Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆತ್ಮ - ಹನಿ

ನನಗೋ ಮುಗಿಲೆತ್ತರಕೆ ಏರುವಾಸೆ
ಮಳೆಹನಿಗೆ ಭೂಮಿಗೆ ಮುತ್ತಿಡುವಾಸೆ
ಭೂಮಿಯ ಮಡಿಲ ಸೇರುವ ಹನಿ ಮತ್ತೆ ಬರಬಹುದು ಅಂತರ್ಜಲವಾಗಿ
ಮುಗಿಲಿಂದ ಎತ್ತರಕ್ಕೆ ಹಾರಿದ ನಾನು ಬರಬಹುದೇ ಮತ್ತೆ -?

ಮುಗಿಲ ಮಡಿಲಿಂದ ಬರುವ ಹನಿ ಪರಿಶುಧ್ಧ
ಮುಗಿಲಿಂದ ಮೇಲೆ ಏರಿದ ನನ್ನಾತ್ಮ ಎಷ್ಟುಶುದ್ಧ
ಹೋಲಿಸಬಹುದೇ ನನ್ನನ್ನು ಮಳೆ ಹನಿಗೆ
ಮೇಲಿಂದ ಕೆಳಗೆ ಬಂದ ಹನಿಯದು ಸಾರ್ಥಕ್ಯದ ಭಾವ
ಕೆಳಗಿಂದ ಮೇಲಕ್ಕೆ ಹಾರಿದ ನನ್ನದು ತೀರದ ಸ್ವಾರ್ಥದ - ?

ಸ್ವಾರ್ಥದ ಆತ್ಮ ನರನದಾದರೆ
ನಿಸ್ವಾರ್ಥದ ಹನಿ ಪರಮಾತ್ಮನ ಕರುಣೆ
ಆತ್ಮ ಹನಿಯಾಗ ಬೇಕಾದರೆ ಬೆತ್ತಲೆಯಾಗು ಮನುಜ
ಅರಿಷಡ್ವರ್ಗಗಳ ಪರದೆಯ ಸರಿಸಿ
ರಾಗ ದ್ವೇಷಗಳ ಕಳೆಯ ಸುಟ್ಟು, ಸ್ನೇಹ ಪ್ರೀತಿಯ ಹಣತೆಯ ಹಚ್ಚಿ.

- Chaitra Maha Rudraswamy

29 Apr 2017, 05:30 pm

ವಿರಹ...

ಮತ್ತೆ ನೀರವ ಮುಸ್ಸಂಜೆ,
ಆಕಾಶದಲ್ಲೇ ಉಳಿದ ಮೋಡದ ತುಂಡು,
ಖಾಲಿ ಬೆರೆಳ ಸಂಧಿ,
ಚಂದ್ರನಿಗೆ ಪ್ರೀತಿ ಕಲಿಸಬೇಕು
ಬಂದುಬಿಡು ಗೆಳೆಯ......

- chinmayi.....chinni

29 Apr 2017, 03:22 pm

ಆಸೆ

ನಿನ್ನ ನಗೆಯಿಂದ ಹರಡಿದ 

ಬೆಳದಿಂಗಳ ಕಡಲಲಿ

ಮಿಂದು ಈಸುವ ಆಸೆ..


ನಿನ್ನ ಕಿರುನೋಟದ ಮಿಂಚಿನಲಿ

ಮಿನುಗುವ ಅಂಗಳದಲಿ 

ಮನೆಮಾಡುವ ಮಹಾದಾಸೆ ...


ನಿನ್ನ ಸನಿಹದಲೆ ಕುಳಿತು 

ನಿನ್ನ ಮಾತುಗಳ ಸದಾ ಸವಿಯುವ

ಸಖನಾಗುವ ಸಿಹಿ ಆಸೆ...


ನಿನ್ನ ಉಸಿರಿನ ತಂಪಾಗಿ 

ಅಪ್ಪುಗೆಯ ಬಿಸಿಯಾಗಿ 

ನಿನ್ನ ಬದುಕಾಗಿರಲು ಬಲು ಆಸೆ

- Prabhath

29 Apr 2017, 03:03 pm

ಕರಿಮಣಿ

ಕರಿ ಮಣಿಯ ಕನಸಲ್ಲಿ ಬಂದು
ಬಂಗಾರದ ಸರದಲ್ಲಿ ಕೂತು.....
ನಿತ್ಯ ನನ್ನ ನೆನೆಲೊಂದು ಹುಗುಗರೆ
ಕೊಟ್ಟೆ ಈ ಮಂಗಳಕರ ಅರಿಶಿನದಲ್ಲಿ
ಮಿಂದು ತಾಳಿಯರುಪದಲ್ಲಿ ನೀನೇನಾ
ಸಂಗಾತಿ...........

ತಳಿಯ ಸರದಲ್ಲಿ ಎರಡು ಸೂತ್ರಗಳು
ನಾನೊಂದು ನೀನೊಂದು ...........
ನಾನೆಂದು ನಿನ್ನ ಹೃದಯದಲ್ಲಿ ನಗು
ನಿನ್ನ ಎಂದೆಂದಿಗೂ ನನ್ನ ಪ್ರೀತಿಯಲ್ಲಿ
ಬೆರತೊಗೂ ಮಾತಿಲ್ಲದೆ ಸಂಗಾತಿ..........

ಏಳು ಹೆಜ್ಜೆ ನಿನ್ನಿಂದೆ ನಡೆದು
ನಾ ತಿಳಿಸುವೇ ಎಂದೆಂದೂ
ನಿನ್ನ ಕೈಬಿಡದ ಅರ್ಧಂಗಿ ನಾನಾಗುವೇನೆಂದು....

ತಿಳಿಸು ನೀನು ಎಂದಿಗೂ ನನ್ನ
ನೋವಲ್ಲಿ ನೀ ಮುಂದೆ ನಿಂತು
ನನ್ನ ಕಾಯುವೆನೆಂದು............

ನಿನ್ನ ಉಸಿರಲ್ಲಿ ಸಮಪಾಲು ಹಂಚಿ
ನನ್ನ ನಗುವಿಗೆ ಎಂದಿಗೂ ನಿನ್ನ ಪ್ರೀತಿಯೇ ಕಾರಣವಾಗುತ್ತೆಂದು...............

- ಚುಕ್ಕಿ

29 Apr 2017, 03:03 pm

ಹೀಗೊಂದು ಸಮಯ...

ಹುಚ್ಚು ಮನಸಿನ
ಸ್ವಚ್ಚ ಭಾವದ
ಬಿಚ್ಚು ‌ಮಾತನು ಕಂಡು
ಮೆಚ್ಚಿದ ಹೃದಯಕೆ
ಕಿಚ್ಚು ತುಂಬಿರಲು‌ ಸೆಳೆತವು
ಕೆಚ್ಚಿನಿಂದ ಪ್ರೀತಿಯೆಂದು ನಂಬಿ
ಹಚ್ಚಿಕೊಂಡ ಮನಸೊಡನೆ ಕಾದಾಡಿ
ರಚ್ಚೆ ಹಿಡಿದು ಕನಸು ಹೆಣೆದು
ಸ್ವಚ್ಛಂದ ಬದುಕು ನೆನೆದು
ಸ್ವೇಚ್ಚೆಯ ಪರಿಮಿತಿ ತಿಳಿಯದೆ
ಬೆಚ್ಚಗೆ ಜೊತೆ ಬರಬೇಕಾದ ಮನಸೆ
ಕೊಚ್ಚಿ ಕೊಂದಿರಲು ಅರಿಯದೆ ಕಂಡ ಕನಸ
ತುಚ್ಚವಾಗಿರಲು ಸ್ವ ಬದುಕೆ
ಬೆಚ್ಚಿ ಬೀಳುವ ಸಮಯ ಪ್ರೀತಿಯೆಂಬ ದೈವತ್ವದಲು

- ಶ್ರೀಕಾವ್ಯ

29 Apr 2017, 01:41 pm

ಕಟು ಸತ್ಯ

ಕಲ್ಪನೆಯ ಲೋಕದಲ್ಲಿ ಸಾಗಿ,
ಸಾವಿರ ಕನಸುಗಳ ಕಂಡು,
ಇಲ್ಲ ಸಲ್ಲದ ಭ್ರಮೆಯಲ್ಲಿ ಮುಳುಗಿ,
ಪ್ರಪಂಚವನ್ನೆಲ್ಲ ತನ್ನದೆಂದುಕೊಂಡು,
ಸುಂದರ ಕನ್ಯೆಯರೊಂದಿಗೆ ಸರಸವಾಡಿ,
ಸಿರಿವಂತಿಕೆಯಲಿ ಅಹಂಕಾರವ ಮೆರದು,
ದರ್ಪದಿಂದ ತಾನೇ ಶೂರನೆನುತಿರಲು,
ಥಟ್ಟನೆ ನೆನಪಾಗುವುದು ವಾಸ್ತವ ಲೋಕ,
ಬೇಡವೆಂದರೂ ಕಾಣುವುದು ಕಟು ಸತ್ಯ,
ಒಪ್ಪಿಕೊಳ್ಳಲೇಬೇಕು ಈ ಕಟು ಸತ್ಯ.

- ರವೀಂದ್ರಬಾಪೂರ(GNL)

29 Apr 2017, 12:25 pm

ಸವಿಯಾದ ಸ್ನೇಹಕ್ಕೆ

ಸವಿಯಾದ ಸ್ನೇಹಕ್ಕೆ ಸವಿ ನುಡಿಯ ಮಾತು.......ಮನಸ್ಸಿನ ಮಿಡಿತಕ್ಕೆ ಮರೆಯದ ಮಾತು..... ಕಲ್ಪನೆಯ ಕನಸ್ಸಿಗೆ ಕರಗದ ಮಾತು......ನಲ್ಮಯ ಹೃದಯಕ್ಕೆ ನನ್ನ ಈ ಪ್ರೀತಿಯ ಪಿಸುಮಾತು....

- Rahul manoj v r

29 Apr 2017, 12:20 pm

ಪ್ರಶ್ನಿಸುತ್ತಿವೆ...............✍

ಇನ್ನು ಅದೆಷ್ಟು ಕಣ್ಣೀರು ಬಾಕಿ
ಉಳಿದಿದೆಯೋ ಈ ನನ್ನ ನಾಯನದಲ್ಲಿ.........
ಇರುವ ಕಂಬನಿಯಲ್ಲಾ ಬೊಗಸೆಯಲ್ಲಿಡಿದು
ಆಕಾಶಕ್ಕೆ ಚಲ್ಲುವೆ..............

ಮಳೆಯ ರೂಪದಲ್ಲಾದರೂ ಧರೆಗೆ
ಬರಿಲಿ ನನ್ನ ಮನದಲ್ಲಿನ ನೋವೆಲ್ಲಾ
ಬರಿದಾಗಿ ಬಾಡೋಗಲಿ............

ಅತ್ತು ಅತ್ತು ಕನ್ನೆಲ್ಲಾ ಸೊತೋಗಿದೆ
ಯಾವಾಗ ನಮಗೆ ನಿನ್ನಿಂದ ವಿಮುಕ್ತಿ
ಎಂದು ನನ್ನನು ದಿನನಿತ್ಯ ಪ್ರಶ್ನಿಸುತ್ತಿವೆ........

- ಚುಕ್ಕಿ

29 Apr 2017, 10:18 am

ಹಾಸು ಬೆನ್ನಿಗೊಂದು ಮುತ್ತು

ಅವಳ ಮೊದಲ ಮುಟ್ಟು ನಿಂತಾಗ
ಗಂಡನಲ್ಲಿ ಹುಟ್ಟುವ ಅಸಂಖ್ಯ
ಆಸೆಗಳಿಗೆ ಹೆಸರೇನೂ ಇರುವುದಿಲ್ಲ
ಸ್ತ್ರೀ ಸಮುದಾಯವೇ,
ಇವ ಯಾವತ್ತೂ ದೇವರಾಗಬಲ್ಲ ಕಲ್ಲು
*
ಹೊಟ್ಟೆ ಉಬ್ಬುವ ಪ್ರತಿದಿನವು
ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾನೆ
ತನ್ನದೇ ಪ್ರತಿರೂಪ ಹುಟ್ಟಬೇಕೆಂಬ
ಇರಾದೆ ವ್ಯಕ್ತಪಡಿಸದೇ ಇರಿಸಿಕೊಳ್ಳುತ್ತಾನೆ
*
ನೀವು ಕೂಸಿನಿಂದ ತಿನ್ನುವ ಪ್ರತಿ
ಒದೆಗೂ ಎದೆ ನೀಡಬೇಕೆಂದು
ಆಶಿಸುವವನು ಇವನೇ
ಮಹಿಳೆಯರೇ
ನಿಮ್ಮ ನೋವ ನೋಡಿ ನಗುವುದಲ್ಲ ಅವನು
ತನ್ನ ಕಂದನ ಪರಾಕ್ರಮಕ್ಕೆ ಮುಗುಳುತ್ತಾನೆಯಷ್ಟೇ
*
ಹೆರಿಗೆ ವಾರ್ಡಿನಲ್ಲಿ ನಿಮ್ಮ ಯಾತನೆ
ಡೆಲ್ಟಾ ಮಾಪಕದಲ್ಲಿ ಅಳೆಯುತ್ತಾರೆ
ಗರ್ಭಧಾರಿಣಿಗಳೇ,
ಹಾಸು ಬೆನ್ನಿಗೆ ಮುತ್ತನಿಟ್ಟ ಇವನ
ದರ್ದು ಅಳೆಯುವ ಮಾಪಕ
ಇನ್ನೂ ಕಂಡುಹಿಡಿದಿಲ್ಲ..!!

-ಅವಿಜ್ಞಾನಿ

- ಅವಿಜ್ಞಾನಿ

29 Apr 2017, 10:08 am

ಕೈ ತುತ್ತು

ಮತ್ತೊಮ್ಮೆ ಆಸೆಯಾಗಿತ್ತು
ತಿನ್ನಲು ಅಮ್ಮನ ಕೈ ತುತ್ತು
ನೋಡುತ್ತಲೆ ಇರುವೆ ಮೂಡಣದತ್ತ
ಚಂದಮಾಮ ಮೂಡಿ ಬರುತಾನಂತ
ಅಮ್ಮನ ಮಡಿಲೊಳಗೆ‌ ಕುಳಿತು ಕೇಳಿದ ಕತೆಗಳ ಮೆಲಕುತ್ತ
ಆ ಬೆಳಕಲೆ ಅವಳೊಡನೆ ಕಲಿತ ಪಾಠವ ನೆನೆಯುತ್ತ
ಊಟವ ಅವನಿಗೆ ಕೊಡಲೆಂದು ಹುಸಿಯಲಿ‌ ಕರೆಯುತ್ತ
ಅನ್ನವ ಬಾಯಿಗಿಡಲು‌ ಹರಸಾಹಸ ಪಡುತಿದ್ದ ಅಮ್ಮನ‌ ನೆನೆಯುತ್ತ
ಎಲ್ಲವ ಅರಿಯುವ ಮುನ್ನ ಉರುಳಿದ ಕಾಲವ‌ ಶಪಿಸುತ್ತ
ಮತ್ತೊಮ್ಮೆ ಅಮ್ಮನ ಮಡಿಲ ಕೂಸಾಗಲು ಬಯಸುತ್ತ
ಕುಳಿತಿರುವೆ ಆ ಚಂದಿರನ ನೋಡುತ್ತಾ
ಎಲ್ಲವು ಮರುಕಳಿಸಲಿ ಇನ್ನೊಮ್ಮೆ ಎನ್ನುತ್ತ

- ಶ್ರೀಕಾವ್ಯ

28 Apr 2017, 11:19 pm