Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ನೋಡುವ ತವಕದಲ್ಲಿ
ನನ್ನ ನಾನು ಮರೆತೆ ನಿನ್ನಲ್ಲಿ
ಹಿಂತಿರುಗಿ ನೋಡದೆ ಹೋದೆ ನೀ
ನಾನಿರುವ ಧೈರ್ಯದಲಿ .
ಅಂದಿನಿಂದ ಕಾದಿರುವೆ ನೀ
ಬರುವ ದಾರಿಲಿ.
ಒಮ್ಮೆಯೂ ನೋಡಿಲ್ಲ ನಿನ್ನ
ಹೆಜ್ಜೆಗುರುತು ಆ ಸ್ಥಳದಲ್ಲಿ .
ಅರಿಯದೆ ಹೊದೆಯೋ
ನನ್ನ ಮರೆತು ಹೊದೆಯೋ
ನನಗಿನ್ನೂ ತಿಳಿದಿಲ್ಲ.......
ಆದರೆ ನನ್ನ ಹೃದಯ ನಿನ್ನ
ಪ್ರೀತಿಸುವುದು ಮಾತ್ರ ಮರೆತಿಲ್ಲ....
- ಚುಕ್ಕಿ
01 Apr 2017, 03:20 pm
ಸಂಭ್ರಮಗಳ ನಡುವೆ
ಹೀಗೆ ಬಂಧಿಸಿಡು
ಬಿಗಿಯಾದ ನೇಣಿನಕುಣಿಯಲಿ
ಹಾಗೆ ಉಸಿರುಗಟ್ಟಲಿ
ನೋಡುವ ಕಣ್ಣಗಳಲಿ ಹನಿಯೊಡೆಯಲಿ
ಕೈಕಾಲುಗಳು ಜೋತು
ಬೀಳಲಿ
ನಿಶಕ್ತಿ, ನಿಶ್ಯಬ್ಧ ತಂಗಾಳಿ
ಸೇರಲಿ
ಇಲ್ಲೇ ಇಲ್ಲೇ ನೋವುಂಡವರ ತಾಪ
ಬಸಿದು ಬೆರೆತು
ಹಸಿದ ಒಡಲಲಿ
ಬೇಯುತ್ತಿದೆ
ಕಾಣದ ದೇವರಿಗೂ ಹನಿ ಬೆವರಿನ ನೈವೇದ್ಯವಿತ್ತೂ
ನಿಲ್ಲಿ, ಸಂ'ಭ್ರಮಿ'ಸಿ
ಉಸಿರು ತನ್ನತಾನೆ
ನೀಗುತಿದೆ
ನನ್ನ ಬೀಗಿ ಹಿಡಿದಿರುವುದು
ನೇಣಿನ ಕುಣಿಕೆಯಲ್ಲ
ಸ್ವಾತಂತ್ರ್ಯದ ಚಹರೆಗಳವು
ಪಹರೆಗೆ ನಿಂತ
ನಿಮ್ಮನುಮನಗಳ ಅಂತೆಕಂತೆಗಳಿಗೆ...
ಮತ್ತೆ ಹುಟ್ಟಿಬರುವೆನೆಂಬ
ಭ್ರಮೆಗಳ ಕಳಚಿ
ಹಕ್ಕಿಗಿಲ್ಲದ, ಗಾಳಿಗಿಲ್ಲದ
ಬೆಳಕಿಗಿಲ್ಲದ...
ಧರ್ಮದೆಲ್ಲೆಗಳ, ಕುಬ್ಜ ಜಾತಿಗಳ ಮೀರಿ
ಕಪ್ಪುಬಣ್ಣವ ಹಾಸಿ
ಮಲಗುತ್ತೇನೆ...
ತಂತಾನೆ ಬೇರೆಯುವೆ ಈ ಜಗದೊಳಗೆ ಬಿಗಿದ ನೇಣಿನ ಕುಣಿಕೆಯಲಿ...
- ram purshi
01 Apr 2017, 01:29 pm
ಮಾಯ ಆಗ್ಬೇಡ ಮನಸಿಗೆ
ಬೇಜಾರ್ ಆಗುತ್ತೆ .
ಸುಮ್ಮನಿರಬೇಡ ಹೃದಯ
ಮಾತಿಲ್ಲದೆ ಮೌನವಾಗುತ್ತೆ.
ದೂರವಾಗಬೇಡ ಕಣ್ಣು
ಕಂಬನಿಯಲ್ಲಿ ಕರ್ಗೋಗುತ್ತೆ.
ಒಂದು ಕ್ಷಣವೂ ನನ್ನ ಬಿಟ್ಟು
ಹೋಗಬೇಡ ನನ್ನ ಉಸಿರೆ ನಿಂತೋಗುತ್ತೆ.
- ಚುಕ್ಕಿ
01 Apr 2017, 12:49 pm
ನಾವಿಬ್ಬರು ನಡೆಯುವಾಗ
ಒಂದೇ ನೆರಳು ಬೀಳುವುದೇಕೆ ....
ಆ ಒಂದೇ ನೆರಳಿನಲ್ಲಿ
ನಾವಿಬ್ಬರು ಕಾಣುವುದೇಕೆ ...!!
- ವಿನುತ ಕಿರಣ್ ಗೌಡ
01 Apr 2017, 10:22 am
ಶೋಧಿಸುತಿರುವೆ ಹೃದಯದಲ್ಲಿಳಿದು ನೀನು ನೆಲೆಸಿದ ಕುರುಹು ಬಸಿದು ಬಸಿದು
ಮಾಸಿದ ನೆನಪಿನ ಕಲೆಗಳು ಮನದಿಂದ ಹೊರಬಿದ್ದವು ಬಣ್ಣ ಬಳಿದುಕೊಳ್ಳುತ್ತಾ
ನಿನಗೆ ಅಪರಂಜಿಯ ಪಟ್ಟಕೊಟ್ಟು ನಾನು ಜನರಿಗೆ ಅಪಹಾಸ್ಯನಾದೆ ನನಗೆ ನಾನೇ ಪ್ರಶ್ನೆಯಾದೆ ಬದುಕಿನ ಆದಿ ಅಂತ್ಯ ಅರಿಯದೆ
ನದಿಯೂಁಚಿಂತಿಸುತ್ತಿದೆ ನಾನು ಯಾವಾಗ ಹೇಗೆ ಮುಳುಗುವೆ ಎಂದು ದೋಣಿ ಸಜ್ಜಾಗಿದೆ ಲಗಾಮು ಮರೆತು ಲಂಗರಿಲ್ಲದ ಕಡೆ ಸಾಗಲು
ಯಾರೊ ಗೀಚಿದ ಅಮರಪ್ರೇಮದ ಸಾಲು ಅಮ್ರತವೆಣಿಸಿ ಹೃದಯಕಿಳಿಸಿ ಖಚಿತ ಉಡುಗೊರೆ ಪಡೆದು ಶೋದನೆ ಮುಗಿಸಿ ಶೋಕಸಾಗರದಲ್ಲಿ ನನ್ನವರನು ಅದ್ದಿದೆ..
✍ಆದಿಲ್ ಕೋಟೇಶ್ವರ
- adilsha
01 Apr 2017, 08:31 am
ಹೇಳದೆ ಕೇಳದೆ ಮಾಡಿದ ಸ್ನೇಹ
ಹೆರೆತ ತುಪ್ಪದಂತೆ ಅದರ ಮೋಹ
ಹಂಗಿನಲಿ ಮದರಂಗಿನಲಿ
ಹೊಂಬೆಳಕಾಗಿ ಬೆಳೆದು ಹೆಮ್ಮರವಾಗಲಿ
ಹಂಬಲದ ಹಲಸಿನಂತ ನಮ್ಮ ಈ ಸ್ನೇಹ
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
31 Mar 2017, 10:00 pm
ಕೋಟಿ ದೇವರಿದ್ದರು ನನಗ್ಯಾರು ಕಾಣಲಿಲ್ಲ
ಕೈ ಮುಗಿದು ಬೇಡಿದರು ವರವ ಯಾರು ಕೊಡಲಿಲ್ಲ
ನೊಂದುಬೆಂದ ನರಳಿದರು ಸಹಕಾರ ಮಾಡಲಿಲ್ಲ
ಕಣ್ಣು ಬಿಟ್ಟು ನೋಡುವ ಕೋಟಿಗೊಬ್ಬ ದೇವರು
ಅವರೆ ಇವರು ದೈವವು ನಡೆದಾಡುವ ದೇವರು
ಮಾನವೀಯ ಮೌಲ್ಯಗಳ ಮಕ್ಕಳಿಗೆ ಬಿತ್ತಿದರು
ಲಕ್ಷಲಕ್ಷ ಶಿಷ್ಯರಿಗೆ ಗುರು ಭೋದನೆ ಮಾಡರು
ಅನ್ನದಾಸೋಹದಿ ನೊಂದಜನರ ಸಲಹಿದರು
ಊರು ಊರು ತಿರಿಗಿ ದವಸಧಾನ್ಯ ತಂದರು
ಗುರು ಮಠದ ಮಕ್ಕಳಿಗೆ ಹೊತ್ತು ಸಾಕಿ ಬೆಳೆಸಿದರು
ಜ್ಞಾನ ದೇವರು ನಮ್ಮ ಮನುಜ ದೇವರು
ಶಿವನ ವರ ಪುತ್ರರು ಶಿವಕುಮಾರಸ್ವಾಮಿಗಳ ಸಿದ್ದಗಂಗಾ ಸ್ವಾಮಿಗಳು
ಕರುನಾಡಿನ ನಿಜದೇವರು 110 ವರುಷ
ತಪವ ಮಾಡಿದ ಕರುನಾಡ ದೇವರು
ಸತ್ಯ ಧರ್ಮ ತುಂಬಿಹ ಹಿಂದೂಗಳ ಜೀವವು
ಶಿವನ ಭಕ್ತರು ನಮ್ಮ ಸಿದ್ದಲಿಂಗ ಹೆಸರುಳ್ಳ ಶಿವಕುಮಾರಸ್ವಾಮಿಗಳು
- gtr
31 Mar 2017, 08:43 pm
ಈ ಋತುರಾಜ ಎಂತಹ ರಸಿಕ
ಗಿಡ ಗಿಡನು ಮನ ಮನನು
ಮರುಳ ಮಾಡಿ ಚುಂಬಿಸಿ
ಹೂದುಂಬಿಸಿ ಹುರಿದುಂಬಿಸಿ
ಬಣ್ಣ ಬಣ್ಣದ ಹೂ,ಅರಳಿಸಿ
ಕಲ್ಪನಾ ಲಹರಿಯಲ್ಲಿ
ವಿಹರಿಸುವಂತೆ ಮಾಡಿ
ಕವಿಯನು ಕಾವ್ಯದಮಲಿಗೆ
ಕಳಿಸಿದ , ಎಂತ ರಸಿಕ ,
ಕಸ್ತೂರಿ ಡಿ ಪತ್ತಾರ
- kasturi pattar
31 Mar 2017, 05:47 pm
ಬಿಸಿಯಾಗಿದೆ ಉಸಿರು
ನಿನ್ನ ಕುಡಿಗಣ್ಣ ಶಾಖಕಿಂದು
ಬಸಿರಾಗಿದೆ ಹೃದಯ
ಪ್ರೀತಿ ಶಿಶುವಿಗೆ ಜನ್ಮ ನೀಡಲೆಂದು
ಮನಸಾಗಿದೆ ಸಿಹಿ ಮೊಸರು
ನೀ ಕಡೆಗೋಲಿಟ್ಟು ಕಡಿದು
ಕನಸಾಗಿದೆ ಕೆಸರು
ನಿನ್ನ ನಗುವಿನ ಕಮಲ ಚಿಗುರೊಡೆದು
ಹಸಿರಾಗಿದೆ ಪ್ರಣಯ
ನಿನ್ನ ತುಟಿಯಿಂದ ಸುರಿದ ಮುತ್ತಿನ ಮಳೆ ಕಂಡು
- ಅಕವಿ
31 Mar 2017, 02:37 pm
ಯಾರೋ ಏನೋ ಹೇಳುವರೆಂದು
ಅಂಜದಿರು ನೀನೆಂದು...!!
ಸತ್ಯದ ಹಾದಿಯಲ್ಲಿ ನೀನಿರುವಾಗ ಯಾರು
ಏನು ಮಾಡರು ನಿನ್ನ...!!
ಕಣ್ಣ ಮುಂದಿರಲಿ ನಿನ್ನ ಗುರಿ ಆ ದೇವರೆ
ಬರುವನು ನಿನ್ನ ಗುರುವಾಗಿ...!!
ಮುನ್ನಡೆಯಲು ನಿನ್ನಲಿ ಬಲವಿರುವಾಗ
ಹಿಂದಿರುಗಿ ನೋಡದಿರು...!!
ನಮ್ಮ ಶ್ರಮದ ಫಲವಾಗಿ ದೊರೆಯುವುದು ಮುಕುತಿ...!!
ಬೇರೆನು ಬೇಕು ಸಾಕಲ್ಲವೇ ಈ ಜನುಮಕೆ...??
- chinmayi
31 Mar 2017, 11:31 am