ಲೇಖನಿಯೊಳಗಪ್ಪಿ
ಬಿಳಿ ಹಾಳೆಗಪ್ಪುತಿರುವದು ಕಪ್ಪು ವರ್ಣದ ಇಂಕಲ್ಲಾ
ಕಣ್ಣಿಗು ಕಾಣದ ಬಿಳಿ
ರೂಪದ ಕಂಗಳ ನೀರಾ ಹನಿ
ಅದರೆ ಇನ್ನು ಕೇಲ ದೀನಗಳಲ್ಲೆ ಬಿಚ್ಚಲಿದೆ
ಸಮಾಜ ಸೆವೆಯೆಂ ಮುಖವಾಡವನೊತ್ತಾ ಮುರ್ಖಾ ಮುಖಗಳ
ಎಚ್ಚೇರ ವಿರಲಿ
ಬಿಳಿ ಹಾಳೆಯಾ ಮೇಲೆ ಅರ್ಭಟಿಸಲು ಸಜ್ಜಾಗುತಿದೆ
ಬಿಳಿ ಕಂಗಳ ನಿರಾ ಸುನಾಮಿ .....
ಬಾಳೊಂದು ಗೋಳು ನೂರಾರು ಸೋಲು
ಸೋತೆನೆಂದು ನೊಂದರೆ ಬೆಳಗದು ನಿನ್ನ ಬಾಳು
ಗೆದ್ದೆನೆಂದು ಗರ್ವಿಸಿದರೆ ಆಗುವುದು ಹಾಳು
ಓ ನನ್ನ ಮನವೇ ಕೇಳು ಪ್ರೀತಿಗಾಗೆ ಪ್ರತಿಜನ್ಮ ನೀ ತಾಳು||ಪ||
ಅನ್ಯರು ಏನೆಂದರೂ ನಿನ್ನ ಮನವೇ ನೊಂದರೂ
ಕೊನೆಗೆ ನಿನ್ನೇ ಕೊಂದರೂ ಪ್ರೀತಿಯ ಮರೆಬೇಡ ನೀತಿಯ ಬಿಡಬೇಡ| ದಿಕ್ಕಿಲ್ಲದೆ ಸಾಗುವ ಪಯಣ ಗುರಿಯೆಂದು ತಲುಪದು ಉತ್ತಮ ಗುರಿಯೆಡೆಗೆ ಸಾಗಲಿ ಜೀವನ ಗುರಿಯಿಂದ ಜನ್ಮ ಆಗುವುದು ಪಾವನ| ಮನಸ್ಸಿದ್ದರೆ ಕಲ್ಲುಕೂಡಾ ಕರುಗುವುದು ಕೃಷಿ ಇದ್ದರೆ ಶಿಲೆಕೂಡ ಶಿಲ್ಪವಾಗುವುದು| ಆಸೆಯ ಬಿಡು ನೀ ಆಶಯ ಕೈ ಹಿಡಿ ಸಾಧನೆಯ ಮೆಟ್ಟಿಲು ಹತ್ತಿ ಎಲ್ಲರ ಪ್ರೀತಿಯ ಪಡಿ||೧||
ಶತ್ರುಗಳು ಯಾರು ಇಲ್ಲ ನಮಗೆ ನಾವೇ ಕತೃಗಳು ಯಾರೋ ಕಲ್ಲು ಎಸೆದರೆಂದೂ ಅವ ನೀ ದ್ವೇಷಿಸಬೇಡ ಅವನೆಸೆದ ಕಲ್ಲೆ ನಿನ್ನ ಸಾಧನೆಯ ಮೆಟ್ಟಿಲು ಎಂಬುದನ್ನು ಮರೆಯಬೇಡ| ಜೀವನವ ಚಿಂತಿಸಬೇಡ ಬೆನ್ನೇ ತೋರದೆ ಮುನ್ನುಗ್ಗುತ್ತಿದ್ದರೆ ಸೋಲೇ ನಿನಗಿಲ್ಲ ನೀ ಇಟ್ಟ ಪ್ರತಿ ಹೆಜ್ಜೆ ಗೆಜ್ಜೆ ಸದ್ದಾಗಿ ಮನವ ಕದಿಯುವುದು|ಕಾರ್ಯವಿದ್ದರೆ ಕನಸ್ಸು ಕೂಡ ನನಸ್ಸಾಗುವುದು ಕೈ ಹಾಕಿದರೆ ಕಸ ಕೂಡ ರಸವಾಗುವುದು| ನೆನ್ನೆಯ ನೆನ್ನೆಗೆ ಮರೆತು ಬಿಡು ನಾಳೆಯೆಂದು ತಿಳಿಯದ ನಮಗೆ ಈ ಕ್ಷಣವೇ ನೀ ಬದಲಾಗಿ ಕಾರ್ಯಪ್ರವೃತ್ತನಾಗು||೨||
ಇಂದು ನೀ ನನ್ನ ಅಗಲಿ ಹೋದರೂ..
ನಿನ್ನ ನೆನಪುಗಳಿಂದ ಮಾಸಿ ಹೋದರೂ..
ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ...
ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!
ಸಮುದ್ರದಲ್ಲಿ ಬಿಟ್ಟ ಕಾಗದದ ಹಡಗಿನಂತೆ ಈ ಹದಿಹರೆಯದ ಪ್ರೀತಿ
ಯಾರೂ ತಿಳಿಯರು ಇದರ ರೀತಿ ನೀತಿ
ಟೈಟಾನಿಕ್ ನಂತಹ ಬೃಹತ್ ಹಡಗೇ ಮುಳುಗಿಹೋಯ್ತು ಸಮುದ್ರದಲ್ಲಿ
ಇನ್ನು ಈ ಸಣ್ಣ ಕಾಗದದ ಹಡಗು ಉಳಿದೀತೆ ಹೇಳಿ.
ಪ್ರೀತಿಯೆಂಬುದು ಜೀವನದಲ್ಲಿ ಯಾವಾಗಲೋ ಮಾಡಬೇಕಾದ ಸವಾರಿ
ಅದಕ್ಯಾಕೆ ಇಂದಿನಿಂದಲೇ ಮಾಡುವೆ ತಯಾರಿ
ಈ ಜೀವನವೆಂಬುದು ಬೃಹತ್ ಸಂತೆ
ಇಲ್ಲಿ ನೀ ತರಬೇಡ ಪ್ರೀತಿಯ ಕಂತೆ.
ಮೊದಲು ಜೀವನವ ಸಾರ್ಥಕವಾಗಿ ಬಾಳು
ನಂತರ ನಿಲ್ಲುವುದು ನಿನ್ನ ಹಿಂದೆ ಹುಡುಗಿಯರ ಸರತಿ ಸಾಲು
ಹರೆಯದಲ್ಲಿ ಹುದುಗಿರುತ್ತದೆ ಏನನ್ನೋ ಸಾಧಿಸುವ ಕಿಚ್ಚು
ಆ ಕಿಚ್ಚನು ಆರಿಸುವ ನೀರಿನಂತೆ ಈ ಪ್ರೀತಿಯ ಹುಚ್ಚು.
ಜೀವನದಲ್ಲಿ ಕೊಡಬೇಡ ಪ್ರೀತಿಗೆ ಮೊದಲ ಸ್ಥಾನ
ಅದರಿಂದ ನಿನಗೆ ಸಿಗುವುದು ಕೇವಲ ಅವಮಾನ
ತಂದೆ ತಾಯಿ ಗುರುಗಳು ಜೀವನದಲ್ಲಿ ತುಂಬಾ ಮುಖ್ಯ
ಇವರ ಮುಂದೆ ಪ್ರೀತಿಯೆಂಬುದು ಅಶಖ್ಯ.
ಜೀವನದಲ್ಲಿ ಒಮ್ಮೆ ಮಾತ್ರ ಸಿಗುವುದು ಹರೆಯ
ಪ್ರೀತಿಗೋಸ್ಕರ ಹಾಳು ಮಾಡಬೇಡ ಈ ಅಮೂಲ್ಯ ಸಮಯ
ನಿನಗಾಗಿ ಕಾಯುತಿರುವುದು ಉಜ್ವಲ ಉಷೆ
ಅದ ನೋಡಲು ನೀ ಇಳಿಸಿಕೊಳ್ಳಬೇಕು ಪ್ರೀತಿಯ ನಶೆ.
ಜೀವನದಲ್ಲಿ ಇರಲಿ ಸಾಧಿಸುವ ಛಲ
ಪ್ರೀತಿ ಮಾಡಿ ಆಗಬೇಡ ಚಂಚಲ
ಪ್ರೀತಿಯ ಹತಾಶೆಯಿಂದ ಕೆಡಿಸಿಕೊಳ್ಳಬೇಡ ನೆಮ್ಮದಿ
ಈ ಲೋಕದಲ್ಲಿ ನಿನ್ನನ್ನು ಪ್ರೀತಿಸುವವರಿದ್ದಾರೆ ಎಷ್ಟೋ ಮಂದಿ
ಪ್ರೀತಿಗೂ ಇದ್ದೇ ಇದೆ ಸೂಕ್ತ ಕಾಲ
ಅದಕ್ಕೆ ಹರೆಯವಲ್ಲ ಸಕಾಲ.