Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿವೇದನೆ

ನೀ ನನ್ನಿಂದ ದೂರ ಹೋದರೆ ಹೋಗು, ಆದರೆ;
ನಿನ್ನ ಸವಿ ನೆನಪುಗಳನ್ನು ಹೋತ್ತೋಯ್ಯಬೇಡ
ಈ ಕಣ್ಣಿಂದ ಮರೆಯಾಗು ಬೇಕಿದ್ದರೆ, ಆದರೆ;
ಈ ನನ್ನ ಮನಸಿನಿಂದ ದೊರಾಗಬೇಡ.
ನೀ ಹೋದ ದಾರಿಯನ್ನೋಮ್ಮೆ ತಿರುಗಿ ನೋಡು;
ನೀ ಬಿಟ್ಟು ಹೋದ ಜಾಗದಲ್ಲೆ;
ನಿನ್ನ ನೆನಪಿನ ಮೂಟೆ ಹೊತ್ತು ಕೂತಿರುವೇ...
ಮರಳಿ ಬಾ ಎಂದು ನಿನಗೆ ನಾ ಹೇಳೇನು...
ಆದರೇ;
ನೀ ಹೋಗುವ ದಾರಿ ಯಾವುದು, ಹೇಳೆಂದು ಬೇಡುವೇನು
ಯಾಕೆಂದರೆ;
ನಾನು ನಿನ್ನ ಜೋತೆಯಲ್ಲಿ ಬರುವೇನು...
ಕೈ ಹಿಡಿದು ಜೊತೆ ನಡೆಯಲು ಅಲ್ಲದಿದ್ದರು...
ಆ ದಾರಿಯಲಿನ ಕಲ್ಲು ಮುಳ್ಳು ತೆಗೆದು ನಗೆ ಹೂ ಹಾಸಲಾದರು...
ನಾ ನಿನ್ನ ಜೊತೆ ಬಂದೆ ಬರುವೇನು ಗೆಳತಿ...

-ಅರೆಯೂರು ಚಿ.ಸುರೇಶ್
ಪತ್ರಕರ್ತರು
ತುಮಕೂರು

- ಅರೆಯೂರು ಚಿ. ಸುರೇಶ್

26 Apr 2017, 06:13 pm

( ವಿರಹ)

ಬಿಂದು,ಬಿಂದುವಾಗಿ
ಉದುರಿ ಬೀಳುವ
ಆ ಪುಟ್ಟ ಕಣ್ಣೀರಿಗೆ.....!!

ನೊಂದ ಹೃದಯದ
ನೋವೆನು ಗೊತ್ತು
ಮರೆತುಹೋದ ಅವಳಿಗೆ ....
krishna billadi melbailu..

- krishna Billadi melbailu

26 Apr 2017, 05:04 pm

ಸಾಧನೆ

ಅಳುವಿರೇಕೆ
ಶತಮಾನದಿಂದ ಅಡುಗೆ ಮನೆಯಲ್ಲಿ
ಬಂದಿಯಾಗಿದ್ದು ಸಾಕಾಗಿಲ್ಲವೇ
ಹೊರ ಬನ್ನಿ
ಬೆನ್ನ ಹಿಂದಿನ ರೆಕ್ಕೆಗೆ
ಜೀವ ಕೊಡಬೇಡವೆ?
ಗರಿ ಬಿಚ್ಚಿ ಮುಗಿಲು ಮುಟ್ಟುವ ಕನಸಿಲ್ಲವೇ?
ಅಳುವಿರೇಕೆ ಇನ್ನು?
ಅಷ್ಟಕ್ಕೂ ನಿಮ್ಮ ನೋವು ಕೇಳುವುದಕ್ಕಾದರು
ಸಮಯ ಯಾರಿಗುಂಟು
ಕನಸಿನಲ್ಲೇ ಜೀವನ ಮುಗಿಸುವ ಬಯಕೆಯೇ?
ನನಸು ಮಾಡಬೇಡವೆ?
ಎದ್ದೇಳಿ
ಸಾಧಿಸಲು ಬೇಕಾದಷ್ಟಿದೆ...

- HarshaHL

26 Apr 2017, 04:41 pm

ಚುಟುಕ

ಜಗದ ಚಿಂತೆಯೂ ಅಳಿವುದು ಚಿತೆಯ ಭಸ್ಮದ ಒಡನೇ,


ದುಷ್ಟವೋ ಪಾಪವೋ ಕರ್ಮ ಅಳಿವುದು ಕಳೆಬರದ ಒಡನೇ, 


ಜೀವನದ ಮರ್ಮ ಅಡಗಿಹುದು ಗಡಿಯಾರದ ಮುಳ್ಳುಗಳನಡುವೆ 

- Prabhath

26 Apr 2017, 01:28 pm

ಸಾವು

ಸಾವಿನ ಭಯವಿತ್ತು ಒಮ್ಮೆ ನನಗೆ
ಕನಸು ಕಾಣಲು ಸುರುಮಾಡಿದೇ
ಸಾವಿಗೆ ಸಾವಿನ ರುಚಿ ಕಾಣಿಸುವ ಕನಸದು
ಅದ ಕೇಳಿ
ಸಾವಿಗೆ ಸಾವಿನ ಭಯವಾಯಿತೊಮ್ಮೆ

- HarshaHL

26 Apr 2017, 01:05 pm

ಮಳೆ, ಬೆಳೆ, ಬೆಲೆ

ಮಳೆ ಬಂದಿತು
ಬೆಳೆ ಬಂದಿತು
ಇಳೆ ಹಸಿರಾಯಿತು
ಬೆಳೆಗೆ ಬೆಲೆ ಬಂದಿತೆ?

- HarshaHL

26 Apr 2017, 12:57 pm

ಏಕೆ?

ಪ್ರೀತಿ ಮಾಡುವ ಹೊತ್ತಿನಲ್ಲಿ
ದ್ವೇಷ ಕಾರುವಿರೇಕೆ?
ಸ್ನೇಹ ಹರಡುವ ಕಾಲದಲ್ಲಿ
ಕ್ರೋಧಗೊಲ್ಲುವಿರೇಕೆ?
ಗೋಡೆ ಉರಿಳಿಸುವ ಕಾಲದಲ್ಲಿ
ಮರಳಿ ಕಟ್ಟುವ ಪ್ರಯತ್ನವೇಕೆ?
ಪ್ರೇಮವ ನಾಟಿ ಮಾಡುವಾಗ
ಕಾಟಕೊಡುವಿರೇಕೆ?

- HarshaHL

26 Apr 2017, 12:50 pm

ಕಳೆದೊಗುವ ಆಸೆಯಾಗಿದೆ

ಕಳೆದೊಗುವ ಆಸೆಯಾಗಿದೆ
ನನಗಿಂದು ಮೌನವೆಂಬ
ಪ್ರಶಾಂತವಾದ ಪ್ರಪಂಚದಲ್ಲಿ.....

ನನ್ನ ಮೌನ ಮಾತನ್ನು
ಕಟ್ಟಿ ಹಾಕುತ್ತಿದೆ ತಾನಿರುವ ಜಾಗದಲ್ಲಿ
ಮಾತು ಕೂಡಾ ಮೌನಿಯಾಗಬೇಕೆಂದು.......

ಮಾತೆಂಬ ಶತ್ರುವಿನ ಕೈಗೆ ಸಿಗಲು
ಇಷ್ಟವಿಲ್ಲ ನನಗಿಂದು..........
ಎಲ್ಲಾ ಸಮಸ್ಯೆಗಳಿಗೆ ಕಾರಣ ಈ ಮಾತು
ಮನನೋಯಿಸುವ ಮಾತೂ........

ಮೌನವೆಂಬ ಸ್ನೇಹಿತನೊಡನೆ ಸದ್ದಿಲ್ಲದೆ
ನಗುತಿರಳು ನಾನತ್ತ ಕಣ್ಣೀರು ನನಗಿಂದು
ತಿಳಿಸಿದೇ.....................

- ಚುಕ್ಕಿ

26 Apr 2017, 09:17 am

ಭರವಸೆ

ಟೀ ಎಂಬ ಅಮಲಿನಲ್ಲಿ ಎದ್ದೆ
ಬ್ರೇಕ್ಫಾಸ್ಟ್ ಎಂಬ ಆಹಾರದಲ್ಲಿ ಕುಂತೆ
ಆಫೀಸ್ ಅನ್ನೋ ಬೇಸರದಲಿ ತಯಾರಾದೆ
ಕೆಲಸ ಎಂಬ ಒತ್ತಡದಲ್ಲಿ ಬೇಸತ್ತೆ ಮಧ್ಯಾನದ ಊಟಕೆ ಹೋದೆ
ಆದ ಒತ್ತಡ ನೆನದು ಊಟವ ಮರೆತೇ
ಸಂಜೆಯೋಳು ಟೀ ಗೆ ಹೋದೆ ಅಲ್ಲಿ ಜನರ ಸರದಿ ನೋಡಿ ವಾಪಾಸ್ ಅದೇ
ರಾತ್ರಿ ಮನೆಗೆ ಹೋರಟೇ
ಆಗ ಎಲ್ಲವನ್ನು ಹೇಳಿತು ನನ್ನ ಕಣ್ಣ
ಹನೀ ಒಂದು ಅಳಬೇಡ ಕಷ್ಟ ಕ್ಕೆ
ಫಲ ಮುಂದೆ ಒಂದು ಸಿಗುತ್ತೆ ಎಂಬ ಭರವಸೆಯನು.

- PRAVEEN

26 Apr 2017, 08:09 am

ನಗು - ಅಳು

ನಾನು ಬಂದೇ ಸಮುದ್ರ ದ ಅಲೆಗಳ
ಹಾಗೆ ನಗು ನಗುತಾ
ಅದ್ರೆ ಮತ್ತೆ ವಾಪಾಸ್ ಹೋಗುವಾಗ
ನಿರಾಸೆ ಆಗಿ
ದುಃಖದ ಜೊತೆ ಕಲ್ಮಶ ಎಲ್ಲ ಹೋತು
ಓವೈದೇ
ಆಗ ಗೊತ್ತಾಯಿತು ನನಗೆ
ಖುಷಿ ಇಂದ ಅಳ್ಳುವುದು ಸುಲಭ
ಆದ್ರೆ
ದುಃಖ ಇಂದ ನಗು ವುದು ಕಷ್ಟವೆಂದು .

- PRAVEEN

26 Apr 2017, 06:44 am