ಬಣ್ಣಿಸಲಾಗದ ಚೆಲುವನಿವ
ಈ ಅವನಿಗೇನೆ ಇನಿಯನಿವ...
ಅವಳ ಸೇರುತ ಮೋಡಿಯ ಮಾಡಿರುವ...
ಸುಡುತಿರುವಳು ಧರಣಿ ಸಹಿಸಲಾಗದೆ ಬಿಸಿಲ ಬೇಗೆಯ ವಿರಹವ...
ಕಾಣೆಯಾಗುತಿವೆ ಜೀವಗಳು ತಾಳಲಾರದೆ ಅವಳ ತಾಪವ...
ನೋವಲೆ ನಲಗುತಿರುವಳು ತಾಯಿ ನೋಡಿ ಅಳಿಯುತ್ತಿರುವ ಸಂಕುಲವ..
ನೀನೆ ಅವಳ ಒಡಲ ಕಾಯುವವ..
ಅಪ್ಪಿಕೊ ಒಮ್ಮೆ ಮರೆತು ಬಿಂಕವ..
ಇಳಿದು ಸೇರು ಅವಳ , ತೊರೆದು ಗಗನವ..
ಆಸೆಯಲಿ ಕಾಯುತಿದೆ ಜೀವ ಸಂಕುಲ ನೋಡಲು ನಿಮ್ಮಿಬ್ಬರ ಸಂಗಮವ..
ಬಂದು ಹಸಿರ ಸೀರೆ ಉಡಿಸಿ ನೋಡು ಬುವಿಯ ಚೆಂದವ..
ನೀನಾಗುವೆ ಎಲ್ಲವ ಮರೆತು ಅವಳ ಅಂದಕೆ ತಲೆದೂಗುವವ....
ಮರೆಯದೆ ಬಂದು ತಣಿಸು ತಾಪವ,ಉಳಿಸು ಮೂಕ ಜೀವಸಂಕುಲವ...
ಏನು ಶಕ್ತಿ ಅದೆಂಥಾ ಭಲಾಢ್ಯ,
ಮೂಡಣ ದಿಕ್ಕಿನಿಂದೊಂದಿಷ್ಟು,
ಪಡು,ತೆಂಕ,ಬಡಗಣದಿಂದೊಂದಷ್ಟುಷ್ಟು,
ಅಪ್ಪಳಿಸಿ ಬೊಬ್ಬಿರಿಸಿ ಬೋರ್ಘರೆಸಿ,
ತೀರಕ್ಕೆ ತಲುಪಿಸಿ ಉಪ್ಪು ನೀರನು,
ಕ್ಷಣಾರ್ಧದಲಿ ವಾಯುಗಾರನು...!!
ಕಡಲದೆಷ್ಟು ಸುಂದರ ನಗರಿ,
ಜಲಜೀವನವು ನಿತ್ಯಾಭಾರಿ,
ಹೊಳೆವ ರತ್ನ ಕಡಲ ಸಿಂಧೂರಿ,
ಸಂಧ್ಯಾರಾಗವಾಡಿ ಸೂರ್ಯನ ತಾ ನುಂಗಿ,
ಕರಾಳ ಕತ್ತಲಿಗೆ ಸದ್ದು ಗದ್ದಲಗಳೇ ರೂವಾರಿ,
ಒಮ್ಮೊಮ್ಮೆ ಮನುಕುಲಕೆ ಅದೆಷ್ಟು ಕ್ರೂರಿ...!!
ಅಲೆಗಳ ತೂಗಾಟಕೆ ತೂಗಿ ತಲೆದೂಗಿ,
ಮಿರ ಮಿರ ಮಿಂಚು ಮಧ್ಯಾಹ್ನದ ಹೊತ್ತಿಗೆ,
ಹುರುಪು ಅದೇ ಹೊರೆಯು ಅದೇ,
ಉತ್ಸಾಹಕೆ ಕೊನೆಯಿಲ್ಲ,
ಅಲೆಗಳ ಜೀವಕ್ಕೆ ಸಾವಿಲ್ಲ,
ಮನದ ಮುದಕೆ ತುಸುತಾಸು ತೀರದಲ್ಲಿ ಸಾಕಲ್ಲ...!!
ಆಗಾಗ ಮರಳಿಂದ ಇಣುಕಿ ಓಡಿ,
ಗುಳಿಗಳೊಳಗೆ ಸೇರೋ ಏಡಿಯ ಹೆಜ್ಜೆ
ಅಳಿಸಲು ಹರಿದು ಬಿಳಿನೊರೆಯ ನೀರು,
ಇನ್ನಾರದೋ ಹೆಜ್ಜೆಗೆ ಮರಳಿ ಸೇರಿಸಿ ಮರಳು,
ಮಾತಿಲ್ಲ ಕಥೆಯಿಲ್ಲ ಕೆಲಸಕ್ಕೆ ರಜೆಇಲ್ಲ,
ಅಪ್ಪಳಿಸಿ ಕುಪ್ಪಳಿಸಿ ಬರುವ ಅಲೆಗಿಲ್ಲಿ ಅಳಿವಿಲ್ಲ..!!
ಪ್ರೀತಿಯ ಪುಟಗಳ ಮೇಲೆ ನೀ ಬರೆದ ಆ ಹೆಸರು ನನ್ನ ಹೆಸೆರಲ್ಲ
ಹೃದಯದ ಮಹಲಿನಲ್ಲಿ ನೀ ಕೊರೆದ ಆ ಹೆಸರು ನನ್ನ ಹೆಸರಲ್ಲ
ನಿನ್ನ ಕಣ್ಣಿನ ಕನ್ನಡಿ ಅಲ್ಲಿ ತುಂಬಿ ತುಳುಕಿದ ಭಾವನೆ ನನಗಲ್ಲ
ಆದರೂ ನೀನೆ ಏಕೆ ನನಗೆಲ್ಲಾ?
ಅನಾಮಿಕ..........