Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೂರವಾಗಿದೆ ನೆನಪು ದೂರವಾಗಿದೆ
ಭಾರವಾಗಿದೆ ಮನಸು ಭಾರವಾಗಿದೆ
ನೀನಿಲ್ಲದ ಈ ಮನಸು ಸೊರಗಿ ಹೋಗಿದೆ..!!.ಪ..!!
ದಾರಿ ಕಾಣದೆ ನನಗೆ ದಾರಿ ಕಾಣದೆ
ಮೌನವಾಗಿದೆ ಹೃದಯ ಮೌನವಾಗಿದೆ
ನೀನಿಲ್ಲದ ಹೃದಯ ಬಡಿತ ಮರೆತು ಹೋಗಿದೆ
ಬಿಸಿಲು ತುಂಬಿದೆ ಸುಡುವ ಬಿಸಿಲು ತುಂಬಿದೆ
ನೆರಳು ಇಲ್ಲದೆ ನಿನ್ನ ನೆರಳು ಇಲ್ಲದೆ
ನನ್ನ ರೂಪ ನನಗೆ ಇಂದು ಮಾಯವಾಗಿದೆ
ಸೋತು ನಿಂತಿದೆ ದೇಹ ಸೋತು ನಿಂತಿದೆ
ಸ್ಪರ್ಶವಿಲ್ಲದೆ ನಿನ್ನ ಸ್ಪರ್ಶವಿಲ್ಲದೆ
ನಿನ್ನ ಆಲಿಂಗನದ ಅರಿವು ಇಲ್ಲದೆ
ಮಂಜು ತುಂಬಿದೆ ನಯನ ಮಂಜು ತುಂಬಿದೆ
ಮಾತು ಬಾರದೆ ನನಗೆ ಮಾತು ಬಾರದೆ
ನಿನ್ನ ಆಗಮನದ ಸುಳಿವು ಕಾಣಲಾರದೆ...
- Irayya Mathad
23 Apr 2017, 11:25 pm
ಹಗಲಿರುಳು ದುಡಿವರು
ನಿನಗಾಗಿ
ನೀನಿಲ್ಲದೆ ಉಳಿಯರು
ಯಾರು ಇಲ್ಲಿ
ಚಂಚಲೆಯು ನೀನು
ಅಲೆಯುವೆವು ನಾವು
ನಿನ್ನ ಕಂಡು,ಮೋಹ ಗೊಂಡು
ಅಳಿವೆವು,ಎಲ್ಲ ಕಳಕೊಂಡು
ನೀ ಒಲಿದವರನ್ನು
ಮುತ್ತುವರು ಇರುವೆಗಳಂತೆ
ನಿನ್ನ ಬೇಡುವರನ್ನು
ಅಟ್ಟುವರು ಶ್ವಾನದಂತೆ
ಒಂದೊತ್ತಿನ ಕೂಳಿಗು
ಅಲೆಯುವರು ಒಂದೆಡೆ
ಕೋಟಿ- ಕೋಟಿ ಕಂತೆಗಳ
ಹಾಸಿ ಒದೆಯುವರು ಇನ್ನೊಂದೆಡೆ
ನವ- ಮಾಸಗಳು ಬಸಿರಲಿ
ಹೊತ್ತು- ಹಡೆವಳು ತಾಯಿ
ಎಲ್ಲ ನೋವ ನುಂಗಿ ಹರಸಿದವಳ
ಕರುಳ ಬಗೆವರು ನಿನಗಾಗಿ
ಅಷ್ಟ- ಲಕ್ಷ್ಮಿಯೆಂದು ನಿನ್ನ
ಬರಮಾಡುವರು ಬಾಗೀನ ನೀಡಿ
ಪೂರೈಸಿಕೊಳ್ಳಲೆಂದು ತಮ್ಮ
ಅನಿಯಮಿತ ಬಯಕೆಗಳನ್ನ
ಹುಟ್ಟು- ಉಚಿತ, ಸಾವು- ಖಚಿತ
ಕಲಿಯುಗದಲಿ ಇದಾಗಿದೆ ಗತ
ಹುಟ್ಟು-ಸಾವು ದುಬಾರಿ
ನಡುವಿನ ಬಾಳಿಗೆ ನೀನೆ ರಾಯಬಾರಿ
ಶ್ರಿಮನ್ನಾರಯಣನ ಸತಿ
ನೀನೆ ನಮಗೆಲ್ಲ ಗತಿ
ಜಗದಿ, ಯಾತಕೀ ಪಜೀತಿ
ನೀನೆ ಎಂದೆಂದಿಗು ಅತಿ- ಗತಿ!
ಶಾರಧ
- ಶಕುಂತಲಾ
23 Apr 2017, 10:53 pm
ವಿಚಿತ್ರ ಜಗತ್ತಿನಲ್ಲಿ ಬದುಕ್ತಿರೊದೆ ಗ್ರೇಟು.., ಅಂತದ್ರಲ್ಲಿ ನಾಲ್ಕು ಜನ ನಮ್ಮನ್ನು ನೋಡಿ ಏನಂತಾರೆ ಅಂತ ಯೋಚನೆ ಮಾಡ್ಕೋಂಡು ಕುಂತಿದ್ರೆ....
ಅದೇ ನಾಲ್ಕು ಜನ ಕೊನೆಗೆ ಹೇಳ್ತಾರೆ ಬೇಗ ಎತ್ತಿ ಟೈಮ್ ಆಗುತ್ತೆ ಅಂತ.*
'ಸಾವು' ಬೆನ್ನಿಂದೆ ಇರೋದು ವಾಡಿಕೆ
'ಸಾಧನೆ' ಕಣ್ಮುಂದೆ ಬರ್ಬೆಕು ಅನ್ನೋದೇ ಬೇಡಿಕೆ...
ಸಾಧನೆ ಇಲ್ಲದೆ ಗೆಲುವೆ ಇಲ್ಲ *ಸಾಧಿಸಿದವನಿಗೆ ಸಾವೇ ಇಲ್ಲ ....
- shabudin
23 Apr 2017, 09:43 pm
ನೊಂದ ನೊಂದು ಸೊರಗಿ
ಹೋದ ಈ ಜೀವನ ಶೈಲಿಯು
ಸಾಕಾಗಿದೆ ನನಗೆ ಸಾಕಾಗಿದೆ.....
ಎಲ್ಲೆಲ್ಲೂ ಸ್ವಾರ್ಥ ಎಲ್ಲೆಡೆಯೂ
ದುರ್ಮಗ ಮಾತುಗಳೆಲ್ಲಾ
ಬರಿದಾಗಿವೆ ಮೌನವಿಂದು
ಸುಂದರವಾಗಿದೆ.........
ಒಂಟಿತನ ಅಂದವಾಗಿದೇ
ಏಕೆಂದರೆ ಹಾಗ ಯಾರು
ನನ್ನ ನೋಯಿಸಲು ಅವಕಾಶ
ಇರುವುದಿಲ್ಲಾ ಯಾರಿಗೂ ಸಿಗುವುದಿಲ್ಲ....
ಕತ್ತಲೆ ಕೊನೆಯಲ್ಲಿ ಕುಳಿತ ನನಗಿಂದು
ನನ್ನದೇ ಅದಾ ಒಂದು ಪ್ರಪಂಚ
ಸೃಷ್ಟಿಯಾಗಿದೆ ಇಂದು ಸೃಷ್ಟಿಯಾಗಿದೆ.
ಅದರಲ್ಲಿ ಇರುವ ನಾನು ಈ ನಿಮಿಷ
ನನಗಾಗಿರುವೆ ನನ್ನಜೊತೆ ನಾನಾಗಿರುವೆ......
- ಚುಕ್ಕಿ
23 Apr 2017, 08:31 pm
ಕೊರಿಸಿರುವೆನು ನಾ ನಿನ್ನ ಗೆಳತಿ...
ನನ್ನ ಹೃದಯದ ಮಂಠಪದಲ್ಲಿ...
ಹಚ್ಚಿರುವೆನು ಸಿಂಧೊರವ ಹುಡುಗಿ...
ನನ್ನ ಕೆಂಪು ರಕ್ತದಲ್ಲಿ...
ನಡವೆನು ನಿನ್ನ ಜೊತೆ ಸದಾಕಾಲ...
ಪ್ರಪಂಚವೆಂಬ ಅಗ್ನಿ ಕುಂಡದ ಸುತ್ತ...
- Harsha GR
23 Apr 2017, 06:25 pm
ಒಂದು ಮರದಲ್ಲಿ ಹಲವು ಹಕ್ಕಿ ಸೇರಿ
ಒಂದೇ ಕಲರವ ಬೀರುವ ಹಾಗೆ,
ಒಂದು ಬಾವಿಯಲ್ಲಿ ಹಲವು ಝರಿಗಳು ಸೇರಿ
ಒಂದೇ ರುಚಿಯ ಪಾನೀಯವಾಗುವ ಹಾಗೆ,
ಒಂದು ಸಮುದ್ರದಲ್ಲಿ ಹಲವು ನದಿಗಳು ಸೇರಿ
ಒಂದೇ ರಭಸದ ಅಲೆಯಾಗುವ ಹಾಗೆ,
ಒಂದು ದಾರದಲ್ಲಿ ಹಲವು ಹೂಗಳು ಸೇರಿ
ಒಂದೇ ಸುವಾಸನೆಯ ಮಾಲೆಯಾಗುವ ಹಾಗೆ,
ಒಂದು ಕೃಷಿ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಹಲವು ವಿದ್ಯಾರ್ಥಿಗಳು ಸೇರಿ
ಒಂದೇ ಕೃಷಿ ತಾಂತ್ರಿಕತೆ ಎಂಬ ಕುಟುಂಬದ ಸದೃಢ ಸದಸ್ಯರಾಗಿ,
ಕೃಷಿ ತಾಂತ್ರಿಕತೆಯ ಲೋಕ ಕಟ್ಟೋಣ ಬನ್ನಿ......
~ಶರಣು~
- sharanu
23 Apr 2017, 05:34 pm
ಕಾಡದಿರು ನನ್ನ ಮನವೇ
ನೆನೆಯದಿರು ಅವನ ನಗುವೇ....
ಒಂದು ಕ್ಷಣವು ಉಳಿದಿಲ್ವಲ್ಲಾ
ನನ್ನ ನೆನಪೇ ನಿನಗಿಲ್ವಲ್ಲಾ.........
ನನ್ನನ್ನೇ ಮರೆಸುವಂತೆ ಅವನ
ನೆನಪು ನನ್ನ ಮನದಲ್ಲಿ ತುಂಬಿದೆಯಲ್ಲಾ....
ಮಾತಾಡೇ ನನ್ನ ಮನವೇ ನೀನಾದರು
ನನ್ನಲ್ಲಿರುವೆಯಾ ಇಲ್ಲ ಅವನ ಉಸಿರಲ್ಲಿ
ಮರೆಯಾಗಿರುವೆಯಾ.........
- ಚುಕ್ಕಿ
23 Apr 2017, 05:26 pm
ನಾ ಬಯಸದ ಖುಷಿಯ ಹರಸಿ ತಂದೆ
ಇಂದು ನನ್ನೇ ಬದಿಗೆ ಸರಿಸಿ ಹೊರಟು ನಿಂದಿರುವೆ
ನಿನ್ನಿಂದಲೆ ಅರಳಿತು ಕನಸು
ನಿನ್ನಿಂದಲೇ ಮುದುಡುತಿದೆ ಮನಸು
ನೋವಲೇ ಬೆಂದ ಬದುಕಿಗೆ ನಗುವ ತಂದು
ಕಾಯುವಂತೆ ಮಾಡಿರುವೆ ನಿನ್ನ ಕಣ್ಣೀರಲೆ ಮಿಂದು
ಒಂದೊಮ್ಮೆ ತಿರುಗಿ ನೋಡಬೇಕೆನಿಸದೆ ನಿನಗೆ
ಕಣ್ಣೀರಲೆ ಕೊರಗುತಿರುವೆ ದಾರಿಯು ಕಾಣದೆ ನನಗೆ
ಬೇರೆನು ತಿಳಿಯೆ ನಿನ್ನ ಮಾತುಗಳ ಹೊರತು
ನಂಬಿ ಬಂದಿರುವೆ ಕಂಡ ಎಲ್ಲಾ ನೋವುಗಳ ಮರೆತು
ಮಾತೆ ಸುಳ್ಳಾದರೆ ನಂಬಿ ಬದುಕುವುದೆಂತು
ನೆನಪಾಗದೆ ಕಂಡ ಕನಸುಗಳೆಲ್ಲ ಒಂದು ಇನಿತು
- ಶ್ರೀಕಾವ್ಯ
23 Apr 2017, 04:55 pm
ನಿ ಕೂಗಿದ ತಕ್ಷಣ
ಮರೆಯಾಯಿತು ನನ್ನ
ಹೆಸರು ..........
ನಿನ್ನ ಉಸಿರಲ್ಲಿ ಬೆರತೋಯಿತು
ನನ್ನ ಉಸಿರು.........
ಮರೆಯದೆ ನೆನಪಿಡು ನನ್ನ
ಹೆಸರು ............
ಏಕೆಂದರೆ ನಿನ್ನ ಹೊರೆತು
ನೆನಪಿಲ್ಲ ನನಗೆ ಯಾರ ಹೆಸರು......
- ಚುಕ್ಕಿ
23 Apr 2017, 03:58 pm
ಮರೆಯಲಾರೆ ಚಿನ್ನ, ನಾ ನಿನ್ನ,
ನೀ ಮರೆತಿರಬಹುದು ನನ್ನ,
ಆದರೆ ಮರೆಯಲಾರದು ನಿನ್ನ, ನನ್ನ ಮನ.
ಕಾಲಗಳು ಕ್ರಮೇಣ ಉರುಳಬಹುದು,
ಋತು ಚಕ್ರಗಳು ಕಳೆಯಬಹುದು,
ಸಮಯ ಸಂದರ್ಭಗಳು ಬದಲಾಗಬಹುದು,
ಬಹುಶಃ ನಿನ್ನ ನೆನಪಿನಲ್ಲಿಲ್ಲ ನಾನು,
ನನ್ನ ನೆನಪಿನಲ್ಲಿರುವೆ ಎಂದೆಂದಿಗು ನೀನು.
ಸೂರ್ಯ ಪ್ರತಿದಿನ ಹುಟ್ಟುವುದನ್ನು ಮರೆತರು,
ಚಂದ್ರ ಬೆಳದಿಂಗಳು ಚೆಲ್ಲುವದನ್ನು ಮರೆತರು,
ನಕ್ಷತ್ರಗಳು ಬಾನಿನಲಿ ಹೊಳೆಯುವುದನ್ನು ಮರೆತರು,
ನಾನೆಂದಿಗೂ ಮರೆಯಲಾರೆ ನಿನ್ನ ನೆನಪನ್ನ,
ನನ್ನೆ ನಾ ಮರೆತರು , ಮರೆಯಲಾರೆ ನಿನ್ನ.
ಕಾಲಗರ್ಭದಲಿ ಮರೆಯಾಗಿ ಸಮಯದ ಕೈಗೊಂಬೆಯಾದೆವು.
ಹೊಸ ದಾರಿ ಹೊಸ ಜೀವನ ಕಂಡುಕೊಂಡೆವು.
ಜವಾಬ್ದಾರಿಯಾರು ಹೊತ್ತು ದೂರ ಸರಿದೆವು,
ಹೊಸತನಕ್ಕೆ ಹಳೆಯದನ್ನು ಮರೆತಿರಬಹುದು ನೀನು,
ಕೊನೆಯುಸಿರೆಳೆದರು ಮರೆಯುವುದಿಲ್ಲ ನಿನ್ನ ನಾನು.
- ರವೀಂದ್ರಬಾಪೂರ(GNL)
23 Apr 2017, 03:33 pm