Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸಿನ ಭಾವನೆ....

ಬತ್ತಿದ ಭಾವನೆಗಳ ಬೆನ್ನಹತ್ತಿದೆ
ಈ ನನ್ನ ಪೆದ್ದ ಮನ
ಅಂತರಾಳ ಭಯಸುತಿದೆ
ಬೆರಾವುದೋ ಕನಸನ್ನ.....
ನೋಂದ ಹೃದಯ

- chinmayi.....chinni

08 Apr 2017, 07:19 pm

ಸಪೂರ ಆಗಲ್ಲ ..........

ಮನಸಿನ ಭಾರ ಹೆಚ್ಚಾದಾಗ
ದೇಹದ ಭಾರ ಕಡಿಮೆಯಾಗುತ್ತದೆ.

ದೇಹದ ಭಾರ ಹೆಚ್ಚಾದಾಗ
ಮನಸಿನ ಭಾರ ಕಡಿಮೆಯಾಗುತ್ತದೆ.

ಮನಸಿನ ಭಾರ ಎಂದಿಗೂ
ಕಡಿಮೆಯಾಗಲ್ಲ ಏಕೆಂದರೆ ನಿನ್ನ ನೆನಪಿನ
ಸಿಹಿಗಣಸು ಎಂದಿಗೂ ಸಪೂರ ಆಗಲ್ಲ.

- ಚುಕ್ಕಿ

08 Apr 2017, 03:01 pm

ಸುಮಧುರ

ಸುಮಧುರ ಸಂಗೀತದ ಗಾನದಲ್ಲಿ
ಮಧುರವಾದ ಪದವಾಗಿ ನಾನಿರುವೆ
ನಿನ್ನ ಎದೆಯಲ್ಲಿ .

ಕರೆವ ನೂರು ಹೆಸರಲ್ಲಿ ಮರೆಯಲಾಗದ
ಹೆಸರಾಗಿ ನೀನೀರು ನನ್ನ ಮನದಲ್ಲಿ.

- ಚುಕ್ಕಿ

08 Apr 2017, 01:35 pm

ನನ್ನಾಕಿ ಸಿಗಲಿಲ್ಲ

ಸಮಯ ಸಾಲುತ್ತಿಲ್ಲ
ಮೋಡ ಕವಿಯುತ್ತಿಲ್ಲ
ನೆನಪು ಅಳಿಯುತ್ತಿಲ್ಲ
ಕನಸು ಕಾಣುತ್ತಿಲ್ಲ
ಮನಸು ಮಾತೆ ಕೇಳುತ್ತಿಲ್ಲ
ಮಲ್ಲಿಗೆ ಅರಳುತ್ತಿಲ್ಲ
ಭಾವನೆ ಬಿರುತ್ತಿಲ್ಲ
ದಿನವೇ ಸರಿಯುತಿಲ್ಲ
ಇದೆಲ್ಲಕ್ಕಿಂತ ಹೆಚ್ಚು ಗಳಿಸಿದ
ಪ್ರೀತಿ ಸಿಗಲಿಲ್ಲ
.
✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

08 Apr 2017, 05:00 am

ಸಾಗರ

ಈ ನೀಲಿ ಸಮುದ್ರದಲ್ಲಿ ನಿನ್ನ ರೂಪ
ಕಾಣುತ್ತಿಲ್ಲ ಗೆಳೆಯಾ ಆದರೂ ಪರ್ವಾಗಿಲ್ಲ......

ಈ ಉಸಿರಿಲ್ಲದ ನೀರಿಗೇನು ಗೊತ್ತು
ನಿನ್ನ ಪ್ರೀತಿಯ ರೂಪ ನಾನೆಂದು.

ನನ್ನ ಪ್ರತಿಯೊಂದು ಚಟುವಟಿಕೆಯಲ್ಲೂ
ನೀನೇ ತುಂಬಿಕೊಂಡಿರುವೆಯೆಂದು.

ಸಾಗರದಲ್ಲಿನ ಪ್ರತಿ ಸಣ್ಣ ಅಲೆಯ ಹಾಗೆ
ನಿನ್ನ ಮೇಲಿನ ಪ್ರೀತಿ ನನ್ನಲ್ಲಿ ಈ ಕವನವಾಯಿತೆಂದು.

- ಚುಕ್ಕಿ

08 Apr 2017, 12:15 am

ಕನಸು...

ಕಾಣುವ ಕನಸಿಗೂ
ಮನಸು ಬಯಸೋ ಆಸೆಗೂ
ಎತ್ತಣ ಸಂಭಂದ
ಅರಿತು ಬಾಳುವುದೆ ಆನಂದ....

- chinmayi.....chinni

07 Apr 2017, 10:58 pm

ಜಲಪಾತ

ಜಲಪಾತ ಮೇಲಿಂದ ಜಾರುತ್ತಿರುವುದು
ನೋಡಿ ಕೆಲವರು ಅದು ಮತ್ತೆ
ಹಿಂತಿರುಗಲಾರದು ಅಂದುಕೊಳ್ಳುತ್ತಾರೆ....

ಆದರೆ ಮರು ನಿಮಿಷವೇ ಅದು
ಜಲಜಲನೆ ನಗುವು ಚೆಲ್ಲುತ್ತಾ ಮತ್ತೆ
ಹರಿದು ಬರುತ್ತೆ........

ಹಾಗೆಯೇ ಕೆಲವರು ನಮ್ಮನ್ನು ಕೀಳಾಗಿ
ನೋಡುತ್ತಾರೆ ನಾಳೆ ನಾವು ಆಕಾಶದೇತ್ತರಕ್ಕೆ
ಬೆಳೆದಾಗ ತಲೆ ತಗ್ಗಿಸಿ ನಿಳ್ಳುತ್ತಾರೆ.....

- ಚುಕ್ಕಿ

07 Apr 2017, 09:46 pm

ನಗೆ ತುಂಬಲು

ಈಗ ಬರೆದರೆ ಸಾವಿರ ಕವನಗಳು
ಸಾಲುವುದಿಲ್ಲ ನನ್ನಲ್ಲಿ ನಗೆ ತುಂಬಲು......

ಕೋಟಿ ಕಣ್ಣೀರಿನ ಹಾನಿಯು ಸಾಲಲ್ಲ
ಈ ನಿಮಿಷ ನನ್ನ ವ್ಯಥೆ ತೋರಲು.......

ಯಾಕಿಂತ ಬೇಸರ ನನ್ನಲ್ಲಿ ಈ ದಿನಾ
ಕಾರಣ ಹೇಳಲು ಉಳಿಸಿಲ್ಲ ನನ್ನಲ್ಲಿನ
ನೋವು ನನ್ನ..........

- ಚುಕ್ಕಿ

07 Apr 2017, 08:54 pm

ಸದಾ ನಿನ್ನ ಧ್ಯಾನ

ಸದಾ ನಿನ್ನ ಧ್ಯಾನ ನನ್ನಲ್ಲಿ
ಇನ್ನೂ ಮರೆಯಾಗಿಲ್ಲ ಮೌನ .

ನಿನ್ನ ಹೆಸರೇ ನನ್ನ
ಉಸಿರಾಗಿ ಹೋಯಿತೇನೋ
ನಿನ್ನ ಕಂಡ ಕ್ಷಣ .

ನೀ ನನ್ನ ಮನಸೋ ಕಣ್ಣೀರು
ಕಂಡ ಕನಸೋ ತಿಳಿದಿಲ್ಲ ಈ ಕ್ಷಣ.

ನೆನೆದು ನೆನೆದು ನಿನ್ನ ನಗುವಿನ ಚೆಲುವು
ನಾನೇ ಮರೆತೇ ನನ್ನ ಅಸ್ತಿತ್ವದ ನೆಲವು.

- ಚುಕ್ಕಿ

07 Apr 2017, 08:08 pm

ಹೆಣ್ಣಿಗೆ ಮನಸೋತವ

ಹೆಣ್ಣೆಂಬ ಚಂಚಲೆಗೆ
ಮನಸೋಲದ ಗಂಡು ಯಾರು
ಅವ ಸಂಸಾರಿಯೋ
ಅವ ಸನ್ಯಾಸಿಯೋ
ಪುಳಕಗೊಂಡಿರುವ ಒಂದು ದಿನ
ಅವಳ ಅಂದ ಕಂಡು!!

ಕಣ್ಣಲ್ಲೇ ಕೊಲ್ಲುವವಳ
ಕಂಡು ತಾ ಮೋಹಗೊಂಡು
ಮೆಚ್ಚಿ ಬಯಸಿ
ಅವಳ ಪ್ರೇಮವನ್ನು
ನೆನೆದು ಸಂಭ್ರಮಿಸಿರುವ ಕಂಡು
ಹಗಲು ಕನಸ!!

ಚೆಲುವೆಯ ಮನವೊಲಿಸಲು
ಅವಳ ದಾರಿಯ ಕಾದು ನಿಂತು
ಮನದ ಪ್ರೇಮವ
ಬಹಿರಂಗ ಪಡಿಸಲು ಹೆದರಿ
ತಾ ಸೋತು ಚೆಂದದ‌ ನಗೆ ಬೀರಿ
ಅವಳ ಬೀಳ್ಕೊಟ್ಟಿರುವ!!

- ಪಿ.ಜಿ.ಜ್ಯೋತಿ

07 Apr 2017, 03:25 pm