ಸೂರ್ಯನ ಕಿರಣಗಳು
ಮಾಡಿವೆ ಭೂಮಿ ಮೇಲೆ ದಾಳಿ..
ಬಿಸಿಲಿನ ಬೇಗೆ ತಾಳದೆ
ಕಾದು ಹೋಗಿದೆ ತಣ್ಣನೆ ಗಾಳಿ..
ರಣ ಬಿಸಿಲಿನ ಕೋಪಕ್ಕೆ !
ಕರಗಿದೆ ಹೆಣ್ಣಿನ ಎದೆ ಮೇಲಿನ ತಾಳಿ..
ನಡುಗುತ್ತಿವೆ ಪ್ರಾಣಿ ಪಕ್ಷಿಗಳು
ನೋಡಿ ಬೇಟೆಯಾಡೋ ಬಿಸಿಗಾಳಿ...
ಸೂರ್ಯೋದಯವನ್ನು ನೋಡಲು
ಕಾದುಕುಳಿತಿದ್ದೆ ಚಳಿಗಾಲದಲ್ಲಿ.!
ಸೂರ್ಯಾಸ್ತನಾದರೆ ಸಾಕು ಎಂದು
ಬೇಡಿಕೊಳ್ಳುವೆ ಈಗ ಆ ಭಗವಂತನಲ್ಲಿ.!
ಬಟ್ಟೆ ಒಣಗಿದರೆ ಸಾಕು,
ಡ್ಯೂಟಿಗೆ ಹೋಗಬೇಕೆಂಬ ಚಿಂತೆ ಮಳೆಗಾಲದಲ್ಲಿ.!
ಬೆವರಿನ ಹೊಳೆಯಲ್ಲಿ ಮುಳುಗಿ
ಬಿಸಿಲಿನ ಧಗೆಯಲ್ಲಿ ಒಣಗಿರುವೆ ಈ ಬೇಸಿಗೆಯಲ್ಲಿ.!
ಕಾಡು ಬೆಳೆಸಿ, ಮುಂದಿನ ಪೀಳಿಗೆ ಉಳಿಸಿ,
ಕೆರೆಗಳನ್ನ ತೊಡಿಸಿ, ಪ್ರಾಣಿ ಪಕ್ಷಿಗಳ ದಾಹ ತೀರಿಸಿ,
ಗಿಡಮರಗಳಿಂದ ಕಾಡು, ಕಾಡಿಂದ ನಾಡು,
ಕಾಡಿಲ್ಲದಿದ್ದರೆ ಕಷ್ಟವಾಗುವುದು ಜನರ ಪಾಡು...
ಪ್ರೀತಿ ಇದೊಂದು ಹೆಸರ? ಖಾಯಿಲೆನ? ಜೀವನನ? ಅಥವಾ ಸಿಹಿಯಾದ ಭಾವನೆನ...!
ಪ್ರೀತಿ ಬಲೆಗೆ ಬಿದ್ದು ಹೊರಬಂದವರೆಷ್ಟೋ..?
ಅದರಲ್ಲಿ ಸಿಕ್ಕಿಬಿದ್ದು ಸತ್ತವರ ಸಂಖ್ಯೆ ಇನ್ನೆಷ್ಟೋ..?
ಇದರಿಂದ ಲಾಭ ಉಲ್ಲವರೆಷ್ಟೋ,
ನಷ್ಟ ಅನುಭವಿಸದರಿನ್ನೆಷ್ಟೋ,.?
ಪ್ರೀತಿ ಸಮುದ್ರವನ್ನು ದಾಟಿಸುವ ಶಕ್ತಿಯು ಹೌದು,
ಪರ್ವತ ಶಿಖರವನ್ನು ಚುಮ್ಮಿಸುವ ಪ್ರೇರಣೆಯೂ ಹೌದು,
ಕೋಟ್ಯಾಧಿಪತಿಯನ್ನು ರೋಡಿಗೆ ತರುವ ದರಿದ್ರನು ಹೌದು,
ಭಿಕ್ಷುಕನನ್ನು ಕೊಟ್ಯಧಿಷನಾಗಿ ಮಾಡುವ ಶಕ್ತಿಯು ಹೌದು,
ಪ್ರೀತಿಯ ಕಟು ನೀತಿಗೆ ಮುರಿದುಹೋದ ಸಂಬಂಧಗಳೆಷ್ಟೋ,
ಪ್ರೀತಿಯ ಶಾಪಕ್ಕೆ ಮಸಣ ಕಂಡ ಹೆಣಗಳೇಷ್ಟೋ,
ಪ್ರೀತಿಯ ಆಟಕ್ಕೆ ಬೀದಿ ಬೀದಿ ತಿರುಗುತ್ತಿರೋ ಪ್ರೆಮಿಗಳೇಷ್ಟೋ,
ಪ್ರೀತಿಯ ಹುಚ್ಚಿಗೆ ಅಪ್ಪ ಅಮ್ಮಂದಿರು ತಿಂದ ನೋವುಗಳೇಷ್ಟೋ...
ಪ್ರೀತಿ ಇದೊಂದು ಕಾಲ್ಪನಿಕ ಸುಮಧುರ ಭಾವನೆ,
ನೆತ್ತಿಗೆ ಏರಿಸಿಕೊಂಡರೆ ಜೀವನ ಕಾಣುವುದು ಕೊನೆ,
ಜೀವನದ ಭಾಗವಾಗಿ ಸ್ವೀಕರಿಸಿದರೆ ಬಾಳಗುವುದು ಹಾಲು ಜೇನೆ,
ಪ್ರತಿ ಒಬ್ಬರಲ್ಲು ಪ್ರೀತಿ ಹಂಚಿದರೆ ಮೆಚ್ಚುವನು ಆ ಭಗವಂತನೇ,
✍️ ತಿಮ್ಮಪ್ಪ
ಉರಿವ ಗಾಯಕ್ಕೆ ಔಷದಿ ನಾನಾಗುವೆ...
ಚಿರನಿದ್ರೆಗೆ ಜಾರುವ ಮುನ್ನ ನಿನ್ನ ಜಾಗೃತಗೊಳಿಸುವೆ... ಅಂಟಿರುವ ಹಳೆ ನೆನಪ ಅಳಿಸಿ ಹೊಸ ಪುಟವ ಗೀಚುವೆ.....
ಅದೇ ರಸ್ತೆ, ಜಾಗಗಳಲ್ಲಿ ಮರಳಿ ನನ್ನೊಂದಿಗೆ ಹೊಸ ಹೆಜ್ಜೆ ಇಡುವೇ...
ಓಲಯ ಬರೆಯೆ ಬೆರಳಿಗಂಟಿದ ಮಸಿಯಂತೆ, ಹೂಗಳ ಬೆಳೆಯೇ ಕೈಗಂಟಿದ ಮಣ್ಣಂತೆ, ಸಾವಿರ ಜನ್ಮಕೂ ನಿನ್ನವನಾಗುವೆ....
ಎಮ್.ಎಸ್.ಭೋವಿ...✍️
ನಿನ್ನ ಕಣ್ಣ ಸನ್ನೆ,
ನನ್ನ ಕಾಡಿದೆ ಹೆಣ್ಣೇ....
ನಿನ್ನ ಹೊಳೆವ ಕಂಗಳು,
ನಾಚಿಸಿವೆ ಬೆಳದಿಂಗಳು,
ಕೆಂಪಾದ ಆ ಕೆನ್ನೆ,
ಬೇಡವಾಗಿಸಿದೆ ಬೆಣ್ಣೆ,
ಅಧರವದೋ ಬಲು ಮಧುರ,
ಸುಮಧುರ ಮನೋಹರ,
ನೀ ನಕ್ಕಾಗ ನನ್ನ ಮನ,
ಪರಿಮಳ ಭರಿತ ಹೂ ಬನ,
ನಿನ್ನ ಕುಡಿ ನೋಟದಾ ಸೆಳೆತ,
ಕದ್ದೋಯ್ಯುತಿದೆ ನನ್ನೆದೆಯ ಬಡಿತ,
ಇನ್ನು ಅರಿಯಲಾರೆಯಾ ನೀನು ನನ್ನ ಮನದ ಇಂಗಿತ..
ಮರೆತಾದರೂ ಅರಿ ನೀ ಒಮ್ಮೆ,
ನನ್ನೊಲುಮೆ ಇಹುದು ಬರವಿಲ್ಲದಾ ಚಿಲುಮೆ...
----- tippu -----
- tippu
28 Feb 2024, 11:03 pm
ಪ್ರೀತಿ ಬಂದರೆ ಮನಸ್ಸು ಭಾರ.... ಸಾಲ ಮಾಡಿದರೆ ಹಣ ಭಾರ ....... ಸುಮ್ಮನಿದ್ದರೆ ಕಾಲಕ್ಕೆ ಭಾರ....... ದುಡಿಮೆ ಇಲ್ಲದಿದ್ದರೆ ಕುಟುಂಬಕ್ಕೆ ಭಾರ.. ನಂಬಿಕೆ ಇಲ್ಲದಿದ್ದರೆ ನಿನಗೆ ನೀನೇ ಭಾರ.... ಹುಟ್ಟೋ ಮುನ್ನ ತಾಯಿಗೆ ಭಾರ..... ಸತ್ತ ಮೇಲು ಭೂಮಿಗೆ ಭಾರ..... (ಹರಿಪಾರ್ವತಿ)