Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಡಿದ ದಾರಿ

ಅದೆಲ್ಲಿಂದಲೋ ಬೀಸಿವ
ಕುಳಿರ್ಗಾಳಿಗೆ ಸೋಂಕಿದ ನಿನ್ನ
ನೆನಪ ನವೆ ಈಗಲೂ
ಪದೇ ಪದೇ ಎಚ್ಚರವಾಗಿಸುತ್ತದೆ
ಮುಸುಡಿಯುದ್ದಕ್ಕೂ ನಿನ್ನ
ಹೆಸರ ಕರೆದ ತರುವಾಯ
ತೀರದ ದಾಹ ಈ ಹಲ್ಕಾ ತುಟಿಗಳಿಗೆ

ಒಣಗಿದ ಎದೆಯಾಳದಲ್ಲೊಂದು
ಒರತೆ ಜಿನುಗುತ್ತದೆ ಹನಿಯಂತೆ
ನಾನಿರುವ ಸಂದೇಹಕ್ಕೆ ಪಕ್ಕಕ್ಕೆ
ಸರಿಯುತ್ತೇನೆ ವಾಲುವ ನೆಪದಲ್ಲಿ
ಮತ್ತೊಮ್ಮೆ ನನ್ನ ಇರುವಿಕೆ
ಖಾತ್ರಿಪಡಿಸಿಕೊಳ್ಳತ್ತೇನೆ

ಈವಾಗಿನಿಂದ ನೋಡು,
ಬೀದಿ ದೀಪದ ಕಡಿಮೆ ಬಿಳಿಗೆ
ಗೋಚರಿಸಿದ ಮಿಡತೆಯಂತೆ
ಸಂತೆ ಗುಳಿಕೆನ್ನೆಯ ಮುಂಗುರುಳು
ದೂರದೃಷ್ಟಿಯ ಕದಗಳನ್ನು
ತೆರೆದುಕೊಡುತ್ತದೆ ಸೋತಷ್ಟು ಸೋಲಲು

ಉಸಿರ ಏರಿಳಿತದ ಪ್ರಮಾದಗಳಿಗೆ
ಭಾಗಿಧಾರಿ ನೀ ಆಗಬೇಕು ಮುಂದೆ
ಕಡಲಾಚೆ ಅದಿರುನಾಡಿನ ಚೆಲುವೆ
ಕಣ್ಣಿನ ಒಡಂಬಡಿಕೆಗಳ ಆಯಸ್ಸು
ಮುಗಿಯುತ್ತದೆ ಕಾಯುತ್ತಿದ್ದರೆ
ಒಮ್ಮೆ ಉಸಿರು ನಿಲ್ಲುವಂತೆ
ಬಿಗಿದಪ್ಪಿ ರುಜುಮಾಡಿ ಬಿಡು ಒಲವ..!

ಅವಿಜ್ಞಾನಿ

- ಅವಿಜ್ಞಾನಿ

21 Apr 2017, 01:38 pm

ಕಾಣದ ಬದುಕು..

ಕೊನೆಯ ವಿದಾಯ ಅದಾಗಿರಲಿಲ್ಲ
ಮುಂದಿನ ದಾರಿಗೆ ಬೀಗ ಹಾಕಿತ್ತು..
ಅವಳಿಗದು ಅನಿವಾರ್ಯ
ಸಂಸಾರದ ಜವಾಬ್ದಾರಿ ಹೆಗಲ ಮೇಲಿತ್ತು..
ಬಾಡಿ ಹೋಗಿರುವ ಮುಖ,
ಜೋತು ಬಿದ್ದಿರುವ ಹಲ್ಲುಗಳು,
ನಿದ್ದೆ ಮರೆತ ಕಣ್ಣುಗಳು..
ಹಸಿವಿನಿಂದ ನರಳುತ್ತಿರುವ ಕಂದಮ್ಮಗಳು..
ಯಮನಂತೆ ಸದಾ ಕಾಡುತ್ತಿರುವ ಖಾಯಿಲೆ,
ಮಾತು ನೀಡಿ ಕೈಬಿಟ್ಟು ಹೋದ ಗಂಡ..

ಆತ ಅವಳಿಗೆ ಸರ್ವಸ್ವವೂ ಆಗಿದ್ದ
ಅವಳು ನಡೆವ ದಾರಿಯಲಿ ಮಲ್ಲಿಗೆ
ಚಪ್ಪರ ಹಾಕಿಸಿದ್ದ..
ಬಣ್ಣದ ಮಾತುಗಳನ್ನಾಡಿ ಪ್ರೀತಿಯ
ಮಾಯೆಯೊಳಗೆ ಬೀಳಿಸಿದ್ದ..
ವಯಸ್ಸಿನ ಆಕರ್ಷಣೆಗೆ ಆಕೆ ಮರುಳಾದಳು
ತಂದೆ ತಾಯಿಯ ತೊರೆದು ಪ್ರೀತಿಗೆ
ಮುನ್ನುಡಿ ಬರೆದಳು..

ವರ್ಷಗಳು ಉರುಳಿತ್ತು,
ಕಂದಮ್ಮಗಳು ರಚ್ಚೆ ಹಿಡಿದು ಗೋಗರೆಯುತ್ತಿತ್ತು..
ಬಡತನ ಕಿತ್ತು ತಿನ್ನುವ ಹಾಗಿತ್ತು.
ಆಕೆಯ ಜೀವನ ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬರಡಾಗಿತ್ತು.
ಜೊತೆಯಾಗಿ ಬಾಳಬೇಕಾದವನು ಕುಡಿತದ ದಾಸನಾಗಿ ವಿಧಿವಶನಾದ..

ಪ್ರೀತಿ ಎಲ್ಲವನ್ನೂ ಮರೆಸಿತ್ತು
ಸ್ವತಃ ಬದುಕನ್ನೂ ಕೂಡ..
ಬರಿಯ ಕಣ್ಣಿಗೆ ಜಗತ್ತು ಸುಂದರವೇ ನಿಜ,
ಆದರೆ ನಡೆವ ದಾರಿಯ ರೂಪಿಸುವವರು
ನಾವೇ ತಾನೇ..!!

- ನಮಿತ ಗಟ್ಟಿ

21 Apr 2017, 11:23 am

ಬೆಳದಿಂಗಳು ಬೇಕಿತ್ತು...

ಬೆಳದಿಂಗಳು ಬೇಕಿತ್ತು
ಅವಳಿಗೂ ನನಗೂ....
ಇಂದೇನೋ ವಿಶೇಷ
ಹುಣ್ಣಿಮೆಯಂತೆ ಊರಲ್ಲಿ
ಬೆಳಕ ಹಾಲು ಚೆಲ್ಲಿದಂತಿದೆ
ಮನೆಯ ಅಂಗಳದಲಿ
ಆದರೂ ಕಾರ್ಗತ್ತಲ ಗವ್ವೆನುವ
ನೀರವ ಮೌನದಿರುಳು
ಅವಳಿರದ ಮನದ ತುಂಬೆಲ್ಲಾ..!!

- Kanakamurthi

21 Apr 2017, 10:23 am

ಎಲ್ಲರು ಪ್ರೇಮಿಗಳೇ

ಪ್ರಪಂಚದಲ್ಲಿ ಎಲ್ಲರು ಪ್ರೇಮಿಗಳೇ
ಕೆಲವರು ಗುಪ್ತ ಪ್ರೇಮಿಗಳು
ಕೆಲವರು ಮುಗ್ಧ ಪ್ರೇಮಿಗಳು
ಕೆಲವರು ಭಗ್ನ ಪ್ರೇಮಿಗಳು
ಕೆಲವರು ಲಗ್ನ ಪ್ರೇಮಿಗಳು
ಉಳಿದವರು..................
ನನ್ನ ಪ್ರೇಮಿಗಳು

- stylish⭐⭐AA

21 Apr 2017, 09:22 am

ಚೆಲುವಿನ ಹೂವೇ

ಚೆಲುವಿನ ಹೂವೇ
ನಿನ್ನ ನಗುವೇ ನಿನಗೆ ಭಾರವಾಯ್ತೆ ?
ದುಂಬಿ ಬರುವ ಮುನ್ನ
ನಿನ್ನ ನಗು ಮಾಯವಾಯ್ತೆ?

ಯಾರು ಅರಿವರು ಹೂವೇ ನಿನ್ನ
ಮನದ ಕಡಲಾಳವನ್ನು?
ಹಿಡಿಯಲಹುದೇ ಅಲ್ಲಿ
ಓಡಾಡುವ ಬಣ್ಣ ಬಣ್ಣದ
ಮೀನುಗಳನ್ನು.

ಬಡಿಸು ನೀ ಸಿಹಿ ಮಕರಂದವ
ಅರಸಿ ಬಂದು ಸರಸವಾಡುವ
ರಸಿಕ ದುಂಬಿ ಗೆಣೆಕಾರನಿಗೆ..
ನುಡಿಸು ಪ್ರೇಮ ಪಲ್ಲವಿಯ
ಮಡಿಲಲಿ ತಲೆಯಿರಿಸಿ ಮಲಗಿರುವ
ಮಾಣ್ ದುಂಬಿಗೆ,
ಸಿಗಲಿ ಸ್ವರ್ಗವದಲ್ಲೇ ನಲ್ಲೆಯ.

- ಶ್ರೀಗೋ.

21 Apr 2017, 08:24 am

ಮೊಡಗಳೇ ಇಲ್ಲದಿದ್ದರೂ....

ಮೋಡಗಳೇ ಇಲ್ಲದಿದ್ದರೂ ನನ್ನ ಮೇಲೆ ಈ ಸುರಿಮಳೆ
ಸಿಹಿಯಾಗಿ ಮುತ್ತಿಡುತ್ತಿದೆ ಅದು ನೀನೇನಾ......

ಬಿರುಗಾಳಿ ಇಲ್ಲದೇನೆ ನಾ ತೇಲಾಡುತಿರುವೆನಲ್ಲಾ ಈ ಮಾಯೆಯಲ್ಲಾ ಅದು ನಿಂದೇನಾ......

ಹೋಗೋದಾರಿಲಿ ಇಲ್ಲ ಚಂದಿರಾ
ಆದರೂ ತಂಪಿದೆಯಲ್ಲಾ ಅದು ನೀನೇನಾ.......

ಗಿಡದ ನೆರಳಿಗೂ ಸಿಗುವುದಿಲ್ಲ
ಈ ಹೂವಿನ ಸೊಗಸಾದ
ಹುಮಳೆ........

ತಪ್ಪೇನಾದ್ರು ಇದ್ರೆ ನೇರವಾಗಿ ಹೇಳದೇನೆ.......
ಹೆಚ್ಚರವಾಗಿರುವ ಕನಸಿನ ಜೊತೆ ಆಡಿ ಹೋದ್ರೆ ಹೇಗೆ...
ಪ್ರತಿಕ್ಷಣವೂ ನನ್ನೇ ನಾನೆಯುತಿದ್ರೆ ಹೇಗೆ.........

ನಾನಲ್ಲದೆ ನೆಲದಮೇಲೆ ನೆನೆಯಯುವ ಒಂದು ಹೆಸರು ಇಲ್ವಾ...

ಮಾತಿನಲ್ಲಿ ಇಲ್ವಲ್ಲಾ ಮುದ್ದು ಹೇಳೋ ನಿಜ....
ನೋಟದಲ್ಲಿ ಇಲ್ವಲ್ಲಾ ಸ್ಪರ್ಶ ಹೇಳೋ ನಿಜ....

ಸನ್ಹೆ ಯಲ್ಲಿ ಇಲ್ವಲ್ಲ ಗಿಚ್ಚಿ ಹೇಳೋ ನಿಜ .......
ನಗುವಿಗಿಂತ ನನಗೆ ನಿನ್ನ ಹಲ್ಲಿನ ಗುರುತೇ ನಿಜ .....

ಎದ್ದು ಬಿದ್ದು ನಾ ಬರೆದುಕೊಂಡ
ಹತ್ತು ಹಾಳೆ ಕವಿತೆ......
ಎಷ್ಟಾದರೂ ಅದು ಸಾಟಿಯಲ್ಲಿ
ಒಂದು ಅಪ್ಪಿಗೆಯ ಮುಂದೇ....

ಓ ನಮ್ಮಿಬ್ಬರ ಮದ್ಯೆ ದಾರಕ್ಕಾದ್ರು
ದಾರಿ ಯಾಕೆ ಹೇಳು...

ಮೊಡಗಳೇ ಇಲ್ಲದಿದ್ದರೂ ನನ್ನ
ಮೇಲೆ ಈ ಸುರಿಮಳೆ
ಸಿಹಿಯಾಗಿ ಮುತ್ತಿಡುತ್ತಿದೆ ಅದು ನೀನೇನಾ.......

ನಂಗಿಷ್ಟವಾದ ಒಂದು ತೆಲುಗು ಹಾಡಿನ
ಅನ್ವಯ......

- ಚುಕ್ಕಿ

21 Apr 2017, 07:35 am

ಶ್ರೀ ಕೃಷ್ಣ

ಲಾಲಿ ಹಾಡಲೇ ಮದನಗೋಪಾಲ
ಮುದ್ದು ಮುದ್ದು ಮಾತಾನೇಳಲು
ಇದು ಸಮಯವಲ್ಲ......

ಮಲಗು ನನ್ನ ಚಿನ್ನಿ ಕೃಷ್ಣಾ
ಕರೆದರಾಯಿತು ನಿನ್ನ ರಾಧೆಯನ್ನ
ಪ್ರೀತಿಮಾಡಲು ಕನಸಲಿ ನಿನ್ನ ...

ಕದ್ದು ಕದ್ದು ಬೆಣ್ಣೆಯನೆಲ್ಲಾ
ನಿನ್ನ ದೇಹ ಸೋತಿದೆಯಲ್ಲಾ
ಮಾತಿಲ್ಲದೆ ಮಲಗೋ ಕೃಷ್ಣ ......

ನಿದ್ದೆ ನಿನ್ನ ಬರುವಿಕೆಯನ್ನೇ ತಾ
ಮಲಗದೆ ಕಾದು ನೋಡಿದೆ.
ಪವಳಿಸು ಪ್ರಾಣನಾದ ಚುಕ್ಕಿಗಳ
ಸೊಬಗನ್ನು ಕರೆತರಲು ನನಗಾಗಿ.

ನಿದ್ರಿಸು ನನ್ನ ಶಶಿವಧನ ನೀನು
ನಿನ್ನ ಮನವರಿಕೆಯಲ್ಲಿ ನಿನ್ನೊಡನೆ
ನಗುತಿಹ ಶಶಿವಧನೆ ನಾನು.

ನೋಡು ಕಂಗಳೆಲ್ಲಾ
ಮರೆತುಹೋಗಿವೆ ನಿದ್ದೆಯ ಕಳ್ಳ
ಗೋಪಿಕೆಯರ ಪ್ರಿಯತಮ ನೀನು
ನಿನ್ನ ಮನಸು ಕದ್ದ ಪ್ರಿಯತಮೆ ನಾನು.......

ಸಿಕ್ಕರಾಯಿತು ನಾಳೆಯ ದಿನಕೆ
ಕದ್ದರಾಯಿತು ಬೆಣ್ಣೆಯ ಮಡಿಕೆ...
ಮಲಗು ಮುದ್ದು ಕೃಷ್ಣ ನನ್ನ ಮುದ್ದು ಕೃಷ್ಣ .......

ಮರೆಯಬೇಡ ನೀನು
ನನ್ನ ನೋಡಲು ಬರುವುದು ಇನ್ನು.....
ಕನಸು ನಿನ್ನ ಕರೆದಿದೆಯಲ್ಲಾ
ಅಲ್ಲಿ ಇರುವುದು ನಾನೇನಲ್ಲಾ........

ನಿನ್ನ ಪ್ರೀತಿ ಬಿಂಬ ನನ್ನದೇನೆ
ಹಾಗಿದೆಯಲ್ಲಾ.......
ಲಾಲಿ ಹಾಡಲೇನು ನನ್ನ
ಮುದ್ದು ಕೃಷ್ಣ ಮಾತಿಲ್ಲದೆ ಮಲಗೋ ಮೋಹಣಾಕಾರ................

ಶ್ರೀಕೃಷ್ಣ

- ಚುಕ್ಕಿ

21 Apr 2017, 06:43 am

ಪ್ರೀತಿಸುತ್ತಿರುವೆ

ನೀನು ನನ್ನ ನೋಡಿದ
ಮೊದಲ ಕ್ಷಣದಿಂದಲೇ
ಪ್ರೀತಿಸಿದರೆ............

ನಾನು ನಿನ್ನ ಒಂದು ಕ್ಷಣವೂ
ನೋಡದೆ ಇರಲು ಹಾಗದಂತೆ
ಪ್ರೀತಿಸುತ್ತಿರುವೆ.........

- ಚುಕ್ಕಿ

21 Apr 2017, 06:38 am

ಸರಿದುಗುತ್ತಿಲ್ಲಾ.......

ಸರಿದುಗುತ್ತಿಲ್ಲಾ ಈ ಭಾವನೆಗಳ ತಕ್ಕಡಿ ನನ್ನಲ್ಲಿನ ಈ ನೂರು ಭಾವಗಳು ತಿಳಿಸಳು........

ಮರೆಯಾಗುತಿಲ್ಲಾ ಈ ನಿಂದನೆಯ ಮಾತುಗಳು ಅವು ಕೇಳಿಸಿಕೊಂಡಿದ್ದು ನನ್ನ ಕಿವಿಗಳಲ್ಲಾ ಮನಸಲ್ಲವೇ......

ನೊಂದ ಮನಸ್ಸು ಬೇಸರದ ಮಡಿಲಲ್ಲಿ
ಮಾತಿಲ್ಲದೆ ಮಲಗಿದೆ ಅದಕ್ಕೆ
ಮೌನವಿಂದು ಲಾಲಿಹಾಡ ಹಾಡಿದೆ....

ಜಗದ ಸ್ವಾರ್ಥಕಿಂದು ನನ್ನ ಬದುಕು
ಬಲಿಯಾಗಿ ಹೋಗುತ್ತಿದೆ..........

- ಚುಕ್ಕಿ

20 Apr 2017, 10:59 pm

ಸುದೂರ ಪಯಣ

ಸುದೂರ ಪಯಣದಲ್ಲಿ
ಸಾಗದೆ ಹಿಂಜರಿದ ಒಂದು
ನಾವಿಕನ ದೋಣಿ .........

ಯಾವ ತೀರ ತನ್ನದು ಎಂದು
ತಿಳಿಯಲಿಲ್ಲವೋ ಅಥವಾ
ಮುಂದಿರುವ ದಾರಿ ಮರೆತಿದಿಯೋ...

ಮರದಲ್ಲಿ ಕೊಂಬೆಯಂತಿದ್ದ
ಈ ಜೀವ ಕಡೆದವರಿಗೆ ಕೈ ತುತ್ತು ಕೊಟ್ಟಿದೆಯಲ್ಲಾ........

ಉಸಿರಾಡುತ್ತಿದ್ದ ಪ್ರತಿಕ್ಷಣ
ಇತರರಿಗಾಗಿ ತನ್ನ ಜೀವನ
ಆದರೀಗ ದಾರಿತಿಳಿಯದೆ ನಿಂತಿದೆಯಲ್ಲಾ..........

ಸಾಗರದ ಮಧ್ಯದಲ್ಲಿ
ಸೋತು ನಿಂತಿದೆಯಲ್ಲಾ
ಈ ಕಡಲಿನ ಯಾವ ತೀರಕೆ ಇದರ ಪಯಣ................

- ಚುಕ್ಕಿ

20 Apr 2017, 10:56 pm