Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾವಿರಾರು ಹಿತಶತ್ರುಗಳ
ಮಧ್ಯೆ ಬದುಕುವ ಜೀವಕ್ಕಿಂತ
ಒಬ್ಬ ಜೀವಕೋಡುವ ಸ್ನೇಹಿತನ
ಹೃದಯದಲ್ಲಿ ನೆನಪಾಗಿ
ಉಳಿಯುವುದೇ ಉತ್ತಮ...........
- ಚುಕ್ಕಿ
20 Apr 2017, 10:52 pm
ಘಳಿಗೆಗೊಂದು ಮುಖವಾಡ ಧರಿಸಿ
ನೂರಾರು ಮನುಷ್ಯರ ಮನಸುಗಳನ್ನು
ಸೂಜಿಗಲ್ಲಿನಂತೆ ಆಕಷಿ೯ಸುವುದಕ್ಕಿಂತ
ನಿಜ ಮುಖದಲ್ಲಿ ಒಂದು ಸಂಬಂಧವನ್ನು
ಬೆಳಿಸಿ ಉಳಿಸಿಕೊಳ್ಳುವುದೊಳ್ಳೆಯದು.
- Kanakamurthi
20 Apr 2017, 10:42 pm
ಮಳೆಯ ನೋಡಿರಣ್ಣಾ
ಕೇಳುವವರ ಕಿವಿಯನು ಮೊರೆಯುವಂತೆ ಗುಡುಗುಡು ಗುಡುಗುತ
ಕತ್ತಲ ತುಂಬಿದ ಬಾನಲ್ಲಿ ಮಿಂಚುಳುವಿನಂತೆ ಮಿಂಚುತ
ನೋಡುವ ಕಣ್ಣನ್ನೇ ಕೋರೈಸುವ ಸಿಡಿಲನ್ನೆ ಸಿಡಿಸುತ
ಪಟಪಟನೆ ಸುರಿಯುತಿರುವ ಮಳೆಯ ನೋಡಿರಣ್ಣ.....
ಬಾಂದಳದಲ್ಲಿ ತೂತನ್ನೇ ಕೊರೆಯುವ
ಗಗನದಿಂದಿಳಿದು ಭೂತಾಯಿಯ ಅಪ್ಪುವ
ಬಿಸಿಲ ಜಳಕ್ಕೆ ಒಣಗಿದವಳಿಗೆ ತಂಪೆರೆಯುವ
ಬಾಯ್ಬಿರಿದವಳ ಒಡಲಲ್ಲಿ ಹಸಿರನ್ನೆ ಚಿಗುರಿಸುವ
ಮಳೆಯ ನೋಡಿರಣ್ಣಾ
ಪಟಪಟನೆ ಸುರಿಯುತಿರುವ ಮಳೆಯ ನೋಡಿರಣ್ಣ....
ಕಣ್ಣೀರ ಹೊತ್ತು ನಿಂತ ಅನ್ನದಾತನ ಕಣ್ಣೀರ ಒರೆಸುವ
ಮನಸೊಳಗಿನ ಮಣ ಭಾರ ನೋವನು ಕರಗಿಸುವ
ಸಾಲವೆನ್ನುವ ನೇಣುಗಂಬದ ಕುಣಿಕೆಯ ಕಳಚುವ
ಮನೆಯೊಳಗಿನ ಶೂನ್ಯವನ್ನೆ ಸೊನ್ನೆಯಾಗಿಸುವ
ಮಳೆಯ ನೋಡಿರಣ್ಣಾ
ಪಟಪಟನೆ ಸುರಿಯುತಿರುವ ಮಳೆಯ ನೋಡಿರಣ್ಣಾ.....
- ಶ್ರೀಕಾವ್ಯ
20 Apr 2017, 09:20 pm
ಕಲ್ಪನೆಯ ಜೋಗದಲ್ಲಿ ಮಂಜು ನಸುಕಿನ ಮಡಿಲಲ್ಲಿ,
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ ನೀ
ಸದ್ದು ಗದ್ದಲದ ಕೋಲಾಹಲ ಹೆಬ್ಬಿಸಿದೆ ನೀ
ಓ ನನ್ನ ಜೋಗವೇ ನಿನ್ನ ಚೆಲುವೆಯ ನಾ ಹೇಗೆ ವರ್ಣಿಸಲಿ ಈ ಪುಟ್ಟ ಕವನದಲ್ಲಿ,
ನೀ ಮಾಡುವ ಸದ್ದುಗೆ ಜನರನ್ನು ಕೈ ಬೀಸಿ ಕರೆಯುವಂತಿದೆ
ಸುತ್ತಲೂ ಬೆಟ್ಟ ಗುಡ್ಡವನು ಲೆಕ್ಕಿಸದೆ ಮೈದುಂಬಿ ಹರಿಯುತಿರುವೆ ನೀ
ನಿನ್ನ ಅ ಸದ್ದಲು ನನಗೆ ಏನೋ ಉಲ್ಲಾಸ ಮೂಡಿ ಸಂತೋಸದ ಕ್ಷಣ ಮುಗಿಲನ್ನು ಮುಟ್ಟಿ. ಬಂದಂತಾಗಿದೆ,
ಓ ಜೋಗವೇ ನಿನ್ನ ಚೆಲುವ ನಾ ಹೇಗೆ ವರ್ಣಿಸಲಿ,
ಜಲಜಲನೆ ಎಂದು ನಗುವ ಚೆಲ್ಲುತಾ ಹರಿಯುತಿರುವೆ ನೀ
ಬಳ್ಳಿ ಅಪ್ಪಿದ ಮರದಲ್ಲಿ ಬಿಳಿ ಹೂಗಳ ಕಂಪಲಿ ಹಸಿರು ಹಾಸಿಗೆಯ ಚೆಲ್ಲಿ ನಿನ್ನ ಸೌಂದರ್ಯ ಸೊಬಗಿನಲ್ಲಿ ಸ್ವರ್ಗವೇ ಕಣ್ಣೆದುರು ಬಂದಂತಾಗಿದೇ.
ಓ ಜೋಗವೇ ನಿನ್ನ ಚೆಲುವ ನಾ ಹೇಗೆ ವರ್ಣಿ
(ಶಿವಾ ಮೊಗೇರ ಕೂರ್ಗ್)
- shivacoorg
20 Apr 2017, 07:09 pm
ಹುಡುಗಾಟದ ವಯಸ್ಸಿನಲ್ಲಿ
ಚಂಚಲ ಮನಸ್ಸಿನಂದ ....
ಮಾಡದಿರು ಮನವೇ ಪ್ರೀತಿಯ..
ತಿಳಿದಿಕೂ ಜೀವನದ ಭೀತಿಯ...
ನಿತ್ಯದ ಬದುಕಿನಲ್ಲಿ ನಾನೂಬ್ಬ ಸ್ನೇಹಜೀವಿ
ಬಣ್ಣಗಳ ಮಾತಿನಿಂದ ತಿಳಿಸಲು ನಾನಲ್ಲ ಕವಿ ಪ್ರೀತಿಯ ಮಂತ್ರವನ್ನು ಜಪಿಸಲು ತೂಟ್ಟಿಲ್ಲ ಕಾವಿ
ಕನಸ್ಸು ಕಲ್ಪನೆಗಳಷ್ಟೆ ನಿಜ ಜೀವನದ ಸವಿ....
ಶಾಬುದ್ದೀನ ಎಸ್ ಆರ್.....
- shabudin
20 Apr 2017, 06:52 pm
ಕಥೆ ಹೇಳುವೆ ಕೇಳಿ ಒಂದು
ನಿದ್ದೆ ಬರದ ಕಣ್ಣುಗಳಿಗೆ
ಕನಸ ತೋರಿಸುವೆನೊಂದು
ನೊಂದ ಮನಸಿಗೆ ಚಂದದೊಂದು
ಹಾಡ ಹೇಳಿ ಹೊಸ ಆಸೆ ಹುಟ್ಟಿಸುವೆನೊಂದು
ಬಲು ಸುಳ್ಳುಗಾರ ನಾನು
ಬಲು ಮಾತುಗಾರ ನಾನು
ಕನಸು ಮಾರಲು ಬಂದವನು
ಹೃದಯ ಕದಿಯಲು ಬಂದವನು
ಹಾಡುಗರ ನಾನು
ನಿಮಗೊಂದು ಕಥೆ ಹೇಳಲು ಬಂದವನು
ನಿದ್ದೆ ಕಾಣದ ನಿಮ್ಮ ಕಣ್ಣುಗಳಿಗೆ
ಜೋಗುಳ ಹಾಡುವವನು
ಆಸೆ ಬತ್ತಿದ ಮನಸ್ಸಿಗೆ
ಕನಸು ಕಾಣುವುದ ಹೇಳಿಕೊಡುವವನು
ರಕ್ತ ಬತ್ತಿದ ಹೃದಯದಲ್ಲಿ
ಪ್ರೀತಿಯ ಚಿಲುಮೆ ಉಕ್ಕಿಸಲು ಬಂದವನು
- HarshaHL
20 Apr 2017, 05:00 pm
ನೀನೆ ನನ್ನ ತಾಯಿ
ಎಂದು ಭಾವಿಸಿದೆ
ನಿನ್ನ ಪಾದ ಸೇವೆಯ
ಮಾಡಲು ಬಯಸಿದೆ!!
ನಿನ್ನ ಸ್ಮರಣೆಯಲ್ಲೆ
ನಾನು ತನ್ಮಯಳಾದೆ
ಸ್ಥಿರವಾಗಿ ನೀ ಬಂದು
ನೆಲೆಸೆಂದು ಬೇಡಿದೆ!!
ನಿನ್ನ ಮಹಿಮೆಗೆ
ಮರುಳಾದೆ
ನಿನ್ನ ಅಗಲಿಕೆ
ಸಹಿಸದಾದೆ!!
ಎದುರಾದ ಶಕುನಗಳೆಲ್ಲ
ನೀನೆ ಎಂದು ಅರಿತೆ
ಮನದ ತುಡಿತಗಳಿಗೆಲ್ಲ
ನೀನೆ ಉತ್ತರವನಿತ್ತೆ!!
ನಾನೆ ಎಂಬ ಭಾವನೆ
ನನ್ನಿಂದ ಕಿತ್ತೆಸೆದೆ
ಮಹಾತ್ಮರ ಸಾಧನೆ
ಕಣ್ಮುಂದೆ ನೀ ತಂದೆ!!
ನಿನ್ನ ಮಹಿಮೆಯಿಂದ ಹುಟ್ಟಿತು
ನನ್ನಲ್ಲಿ ಜ್ಞಾನ ದಾಹ
ನೀನೆ ತೋರಿದೆ
ಜ್ಞಾನಾರ್ಜನೆಯ ಮಾರ್ಗ!!
ಶಂಕರರಿಗೆ ದೀಕ್ಷೆಯನಿತ್ತೆ
ಶ್ರುಂಗೇರಿಯಲಿ ನಲೆನಿಂತೆ
ನಿನ್ನ ಮಹಿಮೆಯ ಹರಡಿದರು
ಅಂದೆ ಮಹಾನ್ ಶಂಕರರು!!
- ಶಕುಂತಲಾ
20 Apr 2017, 03:37 pm
ಹೇಳಿಬಿಡು ಹುಡುಗೀ
ನಿನನ್ನೆಗೆ ಕೊಟ್ಟದ್ದು,
ತಿಳಿನೀಲಿ ಕನಸ
ಬರೀ ಕಪ್ಪು ಕನಸ.
ಮಾಮೂಲಿ ಕೋತಿಯ
ತಾರುಣ್ಯ ಗೀತೇಯಲೀ
ಉತ್ತರ ಕಮ್ಮಿ,
ಪ್ರೆಶ್ನೆ ಯೇ ಜಾಸ್ತಿ,
ದಾರೀಲಿ ಕೈ ಕಟ್ಟಿ ನಿಂತಿರಲೇ,
ಹ್ರೂದಯಾನ ಸಂಪೂರ್ಣ
ಬಿಚ್ಚಿ ಇಡಲೇ,
ಮುಂಗುರುಳ ಸ್ಪ್ರಿಂಗಲಿ
ಜೋತಡಾಲೇ,
ಕಣ್ಣ ರೆಪ್ಪೆಯ ಮೇಲೆ ಮಲಗೀರಲೇ,
ಆಸೆಗಳ ಎಣಿಸಿ ಕೈ ಬೆರಳು ಸವೇದಿದೇ,
ಎಲ್ಲ ಹೇಳಿದರು ಇನ್ನೇನು ಉಳಿದಿದೆ,
ಹೇಳಿಬಿಡು ಹುಡುಗೀ
ನಿನನ್ನೆಗೆ ಕೊಟ್ಟದ್ದು,
ತಿಳಿನೀಲಿ ಕನಸ
ಬರೀ ಕಪ್ಪು ಕನಸ.
ಎಲ್ಲಿಯೂ ಹೋಗದ ನಿಂತ ಬಸ್ ಓಂದರಲ್ಲಿ ಸಿಟೋಒಂದು ಹಿಡಿದವನು ನಾನು,
ಇಳಿ ಸಂಜೇಯಲಿ ನನ್ನ ನಂಬರ್ಗೇನೇ
ನಾನೇ ಮಾಡುವೆನು ಪೋನು,
ಈ ನಡುವೆ ಎಲ್ಲಿಯೋ ನೋಡುವೇನು,
ಹೀಗೆ ಎಲ್ಲಿಗೂ ಹೋಗುವೆನು, ನಾನು ಏನನ್ನೋ ಕಾಯೂವೇನೂ,
ನೀ ಸೀಕ್ಕರುನು ಸೀಗದೀದ್ದರುನು,
ಎದೆ ತುಂಬಿ ಹಾಡುವೆನು ನಾನು,
ಹೇಳಿಬಿಡು ಹುಡುಗೀ
ನಿನನ್ನೆಗೆ ಕೊಟ್ಟದ್ದು,
ತಿಳಿನೀಲಿ ಕನಸ
ಬರೀ ಕಪ್ಪು ಕನಸ.
ಶಾಬುದ್ದೀನ ಎಸ್ ಆರ್.....
- shabudin
20 Apr 2017, 09:34 am
ಘೋರ ಬಿಸಿಲಿಗೆ ಬಳಲಿತೆ ಮನ..
ಮಳೆಹನಿ ಸುರಿಸಿದರೂ ಗಗನ..
ತಣಿಯಲಿಲ್ಲವೇಕೆ ಬಸವಳಿದ ಮನ....
ಸುತ್ತಿ ಬಂದರೂ ಬನ..
ನೋಡಿ ಬಂದರೂ ವನ..
ಕೇಳಿದರೂ ಕುಹೂ ಕುಹೂ ಗಾನ..
ಹಕ್ಕಿಗಳ ಚಿಲಿಪಿಲಿ ನಾದ..
ಬೇಸರದಿಂದೇಕೊ ಮನ....
ಮಾಡಿದರೂ ಸಿಹಿ ಪಾನ..
ಬಂದರೂ ಎಲ್ಲರ ಸಾಂತ್ವಾನ..
ನೋಡಿಬಂದರೂ ಸಿನಿಮಾನ..
ಉಲ್ಲಾಸವಿಲ್ಲದಂತಾಗಿದೇಕೂ ಮನ....
ಯೋಚಿಸಿದರೂ ತಿಳಿಯದಾಗಿ ಕಾರಣ..
ಮಾಡುತಾ ದೇವರಿಗೆ ನಮನ..
ಕಣ್ ಮುಚ್ಚಿ ಕುಳಿತೆ
ಮಾಡಲು ಧ್ಯಾನ....
ತಾನಾಗೆ ಕೈ....ಹಿಡಿಯಿತು ಪೆನ್ನನ್ನ..
ಹರಿದಂತಾಗಿ ಮನಕೆ ಚೇತನ..
ಉಲ್ಲಾಸ ಸಿಕ್ಕಂತಾಗಿ ಮನ..
ಜೋಡಿಸಿ ಜೋಡಿಸಿ ಪದಗಳನ
ಶುರುಮಾಡಿತು ಬರೆಯಲು ಕವನ....
ಈ ತುಡಿತ ಎಲ್ಲರಿಗೂ ಸಮಾನ..
ವಿಧಿ ಬಚ್ಚಿಟ್ಟರಬಹುದೆನಿಸಿತು
ಎಲ್ಲರಲೂ ಒಂದೊಂದು ಕಲೆಯನ್ನ..
ಉಲ್ಲಾಸವಾಗಿರಿಸಲು ತಮ್ಮಮನವನ್ನ....
ಅದಕೆ ಯೋಚಿಸಿ ಪೋಷಿಸಿ..
ಉಣಿಸಿ ಬೆಳಸಿ..
ನಿಮ್ಮ ನಿಮ್ಮಲ್ಲಿರುವ ಕಲೆಯನ್ನ..
ಆಗ ತಾನಾಗಿಯೇ ಸಂತಸದಿಂದ
ನಗುತ ನಲಿಯುತಲಿರುವುದು
ಎಲ್ಲರ ಮನ....
- KR Sreekamala
20 Apr 2017, 06:55 am
ಅವಳ ಮದುವೆಗೆ ಒಪ್ಪಿಕೊಂಡ ಮರುದಿನವೆ ಅವಳಿಗೊಂದು
ನೆನಪಿನ ಕಾಣಿಕೆ ಕೊಡಬೇಕೆಂದು
ಮುಂಜಾನೆಯೆ ವೆಂಕಟಪ್ಪನ ಬಟ್ಟೆಯ
ಅಂಗಡಿಗೋಗಿ ಮೊದಲ ರಾತ್ರಿಗೆ
ಒಂದು ಸೀರೆಯನ್ನು ಕೊಂಡಿಟ್ಟೆ
ಮದುವೆಯು ಮುಗಿದ ಮೂರು
ವರುಷವಾದರೂ ನಾ ತಂದ ಸೀರೆಯನ್ನು
ಮೊದಲ ರಾತ್ರಿಗೆ ಅವಳು ತೊಡಲಿಲ್ಲ ನಾ ತಂದ ಸೀರೆಯನ್ನ
ಮಲ್ಲಿಗೆ ಹೂವ ಮುಡಿಯಲಿಲ್ಲ
ಮಂಚವನ್ನು ಹೇರಲಿಲ್ಲ ಪ್ರೀತಿಯ ಮಾತುಗಳನ್ನು ಆಡಲಿಲ್ಲ
ಅಂದು ಬಾಡಿದ ಮಲ್ಲಿಗೆ ಹೂವಿನ ಸುಗಂಧ ಸೂಸುತ್ತಿದೆ ಮೊದಲ ರಾತ್ರಿಯ ಕನಸ್ಸುಗಳನ್ನು ನನ್ನ ಮನದಾಳದಲ್ಲಿ ಅವಳ ಕೊರಳ ಕರಿಮಣಿಯಲ್ಲಿ ಕುಣಿಕೆಗಳಾಗಿ
ಬಿಗಿದ್ದಪ್ಪಿದ ಮನದಾಸೆಯ ಕನಸ್ಸುಗಳು ನಾ ತಂದ ಸೀರೆಯ ಕುಪ್ಪಸಗಳು ಮುಚ್ಚಿದ ಪೆಟ್ಟಿಗೆಯೊಳಗೆ ಕಣ್ಮುಚ್ಚಿ ಕುಳಿತಿದೆ
ಅವಳಿಗಾಗಿ ಕಾದು ಕುಳಿತ ಹಸೆಮಣಿ ಅವಳಿಗಾಗಿಯೇ ಕಾಯುತ್ತಲೇ ಇದೆ ನಾತಂದ ಹಸಿರು ಸೀರಿ
- gtr
19 Apr 2017, 10:38 pm