Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಾಗದದ ಚೂರಿನಂತೆ ಅಲೆದಾಡಿದೆ ಮನ
ಅತ್ತಲಿಂದತ್ತ,
ಏನು ಮಾಡದ ವಿರಹಿಯಾಗಿದೆ,
ನಲುಗಾಡುತಿದೆ ನೆನಪುಗಳ ಸುತ್ತ.....
- ಅರಿಂಜಯ ರು ಕಟ್ಟಿಮನಿ
31 Mar 2017, 08:46 am
ನಗುವೊಂದು ಮುಖವಾಡ ಅಳುವೊಂದು ಮುಖವಾಡ,
ಬದುಕಿತ್ತಿರುವೆವು ನೀಚ ಮನದ ಸಂಗಡ.......
ಇಲ್ಲಿ ಎಲ್ಲರೂ ಸರಿ ತಮ್ಮ ದೃಷ್ಟಿಯಲ್ಲಿ ,
ನಟಿಸಬಲ್ಲರು ಅಂತರಾತ್ಮವ ದೂರತಳ್ಳಿ.....
ಯಾರ ಮೇಲೂ ಇಲ್ಲ ನಂಬಿಕೆ,
ಹೆಯ್ಯ ಮಾಡಲು ಇಲ್ಲದ ನಾಚಿಕೆ....
ಬದುಕುವರು ಸತ್ತ ಹೆಣೆಗಳಂತೆ ,
ಜ್ಯೋತಿ ಆರಿದ ಹಣತೆಯಂತೆ....
ಕೇಳಿದರೆ ಹೇಳುವರು ನೂರೆಂಟು ಮಾತು,
ನೀತಿ ಹುದುಗಿ ಕೊಂಡಿದೆ ನೆಲದಲ್ಲಿ ಹೂತು.....
ಸಂಬಂಧ ಆಗಿವೆ ಒಳಿತು ಕೆಡುಕಿನ ಲೆಕ್ಕಚಾರ,,
ಇದೋ ನೋಡಿ ಮಾನವ ಕುಲದ ಸ್ವ ಅತ್ಯಾಚಾರ......
- ಅರಿಂಜಯ ರು ಕಟ್ಟಿಮನಿ
31 Mar 2017, 08:36 am
ಪ್ರತಿ ಆಸೆಗೂ ವರ ಸಿಗೋಲ್ಲ ಪ್ರತಿ ಮಾತು ನಾಲಿಗೆ ಹೇಳೊಲ್ಲ.
ಈ ಜಗತಿನಲ್ಲಿ ಬದುಕಬೇಕಾದರೆ ಮುಖದಲ್ಲಿ ನಗು ಇರಬೇಕು
ಯಾಕೆ ಅಂದರೆ?
ಕಣ್ಣೀರಿಗೆ ಕಣ್ಣಲ್ಲೇ ಜಾಗ ಸಿಗೋಲ್ಲ...
✍
- adilsha
31 Mar 2017, 07:26 am
ನಾನು ಕರುಡ
ನೀನು ಕುರುಡಿ
ಬದುಕು ಬೆಳಕ
ಕಂಡಿತು
- ram purshi
31 Mar 2017, 02:03 am
ಹರಸುವ ಹಿರಿಯರು........
ಹಾರೈಸುವ ಗೆಳೆಯರು...........
ಪ್ರೀತಿಸುವ ಆತ್ಮೀಯರು ಇದ್ದರೆ ಸಾಕು........
ಅರಸನಾಗೊ ಅಗತ್ಯನೆ ಇಲ್ಲ.....
ಅನು...
- Anu...
30 Mar 2017, 10:19 pm
ನಾವು ನಾವಾಗಲೇ ಇಲ್ಲ
ಜೀವಜಗದ ಪರಿಧಿಯೊಳಗೆ
ಸರಕು ಸಂಸ್ಕೃತಿಗೆ ಒಡ್ಡಿಕೊಂಡು
ಕಂಡಕಂಡಲ್ಲೆಲ್ಲ ಬೊಗಸೆಯೊಡ್ಡಿ ನಿಂತಿದ್ದೇವೆ
ಬೈ ಒನ್ ಗೆಟ್ ಒನ್್ ಆಗಿದ್ದೇವೆ...
ನಮ್ಮವು ಒರಟಾದ ಕೈಗಳು
ಹಾಗೆ ಉಳಿದಿವೆ ಸುಕ್ಕುಗಟ್ಟಿದ ಚರ್ಮ
ಅವು ದಬ್ಬಾಳಿಕೆಗೆ ಅಂಜಿ
ಬೂಟು ನೆಕ್ಕಿವೆ;
ಒಳಗಿನ ಬೇಗುದಿಯನ್ನೂ ಸಹಿಸಿ
ನಕ್ಕು ಸುಮ್ಮನಾಗಿವೆ
ಸುಟ್ಟೇಬಿಟ್ಟರು ನಮ್ಮತನವ
ಥೇಟು ಪರಂಗಿಗಳಂತೆ!
ನಮ್ಮಲ್ಲಿಯೇ ಇರುವರು
ಬೆನ್ನ ಹಿಂದೆಯೇ ನಿಂತು
ಈಗ ಮುಂದಿದ್ದಾರೆ ಅವರು
ನಮ್ಮದೇ ನೆಲ
ನಮ್ಮದೇ ಗಾಳಿ
ನಮ್ಮದೇ ಅನ್ನ
ನಮ್ಮದೇ ಉಸಿರು
ಕಸಿದುಕೊಂಡು
ಕೊಳ್ಳುವವರ ಸಾಲಿನಲ್ಲಿ
ನಾವಿದ್ದೇವೆ
ನಮ್ಮತನವ ಮಾರಿಕೊಂಡು...
ಈಗಿಲ್ಲಿ ನಿತ್ಯಸಂತೆ
ಹರಾಜಿಗಿಟ್ಟ ಪಶುಗಳು ನಾವು
- ram purshi
30 Mar 2017, 08:55 pm
ಅಂದು ಪ್ರೀತಿ
ತೂಗುತ್ತಿದ್ದ ಗೂಡಲ್ಲಿ
ತೆರೆದುಕೊಂಡ
ನೂರಾರು ಹಕ್ಕಿಗಳು
ಮುಗಿಲು ಚುಂಬಿಸುವ
ತವಕದಲ್ಲಿದ್ದವು
ಚುಂಬಿಸಿ, ಸಂಭ್ರಮಿಸಿದವು
ತನ್ಮಯತೆಯಿಂದ
ಇಂದು ಪ್ರೀತಿ
ಮುಚ್ಚಿಟ್ಟಿದ್ದ ಗೂಡಲ್ಲಿ
ತೆರೆದುಕೊಂಡ
ಹಳೆ ಸಾಮಾನುಗಳು
ಗುಜರಿ ಅಂಗಡಿಯ
ತೂಗುಗತ್ತಿಯಲ್ಲಿ ನೇತಾಡುತ್ತಿವೆ
ತುಕ್ಕಿಡಿದ ಸಾಮಾನುಗಳು
ಮಾರಲ್ಪಟ್ಟು ಮಗದೊಂದು
ಸಾಮಾನು ಮನೆಯ ಅಟ್ಟದಲ್ಲಡಗಿದೆ
- ram purshi
30 Mar 2017, 08:54 pm
ಈ ಮುಂಜಾವು ಮಲ್ಲೆ ಹೊನ್ನೆ
ವಿವಿದ ಹೂವ ಹಾಸಿ ಪ್ರೀತಿ ಹಾಡ
ಹಾಡುತಿದೆ
ಆ , ಚೈತ್ರ ನನಗೆ ಬಯಕೆ ಮೂಡಿಸಿ
ನನ, ಮನಸಿಗೆ ತರುಣಿ ಕನಸಿಗೆ
ಕೆರಳಿಸಿದ ಪಲ್ಲವನ ಪುಳಕಕೆ
ಕವಿ ಗೀತಕಾರನಾದ
- kasturi pattar
30 Mar 2017, 01:29 pm
ಹೇ ಪ್ರಿಯ ಹೃದಯವೇ ..!!
ಚಂದಿರನಿಗೊಂದು ಸವಾಲನ್ನ
ಹಾಕಿ...ನಿನಗಿಂತ ಚೆಂದ ನನ್ನ ಹೃದಯ
ದೇವತೆಯೆಂದೆ...?
ಅದೊಂದು ದಿನ ತುಂಬು ಹೊಳಪಿಂದ
ಬಾನಂಗಳಕೆ ಬಂದ..!
ಕೇಳಿದರೇ...ಹುಣ್ಣಿಮೆಯೆಂದ...!!
ಒಂದು ಕ್ಷಣ..ನನ್ನವಳ ಸೌಂದರ್ಯ
ನೋಡಿ...ಮೋಡದ ಮರೆಯಲ್ಲೆಲ್ಲೋ
ಬಚ್ಚಿಟ್ಟುಕೊಂಡ..?
ಕೇಳಿದರೇ...ಮಳೆಗಾಲವೆಂದ...!!
ನಾ..ಅಂದು ಕೊಂಡೆ...?
ಬಹುಶಃ ಎಲ್ಲೋ ಹೊಟ್ಟೆ
ಕಿಚ್ಚಿರಬೇಕೇನೋ ಅಂತ...!!
- basavarajsirnayakpreethu
30 Mar 2017, 08:37 am
ವರುಷವೆಲ್ಲ ಹರುಷವಿಲ್ಲ
ನೂರು ನೋವು ಸಂಕಟ
ದಿನವು ದಿನವು ದಣಿದು ಮನದಿ
ಮನಕೆ ಸಿಗದು ಹರುಷ
ಬಂಧು ಬಳಗ ದೂರವಾದ್ರು
ಕೂಡಿ ಮಾಡೊ ಯುಗಾದಿ ಹಬ್ಬ
ಹೊಸತು ಚಿಗುರಿ ಹಸಿರು ಉಸಿರು
ಅರಳಿ ನಗುವ ವಸಂತವು
ಹಬ್ಬ ತಂದ ಸಡಗರ
ಹೊಸಿಲು ಹಸಿರು ರುಚಿಸೊ ಸಿಹಿ ಹೂರಣ
ಬಣ್ಣ ಬಣ್ಣ ಉಡುಗೆ ತೊಟ್ಟ
ವಿವಿಧ ಆಟ ಸಂಭ್ರಮ
ಮುಗಿಲ ಮರೆಯ ಚಂದ್ರ ಹುಡುಕಿ
ಹಿರಿಯರ ಪಾದ ಪೂಜೆ ಗೌರವ
ಸಾಗಿ ಬಂದ ನಮ್ಮ ಹಬ್ಬ ಯುಗಾದಿ
ಹೊಸ ವರುಷವು ನಮಗೆ ಇಂದು
ಹರುಷ ಕೊಡುವ ಯುಗಾದಿ ಹಬ್ಬ
- gtr
29 Mar 2017, 08:54 pm