ಬಾಳಿನ ಆಶಾ ಕಿರಣ ಇವಳು,
ಸೌಂದರ್ಯದ ಮಹಾರಾಣಿ,
ಜೀವನೋಲ್ಲಸದ ಪ್ರತಿಭೆ ,
ಬದುಕಿನ ನಂದಾದೀಪ ಈಕೆ ...
ವಿದ್ಯೆಯ ಒಡತಿ.. ಭಾಳಿನ ಗೆಳತಿ,
ಮಾತಿನ ಮಲ್ಲಿ..ಹೃದಯಗಳ ಕಳ್ಳಿ,
ಭಾವನೆಗಳ ಮಹಾಪೂರ ಇವಳು,
ಪ್ರತಿ ನೋವಿಗೆ ಸ್ಪಂದಿಸುವಾಕೆ...
ಕುಡಿ ನೋಟದಲ್ಲಿಯೇ ಹಲವು ಮನಸ್ಸುಗಳ ಗೆಲ್ಲುವಕೆ,
ಪುಟ್ಟ ನಗುವಿನಿಂದಲೇ ಮರಳುಗೊಳಿಸುವಾಕಿ,
ತನ್ನ ತನವನ್ನು ಬಿಟ್ಟು ಕೊಡದ ಸ್ವಾರ್ಥಿ,
ತನ್ನವರಿಗಾಗಿ ಮಿಡಿಯುವ ಹೃದಯವಂತೆ....
ಸಣ್ಣ ಪುಟ್ಟ ವಿಷಯಗಳಲ್ಲಿ ಖುಷಿಪಡುವಕೆ,
ನೋವನ್ನು ತನ್ನಲ್ಲಿಯೇ ಬಚ್ಚಿಡುವ ಸಾಧಕಿ,
ಸ್ಪೂರ್ತಿಯ ಮಹಾನ್ ಕಲಾವಿದೆ,
ಸದಾ ಚಟುವಟಿಕೆಯಿಂದ ಇರುವ ಉತ್ಸಹದ ಚಿಲುಮೆ...
ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಮನದನ್ನೆಯಾಗಿ,
ಜೀವನ ಸಾಗಿಸುವ ಸಹನಾಮೂರ್ತಿ,
ಪ್ರತಿಯೊಂದು ಕ್ಷಣವೂ, ಪ್ರತಿ ದಿನವೂ ವಿಶೇಷ ಇವಳು,
ಸುಖದಲ್ಲಿಯೂ, ದುಃಖದಲ್ಲಿಯೂ ಕೈ ಹಿಡಿದು ಮುನ್ನಡೆಸುವಲಿವಳು.....
ಆಂದದರಸಿಯ ಹೊತ್ತು ಮರೆಸುವ ಆಭರಣ ನೀನು,
ಪಾದಗಳ ಸ್ವರ್ಶಿಸಿ ನಲಿವಂತೆ ಮಾಡುವ ಶೃಂಗಾರ ನೀನು,
ನೀನಿಡುವ ಪ್ರತಿಯೊಂದು ಹೆಜ್ಜೆಯ ಘಲ್ ಘಲ್ ನಿನಾದಕೆ,
ನಲಿದಾಡಿ ನರ್ತಿಸುವ ಆ ಸಿಂಗಾರ ನೀನು....
ನೀ ಹೊರಳಾಡುವಾಗಲು ಕಾಲ್ಗೆಜ್ಜೆಯ ನಾದ,
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುವಾಗ ಮನಸ್ಸಿಗೆ ಒಂಥರಾ ಆಹ್ಲಾದ,
ನಿನ್ನ ಪುಟ್ಟ ಪಾದಗಳ ಸ್ವರ್ಶವೇ ಜೀವನೋಲ್ಲಸ ,
ಮನದೊಳಗಿನ ಭಾವನೆಗಳ ಮೆರುಗು ಆ ನಿನ್ನ ಅಂದ...
ಕವಿಗಳ ಕವಿತೆಗೆ ಭೂಮಿಕೆಯು ನೀನು,
ಹುಡುಗರೆದೆಯ ದನಿ ನೀನು,
ಹೆಣ್ಣು ಮಕ್ಕಳ ಪಾಲಿನ ಒಲವಿನ ರಾಯಭಾರಿ ನೀನು,
ಮನಸೂರೆಗೊಳ್ಳುವ ಆ ಬೆಳ್ಳಿ ಕಾಲ್ಗೆಜ್ಜೆಯೇ ನೀನು..,.!
ಶುರುವಾದ ಸ್ನೇಹವು
ಪ್ರೀತಿಯ ರೂಪ ತಾಳಿ
ಬೃಹದಾಕಾರವಾಗಿ ಬೆಳೆದು ನಿಂತಿರುವಾಗ..
ನಿನ್ನ ನೆನಪುಗಳನು, ನನ್ನ ಕನಸಾಗಿಸಿ
ಮೌನವಾಗಿ ಪ್ರೇಮಿಯಾಗಿರುವೆ ನಾನು..
ಹೇಳಲು ಹಿಂಜರಿಕೆ..
ಹೇಳದೆ ಚಡಪಡಿಕೆ..
ಹಾಗಿದ್ದು
ನಾ ನಿನ್ನ ಪ್ರೀತಿಸುವೆ
ನೀ ನನ್ನ ಪ್ರೇಮಿಯಾಗಿರುವೆ..
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ಗೆಳೆಯ..
ಕವನ ಬರೆದು ತಿಳಿಸಲು ನಾ ಕವಿಯಲ್ಲ,
ಪಾಠದಲಿ ಹೇಳಲು ನಾ ಶಿಕ್ಷಕನಲ್ಲ,
ಹಠದಲ್ಲಿ ವಾದ ಮಾಡಲು ನಾ ನಿನ್ನಂತೆ ವಕೀಲನಲ್ಲ,
ನಿನ್ನ ಅರ್ಥ ಮಾಡಿಸಲು ನಾ ಜೀವನವ ಸವೆಸಿದೆನಲ್ಲ,
ಒಮ್ಮೆ ಮನವ ಕೇಳು ಗೆಳತಿ ಅದು ಹೇಳುವುದೆಲ್ಲ,
ನಾ ನಿನ್ನ ಮನದ ಮನವ ಕದ್ದು ಗೆದ್ದ ನಲ್ಲ,
ನಾನಾರೂ ಅಲ್ಲ, ನಿನ್ನ ನಲ್ಲನಲ್ಲದೇ ಬೇರಾರು ಅಲ್ಲ
ನಾ ಒಬ್ಬ ಹುಡುಗನ ಮೆಚ್ಚಿದ್ದೆ
ಅವನೇ ನನ್ನ ಜೊತೆಗಾರನಾಗಲಿ ಎಂದು ಬಯಸಿದ್ದೆ
ಕಣ್ತುಂಬ ಕನಸ ತುಂಬಿದ್ದೆ
ಅವನ ಬರುವಿಕೆಗಾಗಿ ಕಾದಿದ್ದೆ
ನಂಬಿಕೆಯಿಂದ ಅವನೊಂದಿಗೆ ಎಲ್ಲವ ಹೇಳಿದ್ದೆ
ಅತಿಯಾಗಿ ಅವನ ನಂಬಿದ್ದೆ
ಪ್ರತಿದಿನ ಅವನೊಂದಿಗೆ ನಗುತ್ತಿದ್ದೆ
ಅವನು ಹತ್ತಿರವಿರಲಿ ಎಂದು ದಿನ ಬಯಸುತ್ತಿದ್ದೆ
ಹೀಗೆ ಕಳೆದಿತ್ತು ವಾರಗಳು
ಮಧ್ಯದಲ್ಲೆ ಮೂಡಿತ್ತು ಬಿರುಕುಗಳು
ಈಗೋ(Ego)ಎಂಬ ಭೂತ ಅಲ್ಲೇ ಜನಿಸಿತ್ತು
ಸೆಲ್ಫ್ ರೆಸ್ಪೆಕ್ಟ್(Self respect)ಎಂಬ ಮಾತು ಆಗಾಗ ಬರುತ್ತಿತ್ತು
ಒಬ್ಬರನ್ನೊಬ್ಬರು ನೋಡಿದರೆ ಮೈ ಉರಿಯುತ್ತಿತ್ತು
ಆದರೂ ಎಲ್ಲೋ ಮನದಂಚಿನಲ್ಲಿ ಖುಷಿ ತುಂಬಿರುತ್ತಿತ್ತು
Finally
ನನಗೂ ಅವನಿಗೂ ಸಂಪರ್ಕವೇ ಇಲ್ಲ
ಯಾವುದೇ ಸಾಮಾಜಿಕ ತಾಣಗಳ ಗೋಜಿಲ್ಲ
ಅವನ ಬರುವಿಕೆಗಾಗಿ ನಾ ಕಾಯುತ್ತಿಲ್ಲ
ಆದರೂ ನಾ ಅವನ ಮರೆತಿಲ್ಲ