಗುತಿರುವೆ....
-ಪುರು
- ram purshi
28 Mar 2017, 11:38 am
ಗೆಳತೀ.. ಮರೆಯಾದೆ ನೀನು..
ಮರಳಿ ಬರಬಾರದೇ…?
ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು
ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು
ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ
ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ.
-
28 Mar 2017, 09:01 am
ನನ್ನ ಕಣ್ಣುಗಳು ಕೈಗೊಂಡಿದೆ ಬೇಹುಗಾರಿಕೆಯನ್ನು
ಆದರೆ ಅದು ಹುಡುಕುತ್ತಿರುವುದಾದರು ಏನನ್ನು
ನಿನ್ನ ಕಂಡು ಕಾಣದೇ ಕಣ್ಮರೆಯಾದ ಕಣ್ಣುಗಳನ್ನ?
ಅಥವಾ ನಕ್ಕು ನೆನೆಗುದಿಗೆ ಬಿದ್ದ ನಿನ್ನ ತುಟಿಗಳನ್ನ?
ಅಥವಾ ಮುತ್ತುದುರಿಸಿ ಮರೀಚಿಕೆಯಾದ ನಿನ್ನ ಮಾತುಗಳನ್ನ?
ತಿಳಿಯುತ್ತಿಲ್ಲ ಗೆಳತಿ ಇದಾವುದೂ ನನಗೆ
ಆದರೆ ತಟ್ಟುತ್ತಿರುವುದಂತೂ ನಿಜ ನಿನ್ನ ಕಾಣದ ವಿರಹದ ಬೇಗೆ
ತಿಳಿದಿಲ್ಲ ಎಂದು ಒಂದು ಮಾಡುವುದೋ ನಮ್ಮಿಬ್ಬರನ್ನು ಪ್ರೀತಿ ಬೆಸುಗೆ......
- ಅಕವಿ
27 Mar 2017, 08:00 pm
ನೀ ನಾನಾಗಲು
ನಾ ನೀನಾಗಲು
ಪ್ರೀತಿ ಕಾರಣ
ನೀ ನನ್ನ ಕನಸಾಗಲು
ಆ ಕನಸು ನನಸಾಗಲು
ಪ್ರೀತಿ ಕಾರಣ
ಮನಸು ಮೃದುವಾಗಲು
ಮೃದುವಾಗಿ ಮರೆಯಾಗಲು
ಪ್ರೀತಿ ಕಾರಣ
ಹೃದಯ ಹಗುರಾಗಲು
ಹಗುರಾಗಿ ಹಕ್ಕಿಯಂತೆ ಹಾರಲು
ಪ್ರೀತಿ ಕಾರಣ
ನಿನ್ನೆಸರು ನನ್ನುಸಿರಾಗಲು
ನನ್ನುಸಿರು ನೀನಾಗಲು
ಪ್ರೀತಿ ಕಾರಣ
ನೀ ನನ್ನ ಬಡಿತವಾಗಲು
ಆ ಬಡಿತ ಹೃದಯದ ಧನಿಯಾಗಲು
ಪ್ರೀತಿ ಕಾರಣ
ನೀ ನನ್ನ ಮಿಡಿತವಾಗಲು
ಆ ಮಿಡಿತ ಪ್ರತೀ ನಾಡಿಯಲ್ಲು ಸೆರೆಯಾಗಲು
ಪ್ರೀತಿ ಕಾರಣ
ಆ ಪ್ರೀತಿಗೆ ನೀ ತಾನೇ ಕಾರಣ!!!!!!!!!!
- ಅಕವಿ
27 Mar 2017, 07:43 pm
ನಿನ್ನ ಪ್ರೀತಿಸಿದ ಮೇಲೆ
ನಾನಾಗಿದ್ದೇನೆ ಸ್ವಾರ್ಥಿ!!
ನನ್ನ ನೋಡೋ ಕಣ್ಣುಗಳು
ನಿನ್ನದೇ ಆಗಿರಬೇಕು
ನನ್ನ ಸ್ಪರ್ಶಿಸೋ ಕೈಗಳು
ನಿನ್ನದೇ ಆಗಿರಬೇಕು
ನನ್ನ ಕಂಡಾಗ ಮೂಡುವ ನಗು
ನಿನ್ನದೇ ಆಗಿರಬೇಕು
ನಾ ಕೇಳಿದ ಪ್ರತೀ ಧ್ವನಿ
ನಿನ್ನದೇ ಆಗಿರಬೇಕು
ನಾ ಕಾಣುವ ಪ್ರತೀ ಕನಸು
ನಿನ್ನದೇ ಆಗಿರಬೇಕು
ನನ್ನ ಹೃದಯದ ಪ್ರತೀ ಕಣ
ನಿನ್ನದೇ ಆಗಿರಬೇಕು
ನನ್ನ ಜೀವನದ ಪ್ರತೀ ಕ್ಷಣ
ನಿನ್ನದೇ ಆಗಿರಬೇಕು
ನನ್ನ ಪ್ರೀತಿಸುವ ಏಕೈಕ ಹೃದಯ
ನಿನ್ನದೇ ಆಗಿರಬೇಕು...........
ನಂತರ ನನಗೊಂದು ತಿಳಿಯಿತು
ಸ್ವಾರ್ಥಿ ನಾನಲ್ಲ ಪ್ರೀತಿ!!!!!!
- ಅಕವಿ
27 Mar 2017, 07:36 pm
ನಾನೊಬ್ಬ ಗಾಯಕನೂ ಹೌದು
ಅದಕ್ಕೆ ಸಂಗಿತವನ್ನು ಬಲ್ಲವರು
ಯಾರಯ್ಯ......
ನಾನೊಬ್ಬ ಕವಿಯೂ ಹೌದು
ಅದಕ್ಕೆ ನನ್ನನ್ನು ಕವಿತೆಯಿಂದ ವರಣಿಸುವವರು
ಯಾರಯ್ಯ.......
ನಾನೊಬ್ಬ ಬಡವನೂ ಹೌದು
ಅದಕ್ಕೆ ಸಿರಿತನದ ದಾರಿ ಬೆಳಗಿಸುವರು
ಯಾರಯ್ಯ.....
ಜೀವನ ಒಂದು ಬೆಸರದ ಅಲೆಮಾರಿ ಆಗಿದೆ
ಅದಕ್ಕೆ ನೆಲೆ ಕೊಡುವವರು
ಯಾರಯ್ಯ........
ಎಲ್ಲರೂ ಇದ್ದು ನಾನೊಬ್ಬ ಅನಾಥನೂ ಹೌದು
ಅದಕ್ಕೆ ಆರು-ಮೂರು ಅಡಿ ಜಾಗ ಕೊಡುವವರು
ಯಾರಯ್ಯ.....
ಯಾರಯ್ಯ.....
ಯಾರಯ್ಯ....
-
27 Mar 2017, 07:06 pm
ಕಾದಳು ಶಬರಿಯಂತೆ, ರಾಮ ಬರುವವರೆಗೆ
ಕಾದು ಸತಿಯಂತಾದಳು ಶಿವನ ಸೇರುವವರೆಗೆ
ಕಾದಳು ಮೀರೆಯಾಗಿ ಶ್ಯಾಮನೊಲಿಯುವವರೆಗೆ
ಕಾಯುತ್ತಲೇ ಕರಗಿದಳು ಮೇಣದಂತೆ
ಅವನೋ ಮೇಣದಿಂದ ಆಕೃತಿಯ ಮಾಡುವಾತ
ಮತ್ತೇ ಮೇಣಕ್ಕೆ ಆಕೆಯ ರೂಪವ ಕೊಟ್ಟು, ಜೀವತುಂಬಿ
ಸದಾ ಉರಿಯುವ ಪ್ರೀತಿಯ ದೀಪವಾಗಿಬಿಟ್ಟ
- poorni
27 Mar 2017, 03:14 pm