Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನೆಂಜಲು

ಗಂಗೆಯೇ ನಿನ್ನಲ್ಲಿ ಕೂಡಾ ತಾರತಮ್ಯವೇ
ಆ ಪರಶಿವನ ಶಿರದಿಂದ ನೀ ಜಾರಿ ಬೀಳುವ
ಸಮಯದಲ್ಲಿ ಗಾಳಿ ನಿನಗೆ ದಾರಿ ನಿಡಲ್ಲವೆಂದು
ಅಡ್ಡಿ ಹಾಕಿತೇ...................

ನೀ ಬರುವ ರಭಸಕ್ಕೆ ಆಕಾಶ ತಾ ಚೂರಾಗುವ ಸಾಧ್ಯತೆ ಇದೆಯೆಂದು ತನ್ನೊಳಗೆ ನೀ ನಿಲ್ಲಲು
ಜಾಗ ಕೊಟ್ಟಿಲ್ಲವೇ.............

ಈಗ ನಿನ್ನಲ್ಲಿ ಏತಕೆ ಈ ಭೇದ-ಭಾವ
ಈ ಸೃಷ್ಟಿಯಲ್ಲಿರುವ ಜೀವಿಗಳೆಲ್ಲಾ
ನಿನಿಂದಲೇ ಬದುಕಿರುವರೆಂಬ ಸತ್ಯ ನಿನಗೆ ತಿಳಿದಿಲ್ಲವೇ......................

ಜಲಧಾರೆ ನೀನಿರುವ ಭುವಿಯಲ್ಲಾ
ಹಚ್ಚ ಹಸಿರು ತುಂಬಿ ತುಳುಕುವ
ಸಿರಿವನದ ಸೊಗಸಲ್ಲವೇ.....

ಒಂದು ಹನಿಯ ನೀರಿಲ್ಲದೆ ನಿನಗಾಗಿ
ಆ ಗಗನದ ಕಡೆಗೆ ಕೈಚಾಚಿ ನೋಡುತ್ತಿರುವ
ನಿಸ್ಸಹಾಯಕರಿಗಿಂದು ಜೀವವಾಗಿ ನೀ ಬಾರೆ
ಅವನಿಯ ಮಡಿಲಲ್ಲಿ ನೀ ಸೇರೇ.......

ಒಂದು ಹನಿಯ ನೀರು ಉಳಿಸಿ
ಆ ಹನಿಗಾಗಿ ಪರದಾಡೋ ಜೀವಕೆ
ಪ್ರಾಣ ದಾನ ಮಾಡಿ

- ಚುಕ್ಕಿ

24 Apr 2017, 05:39 pm

ಲೈಫ್....

ಆಕ್ಸಿಡೆಂಟ್ ಆಗಲಿರುವ ಬಸ್ ಹತ್ತಿರುವೆ
ಕಿಟಕಿ ಪಕ್ಕದ ಸೀಟೊಂದನು‌ ಹಿಡಿದಿರುವೆ
ಕನಸುಗಳ ಕತೆಯೊಂದನು ಕಣ್ಣಲ್ಲಿ‌ ಇಟ್ಟಿರುವೆ
ಹಿಂದೆ ಸರಿಯುತಿರುವ ನೆನಪ ನೆನೆಯುತಿರುವೆ
ಕಣ್ಣ ಮುಂದೆ ಬರುತಿರುವುದೆಲ್ಲವ ಸವಿಯುತಿರುವೆ
ಮುಂಬರುವ ದೃಶ್ಯಗಳ ಕಾಯುತಿರುವೆ

- ಶ್ರೀಕಾವ್ಯ

24 Apr 2017, 04:43 pm

‌‌‌ಅಮ್ಮ

ಸುಂದರ ಅನ್ನೋ ಶಿಲೆಗೆ,
ಚಂದಿರ ಅನ್ನೋ ನಗು ಕೊಟ್ಟು
ವಾತ್ಸಲ್ಯ ಅನ್ನೋ ಮಡಿಲ ನೆಟ್ಟು
ಕರುಣೆಯೆಂಬ ಸೀರೆಯನುಟ್ಟು
ಮಮತೆಯ ಕೈಗಳಿಂದ ಕೈಬೀಸಿ
ಕರೆಯುತ್ತಿರುವ ಚಂದನದ ಗೋಂಬೆಯೇ
ಹೆಣ್ಣು , ನನ್ನ ಜೀವದ ಕಣ್ಣು ಎನ್ನ
ಹಡೆದವ್ವ..........,

-- ತೇಜಸ್ವಿನಿ.

- Tejaswini.p

24 Apr 2017, 04:36 pm

ಬದುಕು ಬಂಜರು ನೆಲ

ಯಾರು ನೆಟ್ಟರೋ ಈ ಮುಳ್ಳು ಗಿಡವನು
ನನ್ನೆದೆಯ ಬದಲಿ
ಜೀವನವೇ ಮರುಭೂಮಿಯಂತಾಗಿದೆ
ಹಸಿರು ಚಿಗುರುವುದೇ ಬಾಳಲಿ

ತೇಲಿಹೋಗುತಿಃ ಮದನ ಮೇಘಗಗಳ
ನಾನೆಂತು ಕೂಗಿ ಕರೆಯಲಿ
ವರ್ಷಧಾರೆಯು ಸುರೀಯೆ ಹರ್ಷಮೂಡುವುದೆ ಈ ಬಂಜೆ ಮನದಲಿ

ಮೇಘರಾಜನ ಕೈಬೀಸಿ ಕರೆವಾಸೆ
ಹಸಿರ ತೋಳುಗಳಿಲ್ಲ ನನ್ನಲಿ
ಬಂಜರು ಭೂಮಿ ನಾನು, ಪಾಪಸುಕಳ್ಳಿಯೇ
ತುಂಬಿದೆ ನಾ ನಡೆವ ದಾರಿಯಲ್ಲಿ

ಮಳೆ ಬಿದ್ದರೇತಾನೆ ತೆನೆ ಕೊನರುವುದು
ಮರವಿದ್ದರೇತಾನೆ ಮುಗಿಲ್ ಮಳೆಗರೆವುದು
ಇದೊಳ್ಳೆ ತಾಕಲಾಟ, ಇದೊಳ್ಳೆ ಪೀಕಲಾಟ
ಬದುಕೇ ಉತ್ತರ ಸಿಗದ ದೊಂಬರಾಟ

ಹಂಸಿನಿ

- ವಿಸ್ಮಯ

24 Apr 2017, 02:11 pm

ಹೇ ಮನಸೇ ನೀ ಯಾಕೆ ಹೀಗೆ..!!

ಖಾಲಿ ಬಂಡೆ ಕಲ್ಲಿನ ಮೇಲೆ ನಿನ್ನ ಹೆಸರು ಗೀಚಿದ್ದೆ..
ನೀನು ಮರಳಿನ ಮೇಲೆ ನನ್ನ ಹೆಸರು ಬರೆದೆ..
ಜೋರಾಗಿ ಅಪ್ಪಳಿಸಿದ ಸಾಗರದಲೆ ನನ್ನ ಹೆಸರನ್ನ ಮಾಯ ಮಾಡಿತ್ತು..
ನಾ ಗೀಚಿದ ಅಕ್ಷರಗಳು ನನ್ನ ನೋಡಿ ನಗುತ್ತಿತ್ತು..

ಅವತ್ತು ಸಾಗರದ ಅಲೆ ನಮ್ಮ ಭವಿಷ್ಯದ ಮುನ್ಸೂಚನೆ ನೀಡಿತ್ತು..
ಅಂದು ಅಳಿಸಿ ಹೋಗಿದ್ದು ಬರೀ ಹೆಸರುಗಳು ಮಾತ್ರ..
ಇಂದು ನೀ ನನ್ನ ಮರೆತಿರಬಹುದು ಆದರೆ ಹೃದಯಲ್ಲಿ ಗೀಚಿರುವ ನಿನ್ನ ನೆನಪುಗಳ ನಾ ಹೇಗೆ ಅಳಿಸಿ ಹಾಕಲಿ..

- ನಮಿತ ಗಟ್ಟಿ

24 Apr 2017, 01:51 pm

ಅವಳು......

ಅವಳದೊ‌ ಸರಳ ಸುಂದರ ಬದುಕಿನ ಸ್ತುತಿ
ಬದುಕುತಿತ್ತು ಮುಗ್ಧ ಗಿಳಿಯ ರೀತಿ
ಹಾರುತಿತ್ತು ಎಲ್ಲೆ ಇಲ್ಲದೆ ಎಲ್ಲವ ಸುತ್ತಿ
ಮೂಕ ಹಕ್ಕಿಯ ಕನಸಿಗಿರಲಿಲ್ಲ ಪರಿಮಿತಿ

ಬಂದನು ಚೆಲುವ ಬಂಗಾರದ ಪಂಜರ‌ ಹೊತ್ತಿ
ಮೋಹಕೆ ಸೋತು ಸಿಲುಕಿತು, ಪಂಜರವ ಹತ್ತಿ
ಎಲ್ಲಿ ನೋಡಿದರು‌ ಪಂಜರದ ಮಿತಿ
ಇನ್ನು ಸರಳುಗಳ‌ ಒಳಗಿನದೇ ಭೀತಿ

ಹೊತ್ತು‌ ತಂದ ಬಂಧನದಲಿ ಕಾಣಲಾಗದ ಪ್ರೀತಿ
ತೂಗಿತ್ತು ಅವಳ ಮನದ ಮೇಲೆ ನೋವಿನ ಕತ್ತಿ
ಕಂಡವರಿಗಾಗಿ‌ ಆಡುತಿತ್ತು ಮಾತು, ಕನಸ ಝರಿಯೇ ಬತ್ತಿ
ಅದರೊಳಗೂ ಬದುಕುವುದು‌ ಅದರ ಅನಿವಾರ್ಯ ಸ್ಥಿತಿ



- ಶ್ರೀಕಾವ್ಯ

24 Apr 2017, 01:17 pm

ದಿನಕರ.......

ದಿನಕರನು ದಿನವೆಲ್ಲಾ ಜೊತೆಗಿರಲು
ಸಿದ್ದವಾಗಿ ಬಂದಿಹನು ಈ ಮುಂಜಾನೆ
ಮಂಜನ್ನು ಕರೆದು ಕೊಂಡು.

ಕೋಳಿ ಕೂಗಿಗೂ ಹೆಚ್ಚರವಾಗದ
ಮನಸು ನಿನ್ನ ಕರೆಗೆ ನನ್ನ ಬಡಿದೆಬ್ಬಿಸಿತೇ
ಗೆಳೆಯ .............

ಮುಂಜಾನೆಯಿಂದ ಮುಸ್ಸoಜೆ
ತನಕ ಜೊತೆಗಿದ್ದು ನಗುವಾಗು
ತದನಂತರ ಕನಸಲ್ಲಿ ಸಿಹಿಯಾದ
ನೆನಪಾಗು...........

- ಚುಕ್ಕಿ

24 Apr 2017, 07:13 am

ಇಂತಿ ನಿನ್ನ ನೆನಪ್ಪು

ನಿನ್ನ ಆಗನಮನ ನಿರ್ಗಮನ
ವಿಧಿ ಲಿಖಿತ ಆದರೆ ನನ್ನಲಿರುವ
ನೀನು ಮತ್ತು
ನಿನ್ನ ನೆನಪ್ಪು ಶಾಶ್ವತ

ನಾಗು.G

- Nagaraja A

24 Apr 2017, 06:31 am

ಬದಕು ಮಾಯದ ಮರೀಚಿಕೆ

-by ಲಚಿ

ಓ ಬದುಕೇ,
ನಿಜಕ್ಕು ನೀ ಘೋರವಾಗಿರುವೆ.
ಓ ಮುಗ್ದ ಮನವೇ,
ನಿಜಕ್ಕು ನೀ ಏಕೆ ಹೀಗಿರುವೆ.
ಮರುಭೂಮಿಯ ಯಾನಕೆ
ನೀ ಏಕೆ ದಾರಿ ಸವೆಸುತಲಿರುವೆ?
ಮಾಯದ ಮರೀಚಿಕೆಯನು ಹಿಂಬಾಲಿಸಿ.
ಗುರಿ ಇರದ ಪಯಣಕೆ
ನೀ ಏಕೆ ಸಜ್ಜಾಗುತಲಿರುವೆ?
ಬಿಸಿಲ ಕುದುರೆಯ ಬೆನ್ನ ಹತ್ತಿ.
ನಿನ ಮುಗ್ದತೆಗೆ, ಅದರ ನಗುವಿಗೆ
ನೀ ಹೆಜ್ಜೆ ಇಡು....

- ಲಚಿ

23 Apr 2017, 11:49 pm

ಧನ್ಯವಾದವು ನಿಮಗೆ,

ಧನ್ಯವಾದವು ನಿಮಗೆ,
ಖುಷಿಯ ಪ್ರಣಾಮ,ನಮಸ್ಕಾರವು.

ನಿಜವಾಗಿಯೂ ಇದೊಂದು ಅದ್ಬುತ,
ಆಶ್ರಯ ನೀಡುವ ವೇದಿಕೆ..
ನಿಮ್ಮೊಡನೆ ನಮ್ಮನೂ ಸೇರಿಸಿ ಮತ್ತೆ,
ಕಲಿವ , ಬೆಳೆವ ಅವಕಾಶ ಕಲ್ಪಿಸಿದ್ದಕ್ಕೆ!

ಓದಿದೆ ನಿಮ್ಮ ಮುನ್ನುಡಿ,
ನಿಜವಾಗಿಯೂ ಅದು ನಿಮ್ಮ ಕನಸಿನ ಕೈಗನ್ನಡಿ.
ಕನ್ನಡದ ಮೇಲಿನ ನಿಮ್ಮ ಕಳಕಳಿಗೆ,
ಹಾರೈಸಲು ಸಾಲದು ನಮಗೆ ಈ ಒಂದು ಘಳಿಗೆ.

ಇದೊಳ್ಳೆ ಅವಕಾಶ,
ಮುಚ್ಚಿಟ್ಟ ಪ್ರೀತಿಯ, ಬಚ್ಚಿಟ್ಟ ಕನಸುಗಳ,
ಬತ್ತಿದ ಬಯಕೆಗಳ,ಕಾಡುವ ಆಸೆಗಳ
ಒಂದೊಂದಾಗಿ ಮನದಿಂದ ಮುದ್ರಿಸಲು..

ಹುದುಗಿಸಿಟ್ಟ ಭಾವನೆಗಳ ಹರಿಬಿಡಲು ಇದು ಸಕಾಲ,
ಅಪತ್ಯವಲ್ಲವಿದು 'ಅನಾಮಿಕ'ನ ಮನದಾಳ.

- ನಾರಾಯಣ

23 Apr 2017, 11:30 pm