Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮತ್ತದೇ ನೆನಪು

ಕೆದಕದಿರು ಹೂತು ಹೋದ ಸತ್ಯಗಳ
ಕರೆಯಬೇಡ ಮರೆತಿರುವ ನೆನಪುಗಳ

ಹಾಡದಿರು ಅದೇ ಹಳೆಯ ರಾಗಗಳ
ಓದಬೇಡ ತಿರುಗಿ ಮತ್ತವೇ ಪುಟಗಳ

ಕಾಣದಿರು ನನಸಾಗದ ಕನಸುಗಳ
ಹುಡುಕಬೇಡ ಕಳೆದ ಕ್ಷಣಗಳ

ನೋಡದಿರು ಮಾಸಿದ ನೋಟಗಳ
ಬರೆಯಬೇಡ ಮರಳಿ ಅಳಿಸಿದ ಪದಗಳ

ಕಣ್ತೆರೆದು ನೋಡು ಹೊಸ ಕಿರಣಗಳ
ಬಣ್ಣ ಬಣ್ಣವಾಗಿದೆ ಬಾನಂಗಳ

ಕವಿ ರಾಜ

- kavita Rajesh

14 Apr 2017, 10:22 pm

ಮೋಸ ಹೋದಹೃದಯ

ಯಂದೋ ಬಿಟ್ಟು ಹೋದಳು ನನ್ನ
ಕಾಯುತ್ತಾ ಕುಳಿತೆ ಅವಳು ಬರುವ
ದಾರಿಯನ್ನ ಬಂದಳು ಅವಳು
ಉಸಿರು ಹೋಗುವ ಮುನ್ನ
ಹೇಳಿ ಹೋದಳು ಮರೆತು ಬಿಡು ನನ್ನ
.......ಮೋಸ ಹೋದ ಹೃದಯ

- manu

14 Apr 2017, 07:40 pm

ಪ್ರೀತಿ

ನಾ ಸೋತು ಅವಳ ಪ್ರೀತಿ ಗೆಲ್ಲಬೇಕೆಂದುಕೂಂಡೆ..
ಗೆದ್ದ ಅವಳು ರಾಣಿಯಾದಳು
ನಾನ್ ಅವಳ ಸೇವಕನಾದೆ......

....................

- ravi king

14 Apr 2017, 06:50 pm

ಹಕ್ಕಿ

ಮುಗಿಲ ಎತ್ತರಕ್ಕೆ
ಹಾರುವುದು ಹಕ್ಕಿ
ತಾ ರೆಕ್ಕೆ ಬಿಚ್ಚಿ ಬಡಿದು!!
ಗಿಡ ಮರದಿ ನಲಿದು
ಊರೂರು ಅಲೆದು
ಹಾರಾಡುತಿಹುದು ಹಕ್ಕಿ!!

ಈ ಗಾಳಿಯಲ್ಲಿ
ತಾ ತೇಲಿ ತೇಲಿ
ಹಾರುವುದು ಪುಟ್ಟ ಹಕ್ಕಿ!!
ಹಸಿರೆಲೆಯ ನಡುವೆ
ಆ ಕೊಂಬೆಯಲ್ಲಿ
ಜೀಗುವುದು ಗೂಡು ಕಟ್ಟಿ!!

ಹೂ ಹಣ್ಣ ಜೊತೆಗೆ
ಗೆಳೆತನವ ಬೆಸೆದು
ಸವಿಯುವುದು ಅದರ ರುಚಿಯ!!
ಆ ಕೊಂಬೆಯಿಂದ
ಈ‌ ಕೊಂಬೆ ಸುತ್ತಿ
ನಲಿಯುವುದು ಅದು ಬಹಳ!!

ಇರುಳಲ್ಲಿ ಮಿನುಗುವ
ಆ ಚುಕ್ಕಿಯನ್ನು
ಸೇರುವ ಬಯಕೆಯು ಅದಕೆ!!
ಹಗಲೆಲ್ಲ ಅಲೆದು
ಆ ಚುಕ್ಕಿ ಸಿಗದೇ
ಮರಳುವುದು ಗುಡಿನೆಡೆಗೆ!!

- ಪಿ.ಜಿ.ಜ್ಯೋತಿ

14 Apr 2017, 11:24 am

ಕನ್ನಡ

ಭಾಷೆಯಲಿ ಕನ್ನಡವು
ಅತಿ ಮಧುರ ಹೊನ್ನುಡಿಯು!!
ಬರಹದಲಿ ಕನ್ನಡವು
ಸಿರಿತನದ ಮುನ್ನುಡಿಯು!!

ತೊದಲು ನುಡಿಯಲಿ ಕಲಿತ
ಮೊದಲ ಮಾತದು ಮಧುರ!!
ಸ್ವರದಿ ನುಡಿಯಲು ಪದವ
ದೊರೆತ ವರವದು ಜಿಹ್ವೆ ಅದರ!!

ಕಲೆತು ನುಡಿಯಲು ಬಲ್ಲೆ
ಬರೆದು ಓದುವುದ ಬಲ್ಲೆ!!
ಬೆಲ್ಲದ ಸಿಹಿತನವು ಈ ಭಾಷೆ
ಕೇಳಿ ನುಡಿಯದಿರೆ ಹತಾಶೆ!!

ಹೆಮ್ಮೆಯ ಪದವದು
ಅದ ನುಡಿಯಲು ತವಕ!!
ಕಸ್ತೂರಿ ಕನ್ನಡವೇ
ನಮ್ಮ ಕರುನಾಡ ತಿಲಕ!!

- ಪಿ.ಜಿ.ಜ್ಯೋತಿ

14 Apr 2017, 11:16 am

ವಿಷತನ

ಕಾಳಿಂಗದ ಸಂಗವ ಮಾಡಿ
ಮೈಯೆಲ್ಲ ವಿಷವಾಗಿ
ಒಳಿತನ್ನು ನಾಶ ಮಾಡುವ ಬದಲು
ಕೊಂದುಬಿಡು ನಿನ್ನ ವಿಷತನವ!!

ಹಾಲನ್ನೇ ಉಂಡರೂ
ಹಾಲಾಹಲವ ಕಕ್ಕುವ ಆ
ದುಷ್ಟ ಹಾವಿನ ಗೆಳೆತನವದೂ
ಸಲ್ಲದೂ ನಿನಗೆ!!

ಕೆಟ್ಟ ಯೋಚನೆಯಲಿ
ಹೊಂಚು ಹಾಕಿ ನೀ ಕಬಳಿಸಿದರೆ
ಆ ಭಾಗ್ಯ ಅದೆಷ್ಟು ದಿನ
ನಿನ್ನ ಹಿಂಬಾಲಿಸಿ ಬರುವುದು!!

ನುಡಿಯಲಿ ಸತ್ಯವಿರಲಿ
ನಡತೆಯು ಶ್ರೇಷ್ಠವಾಗಿ ಇರಲಿ
ಎಲ್ಲರೂ ಮೆಚ್ಚುವ ಕಾಯಕವ ನೀ
ಮಾಡಿದರೆ ಕರಗುವುದು ನಿನ್ನ ವಿಷತನ!!

- ಪಿ.ಜಿ.ಜ್ಯೋತಿ

14 Apr 2017, 11:02 am

ಹೆಜ್ಜೆ ಹಿಂದೆ

ಸಾಗಿದಷ್ಟು ಹೆಜ್ಜೆ ಹಿಂದೆ
ಚಲಿಸಿದಷ್ಟು ದಾರಿ ಮುಂದೆ!!
ಏರಿದಷ್ಟು ಬೆಟ್ಟ ಮುಗಿಲೆತ್ತರ
ಹತ್ತಿದಷ್ಟು ಮೆಟ್ಟಿಲು ಅಸಂಖ್ಯ!!

ನಿಂತಷ್ಟು ಅಸ್ತಿರ ಈ ಬದುಕು
ಕುಳಿತಷ್ಟು ಆಲಸ್ಯ ಈ ಜೀವನ!!
ಕ್ಷಣ ಮಾತ್ರಕೆ ಇರುವ ಸ್ತಿರತೆ
ನಿಲ್ಲದೇ ಓಡಿ ಮುಗಿಸುವುದು ಬದುಕ!!

ಬಿದ್ದಾಗ ಬರುವ ಸೋಲು ಮರೆತು
ಎದ್ದು ನಡೆದರೆ ಅದೇ ಗೆಲುವು!!
ನಡೆವ ದಾರಿಯಲಿ ಮತ್ತೆ ಎಡವಿದರೇ
ಅದೇ ಜೀವನದ ಸೋಲು ಗೆಲುವು!!

ಇಡೀ ವಿಶ್ವವ ಕಟ್ಟಲಾಗದಿರೆ ನೀ
ಈ ಬದುಕಿಗೊಂದು ಸೂರು ಕಟ್ಟಿಕೋ!!
ನೆನಪಿಡು ಕ್ಷಣಮಾತ್ರದ ಈ
ಬದುಕಿಗೆ ಒಂದು ಕೊನೆ ಇಹುದು!!

- ಪಿ.ಜಿ.ಜ್ಯೋತಿ

14 Apr 2017, 10:51 am

ನಮ್ಮ ಕಿನ್ನರಿ....

ನಗುತಿದೆ ಬಿಂದಿ..
ಕುಳಿತು ಹಣೆಯ ತುದಿ..
ನಲಿಯುತಿದೆ ನವಿಲ್ಗರಿ..
ಕಣ್ಣ ಒಳ ಸೇರಿ..
ಕೆಣಕುತಿದೆ ಮುಂಗುರುಳು..
ಮಾಡಿ ಎಲ್ಲರಿಗೂ ಮರುಳು..
ಮುಗುಳ್ನಗುತಿದೆ ಗುಲಾಬಿ..
ಕೆಂದುಟಿಗೆ ಮುತ್ತಿಕ್ಕಿ..
ಕಿರುನಗುತಿಹಳು ಕಿನ್ನರಿ
ಇವಲ್ಲಾ ತನ್ನದೇ
ಎಂದೆಣಿಸಿ....

- KR Sreekamala

14 Apr 2017, 10:20 am

ಚಂದದ ಚಂದಿರ

ಸಂಜೆಯಲಿ ತುಂತುರು ಮಳೆಯ
ಆ ಚಂದ್ರ ಭೂಮಿಗೆ ಸುರಿದ!!
ಕನಸುಗಳ ಮೂಟೆಯ ಹೊತ್ತು
ಆಗಸದಿ ನಗುತಲಿ ನಿಂತ!!

ಹುಣ್ಣಿಮೆಯ ಚಂದದ ರೂಪ
ಹೆಣ್ಣುಗಳನ್ನು ನಾಚಿಸೋ ಭೂಪ!!
ತಂಗಾಳಿ ಜೊತೆಯಲಿ
ಅವನ ಸರಸ ಸಲ್ಲಪ!!

ತಾರೆಗಳ ತೋಟದ ಒಡೆಯ
ಭೂಮಿಗೆ ಬಾರದ ಚಲುವ!!
ತಿಂಗಳ ಬೆಳಕನು ಚೆಲ್ಲಿ
ಕಂಗಳಿಗೆ ಕಾಂತಿಯ ತಂದ!!

ಮೋಡದ ಮರೆಯಲಿ ಅಡಗುವ
ಚತುರ ಚಂದಿರನು ಅವನು!!
ಇರುಳ ಈ ಪಯಣದಲ್ಲಿ
ಜೊತೆಯಾದ ಸುಂದರನು!!

- ಪಿ.ಜಿ.ಜ್ಯೋತಿ

14 Apr 2017, 09:57 am

ಮುಗಿಯದ ಮುಳ್ಳಿನ ರಕ್ತದ ಹಾದಿಯಲ್ಲಿ

ಅಂದಿನ ರಾಜ ಮಹಾರಾಜರು
ಜಾತಿ ಧರ್ಮಕ್ಕೆ ನೀರೆದರು
ಬುಡ ಬುಡಿಕೆ ಮಾತು ಕೇಳಿ ಕುಣಿದರು
ಕಡಲೆಕಾಳು ವರ್ಗದವರಿಗೆ ಕಾಲಿಗೆ ಬೀಳಿಸಿದರು
ಸಾಸಿವೆಕಾಳು ವರ್ಗಕ್ಕೆ ಪೋಷಿಸಿದರು

ಇಂದಿನ ರಾಜಕೀಯ ಸೂತ್ರಧಾರರು
ಜೀವನ ನಡೆಸಲು ಜಾತಿಗೆ ಶರಣಾದರು
ಜಾತಿ ಸಂಘರ್ಷಕ್ಕೆ ನಮ್ಮನ್ನು ಆಹುತಿಮಾಡಿದರು
ಮಾನವೀಯತೆಯ ಮೌಲ್ಯಗಳನ್ನು ಮರೆತರು
ತಂಪಾದ ಗಾಳಿಗೆ ಸೆಳೆಯಾದರು
ಅವರ ವಂಶವಾಹಿಗಳಿಗೆ ನೆಲೆ ನಿಂತರು

ನಾವೆಲ್ಲರೂ....‌
ಕುರಿಯಂತೆ ಪಾಠ
ಗಿಳಿಯಂತೆ ರಾಮನ ಭಜನೆ
ಮಂಗನಂತೆ ಆಟ
ನಾಯಿಯಂತೆ ವಾಸದ ಮನೆ

ನಮ್ಮ ದುರ್ಬಲರ ನೋಟ
ಮುಗಿಯಿತ್ತಿದೆ ನಮ್ಮ ಆಟ
ಕೊನೆಗೆ ಅವರ ಹಟ್ಟಹಾಸ
ಮುಗಿಯದು ನಮ್ಮ ಉಪವಾಸ

- Shinan

14 Apr 2017, 06:59 am