Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯೊಳಗೇನಿದೆ...

ಪ್ರೀತಿಯೊಳಗೇನಿದೆ ನಾಕಾಣೆ
ಹತ್ತಿರವಿದ್ದರು ದೂರ ಇದ್ದಹಾಗೆ
ದೂರವಿದ್ದರೆ ಹತ್ತಿರ ಇದ್ದಹಾಗೆ

ತಂಪಾದ ಮನದೊಳಗೆ ನೆನಪುಗಳ ಓಲೆಯ ಹಾಗೆ
ಆಕಾಶದಿ ಗರಿಗೆದರಿ ಹಾರುವ ಹಕ್ಕಿಯ ಹಾಗೆ
ಮತ್ತೆ ಬೀಸುವ ವಿರಹದ ಬಿಸಿಗಾಳಿಯ ಹಾಗೆ

ನೆನೆದಾಗ ಬರದ ತಂಗಾಳಿಯ ಹಾಗೆ
ಮಿಡಿದಾಗ ಮನ ಕೇಳದ ಸ್ವರಗಳ ಹಾಗೆ
ಅರೆಕ್ಷಣ ಬಂದು ಮರೆಯಾಗುವ ಮೋಡದ ಹಾಗೆ

ಮುಗುಳುನಗೆಯ ಹೂದೋಟದ ಹಾಗೆ
ಮೈಮರೆತು ಮನದೊಳಗೆ ಸೋತ ಹಾಗೆ
ಮತ್ತೆ ಪ್ರೀತಿಯ ತುಂತುರು ಹನಿಯಹಾಗೆ

ಕನಸಿನ ಅರಮನೆಗೆ ದಾರಿಯ ಹುಡುಕಾಟದ ಹಾಗೆ
ಭಾವನೆಗಳ ಸಾಗರದ ಮೇಲೆ ಅನುರಾಗದ ಅಲೆಯ ಹಾಗೆ
ಮೋಹಿಸಿ ಮರೆಯಾಗುವ ಮಾಯೆಯ ಹಾಗೆ...

- Irayya Mathad

11 Apr 2017, 10:26 pm

ನೀನಿರುವೆ ಎಂದು........✍

ನಿನ್ನ ರೂಪವೇ ತುಂಬಿದೆ
ನನ್ನ ಕಣ್ಣೆಲ್ಲಾ.......

ನಿನ್ನ ನಗೆಯ ಸದ್ದೇ
ತುಂಬಿದೆ ನನ್ನ ಹೃದಯವೆಲ್ಲಾ.........

ನಿನ್ನ ಕರೆಗೆ ಓಗೊಡುವ ನನ್ನ ಮನಕೆ
ಹೇಳೋ ಗೆಳಯ ಅಷ್ಟೊಂದು ಆತಂಕ
ಬೇಡವೆಂದು ನನಗಾಗಿ ನೀನಿರುವೆ ಎಂದು.....

- ಚುಕ್ಕಿ

11 Apr 2017, 09:30 pm

ಕಣ್ಣಂಚಿನ‌ ನಗುವ ಕಂಡು

ನಿನ್ನ ಕಣ್ಣಂಚಿನ ನಗುವ ಕಂಡು
ಸೆಳೆಯಿತು‌‌ ಹೃದಯವು ನಿನ್ನೆಡೆಗೆ ಅಂದು

ನೀ‌ ಒಡೆದಿರಲು‌ ಮನಸ ‌ನಗುವ ಕೊಂದು
ಜಾರುತಿಹುದು‌ ನೀರಹನಿಯು ಕಣ್ಣಂಚಲಿ‌‌ ಇಂದು

ಮೊದಲ‌ ಮಳೆಯ ಕಾಯುತಿರುವ ಜಾತಕ ಪಕ್ಷಿಯು ನಾನು
ಸುಡುವ ಬಿರು‌ ಬಿಸಿಲಾದೆಯಲ್ಲ‌ ನೀನು

ಕಣ್ಣೊಡಲಲಿ‌ ತುಂಬಿದೆ ಬಣ್ಣದ ಕಾಮನಬಿಲ್ಲು
ಕಾಣುವ ಮೊದಲೇ ಸುರಿದೆಯಲ್ಲ ಇರುಳಿನ‌ ಕಡಲು

ಕನಸುಗಳ‌ ತೋಟದೊಳಗಿನ‌ ಹಾರುವ ಪತಂಗವು ನಾನು
ರೆಕ್ಕೆಯ ಮುರಿದು ಹಾರಲು‌ ಹೇಳುತಿರುವೆ ನೀನು

ನಗುವ ತುಟಿಯ ಅಂಚಲು ನೋವಿನ ಜೋಕಾಲಿ
ಮುಂಗುರುಳ ಹಾರಾಟದಲು ನೆನಪಿನ ಲಾಲಿ

ನನಸಲು ಕಾಣದ ನಿನ್ನದೆ ಮಾರ್ದನಿ
ಕಂಡ ಕನಸಲು‌ ಹೇಳಲಾಗದ ನೋವಿನದೆ‌ ದನಿ

- ಶ್ರೀಕಾವ್ಯ

11 Apr 2017, 09:12 pm

ನೆನಪಿನ ಮಾತು..

ಮರಿಬೇಕು ಅನ್ಕೋತ್ತಿನಿ ಆದರೆ ಮನಸ್ಸು ಒಪೋಲ್ಲ
ದೂರ ಅಗ್ಬೇಕು ಅನ್ಕೋತ್ತಿನಿ ಆದರೆ ನೆನಪುಗಳು ಕೆಳೋಲ್ಲ
ಪ್ರೀತಿಸಬಾರದು ಅನ್ಕೋತ್ತಿನಿ ಆದರೆ
ಹೃದಯ ಬಿಡೋಲ್ಲ
ಅನು..

- Anu...

11 Apr 2017, 07:04 pm

ಪ್ರಶ್ನೆಗಳ ಹೃದಯ

ನೀ ನನಗೆ ಸಿಗುವುದು ಪ್ರಶ್ನಾರ್ಥಕ..?
ನನ್ನ ಜೀವನವೆಲ್ಲ ನೀ ನನ್ನ
ಜೊತೆಗಿರುವುದು ಪ್ರಶ್ನಾರ್ಥಕ.....?

ನನ್ನ ರೂಪ ನಿನ್ನೆದೆಯಲ್ಲಿರುವುದು
ಪ್ರಶ್ನಾರ್ಥಕ........?
ನಿನ್ನ ನೆನಪುಗಳು ನನ್ನ ಬಿಟ್ಟು
ಹೋಗುವುದು ಪ್ರಶ್ನಾರ್ಥಕ......?

ನೀನೊಂದು ಪ್ರಶ್ನೆ......?
ನಾನೊಂದು ಪ್ರಶ್ನೆ...... ?
ಈ ಎರಡು ಪ್ರಶ್ನೆಗಳ ಒಂದೆಡೆಗೆ
ಸೇರಿಸಿದರೆ ಅದಾಗುವುದು ನಮ್ಮಿಬ್ಬರ
ಹೃದಯ ಬಂಗಾರ ಹೃದಯ .❤

- ಚುಕ್ಕಿ

11 Apr 2017, 05:10 pm

ಮನಸಲ್ಲಿ

ನನ್ನ ಮೌನ ನಿನ್ನ ಕರೆದು ಕರೆದು
ಬೇಸರಗೊಂಡಿದೇ..........
ನನ್ನ ನಾನೇ ನನ್ನಿಂದ ದೂರ
ಮಾಡಿಕೊಳ್ಳುತ್ತಿರುವೆ ನಿನಗಾಗಿ....

ಯಾರು ಕಾಣುತ್ತಿಲ್ಲ,ಎಲ್ಲಿಯೂ
ಹೋಗಿಲ್ಲ ನಿನ್ನ ಹುಡುಕಿ ಹುಡುಕಿ
ಸಾಕಾಯಿತು ನನ್ನ ಕಣ್ಣಲ್ಲಿ.

ಕೊನೆಗೂ ನೋಡುತ್ತಾ ಕುಂತೆ
ನಿನ್ನ ನನ್ನ ಮನಸಲ್ಲಿ..........

- ಚುಕ್ಕಿ

11 Apr 2017, 04:53 pm

∆" ಪ್ರೇಮ-ವಿರಹ-ಗೀತೆ "∆ ^^^^^^^^^^^^^^^^^^

" ಓ ಸಖಿಯೇ ಬಾ ಜೀವ ಉಳಿಸು
ನಾ ಬದುಕಲಾರೆನು ನಿನ್ನ ಮರೆತು
ಕಾಣದಾಯಿತೇ ನಿನ್ನ ಪ್ರೇಮದ ಗುರುತು
ಪ್ರೀತಿಯ ಸ್ವೀಕರಿಸು ನನ್ನರಿತು !!ಪ!!

ನನ್ನ ನೋವುಗಳೆಲ್ಲವ ಮರೆಸು
ನಿನ್ನ ಪ್ರೀತಿಯ ದೀಪ ಬೆಳಗಿಸಿ
ನನ್ನ ನಲಿವುಗಳೆಲ್ಲವ ತಣಿಸು
ನಿನ್ನ ಪ್ರೇಮದ ರೂಪ ಅರಳಿಸಿ !!೧!!

ನೀನಿಲ್ಲದೇ ನನಗಾರು ಗತಿಯೇ?
ಬಂದು ಸೇರು ನನ್ನ ಮನದ ರತಿಯೇ!
ನೀನೇ ನನ್ನ ಜೀವದ ಬೆಳಕು
ಕಾರಣ ಸಾಗಿದೆ ನನ್ನ ಈ ಬದುಕು !!೨!!

ಹೆಜ್ಜೆಯೊಂದಿಗೆ ಪ್ರೇಮದ ಗೆಜ್ಜೆಯ ನಾದ
ಅದನು ಬದಲಿಸದಿರು ಓ ಗೆಳತಿ
ಮರಳಿ ಬರುವೆಯಾ ನನ್ನರಸಿ
ಕಾದಿಹುದು ನನ್ನ ಸಹೃದಯ !!೩!!
- ₹HRD₹

[ಬರಹ]
ಗಣಿನಾಡಿನ ಗಿಣಿ
ರಾಮಪ್ಪ ದುಮ್ಮಾಡಿ

- RAMAPPA DUMMADI

11 Apr 2017, 04:12 pm

ಕಂಗಳ ಅಂಗಳ

ಕಂಗಳ ಅಂಗಳದಿ ಚಂದಿರನಾಗಿ ನೀನಿರಲು..
ಎದೆಯೊಳಗಿನ ಭುವಿಗೆ ಬೇಕಿಲ್ಲ ಹೊಂಬೆಳಕಿನ ಮುಗಿಲು.....
ನೆನಪುಗಳ ಸಾಲಿನಲ್ಲಿ ತೇಲಿ ಬಂದ ತಂಗಾಳಿಯು ನೀನು...
ಸಿಹಿಹೂಗಳ ಮಕರಂದದಲ್ಲಿರುವ ಸವಿಯಾದ ಜೇನು....
ನಿನ್ನೊಡಲ ಮಡಿಲಲ್ಲಿ ಮಗುವಂತೆ ಮಲಗಿರಲು ನಾನು....
ಮಮತೆಯಿಂದ ಮುದ್ದಿಸುವ,ಮ್ರದುವಾದ ಮನಸಿರುವ ಮಾತ್ರು ನೀನು....

- raki

11 Apr 2017, 03:27 pm

ನಲ್ಲೆ..

ನನ್ನ ನಲ್ಲೆಯ ಚೆಲುವಿಗೆಲ್ಲಿಯ ಎಲ್ಲೆ ?
ಹಲುಬುವಾ ಶಬ್ದಗಲೆ ಹಾಳೆಗಳ ಮೆಲೆ..
ಹುಂಬು ಹಂಬಲವೆ ಮನದಾಳದೊಳಗೆ..
ನನ್ನ ಸರಸಿಯ ಸನಿಹ ಸಾದ್ಯವೇ ವಿಧಿಯೇ?

- ಅರ್ಜುನ್ ತಿಲಕ್

11 Apr 2017, 01:25 pm

ತುಟಿಯಲ್ಲಿ

ಮರೆತಾಗ ತುಟಿಗೆ ಬಾರದೆ
ಮೋಡ ಮರೆಯೊಳಗೆ
ಬೆಳ್ದಿಂಗಳು ನಿನ್ನ ಹೆಸರು...
ನೆನೆದಾಗ ಕಣ್ಣಮುಂದೆಲ್ಲ
ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು

- SR

11 Apr 2017, 11:40 am