Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸೆಳೆದಾಯಿತು ನಿನ್ನನು
ನನ್ನ ಎದೆಯೊಳಗೆ......
ನೀ ಬಂದ ಘಳಿಗೆ ನನ್ನೊಳಗೇನೋ
ರೋಮಾಂಚನ.........
ನೀನೊದ ನಂತರ ನಿನ್ನ ನೆರಳು
ನನ್ನ ಬಿಡಲೇ ಇಲ್ಲವೇ ಇನಿಯಾ
ನನ್ನ ಹೃದಯಕ್ಕೆ ನೆರಳಾಗಿ ನಿಂತೋಯಿತೆ......
ಅದೇ ಮೊದಲು ನನ್ನೆದೆಯೂ
ಯಾರಿಗೂ ಅಂಜಿಲ್ಲ ನೀನಿರುವ
ಧೈರ್ಯದಳಿ...........
ಬಿಸಿಯುಸಿರ ತಾಪದಲಿ
ಕರಗೋದ ಕಂಬನಿಯೂ
ನಿನರೂಪ ಕಂಡಾಗ
ತಾನಾಗಿ ನಗುವಾಯಿತೇ......
- ಚುಕ್ಕಿ
23 Apr 2017, 03:15 pm
ಮುಂಜಾನೆ ವೇಳೆ, ಹಕ್ಕಿಗಳ ಸಂಗೀತದ ಕಲರವ ಕೇಳಿದಾಗ...
ಮೂಗ್ಗುಗಳು ಬಾಗಿಲು ತೆರೆದು ನಸು ನಕ್ಕಾಗ..........
ಪರಿಮಳದ ಅಲೆಗಳು ಉಕ್ಕಿ ಬಂದು ಮನ ಸೇರಿದಾಗ....
ಆಗ ನಿನ್ನ ನೆನಪು ಬರುವುದು
ಮಳೆ ಹನಿಗಳು ಮೈ ಸ್ಪರ್ಶಿಸಿದಾಗ, ಸಿಡಿಲಿನ ಸದ್ದು ಕೇಳಿದಾಗ....
ಮೈದಾನದಲ್ಲಿ ವನ-ತೋಟದಲ್ಲಿ ಹಸಿರು ಎಲೆಗಳು ಅಲುಗಾಡಿದಾಗ...
ತಂಪಾದ ಗಾಳಿಯು ಎಲ್ಲಿಂದಾನೂ ಮೋಜನ್ನ ಹೂತ್ತು ತಂದಾಗ..
ಆಗ ನಿನ್ನ ನೆನಪು ಬರುವುದು
ಮಿನು ಮಿನುಗು ತಾರೆಗಳು, ಆಕಾಶವನ್ನು ಸಿಂಗರಿದಾಗ....
ನಿರ್ಮಲವಾದ ನೀರಿನಲ್ಲಿ ಚಂದ್ರನ ಬಿಂಬ ಕಂಡಾಗ.......
ಹುಚ್ಚೇದ್ದು ನವಿಲುಗಳು ರೆಕ್ಕೆಗಳನ್ನು ಬಿಚ್ಚೀ ಕುಣಿದಾಗ.....
ಆಗ ನಿನ್ನ ನೆನಪು ಬರುವುದು
ಶಾಬುದ್ದೀನ ಎಸ್ ಆರ್.........
- shabudin
23 Apr 2017, 11:51 am
ನೀ
ನನ್ನ
ಮನಸಿನ
ಕನ್ನಡಿ!
ಬರೆದುಬಿಡು
ಬಂಗಾರದ
ಬಾಳ
ಮುನ್ನುಡಿ!
- Shreekanth
23 Apr 2017, 10:38 am
ಅಡಿಗೆ ಮನೇಲಿ ಕೂತು
ಅಳುತ್ತಿರುವ ಹಣ್ಣುಮಗಳ
ಕಣ್ಣೀರಲ್ಲಿ................
ದಿನ ದಿನಕೂ ಹೊಟ್ಟೆಪಾಡಿಗಾಗಿ
ಶ್ರಮವಹಿಸಿ ದುಡಿಯುತ್ತಿರುವ
ಬಡವನ ಬೆವರಲ್ಲಿ..............
ಮಕ್ಕಳನ್ನು ಶಿಕ್ಷಣಕ್ಕೆ ಕಳುಹಿಸಲು
ದುಡ್ಡಿಲ್ಲದೆ ದಿನಗೂಲಿಗೆ ಕಳುಹಿಸುತ್ತಿತ್ತುವ
ತಂದೆ-ತಾಯಿಯರ ನೋವಿನಲ್ಲಿ................
ಅನಾರೋಗ್ಯದಿಂದ ಬಳಲುತ್ತಿರುವ
ವಯಸ್ಸಾದ ಮುದುಕರ ವ್ಯಥೆಯಲ್ಲಿ
...............
ಸ್ವಾತಂತ್ರ್ಯವೆಲ್ಲಿ ಬಂತು ಸಿರಿವಂತರ
ಮನೆಗಳಲ್ಲಿ ಹಿಡಲು ಜಾಗವಿರದೆ
ರಾಶಿ ರಾಶಿ ಬಿದ್ದಿರುವ ಹಣದಲ್ಲಿ......
- ಚುಕ್ಕಿ
23 Apr 2017, 10:26 am
ಸವಿಯದ ಕವಿತೆಗಳು
ಮರೆಯದ ನೆನಪುಗಳು
ಕಳೆಯದ ಕ್ಷಣಗಳು
ಎಷ್ಟು ಹೇಳಿದರೂ ಸಾಲದು
ನನ್ನಲ್ಲಿನ ಭಾವನೆಗಳು......
- ಚುಕ್ಕಿ
23 Apr 2017, 10:14 am
ನೀ ಹಣತೆಯಾಗು
ನಾ ಎಣ್ಣೆಯಾಗುವೆ ನಲ್ಲೆ
ಯಾರೆ ಬತ್ತಿ ಇಡಲಿ ನಗುನಗುತ
ಬೆಳಗೊನ ಜೀವನ
ನಾಗು
- Nagaraja A
23 Apr 2017, 10:06 am
ಎದೆತಟ್ಟಿ ಹೇಳುವೆ ನನ್ನ ಭಾಷೆ ಕನ್ನಡ
ಅಭಿಮಾನದಿ ಕೂಗುವೆ ನನ್ನುಸಿರು ಕನ್ನಡ
ನಮ್ಮ ನಾಡು ಕನ್ನಡ...ಪ
ಸಿರಿತನಕೆ ಬಡತನಕೆ ಭೇದವಿಲ್ಲ ಕನ್ನಡ
ಜಾತಿಮತ ಮೀರಿದ ದೈವಭಾಷೆ ಕನ್ನಡ
ಎಲ್ಲರೊಳಗೆ ಒಂದಾಗಿ ಒಂದಾಗುವ ಕನ್ನಡ
ಹೆಜ್ಜೆಹೆಜ್ಜೆಯಲು ಗೆಜ್ಜೆಯನಾದದಲು
ಸಪ್ತಸ್ವರನಾದದೊಳು ಸಂಗೀತಲೋಕದೊಳು
ವನ ಮನ ಕಣ ಬಣದೊಳು ಜೀವಜಲ ಕನ್ನಡ
ಕಾವೇರಿ ತೀರದಲಿ ಕರುನಾಡ ಮಣ್ಣಲಿ
ಕಬ್ಬಿಗರ ನಾಡಲಿ ಕರುಣೆಯ ಬೀಡಲಿ
ಕಣ್ತುಂಬ ತುಂಬಿದೆ ಕನ್ನಡವೆ ಮಿಂಚಾಗಿ
ವೀರಶೂರರಾಳಿದ ವೀರಭೂಮಿ ಕನ್ನಡ
ಭಕ್ತಿ ಭಾವ ಪಸರಿಸಿದ ಪುಣ್ಯಭೂಮಿ ಕನ್ನಡ
ಸಾಹಿತ್ಯ ಲೋಕದ ಸಿಂಹಾಸನ ಕನ್ನಡ
ಎಲೆಗಿಡ ಮರಬಳ್ಳಿಯಲು ಕಂಗೊಳಿಸಿದೆ ಕನ್ನಡ
ಕಾನನದ ಅಂಚಿಗೂ ಮಳೆಬಿಲ್ಲು ಕನ್ನಡ
ಸೂರ್ಯ ಚಂದ್ರತಾರೆಯಲು ಮಿನುಗುತಿದೆ ಕನ್ನಡ
ಬೇಲೂರು ಹಳೆಬೀಡು ಪಟ್ಟದಕಲ್ಲು ಹಂಪೆಯಲು
ಸಹ್ಯಾದ್ರಿ ಬೆಟ್ಟದಲು ಸಸ್ಯಕುಲರಾಶಿಯಲು
ಜೋಗದ ಜಿನುಗಿನಲಿ ಝೇಂಕಾರವು ಕನ್ನಡ..
- Irayya Mathad
23 Apr 2017, 09:52 am
by-ಲಚಿ
ನಿನ್ನೆಡೆಗೆ ನನಗಿರುವುದು ವಾಂಛೆಯಲ್ಲ
ಸಾಗರದಂತಹ ಪ್ರೀತಿ.
ನಿನ್ನೆಡೆಗೆ ನನಗಿರುವುದು ಅನುಭೂತಿಯಲ್ಲ
ಆಕಾಶದಂತಹ ಆರಾಧನೆ.
ನಿನ್ನೆಡೆಗೆ ನನಗಿರುವುದು ಉನ್ಮಾದವಲ್ಲ
ಸುಮಧುರ ಭಾವನೆ.
ನಿನ್ನೆಡೆಗೆ ನನಗಿರುವುದು ಬಯಕೆಯಲ್ಲ
ನಲುಮೆಯ ಸಂಗಮ;ಸಮಾಗಮ.
ನಿನ್ನೆಡೆಗೆ ನನಗಿರುವುದು ಬಿರುಗಾಳಿಯಂತ ರಭಸವಲ್ಲ
ನೂರು ಜನ್ಮಕು ತುಡಿಯದ ತುಡಿತ.
- ಲಚಿ
23 Apr 2017, 02:59 am
ಅಳಬೇಡ ಚಿನ್ನಿ ಕೃಷ್ಣ
ಅಳಬೇಡ ಮುದ್ದು ಕೃಷ್ಣ
ಬೆಣ್ಣೆಯಾಲ್ಲ ತಿಂದೆಯಲ್ಲಾ
ಇನ್ನು ಕೊಡುವೆ ನನ್ನ ಕೃಷ್ಣ.....
ಬೆಳ್ಳಿಪಾತ್ರೆಲಿ ಬಂಗಾರದ
ಚಮಚವಾಕಿ ಮೃದುವಾದ
ನವನೀತವಾ ಮುದ್ದೆ ಮಾಡಿ
ಬಾಯಲಿಡುವೆ
ಭ್ರಾಹ್ಮಾಂಡವ ಬಚ್ಚಿಟ್ಟ
ನಿನ್ನ ಈ ಚಿಕ್ಕ ಬಾಯಲ್ಲಿ
ಅತಿ ಮಧುರ ರುಚಿಯಾದ
ಬೆಣ್ಣೆಯಲ್ಲಾ ಬಾಚಿ ಹಿಡುವೆ
ನನ್ನ ಕೋಮಲ ಕೈಯಲ್ಲಿ....
ತಪ್ಪಿಯಾದರು ನನ್ನ ಕೈ
ಕಚ್ಚಬೇಡ ನಾನು ಅತ್ತರೆ
ಅದರ ಸಲುವಾಗಿ ನೀ ಮತ್ತೆ ಅಳಬೇಡ........
ನಿನ್ನ ನಾಜೂಕು ಮುಖದಲ್ಲಿ
ನಾ ನೋಡಲಾರೆ ಈ ಅಶ್ರುವಿನ
ಕಳೆಗಳು ಎ ಶ್ರೀಲೊಳ
- ಚುಕ್ಕಿ
23 Apr 2017, 12:35 am
ನಿನ್ನ ಪ್ರೀತಿಯಲಿ ಹುಚ್ಚನಾಗಿರುವೆ
ಅಚ್ಚಕನ್ನಡದ ಹುಡುಗ ನಾ
ಹೆಚ್ಚು ಹೇಳಲಾರೆ ಪ್ರೀತಿ ಕುರಿತು
ಮನಬಿಚ್ಚಿ ಪ್ರೇಮಿಸುವೆ ನಿನ್ನ ನಾ!
ಹಚ್ಚಬೇಕೆಂದಿರುವೆ ಪ್ರೇಮದ ಜ್ಯೋತಿಯ
ಕಿಚ್ಚು ಇಟ್ಟಿರುವೆ ಮನದಲ್ಲಿ ನೀ
ಬೆಚ್ಚನೆಯ ಎದೆಯಲ್ಲಿ ಜಾಗ ನೀಡೆನೆಗೆ
ಹುಚ್ಚು ಆಟವ ಕೊನೆಯಾಗಿಸಲು ನಾ!
- Shreekanth
22 Apr 2017, 11:33 pm