Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಂಗಿಯ ಮೌನ

ಪುಟ್ಟ ಹೆಜ್ಜೆ ಇಟ್ಟು ಬರುವ
ನನ್ನ ತಂಗಿಗೆ
ಈ ಮನದ ಭಾವನೆಯ
ನಾ ಹೇಗೆ ತಿಳಿಸಲಿ!!

ದಿನ ಹೀಗೆ ಮೌನದಲಿ
ನೀನು ಕುಳಿತರೆ
ನನ್ನ ದನಿಯೇ ಮೂಕವಾಗಿ
ನನ್ನ ಶಪಿಸಿದೆ!!

ಅಂದು ನಾನು ನೊಂದು
ನುಡಿದ ಮಾತು ಸೋದರಿ
ನೀ ನೊಂದು ಕೊಲ್ಲದಿರು
ಈ ನಮ್ಮ ಬಂಧವ!!

ಮಾತನು ಆಡುವಂತಹ
ಗಿಣಿಯೇ ಮೌನ ಏತಕೆ
ನಿನ್ನ ಕೂಡಿ ನಲಿಯುವ
ಬಯಕೆ ನನಗಿದೆ!!

- ಪಿ.ಜಿ.ಜ್ಯೋತಿ

16 Apr 2017, 10:42 am

ಓ ಹೃದಯ..

ಮರೆತಂತೆ ಮರೆಯಾಗಿ ದೂರ ಸರಿದವಳೆ,
ಆಗೊಮ್ಮೆ ಈಗೊಮ್ಮೆ ನೆನಪಾಗೆ ಕಾಡುವಳೆ..
ಕಾಣದೇ ಹೋಗಿರುವೆ ಕಣ್ಮುಂದೆ ನೀನು,
ಕಾಣದೇ ಮರೆಯಾದರೂ ನಿನ್ನ ಮರೆಯುವೆನೆ ನಾನು..
ಮರೆಯಲಾಗದ ಪ್ರೀತಿ ನೀ ನೀಡಿರುವೆ ನನಗೆ,
ನಿನ್ನ ಮರೆತರೆ ಅದುವೆ ನನ್ನ ಜೀವನದ ಕೊನೆ ಗಳಿಗೆ..
ನಿನ್ನನೊಮ್ಮೆ ಕಾಣಲು ಹವಣಿಸಿದೆ ಈ ಹೃದಯ,
ದಯಮಾಡಿ ದರ್ಶನವ ನೀಡು ಬಾ ಓ ಹೃದಯ...

‌‌‌‌‌‌‌ ‌‌‌‌‌‌ ಜೆ.ಪಿ..

- jp R

16 Apr 2017, 12:31 am

ಮರೆಯಲಾರೆ...

ಯೋಚಿಸುತೇನೆ ನಿನ್ನ
ನೆನಪೆಂಬ ಮರವನ್ನು
ಕಡಿಯಬೇಕೆಂದು
ಅದರೆ
ನನ್ನ ಮನಸಿನಾಳದಲಿ
ಬೇರುಗಳಿವೆಲ಼
ಅವುಗಳೆನು ಮಾಡಲಿ?
ಗೆಳತಿ

- chinnadana ni kosam

15 Apr 2017, 10:44 pm

ಗೋಪಾಲ

ಕಂಡೆನಾ ನೀಲಮೇಘ ಶಾಮನ

ದೇವಕಿಯ ‌ಒಡಲ‌ ತುಂಬಿದ
ಮಥುರೆಯ ಪುಣ್ಯಪುರುಷನ

ಯಶೋದೆಯ‌‌ ಮಡಿಲ ಸೇರಿ
ಗೋಕುಲಕೆ ಪ್ರೀತಿ ತುಂಬಿದವನ

ಆಡುತಲೇ ಮಹಿಮೆಗಳ ತೋರಿ
ನಿಜ ಶಕುತಿ ಭಕುತಿಯ ಮೆರೆದವನ

ಕಿರುಬೆರಳಲೆ ಗೋವರ್ಧನ ಗಿರಿಯ
ಎತ್ತಿ ಪಾವನಗೊಳಿಸಿದವನ

ಗೋವುಗಳ ಕಾಯುತಲೇ ಗೋಕುಲವ
ಜತನದಿ ಕಾಪಾಡಿದ‌ ಗೋಪಾಲಕನ

ಯಮುನೆಯ ಒಡಲಲೇ ಕಾಳಿಂಗನ ಶಿರವೇರಿ
ನರ್ತಿಸುತ ಅವನ ವಿಮೋಚಿಸಿದವನ

ಪಿಳ್ಳಂಗೋವಿಯ‌ ನುಡಿಸುತಲೇ
ಕೇಳಿದವರ ಮನವ ಸಮ್ಮೋಹಿಸಿದವನ

ನಾರಿಯರ‌ ಉಡುಗೆ ಕದ್ದು ಗೋಳಾಡಿಸುತಲೇ‌ ನಾಚಿದ ನೀರೆಯರ ಹೃದಯ ಕದ್ದವನ

ಕಣ್ಣಂಚಿನ‌ ನೋಟದಲೆ ‌ಕನಸ ಬಿತ್ತಿ
ಮನವ‌ ಹಣಕಿಸಿ ಕೆಣಕಿದವನ

ರಾಧೆಯ ಉಸಿರಲೇ ಬೆರೆತು
ಆತ್ಮ ಸಂಗಾತಿಯಾದವನ

ದೂರ ನಿಂತರು ರುಕ್ಮಿಣಿಯ ಮನವನೋದಿ
ಅಪಹರಿಸೇ ಪರಿಣಯಿಸಿದವನ

ಮಧ್ಯಮ‌ ಪಾಂಡವನ‌ ಪೂಜ್ಯರೂಪಿಯು
ವಿಶ್ವರೂಪ ದರುಶನ ತೋರಿ ಧರ್ಮ ಯುದ್ಧವ ಸಾರಿದವನ

ಕಣ್ಣಿಗೆ ಪಟ್ಟಿಯ ಕಟ್ಟಿ ತ್ಯಾಗ ಧರ್ಮದ ಮಾತಿಗೆ
ಬಾಗಿ ಹುಲ್ಲಿನ ಕಡ್ಡಿಗೆ ತನ್ನ ಜೀವವ ತೆತ್ತವನ

ಕಂಡೆನ ನೀಲ ಮೇಘ ಶ್ಯಾಮನ....

- ಶ್ರೀಕಾವ್ಯ

15 Apr 2017, 09:09 pm

ಚಿತ್ರ -ಪತ್ರ

ನಗು ನಗುತಾ ಬರುತಿದೆ ನಿನ್ನ ಚಿತ್ರ .
ಅದಕೆ ಬರೆದಿರುವೆ ಪ್ರೇಮ ಪತ್ರ .
ಮರಳಿ ಬರಲಿ ನಿನ್ನ ಉತ್ತರ .
ಓಡೋಡಿ ಬರುವೆ ನಿನ್ನ ಹತ್ತಿರ

- babu kaddoni

15 Apr 2017, 07:33 pm

ಕಳ್ಳು -ಸುಳ್ಳು

ಕಳ್ಳು ಬಳ್ಳಿ ಎಂಬುವವರು
ಮುಳ್ಳಿನ ಕಂಟಿಗಳಿದ್ದ ಹಾಗೆ
ಅವರಿಂದ ಲಾಭಕ್ಕಿಂತ ನಷ್ಟವೆ ಹೆಚ್ಚು

ಕನಿಕರದ ಮಾತುಗಳನ್ನಾಡಿ
ಕಣ್ಣೀರಿಗೆ ಕಾರಣರಾಗುವವರು
ಕಂಬನಿಯ ಬೆಲೆ ಗೊತ್ತಿರದೆ ಸಮರ ಸಾದಿಸುವರು

ಕಷ್ಟಗಳನ್ನುಂಟು ಮಾಡಿ
ಮೊಸಳೆ ಕಣ್ಣೀರು ಹಾಕುವರು
ಮರೆಮಾಚಿ ಮತ್ತೊಂದಾಡಿ ಮೌನವಾಗೋರು

ಅವರಿಗೊಂದು ಇವರಿಗೊಂದಾಡಿ
ಜೊತೆಯಲಿದ್ದು ಗೋರಿ ತೋಡುವರು
ಕಳ್ಳು ಎಂದಿಗೂ ಮುಳ್ಳೆ ಆದಷ್ಟು ದೂರಾನೆ ಇರು

ಇಂತಿ ನಿಮ್ಮ ♤ಸ್ನೇಹ ಸಿಂಚನ♤
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

15 Apr 2017, 06:45 pm

ನಾರಿ ನೀ ಎಂಥ ಉಪಕಾರಿ

ಮಹಿಳೆ ಒಂದು ಸಾಫ್ಟ್‌ವೇರ್ ನಂತೆ
ಮನೆಯ ವಸ್ತುಗಳ ಸಂಗ್ರಹಿಸಲು
ನಿಭಾಯಿಸುವಳು ಎಲ್ಲ ಕಾರ್ಯಗಳ
ದಣಿಯದೆ,ಕಳೆವಳು ದಿನಗಳ

ಯಾರು,ಏನೇ ಬೇಡಿದರು
ನೀಡುವಳು ಅರೆಗಳಿಗೆಯಲ್ಲಿ
ದಿನವಿಡೀ ದುಡಿವಳು,ರೋಬೋನಂತೆ
ಎಂದೂ ಬಯಸಳು ಕಾಂಚಾಣವನಿಲ್ಲಿ

ಲೆಕ್ಕಿಸರು,ಅವಳ ಶ್ರಮವ
ಮನೆಯ ಮಂದಿ ಎಂದೂ.....
ಅವಳಿಲ್ಲದೆ ಅಡಿಗೆಮನೆ ನಡೆಯದೆಂದೂ.....
ತ್ಯಾಗದೆ,ಸವಿಸುವಳು ತನ್ನ ಜನುಮವ

ಮಗಳಾಗಿ, ಮನೆಯ ಬೆಳಗುವಳು
ಮಡದಿಯಾಗಿ,ಸೇವೆಯ ಮಾಡುವಳು
ತಾಯಿಯಾಗಿ,ಮಗುವ ಬೆಳೆಸುವಳು
ಆಸರೆಯಿಲ್ಲದೆ,ಕೊನೆಗಾಲದಲ್ಲಿ ಕೊರಗುವಳು

ಆಡುಮುಟ್ಟದ ಸೊಪ್ಪಿಲ್ಲ
ಹೆಣ್ಣು,ಮಾಡದ ಸಾಧನೆಯಿಲ್ಲ
ನಾನೆ, ಎಂದು ಬೀಗುವನು ಪುರುಷನಿಲ್ಲಿ
ತಿಳಿ ನೀನು‌,ಹೆಣ್ಣಿಲ್ಲದೆ ಈ ಜಗವಿಲ್ಲ


ಶಾರದ

- ಶಕುಂತಲಾ

15 Apr 2017, 03:09 pm

ಜೀವನ ಚಕ್ರ....

ನಾನು ನನ್ನಮ್ಮನಿಗೆ ಮಗಳಾಗಿ..
ನನ್ನ ಮಗಳಿಗೆ ನಾ ತಾಯಾಗಿ..
ಮಗಳ ಆಟ ನೋಟವ ಸಂಭ್ರಮಿಸಿ..
ಮುದ್ದಿಸುತಾ ತಿದ್ದಿ ಬೆಳಸಿ..
ಅವಳು ನನಗಿಂತ ಸುಖವಾಗಿ
ಕಾಣಲಿ ಎಲ್ಲಾ ಆನಂದವ ಬಾಳಲಿ..
ಎಂದು ಆಶಿಸುತಾ..
ನಿಂತ ನೀರಾಗದಂತೆ..
ಝುಳು ಝುಳು ಎನುತಾ
ಹರಿಯುವ ನದಿಯಂತೆ..
ಮಗಳನ್ನು ಬೇರೆ ಮನೆಯ ಬೆಳಕಾಗಿಸಿ..
ಅವಳು ಜವ್ದಾರಿಯನು ಹೊತ್ತು..
ಮಂದಾಸ ಬೀರುತಾ..
ತಾಯಾಗಿ ಸಂಭ್ರಮಿಸುತಾ..
ಜೀವನದಲ್ಲಿ ಏರಿಳಿಯುತಾ..
ಸವೆಸುವ ಪಥವೇ..
ಈ ಜೀವನ ಚಕ್ರವೆಂಬ
ನಿಲ್ಲಬಾರದ ಅಧ್ಬುತ ಪಯಣ....

ಜೀವನವೇ ಒಂದು
ಅಧ್ಬುತ relay..
ಇದ ನೀ ತಿಳಿದು..
ಬದುಕಿನ ಕಲೆ ಕಲಿತು..
ಜೀವನದ ನಿಯಮ ಅರಿತು..
ಸುಖವಾಗಿ ಬಾಳು..
ನನ್ನ ಮಗಳೆ....

- KR Sreekamala

15 Apr 2017, 08:38 am

ಹಾರುತಿಹುದು ನನ್ನೆದೆಯ ಹಕ್ಕಿ

ಮನದ ನೋವನು ಮರೆಮಾಚಿ ಹಾರುತಿಹುದು ನನ್ನೆದೆಯ ಹಕ್ಕಿ .ಒಲವಿನ್ ಬೇಗುದಿಯನು ಅಳಿಸಿ ಹಾರಿದೆ ನನ್ನಮನದ ಹಂಸಪಕ್ಷಿ
✍✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

14 Apr 2017, 11:10 pm

ಒಲವೇ

ಮತ್ತೆ ಮತ್ತೆ ಹುಡುಕುತೀರುವೇ
ಪ್ರೀತಿ ಕಳೆದುಕೊಂಡ ತಪ್ಪಿಗೆ
ಎಂದಾದರೋಮೇ ದಕೇ ದಕ್ಕೂತೆದೆಂಬ
ಭರವಸೆಯಲಿ....
ಪ್ರೀತಿ ಕಳೆದುಕೊಂಡ ತಪ್ಪಿಗೆ !

- chinnadana ni kosam

14 Apr 2017, 10:51 pm