Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಯ್ಯೋ ವಿಧಿಯೇ
ಯಾಕೆ ಈಗೆ ಮಾಡಿದೆ
ಹಗಲಿನ ಚೈತನ್ಯ ಕಿತ್ತುಕೊಂಡೆ
ಇರುಳಿನ ನಿದಿರೆಯ ಕಿತ್ತುಕೊಂಡೆ
ಪ್ರೀತಿಸಿದವಳ ದೂರ ಮಾಡಿದೆ
ಹೃದಯ ಮಿಡಿಯುವ ವರೆಗೂ
ಕೊರಗುವಂತೆ ಮಾಡಿದೆ
ತೀರಲಿಲ್ಲವೇ ನಿನ್ನ ದಾಹ
ತೆಗೆದುಕೋ ನನ್ನುಸಿರನು
ತೆಗೆದುಕೋ ನನ್ನ ದೇಹವನು
ಛಿದ್ರ ಛಿದ್ರ ಮಾಡಿ
ನಿನ್ನೊಟ್ಟೆ ತುಂಬಿಸಿಕೊಂಡು
ರಕ್ತವನು ಬಸಿದುಕೊಂಡು
ನಿನ್ನ ಬಾಯಾರಿಕೆ ನೀಗಿಸಿಕೋ
ಮೂಳೆಗಳ ಜೋಡಿಸಿ
ನಿನಗೆ ಮಾಲೆಯ ಮಾಡಿಕೋ
ಬಾ ಬೇಗ ಬಾ ನನ್ನೆದೆಯ ಮೈದಾನದಲಿ
ಕುಣಿದು ಕುಣಿದು ಕುಪ್ಪಳಿಸು
....ಚೇತನ್ ಬಿಸಿ
- ಚೇತನ್ ಬಿ ಸಿ
11 Apr 2017, 01:11 am
ಒಂದು ಬಾರಿ ಕಳೆದುಕೊಂಡರೆ
ಮತ್ತೆ ಗಳಿಸಲು ಬಹಳ ಕಷ್ಟ
ಒಡೆದ ಕನ್ನಡಿ ಜೋಡಿಸಲು
ಆಗದ ಹಾಗೆ, ಮುರಿದ ಮನಸು
ಸೇರಿಸಲು ಆಗೋಲ್ಲ.
ಬಲು ಹತ್ತಿರದವರಿಗೆ ದ್ರೋಹ
ಬಗೆದರೆ,ನನ್ನ ವಿಶ್ವಾಸ
ನಾ ಕಳೆದುಕೊಂಡಂತೆ.
ನನ್ನ ಕಂಗಳಲ್ಲಿ ನಾನು ಉತ್ತುಂಗದ
ಶಿಖರ ಏರಬೇಕೆಂದರೆ ನಂಬಿಕೆಗೆ
ಅರ್ಹಳಾಗಿರಬೇಕು.
ಒಂದು ಬಾರಿ ಕಳೆದುಕೊಂಡರೆ
ಗಳಿಸುವದು ಬಲು ಕಷ್ಟ.
ಕವಿ ರಾಜ......
- kavita Rajesh
10 Apr 2017, 10:37 pm
ಅದೆಷ್ಟೋ ಗೋರಿಯೊಳಗೆ
ವಿರಹ ಆಲಾಪಗಳ ಕಚ್ಚೇರಿ
ನಡೆಯುತ್ತಿರಬಹುದು
ಕೇಳದ ಕಿವಿಗಳು ಕಾಣದ
ಕಣ್ಣುಗಳ ಕೊರತೆಯಿಂದ
ದೇಹದ ಸಂಗ ಬಿಟ್ಟ
ಆತ್ಮದ ನೈತಿಕ ವಿಷಯಗಳು
**
ದ್ವಂದ್ವದ ಮುಖಕ್ಕೆ ಲೇಪವಾದ
ಕೆಲವು ಒಲವುಗಳು ಮಳೆ ನಿಂತ
ಟಾರು ರೋಡಿನಂತೆ ಕಂಡು
ಕಾಣದಂತೆ ಒಣಗಿರುತ್ತದೆ
**
ನಿಮ್ಮೊಳಗೆ ನಿಶ್ಚಿತ ಮಾತೊಂದು
ಪದೇ ಪದೇ ಜಾಗೃತವಾಗುತ್ತದೆ
ಇಣುಕಿ ನೋಡಲು ಇಲ್ಲವೇ
ತನ್ಮಯಗೊಳಿಸಲು
**
ಕಾಡ ಹೂ ಅತ್ಯಂತ
ಪವಿತ್ರವಾದದ್ದು
ತನ್ನನ್ನು ತೋರಿಸದೇ
ಬಾಡಿ ಹೋಗುತ್ತದೆ
ಅವಿಜ್ಞಾನಿ
- ಅವಿಜ್ಞಾನಿ
10 Apr 2017, 09:40 pm
ಏಕೋ ಈ ನಿನ್ನ ಕೋಪ ಏಕೋ ಈ ನಿನ್ನ ತಾಪ
ಸುಡುತಿದೆ ಪ್ರತಿಕ್ಷಣ ನನ್ನ ಪ್ರೀತಿಯ ನೆನಪನ್ನ
ಬದುಕಿನ ಸಾರ ಬರಿದಾಗುತಿದೆ ಇಂದು..
ನೂರೊಂದು ಕನಸು ಕಾಣಿದೆ ನಿನ್ನ ನೋಡಿದಾಗ
ಕನಸಲ್ಲೆ ಬದುಕಿದೆ ಪ್ರತಿದಿನ ಕನವರಿಸುತ
ನನಸಾಗದ ಕನಸಾಯಿತು ಎಟುಕಲಾರದ ಹಣ್ಣು
ನಿನ್ನ ಆ ಮುಗುಳುನಗೆಗೆ ಮನಸೋತೆನಂದು
ಮಾಯವಾಗುತಿದೆ ಆ ನಿನ್ನ ನಗೆಯು
ಕರುಳ ಹಿಂಡಿ ಕಲುಷಿತ ವಾಗುತಿದೆ ಈ ಬದುಕು
ನಿನ್ನ ನೆನಪಿಲ್ಲದೆ
ನೂರು ಸಾರಿ ಕ್ಷಮೆ ಕೋರಲು ನಾನು
ತಾಳ್ಮೆಯ ನೀ ಮರೆಮಾಚಿ ತಡೆಹಾಕಿದೆ ನನ್ನ
ನೀನಿಲ್ಲದೆ ಈ ಮನೆಯಾಯಿತು ಸೆರಮನೆ ನನ್ನ ಪಾಲಿಗೆ
ನಂದಿಹೋಗುತಿದೆ ನನ್ನ ಪ್ರೀತಿಯ ನಂದಾದೀವಿಗೆ
ದಯಮಾಡಿ ಹೋಗದಿರು ನಾ ಕಾಣದ ಕಲ್ಪನೆಗೆ
ತೊರೆದಾಕು ಸುಡುವ ನಿನ್ನ ಮಹಾಕೋಪಾಗ್ನಿಯ
ನೀನಿಲ್ಲದೆ ಕಾಣೆನು ಬೆಳಕಿನ ಆಶಾಕಿರಣವ
"ಸೋತು ಗೆಲ್ಲುವ ಪ್ರೀತಿಯ ಗುಣಕೆ
ಆಗಬೇಡ ನೀನು ಗೆದ್ದು ಸೋಲುವ ಅಹಂಕಾರದ ಚಿಹ್ನೆಯು"
ಕಾಯುವೆ ಕೊನೆಕ್ಷಣದೊರೆಗು ನಿನ್ನ ಆಗಮನಕ್ಕೆ
ನನ್ನ ಪ್ರೀತಿ ಅರಮನೆಗೆ ನೀನೆ ಮಹಾರಾಣಿಯು
ಬೇರಾರಿಗೂ ಜಾಗವಿಲ್ಲ ನನ್ನ ಹೃದಯ ಸಿಂಹಾಸನಕ್ಕೆ....
- Irayya Mathad
10 Apr 2017, 09:10 pm
ಕರುಣೆಯ ಕಣ್ಣು
ತೆರೆಯುವುದಿಲ್ಲವೆ ನೀನು
ಧರೆ ಹೊತ್ತಿ ಉರಿಯುವಾಗ
ಎಲ್ಲಿರುವೆ ನೀನು
ಬತ್ತಿ ಹೋಗಿವೆ ಒಣಗಿ
ಕೆರೆ ಕಟ್ಟೆ ಬಾವಿಗಳು
ಅಲೆದಾಡಬೇಕಿನ್ನೆಲ್ಲಿ
ಪ್ರಾಣಿ ಪಕ್ಷಿ ಮೃಗಗಳು
ಅಡಗಿ ಹೋಗಿವೆ ಕೇಳದೆ
ಕುಕಿಲ ಕಾಜಾಣ ಸ್ವರಗಳು
ಪರಿತಪಿಸುತಿವೆ ಸಿಗದೆ
ಆಹಾರದ ಒಂದಗುಳು
ಸಾಕಲಾಗದೆ ಕಟುಕರಿಗೆ
ಪಶುಗಳ ಮಾರಾಟ
ಸಾಕಬೇಕೆಂದರೂ ನೋಡಲಾಗುತ್ತಿಲ್ಲ
ಅನ್ನದಾತನ ಗೋಳಾಟ
ಬೆಂಕಿ ಬಿದ್ದಿದೆ ಹಸಿರ ಸಿರಿ
ನೆರಳ ಖಣಿ ಕಾಡಿಗೆ
ಒದ್ದಾಡುತಿವೆ ವಿಲವಿಲ
ಜೀವಜಂತುಗಳು ಬೇಗುದಿಗೆ
ಅವತರಿಸಿರುವೆ ನೀನು
ಇಳಿದು ಬಾ ಎಂದಾಗ
ಹರಿದಿರುವೆ ನೀನು
ಹೊಳೆದು ಬಾ ಎಂದಾಗ
ಇನ್ನಾದರೂ ಬರಬಾರದೆ
ತಣಿಸಲು ಈ ಜೀವ ಧರೆಯ
ತಪ್ಪಿಸು ನೀ ಬಂದು
ಬೆಂಕಿಯ ಈ ಮಳೆಯ
✍ಚಂದ್ರಶೇಖರ ಹೆಗಡೆ
ಗುಳೇದಗುಡ್ಡ
- ಚಂದ್ರಶೇಖರ ಹೆಗಡೆ
10 Apr 2017, 05:10 pm
ಎತ್ತವಳಿವಳು
ತನ್ನ ಉಸಿರ ಮರೆತು
ನನಗೆ ಉಸಿರಿತ್ತವಳು
ತಾ ಕಂಡ ನೋವನೇ ಮರೆತು
ನನ್ನ ಕಂಡು ನಕ್ಕವಳು
ನಾನವಳ ಒಡಲ ಕೂಸು
ತನ್ನ ಒಡಲಲಿ ನೋವನೆ ಬಚ್ಚಿಟರು
ನನಗೆ ನಗುವ ಕಲಿಸಿದವಳು
ತಾಯಿಯೇ ದೈವ, ಅಮ್ಮನೇ ಮೊದಲ ಗುರುವು
ನನ್ನ ಕೈ ಹಿಡಿದು ಅಕ್ಷರ ಕಲಿಸಿ
ಮನಸು ಮಾನವತೆ ತುಂಬಿದ ಗಳು
ನೋವು ಕಷ್ಟಗಳ ಕಂಡರೇನಂತೆ
ನಗು ನಲಿವ ಹೊಸ ಕನಸಿಗೆ
ಅವಳ ಮಡಿಲೇ ಕಲ್ಪವೃಕ್ಷದಂತೆ
ಸೋತಿರಲು ನಾನು ನನ್ನನೇ ನಂಬದೇ
ಅವಳೇ ಸ್ಪೂರ್ತಿಯ ಹಣತೆಯು
ನವ ಕನಸುಗಳ ಹಚ್ಚುವ ಜ್ಯೋತಿಯು
- ಶ್ರೀಕಾವ್ಯ
10 Apr 2017, 02:07 pm
ತಾಳು ಮನವೇ ತಾಳು
ಕಾಡದಿರು ಕನಸುಗಳ ಹೊತ್ತು
ಬದುಕಿ ದು ಮರೀಚಿಕೆಯಾಗಿಹುದು ಈ ಹೊತ್ತು
ಕನಸುಗಳ ಗುಂಗಲಿ ನೀನು
ಬದುಕಿನ ಹೊಡೆದಾಟದಲ್ಲಿ ನಾನು
ಕನಸುಗಳೇ ಅಂತಿಮ ಪರ್ವವು ನಿನಗೆ
ನನಸಾಗಿಸಲಾಗದ ಸಂಕಟವು ನನಗೆ
ಕನಸುಗಳ ಸುಖವು ನಿನಗೆ
ನನಸಾಗದ ದುಃಖವು ನನಗೆ
ಇತ್ತ ನಿನ್ನ ಕನಸುಗಳೇ ದರಿಯಂತಾಗಿರಲು
ಕಾಣದವನ ಆಟವೇ ಪುಲಿಯಂತಾಗಿರಲು
ಎತ್ತ ಸಾಗಲಿ ನಾನು
ನನ್ನ ಮನವೇ ಕಂಡ ದರಿಯ ಪಾಲಾಗಲೇನು
ಎಲ್ಲ ಬಲ್ಲ ವನ ಆಟವೆಂದು ಪುಲಿಯ ಬಾಯಲಿ ಸೇರಲೇನು
ಅಂತಿಮ ಉತ್ತರವೇ ಸಿಗದ ಆಟವಿದು ಬದುಕು
ಕಂಡ ಉತ್ತರದೊಳಗೂ ಸಾವಿರ ಪ್ರಶ್ನೆಯ ತಿರುವು
ಕೊನೆಯಾಗದ ರಸಪ್ರಶ್ನೆಯ ಕಾರ್ಯಕ್ರಮ ನನ್ನೊಳಗೆಂದೂ
ಕಾಣದ ಆಟದಲಿ ಉತ್ತರವೇ ಅಂತಿಮವೆಂದರೂ
ಹೋಗುವುದಾದರು ಎಲ್ಲಿಗೆ ಕವಲೊಡೆದ ದಾರಿಯಲಿ
ಅದರ ಅಂತ್ಯವ ಬಲ್ಲವರಾರು ಇಲ್ಲಿ......
- ಶ್ರೀಕಾವ್ಯ
10 Apr 2017, 01:44 pm
ಮಳೆ ಬಂದು ನಿಂತಾಗ ಕಾಗದದ ದೋಣಿ
ಬಿಡುವ ಸಂತಸ ಅಂದು
ರಜ ಬಿಟ್ಟಾಗ ಅಜ್ಜನ ಊರಿಗೆ ಹೋಗುವ
ಸಂಭ್ರಮ ಅಂದು
ಮಕ್ಕಳೆಲ್ಲ ಸೇರಿ ಹುಣಸೆ ಚಿಗಳಿ ಕುಟ್ಟೋ
ಸಾಹಸ ಅಂದು
ದೀಪದ ಬೆಳಕಿನಲ್ಲೂ ಸಹ ಕುಳಿತು
ಆಡುವ ಉತ್ಸಾಹ ಅಂದು
ಲಗೋರಿ, ಕುಂಟೆಬಿಲ್ಲೆ,ಐಸ್ ಪೈಸ್,
ಕವಡೆ ಆಟ ಅಂದು
ಊರಿಗೆ ಹೋದ ಗೆಳತಿಗೆ ಪತ್ರ
ಬರೆವ ತುಡಿತ ಅಂದು
ಅಜ್ಜನ ಕತೆಗಳು, ಅಜ್ಜಿಯ ತಿಂಡಿಗಳು
ರಸದೌತಣ ಅಂದು
ಒತ್ತಡ ತುಂಬಿದ ಇಂದಿನ ದಿನಗಳಲ್ಲಿ
ಕಳೆದು ಹೋಗಿದೆ ಅಂದು
ಕವಿ ರಾಜ.......
- kavita Rajesh
09 Apr 2017, 10:52 pm
ಗೆಳತಿ ನಿನ್ನ ಮಾತುಕೇಳಿ
ಸುಮ್ಮನೆ ಗುನುಗುತ್ತಿದೆ
ಸರಿಗಮ ಸಂಗೀತ
ನನ್ನೆದೆಯ ಏಕಾಂತದಲ್ಲಿ಼಼಼಼಼
ನಾನು}
- Basava
09 Apr 2017, 10:05 pm
ಮರಳು ದಂಡೆಯ ಮೇಲೆ ಗೀಚಿದ ಹೆಸರು
ನಡುವೆ ಸವೆದು ಹೋದ ಕಾಲು ದಾರಿಗಳು
ಕೈಬೀಸಿ ನನ್ನ ಕರೆಯುತ್ತಿರಲು..
- ನಮಿತ ಗಟ್ಟಿ
09 Apr 2017, 05:01 pm