Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಿಳಿ ಹಾಳೆ

ನನ್ನ ಮನಸೆನೆಂಬ ಬಿಳಿ
ಹಾಳೆಯನ್ನು ನಿನ್ನ ಕೈಯಲ್ಲಿ
ಕೊಟ್ಟಿರುವೆ .

ನನ್ನ ನಗೆಯೆಂಬ ಸೊಗಸಾದ
ಪದಗಳಿಂದ ಅದನ್ನು ತುಂಬು
ನಿನ್ನ ಪ್ರೀತಿಯ ಲೇಖನದಿಂದ.

- ಚುಕ್ಕಿ

06 Apr 2017, 09:52 pm

ಕರೆಯೋಲೆ

ಉಸಿರಲ್ಲಿ ಬೆರೆತೊದ ಈ ಮಳೆಯ ಸದ್ದು,
ನಾನು ಇರುವೆನೆಂದು ಹಾಗಾಗೆ ಬರುವ
ಆ ಸಿಡಿಲು ಮುದ್ದು...................!!!

ನನ್ನೆಲ್ಲಿ ಬಿಟ್ಟರೆಂದು ಮರೆಯಾಗದ ಮಿಂಚು
ನಿನ್ನ ಹುಡುಕಿ ಬರುತಿವೇ ಇಲ್ಲಿಂದ ಅಲ್ಲಿಗೆ

ಬಂದಾಗ ನೋಡು ಇವರಲ್ಲಿ ನನ್ನ ಕರೆಯೋಲೆ ಕಳಿಸಿರುವೆ ನಿನಗಾಗಿ ಚಿನ್ನ..........!!!

- ಚುಕ್ಕಿ

06 Apr 2017, 09:37 pm

ನೀನು ನನಗೆ

ನೀನು ನನ್ನ ನೆರಳಾಗಿ ಪರಿಚಯವಾದೆ .....
ನನ್ನ ನೋವನ್ನು ನಿನ್ನ ಕಣ್ಣೀರಲ್ಲಿ
ಹಂಚಿಕೊಂಡೇ ..............
ನಿನ್ನ ನಗುವಿನ ಹಾಗೆ ನನ್ನ ನಗಿಸಿದೆ

ನಾನು ಹೇಳಲಾರೆ ನೀನು ನನ್ನ
ಜೀವನದಲ್ಲಿ ಎಷ್ಟು ಮುಖ್ಯವೆಂದು
ಆದರೆ ಒಂದು ಮಾತ್ರ ತಿಳಿಸಬಲ್ಲೆ
ನೀನಿಲ್ಲದ ನನ್ನ ಜೀವನ ಉಸಿರಿಲ್ಲದೆ
ಬದುಕುವ ಮನಸಿನ ಹಾಗೆ...........

- ಚುಕ್ಕಿ

06 Apr 2017, 08:58 pm

ನಗು

ಪ್ರೀತಿಯ ಎಲ್ಲ ಅದ್ಭುತಗಳನ್ನು
ಒಂದೇ ಕವಿತೆಯಲ್ಲಿ ಸೆರೆ ಹಿಡಿಯೋಣವೆಂದು
ಬರೆಯುತ್ತಾ ಕುಳಿತೆ
ಈ ಇಬ್ಬರು ತಂದ ತಲೆನೋವಿನಿಂದ
ಮೌನದ ಕಗ್ಗತ್ತಲ ಕಾಡಿನಲ್ಲಿ ಬಾವಪೂರ್ಣ
ಅರ್ಥಪೂರ್ಣ ಶಬ್ದಗಳನ್ನ ಹುಡಕದಾದೆ.
ಅಕ್ಷರ ಕಾಣದ ಖಾಲಿ ಹಾಳೆಗಳು ಮೆಲ್ಲನೆ
ತೂರಿ ಬಂದ ಗಾಳಿಗೆ ಹಾರಾಡುತ್ತಾ ಹಾಡಾಗುತ್ತ
ಗುನುಗುಡುತ್ತಾ ಕಿವಿಯಲ್ಲಿ ಮಾತಾದವು
ಮನದ ಸಂವೇದನೆಗಳಿಗೆ ,
ನೆಮ್ಮದಿ ತಂದಿತ್ತು ಶೂನ್ಯ.
ಹೊರಗಡೆ ಹೋಗಿ ತಂಗಾಳಿಗೆ
ಮೈ ಒಡ್ಡಿ ಮೆತ್ತನೆ ಹುಲ್ಲು ಹಾಸಿಗೆ ಒರಗಿ
ಮೇಲೆ ದಿಟ್ಟಿಸಿದೆ
ಕೋಟಿ ಕೋಟಿ ನಕ್ಷತ್ರಗಳು
ಉಲ್ಲಾಸದಿಂದ ನಸು ನಕ್ಕಂತಾಯಿತು .

- ಶಶಿಧರ ಹೆಚ್ ಎನ್

06 Apr 2017, 08:27 pm

ಕಡಲು

ಕ‌ಡ‌ಲ‌ ಒಡ‌ಲೆಲ್ಲ‌ ವಿಷ‌ವೇ ತುಂಬಿಹಿದು
ಪ್ರೀತೀಯ‌ ಅಮೃತ‌ವೆಲ್ಲಿಂದ‌ ತ‌ರ‌ಲಿ?
ಮ‌ನ‌ದ‌ ಬೇಗುದಿಯ‌ ಪ್ರ‌ಶ್ನೆಗೆ
ಉತ್ತ‌ರ‌ ಎಲ್ಲೆಂದು‌ ಹುಡ‌ಕ‌ಲಿ?
ನಿನ್ನ‌ದೇ ಪ್ರ‌ಶ್ನೆಗೆ ನೀನೆ ಉತ್ತ‌ರ‌
ನ‌ನ್ನ‌ದೇನಿದ್ದ‌ರು ಮೌನ‌ ನಿರಂತ‌ರ‌.


- ಶಶಿಧರ ಹೆಚ್ ಎನ್

06 Apr 2017, 08:15 pm

ಜಾತಿ - ಪ್ರೀತಿ

ಹೀಗೆ ಬಂದು ಹಾಗೆ ಹೋದ
ಒಂದು ಕಳ್ಳ ಪ್ರೇಮ
ಕಲೆತು ಬೆರೆತು ಕಳೆದ ಹೊತ್ತು
ಮರೆತು ಹೋಯಿತೇನು !

ಅಡ್ಡ ಬಂದು ನಿಂತಿತೊಂದು
ದೈತ್ಯ ದೆವ್ವ ಜಾತಿ
ಕೆಡ್ಡದಲ್ಲಿ ಬಿದ್ದುಕೊಂಡು
ನರಳಿ ಸಾಯ್ತು ಪ್ರೀತಿ.

ಹೇಳುವರು ಲೋಕದಲ್ಲಿ
ಇಲ್ಲ ಈಗ ಜಾತಿ ಪ್ರೀತಿ
ಕೇಳುವರು ಇಲ್ಲ ಎಲ್ಲೂ
ನೈಜ ಮನುಜ ನೀತಿ.

- ಶ್ರೀಗೋ.

06 Apr 2017, 06:59 pm

ರಾಧಾ ರಮಣ

ರಾಧಾ ರಮಣ
ಯೆಶೋಧಾ ನಂದನ
ನವನೀತ ಚೋರಾ
ನಂದನ ಕುಮಾರ .

ಗೋಕುಲ ಕೃಷ್ಣಾ
ಗೋಪಾಲ ಕೃಷ್ಣಾ
ಬೇಗನೆ ಬಾರೋ
ಮುರಳೀಧರ.

ಕದ್ದ ಹೃದಯವ
ಹಿಂತಿರುಗಿಸಬೇಡ.
ಅಲ್ಲಿರುವ ನಿನ್ನ ರೂಪಕೆ
ಉಸಿರಾಗು ಸಾಕು.

ನಿನ ನಾಮ ಸ್ಮರಣೆಯಲಿ
ಇಡೀ ಜೀವನ ಕಳೆಯುವೆ
ನಿನಗಾಗಿ ಕಾದಿರುವ ಈ ಜೀವಕೆ
ನಿನ್ನ ಹೆಸರೇ ಇಡುವೆ.

ಕನಸಲ್ಲಿ ನನಸಾಗು
ನೆನಪಲ್ಲಿ ನಗುವಾಗು
ಮಾತಲ್ಲಿ ಧ್ವನಿಯಾಗು.

ನನ ಎದೆಬಡಿತದ ಸದ್ದಾಗು
ನನ್ನಲ್ಲಿರುವ ಜೀವವಾಗು
ಆ ಜೀವಕ್ಕೆ ಜೊತೆಯಾಗು......

ಶ್ರೀ

- ಚುಕ್ಕಿ

06 Apr 2017, 05:43 pm

ಪ್ರೇಮ ಸೆರೆಮನೆ

ಪ್ರೇಮವೆಂಬ ಸೆರೆಮನೆಯಲ್ಲಿ
ಸೆರೆಯಾದ ಪ್ರೇಮಿ ನಾ!!
ಕಂಬಿ ಹಿಂದೆ ಕನಸ ಹೆಣೆದು
ನಾ ಕುಳಿತಿರುವೆನು ಈ ದಿನ!!

ಬಾ ನೀನು ಇಲ್ಲಿ ಬಂದು
ಜೊತೆಯಾಗು ಸೆರೆವಾಸದಲ್ಲಿ!!
ಇಲ್ಲದಿದ್ದರೂ ಬಂದು
ಕಂಬಿ ಸರಿಸು ನೀನು ಇಂದು!!

ನಾ ಒಂಟಿಯಾಗಿ ನರಳುತಿರುವೆ
ಈ ಪ್ರೇಮವೆಂಬ ಸೆರೆವಾಸದಲ್ಲಿ!!
ನಾ ಹೆಣೆದ ಕನಸೇ ನನ್ನ ಮುತ್ತಿ
ಕೊಲ್ಲುತಿಹುದು ಇಲ್ಲಿ!!

ನೀ ಬರುವ ದಾರಿ ಕಾಯುತಲಿ
ನಾನು ಕುಳಿತಿರುವೆನು ಇಲ್ಲಿ!!
ನೀ ಬಂದು ಬಿಡಿಸು ನನ್ನನ್ನು
ಸರಿಸಿ ಇಂದು ಸೆರೆಯ ಕಂಬಿ!!

- ಪಿ.ಜಿ.ಜ್ಯೋತಿ

06 Apr 2017, 01:52 pm

ಬಯಕೆ

ಜೇನು ಗೂಡಿನಲಿ ಮೀನು
ವಾಸ ಮಾಡುವುದೇ ತಾನು!!
ಒಲವಿನ ಬಯಕೆ ಮೂಡಿ
ಸೇರುವುದೇ ಭೂಮಿ ಬಾನು!!

ಮನದ ಮರೆಯಲಿ ಅಡಗಿರುವ
ಕೋಟಿ ಕೋಗಿಲೆಯಂತೆ ನೀನು!!
ಕರಗದ ಕನಸು‌ ನೀನು
ದೊರೆಯದ ಮಾಣಿಕ್ಯ ನೀನು!!

ಮುಗಿಲ ಚಂದ್ರ ನಿನ್ನನ್ನು
ಮೋಹದಿ ಬಯಸಿದೆ ನಾನು!!
ಸೇರುವ ಬಯಕೆ ಇಂದು
ತೀರದ ಬಯಕೆ ನನ್ನದು!!

ದುಂಬಿಯ ಮೇಲೆ ಮೋಹ
ಆ ಹೂವಿಗೆ ಪ್ರೇಮ ದಾಹ!!
ದುಂಬಿಯ ಜೊತೆ ನಲಿಯಲು
ಹಾರುವ ಬಯಕೆ ಸಾಲದು!!

- ಪಿ.ಜಿ.ಜ್ಯೋತಿ

06 Apr 2017, 10:31 am

ರಾಧೆಯ ಪ್ರೇಮ

ನವಿಲು ಗರಿಯ ಮುಡಿದು
ಕೊಳಲ ಹಿಡಿದು ಬರುವ
ಶ್ರೀ ಕೃಷ್ಣನ ದಾರಿಯ ಕಾದಿರೋ ರಾಧೆಯ
ಮನಸಿನ ಮಾತದು ಬೇಗನೇ ಬಾರಯ!!

ಸಣ್ಣದೊಂದು ಹೂವ ಮಾಲೆ
ಕರದಿ ಹಿಡಿದು ಕಾದಿರೋ ನಲ್ಲೆ
ಸುತ್ತ ಕಣ್ಣ ಹೋರಳಿಸಿ ಕಾದಳು
ಎತ್ತ ಅವನು ಬರುವನು ಎಂದು!!

ಮನದಿ ಅವನ ಸೇರೋ ತವಕದಿ
ಕಾದು ಕುಳಿತಳು ಒಲವಿನ ಪುಳಕದಿ
ಅವನು ಎದುರಿಗೆ ಕಾಣದೇ ಇರಲು
ಶಪಿಸಿ ನೊಂದಳು ತನ್ನ ಕಂಗಳ!!

ಅವನ ಹುಡುಕಲು ಹೆಜ್ಜೆ ಕಿತ್ತರೆ
ಕೊಳಲ ದನಿಯ ಸ್ವರವು ಕಿವಿಯಲಿ
ದನಿಯ ಮಾರ್ಗವ ಹಿಡಿದು ಓಡಲು
ಕಂಡ ಕೃಷ್ಣನು ಗೋವುಗಳ ಹಿಂಡಲಿ!!

- ಪಿ.ಜಿ.ಜ್ಯೋತಿ

06 Apr 2017, 10:10 am