Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಕನಸು

ಬದಲಾಗುತ್ತಿರುವ ಭಾರತದಲ್ಲಿ
ನವ್ಯ ಚೈತನ್ಯವ ಕಂಡೆ
ನವ ಮಾಸ ಹೊತ್ತ ತಾಯಿ ಕಣ್ಣಲ್ಲಿ
ಭವ್ಯವಾದ ಸಂತೋಷ ಕಂಡೆ

ಎಲ್ಲೆಲ್ಲೂ ಹಸಿರ ತೋರಣ ಕಂಡೆ
ಎಲ್ಲರದು ಒಂದೆ ಉಸಿರೆಂಬ ಭಾವ ಕಂಡೆ
ಶತ್ರುಗಳೊಂದಿಗೆ ಯುದ್ದಕ್ಕೆ ನಿಂತ ಯೋಧನ
ಸೇವೆಗೆ ಬದ್ಧರಾದ ಮನುಜರ ಕಂಡೆ

ಜಾತಿಯನು ತುಳಿದು
ಜಾಣತ್ವದಲಿ ಬದುಕುವವರ ಕಂಡೆ
ಭ್ರಷ್ಟರ ಮೆಟ್ಟಿ ಬುದ್ದನ ಮೆಚ್ಚಿ
ನಡೆವ ಮನುಕುಲದ ತಿಲಕಗಳನು ಕಂಡೆ

ಅಮ್ಮಾ ಎಂದು ಹಸಿವ ತೋರಿದವರಿಗೆ
ಅಮೃತವನ್ನು ಬಡಿಸುವವರ ಕಂಡೆ
ಅಮ್ಮಾ ಎಂದು ತಾಯಿ ಒಡಲ ಬಗೆವವರ
ಎದೆ ಬಗೆವ ಹುಲಿಗಳ ಕಂಡೆ

ಸ್ವಪ್ನ ಸುಂದರಿಯನ್ನು ತೊರೆದು
ನಯನಗಳನ್ನು ನಾಜುಕಾಗಿ ತೆರೆದು
ಮೌನಿ ಮನ ಹೇಳಿತು ನಾ ಕಂಡ
ಕನಸು ನನಸಾಗಬಾರದೇ ಎಂದು

ಮೌನಿ(9739651101)

- ಮೌನಿ

01 May 2017, 08:31 am

ನಿನ್ನ ಕಣ್ಣುಗಳು

ನಿನ್ನ ಕಣ್ಣುಗಳು ಹೇಳಿದ್ದು
ಸುಳಲ್ಲ...
ನಿ ನನ್ನ ಪ್ರೀತಿ ಮಾಡಿದ್ದು
ಕನಸಲ್ಲ...
ಅಡಿ ಅಡಿಗೂ ಮುಳ್ಳು ನನ್ನ
ಎದೆ ಚುಚ್ಚಲು...
ಸಾವಿರ ಪ್ರೀತಿ ಹೂವು ನನ್ನ
ತಬ್ಬಿ ಬಾಚಲು...
ಇ ಪ್ರೀತಿಯೆಂಬುದು ಕ್ಷಣ ಕ್ಷಣ
ನನ್ನ ಕೊಂದಿದೆ...
ನಿನ್ನ ಆಸೆ ಗೋಪುರ ನನ್ನ
ಕಟ್ಟಿಹಾಕಿದೆ...
ಅನಾಮಿಕ........

- ಅನಾಮಿಕ..........

01 May 2017, 08:30 am

ಕ್ಷಮಿಸಿಬಿಡಿ ಅಪ್ಪ...

ಏ ದೇವರೇ ನನ್ನದೊ೦ದು ಓಲೆ
ನಿನ್ನ ಮಡಿಲಿಗೆ, ಅರಿವಾಗಿದೆ
ನನಗೀಗ ನನ್ನ ತಪ್ಪು,
ನನ್ನ ತಪ್ಪನ್ನು ಕ್ಷಮಿಸಬೇಡ
ಬದಲಿಗೆ ಇನ್ನೊ೦ದು ತಪ್ಪು
ಮಾಡಲು ನನ್ನನ್ನು ಬಿಡಬೇಡ.

ನಿಮ್ಮನ್ನು ನೋಡಿದಾಗ
ಕೋಪ ನೆತ್ತಿಗೇರುತಿತ್ತು,
ನೀವು ತಪ್ಪು ಮಾಡಬಾರದೆ೦ದು
ನನನ್ನು ತಪ್ಪು ಮಾಡುವ೦ತೆ
ನನ್ನ ಮನ ಪ್ರೇರೇಪಿಸುತಿತ್ತು,
ನನ್ನ ಕೈಗಳು ಕಡಿಯುತ್ತಿದ್ದವು.

ನಿಮಗೆ ಪಾಠ ಕಲಿಸುವ ಹ೦ಬಲ
ಆ ಕ್ಷಣಕ್ಕೆ ಏನೇನೋ ಚಿ೦ತಿಸುತಿತ್ತು,
ಆ ನಾಲ್ಕು ನಿಮಿಷ ನಾನು
ನಾನಾಗಿದ್ದರೆ, ಇ೦ದು ಓಲೆ
ಬರೆವ ಕೆಲಸವಿರುತ್ತಿರಲಿಲ್ಲ,
ತಪ್ಪುಮಾಡಿದೆನೆ೦ಬ ತೇಗಿರುತ್ತಿರಲಿಲ್ಲ.

- Bore'S..!

- Ananth

30 Apr 2017, 10:22 pm

ಅವಳು

ಬರೆಯುವ ಪ್ರತಿ ಸಾಲುಗಳು ಅವಳ ಹೆಸರೇಳುತ್ತವೆ
ಕನಸಾಗೆ ಕಾಡುವ ಅವಳು ಯುಗಗಳ ಕೂಡಿಸುವಳು
ನೆನಪುಗಳ ನಿತ್ಯ ಕಾಡುವುದು ಅವಳ ಕಿರುನಗೆಯನ್ನೆ
ಮೌನ ಸಾಕಾಗಿ ಮಾತುಗಳು ನೂರಾದವು
ಹಾಳೆಗಳು ಅವಳ ನೆನಪಿನ ಶಾಯಿಗೆ ಖಾಲಿಯಾದವು
ಮೊದಲ ಪದದಿಂದ ಕೊನೆಯ ಪದದ ವರೆಗೂ
ಅವಳ ನೆನಪು ಹಚ್ಚಾಗಿತ್ತು.
ನಗುವು ಕವಿತೆಯಾಯಿತು
ನೋಟ ಕಾವ್ಯವಾಹಿತು
ಮಾತು ಗ್ರಂಥವಾಯಿತು

ಕನ್ನಡಿಗ ರವಿಕುಮಾರ

- ರವಿಕುಮಾರ

30 Apr 2017, 10:19 pm

ಶ್ರೀಮಂತಿಕೆ

ನೆಪವೊಡ್ಡಿ ಬರುವ ನಿನ್ನ ನೆನಪಿಗೆ
ಪೂರ್ಣವಿರಾಮವೇ ಇಲ್ಲ,
ಇರಬೇಕು ಇದೊಂದು ಅಪರಿಮಿತ ಸಂತೋಷದ
ಆಗರ್ಭ ಶ್ರೀಮಂತಿಕೆ.

- ಅಕ್ಷತ

30 Apr 2017, 10:13 pm

ಮನಸು ಸರೋವರ

ಮನಸ ‌ಸರೋವರದಲ್ಲಿ
ತಾಗಿದೆ‌ ಕಲ್ಲೊಂದು

ತಿಳಿನೀರ ಆಳದಲಿ
ಎದ್ದಿದೆ ಅಲೆಯೊಂದು

ಅಂದವು ಅದ ನೋಡುವ ಕಣ್ಣಿನಲಿ
ಆದರೆ ಆಳದಲಿ‌ ಉದುಗಿದೆ ಕಾಣಲಾಗದ ನೋವಿನ ಸುಳಿಯೊಂದು

ಹುಟ್ಟಿದ ಪ್ರತಿ ಅಂದಗೊಳಿಸಿದ ತರಂಗದಲಿ
ಅಡಗಿದೆ ತಿಳಿಸಲಾಗದ ಭಾವವೊಂದು

ಅಂದವ ಕಂಡು ಸರೋವರದ ಅಲೆಯಲಿ
ತಿಳಿನೀರಲಿ ಬೀಳುವು‌ದು ಕಲ್ಲು ಮತ್ತೊಂದು

ನೋಡುವರು ಚೆಂದವ ಮತ್ತೆ ಮತ್ತೆ ಆನಂದದಲಿ
ಸೇರುವುದು ಮತ್ತೊಂದು ನೋವು ಕಾಣದೆ ಸರೋವರದಲಿ

- ಶ್ರೀಕಾವ್ಯ

30 Apr 2017, 10:12 pm

ವಯಸ್ಸು...

ಮರುಭೂಮಿಯಲ್ಲಿ ಮದನಾರಿ ಒಬ್ಬಳ ನೋಡಿ, ಬಾಯಾರಿತು ಹದಿಹರೆಯದ ವಯಸ್ಸು...
ಬರ ಬಿಸಿಲು ಸುಡುತಿರಲು...
ಬರಿ ಗಾಳಿ ಬೀಸುತಿರಲು...
ಹೃದಯದ ಬಡಿತ ಅಳತೆ ಮಿರಿತ್ತು

-Mg

- ಮಹಮ್ಮದಗೌಸ(Mg)

30 Apr 2017, 09:22 pm

ಸಾಗರದ ಅಲೆ.........

ಅಲೆ ಎಷ್ಟೇ ದುಡುಕಿ ಆಕಾಶ
ಮುಟ್ಟಲು ಹಾರಿದರು ಸಮುದ್ರ
ಮತ್ತೆ ತನ್ನಲ್ಲಿ ಪ್ರೀತಿಯಿಂದ
ಕರೆದುಕೊಳ್ಳುತ್ತೇ ಬೇಸರವಿಲ್ಲದೇ.....

ಆಗಸದ ಆಸೆ ಅಲೆಗಿದ್ದರು
ಅಲೆಯು ತನ್ನದೇ ಎಂಬ ಭಾವನೆ ಸಾಗರದ್ದು.................

ಅದರಿಂದಲೇ ಯಾರು ಅಲೆಯನ್ನು
ನೆನೆದರೂ ಸಾಗರದ ಅಲೆಯೆಂದೇ
ಕರೆಯುತ್ತಾರೆ .................

- ಚುಕ್ಕಿ

30 Apr 2017, 08:56 pm

ಪ್ರೀತಿ ಎಂದರೆ?

ಪ್ರೀತಿ ಎಂದರೆ ಇಸ್ಟೆ
ಪ್ರೀತಿಸಿದವರ ಮನದಲ್ಲಿ
ಹಲವಾರು ನೆನಪುಗಳನ್ನುಳಿಸಿ
ಬೆರೊಬ್ಬರ ಕೈ ಹಿಡಿಯುವುದು..........
ನಾಗುG

- Nagaraja A

30 Apr 2017, 07:35 pm

...........

ಹೊರೆಯಾಗದ ಒಲವು ಮರೆಯಾಗದ ಮನವು ಸಾವಿಲ್ಲದ ಸವಿ ನೆನಪುಗಳ ಹೊತ್ತು ನಿನ್ನ ನೆನಪಲ್ಲೆ ಸಾಗುತಿದೆ ಈ ಹೃದಯ ದಿಕ್ಕಿಲ್ಲದಕಡೆಗೆ'
ಅನಾಮಿಕ.........

- ಅನಾಮಿಕ..........

30 Apr 2017, 07:13 pm