Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಓ ನನ್ನ ಕಾವ್ಯಕನ್ನಿಕೆ
ನಿನ್ನ ಜಿಂಕೆ ಕಂಗಳ ಮಿಂಚು
ಸಾಟಿಯೇ ನೂರುದೀಪಗಳ ಬೆಳಕಿಗೆ ?
ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ
ನಿನಗಾಗಿ ಕಾದು
ನಿನಗಾಗಿ ಕಾತರಿಸಿ
ನೀ ಬರುವ ಹಾದಿಯಲಿ
ಕಾಯುತ್ತ ಕುಳಿತಿರುವ
ಈ ನಿನ್ನಾರಾದಕನ ಮೇಲೂ
ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ
-ಅರೆಯೂರು ಚಿ.ಸುರೇಶ್
ಪತ್ರಕರ್ತರು
ತುಮಕೂರು
- ಅರೆಯೂರು ಚಿ. ಸುರೇಶ್
25 Apr 2017, 02:57 pm
ಬೇಸಿಗೆಯ ಉರಿ ಬಿಸಿಲಿನ ಸುಡು ಸೆಕೆಯಲ್ಲೂ
ಆ ಚೆಲುವು ವಸಂತದ ಮಾವಿನ ರುಚಿಯೊಡೆ
ಕಂಡ ಆ ನೆಮ್ಮದಿಯ ನಿನ್ನೆ , ಆ ಸಂತೂಷದ ಸವಿ ದಿನ
ಈ ದಿನಗಳ ಹವಾನಿಯಂತ್ರಿತ ಕೋಣೆಯಲಿ
ಕಳೆದು ಹೋಯಿತೇಕೆ ?
ಪ್ರೇತ ಛಾಯೆಯ ಪರೀಕ್ಷೆಯ ಹಿಂದಿನ ದಿನವೂ
ತಡಯಲಾರದೇ ನನ್ನಾವರಿಸಿದ
ಆ ನೆಮ್ಮದಿಯ ನಿದ್ದೆ , ಬಣ್ಣದ ಕನಸು
ಈ ದಿನಗಳ ಇರುಳಲಿ
ಕಳೆದು ಹೋಯಿತೇಕೆ ?
ಅಜ್ಜಿಗೆ ಪುಸಲಾಯಿಸಿ ಪಡೆದ
ಆ ತುಂಡು ಕಲ್ಲುಸಕ್ಕರೆಯ ಸಿಹಿ
ಅಪ್ಪನ ಕಿಸೆಯಲ್ಲಿ ಕೈಯಾದಿಸಿ ಕದ್ದ
ಆ ನಾಲ್ಕಾಣೆಯ ಚಾಕ್ಲೇಟಿನ ಸವಿ
ಈ ದಿನಗಳ ನನ್ನ ನಾಲಿಗೆಯ ಮೇಲೆ
ಕಳೆದು ಹೋಯಿತೇಕೆ ?
ಈ ಬಿಸಿ ಉಸಿರಿನ ಜೀವನದಲಿ
ಬೆಳೆಯುತ್ತಾ ಬೆಳೆಯುತ್ತಾ
ನನ್ನಲಿದ್ದ 'ನಾನು'
ಕಳೆದು ಹೋದನೇನು ????
- Prabhath
25 Apr 2017, 11:15 am
ತಿಳಿನೀಲಿ ಆಕಾಶದ ಮಧ್ಯದಲ್ಲಿ ವಿುನುಗುವ ನಕ್ಷತ್ರದ ಹಾಗೆ ,
ಕಡಲಾಳದ ಮಧ್ಯದಲ್ಲಿರುವ ಕಪ್ಪೆಚಿಪ್ಪಿನ ಮುತ್ತಿನ ಹಾಗೆ ,
ಹಿಮಗಾಲದಲ್ಲಿ ಬಿದ್ದು ಜಿನುಗುವ ಇಬ್ಬನಿಯ ಹಾಗೆ ,
ನನ್ನ ತಾಯಿ ಪ್ರೀತಿಯು ಬೆಲೆಕಟ್ಟಲಾಗದ , ಹೃದಯದ ಆಸ್ತಿ ಇದ್ದ ಹಾಗೆ.........
-ತೇಜಸ್ವಿನಿ
- Tejaswini.p
25 Apr 2017, 10:57 am
ಓ ದೇವರೆ....;
ನೀ ವರವ ಕೋಡುವುದೆ ನಿಜವಾದರೆ;
ಹರಿಸು ನನ್ನಲಿ ಅವಳ ಪ್ರೀತಿಯ ಧಾರೆ.
ಬೇಡ ರಾಜಕಾರಣಿಗಳಂತೆ...
ಸುಳ್ಳು ಭರವಸೆಗಳ ಅಂತೆ-ಕಂತೆ,,,
ಬೇಕಿದ್ದರೆ ಬಾಯಿಬಿಟ್ಟು ಕೇಳು ಲಂಚ ಬೇಕೆಂದು
ಕೋಡುವೆ ನನ್ನ ಜೀವವ ನೀ ಅವಳನ್ನೆ ಕೇಳದಿರಲಿಯೆಂದು...!
ಕೊನೆ ಪಕ್ಷ....
ನನ್ನ ಅವಳ ಮಿಲನ ಬರಿ ಕನಸಲ್ಲಿಯೆಂದು ಹೇಳು ಬೇಕಿದ್ದರೆ...
ಅವಳಿಗೋಸ್ಕರ ಶಾಶ್ವತವಾಗಿ ಮಲಗುವೇ, ನಿನ್ನಾಣೆ ನಾ ಮೇಲೆದ್ದರೆ..!
atleast,,,,
ಮರುಜಜ್ಮ ಅಂತ್ತಿದ್ದರೆ,,,
ಅವಳಾಗಲಿ ರಶ್ಮಿ; ನಾನಾಗುವೇ ಅವಳಿಗೋಸ್ಕರ ಕಾಯುವ ತಾವರೆ!
ಈಡೇರಿಸು ಈ ವರವನ್ನಾದರು ನಿಜವಾಗಿಯು ನೀ ಇದ್ದರೆ...!
- ಅರೆಯೂರು ಚಿ. ಸುರೇಶ್
25 Apr 2017, 07:44 am
ನಿನ್ನ ವಡನವ ಕಂಡು ಉರಿವ ಸುರ್ಯ ತಂಪಾದ
ನಿನ್ನ ನೋಡಿದ ಚಂದಿರ ನಾಚಿ ಮೆಘದ ಹಿಂದೆ ತಾ
ಮರೆಯಾದ
ನಿನ್ನ ನಗುವ ನೋಡಿ ಹೊಳೆದವು ತಾರೆಗಲು
ನಿನ್ನ ನೋಡಲೆಂದೇ ಕಾದಿವೆ ನನ್ನ ಕಂಗಳು
ಕಲ್ಪನೆಯ ಕಾವ್ಯದ ನಾಯಕಿ ನೀನು
ಕವಿಯ ಕಾವ್ಯ ಕಲ್ಪನೆಗೆ ಸ್ಪೂರ್ತಿ ನೀನು
love you Gouri
ನಾಗು.G
- Nagaraja A
25 Apr 2017, 06:47 am
ಸಾವಿನ ಸೆಳೆತ ಈ ಯವ್ವನದ
ಹುನ್ನರ ಸಂಕೇತ.........
ಇದರಲ್ಲಿ ಬಿದ್ದರೆ ಜೀವನವೆಂಬ
ಸುರಿಳಿಯಲ್ಲಿ ಹಿಂದಿರುಗದೇ ಸತ್ತಂತೆ.......
ಬಯಸಿದ್ದೆಲ್ಲಾ ಬೇಕು ಈ ಹಠವಾದಿಗೆ
ಕೊನೆಯೇನೆಂಬುದೇ ಇಲ್ಲ ಈ ಹೆಮ್ಮಾರಿಗೆ......
ಜೀವವಿಂಡೀ ಜಗವಮರೆಸಿ
ತನ್ನೆದೆಯಾದ ಲೋಕದಲ್ಲಿ ಕೈ ಬಿಡದೆ ಕಾಡುತ್ತದೆ...
ಒಂದು ವೇಳೆ ತಪ್ಪಾದರೆ ಮತ್ತೆ ಮುಂದೆ ಹೋಗುವುದೋ ಅಲ್ಲೇ ನಿಂತು ಹೋಗುವುದೋ ತಿಳಿದಿಲ್ಲ ಈ ಜೀವನಾ..........
- ಚುಕ್ಕಿ
24 Apr 2017, 11:01 pm
ಗುಣದಲ್ಲಿ ಹೊನ್ನು ,ಮಮತೆಯ ಕಣ್ಣು
ಭಾವುಕಳಾಗಿ ನಾನು ಇನ್ನು ,ಹೊಗಳಬೇಕಿದ
ಇವಳನ್ನು , ಇವಳೇ ನನ್ನ ಜೀವದ ಕಣ್ಣು ,
ನನ್ನ ತಾಯಿ.........
- Tejaswini.p
24 Apr 2017, 09:02 pm
ಚಂದ್ರನ ನೋಡು
ಮೋಡದ ಮರೆಯಲಿ
ಅವಿತಿರುವ....!
ತಾರೆಯ ಜೊತೆಯಲಿ
ಹರಟುತ ಹರಟುತ
ಬೆಳಕನು ನೀಡಲು
ಮರೆತಿರುವ....!
ಅವನಿಗು ಜಂಬ
ಹುಣ್ಣಿಮೆ ಎಂದು
ನೋಡುವ ಕಣ್ಣಿಗೆ
ಸುಂದರನೆಂದು...!
- ಭರತ್
24 Apr 2017, 08:59 pm
ಹುಟ್ಟಿದಳು ಸೀತೆ ಮಿಥಿಲೆಯ
ರಾಜಕುಮಾರಿಯಾಗಿ..
ಕನಸು ಕಂಡಳು ಅಯೋಧ್ಯೆಯ
ಪಟ್ಟದ ರಾಣಿಯಾಗಿ..
ಸೇರಿದಳು ಶ್ರೀರಾಮಚಂದ್ರನ
ಮನದೊಡತಿಯಾಗಿ....
ನುಲಿದಳು ಕೈಕೇಯಿಯ
ಹೊಟ್ಟೆಕೆಚ್ಚಿನ ಕಿಡಿಗಾಗಿ..
ನಡೆದಳು ವನವಾಸಕ್ಕೆ
ಶ್ರೀರಾಮನ ಜೊತೆಯಾಗಿ....
ಸಣ್ಣ ಆಸೆಪಟ್ಟಳು ಚಿನ್ನದ
ಜಿಂಕೆಗಾಗಿ..
ಸೇರಬೇಕಾಯ್ತು ಲಂಕೇಶ್ವರನ
ಸೆರೆವಾಸಿಯಾಗಿ..
ಹರಿಯಿತು ಕಣ್ಣೀರು 12 ವರ್ಷ
ಕೋಡಿಯಾಗಿ....
ಸಂತಸ ಪಟ್ಟರೂ ಬಂಧನದಿಂದ
ಮುಕ್ತಳಾಗಿ..
ಬಸವಳಿದಳು ಅಗ್ನಿ ಪರೀಕ್ಷೆಯಿಂದ
ಈ ಸಮಾಜಕ್ಕಾಗಿ..
ಹಿಂದಿರುಗಿದಳು ಅಯೋಧ್ಯೆಗೆ
ಅಳುಕಿನಿಂದ ಪಟ್ಟದ ರಾಣಿಯಾಗಿ....
ಅಧೃಷ್ಠ ಕೈಹಿಡಿಯಲಿಲ್ಲ
ಈಗಲೂ ವಿಧಿಯಿಂದಾಗಿ..
ಗರ್ಭಿಣಿಯಾದರೂ
ಸೇರಬೇಕಾಯ್ತು ಕಾಡು
ಕೇವಲ ಒಬ್ಬ ಅಗಸನ
ಮಾತಿನ ಸಲುವಾಗಿ....
ಹುಟ್ಟಿದರು ಲವ ಕುಶ
ಮುದ್ದು ಮಕ್ಕಳಾಗಿ..
ಪರಿತಪಿಸಿತು ಅವಳ ಮನ
ಮಕ್ಕಳ ದುರಾದೃಷ್ಟಕ್ಕಾಗಿ....
ಬಂದ ಶ್ರೀರಾಮ ಕರೆದೊಯ್ಯುವುದಾಗಿ
ಎಲ್ಲರನೂ ತನ್ನ ಜೊತೆಯಲಿ..
ಲವಕುಶರನ್ನ ಜೊತೆ ಕಳಿಸಿ
ಅಲ್ಲೇ ನಿಂತಳು ಮಾತೆ
ತನ್ನ ವಿಧಿಬರಹ್ಕೆದರಿ....
ಈ ಜನ್ಮ ಸಾಕೆಂದು
ಯೋಚಿಸಿ ನಿರ್ಧರಿಸಿ..
ಸೇರಿದಳು ಭೂತಾಯಿಯ ಒಡಲನು
ದಾರುಣ ಸೀತಾಮಾತೆಯೆನಿಸಿ....
ಕಥೆಯಾದಳು ಸೀತಾಮಾತೆ
ಈಡೇರದ ಆಸೆಗಾಗಿ..
ತನ್ನ ವಿಧಿಬರಹಕ್ಕಾಗಿ ತೊಯ್ದು
ಕರ್ತವ್ಯಕ್ಕೆ ಓಗೂಟ್ಟು ತೋರಿದಳು
ಮನುಜರಿಗೆ ಓರ್ವ ಆಧರ್ಶಿಣಿಯಾಗಿ....
- KR Sreekamala
24 Apr 2017, 06:06 pm
ನಿನ್ನೆ 23/4/2017 ರಂದು ಹುಣಸೂರಿನಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ನಾನು ವಾಚಿಸಿದ ಕವನ..
********
ಕತ್ತಲೆಯ ಬೆತ್ತಲೆ ಆಟಕ್ಕೆ ಮೋಜಿನ
ಪೈಂಟ್ ಹಾಕುವವರ ಮಧ್ಯೆ
ಹೃದಯದ ಗೂರ್ಖನ ಹಸಿಮಾಂಸವನ್ನು
ಬೆಳಗಾಗುವುದರಲ್ಲಿ ಮಾರಲಾಗುತ್ತದೆ..!!
~
ಸುಲಿದ ಚರ್ಮದ ವಾಸನೆಗೆ ಬೆವೆತ
ಮೂಗಲಿ ರಂಧ್ರ ಕೊರೆದಿದೆ
ಸುರಿದ ಉಪ್ಪಿನ ಪಾನಕ ಕುಡಿಯುವ
ಗಂಟಲನ್ನೆಲ್ಲಾ ಗುಂಡಿಕ್ಕಿ ಕೊಂದು
ಮಾರಲಾಗುತ್ತದೆ..!!
~
ಕೆದರಿದ ಕೂದಲ ನರಗಳ ಕಡಿದು
ಹಸಿದ ಹಲ್ಲುಗಳ ಹೊಟ್ಟೆಯ ಬಗೆದು
ಸೋರುವ ಕಿವಿಯಲ್ಲಿ ಸೋಲುವಷ್ಟು
ಒಣತುಪ್ಪಗಳ ಮಾರಲಾಗುತ್ತದೆ..!
~
ಸರ್ಕಲ್ಲಿನ ಸೂಳೆ ಮೂಲೆಯಲಿ
ತಿರುವಿನ ಗಂಧೀ ರೋಡಿನಲ್ಲಿ
ತೊಟ್ಟಿಯಲ್ಲಿನ ಪ್ಲಾಸ್ಟಿಕ್ ಚೀಲಗಳಲ್ಲಿ
ಶೀಲವಿರದ ಹೊಟ್ಟೆಗಾಗಿ ಒಂದಿಷ್ಟು
ನೆನಪ ಮಾರಲಾಗುತ್ತದೆ...!!
~
ಸುರಿದ ಸೂಪಿನ ಘಮಕ್ಕೆ ಅರಳೋ
ಮಲ್ಲಿಗೆ ರಕ್ತಕ್ಕೆ ಕೀವಿನ ಸಾರು ಬಡಿಸಿ
ಸಾವಿನ ಹೊಟ್ಟೆಗೆ ಮೊಳೆಯ
ಅಭಿಷೇಕ ಮಾಡಿ ಸಮಯದ ಬಣ್ಣವ
ಕತ್ತಲಲ್ಲಿ ಮಾರಲಾಗುತ್ತದೆ.!
~
ಬೆಂದದ ಪದಗಳ ಚಟ್ಟದ
ಮೇಲೆ ಸಮಯದ ಅನರ್ಥ
ವ್ಯಾಖ್ಯಾನದ ಮಡಿಗೆ ಉಸಿರಿಡಿಯುವ
ಹೆಸರುಗಳ ಬೂದಿಯಲ್ಲಿ ಬರೆಯುವ
ಕೈಗಳ ಶಕ್ತಿಯ ಮಾರಲಾಗುತ್ತದೆ..!!
-ಅವಿಜ್ಞಾನಿ
**********
- ಅವಿಜ್ಞಾನಿ
24 Apr 2017, 05:56 pm