Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಕ್ಕಿಯಂತೆ ಹಾರಲು ಕಾಯುತಿರುವ ಮನಸಿಗೆ ರೆಕ್ಕೆಯ ಕಟ್ಟಲೇನು
ರೆಕ್ಕೆ ಮುರಿದರೆಂದು ಹೆದರಿ ನೆಲಕಚ್ಚಿ ಕೂರಲೇನು
ಹಾರಲು ಬಾರದ ಹೃದಯಕ್ಕೆ ಹಾರುವುದ ಕಲಿಸಲೇನು
ಅಪಘಾತವಾಗುವ ಭೀತಿಯಲಿ ಬಂದಿಸಿ ಇಡಲೇನು
ಆಗಸದಂತ ವಿಸ್ತಾರವ ಒಮ್ಮೆ ಕಣ್ತುಂಬಿಕೊಳ್ಳಲೆಂದು ಹಾರಲೇನು
ಅರಿಯದ ಹಾದಿಯ ಪಯಣವ ನೆನೆದು ರೆಕ್ಕೆ ಮುದುರಲೇನು
ಈ ಬುವಿಯಂತ ಪಕ್ಷಿ ನೋಟವ ಕಂಡು ಹರುಷ ಪಡಲೇನು
ಎತ್ತರದಲಿ ಹಾರಲಾಗದಿದ್ದರೆಂದು ನೆನೆದು ಸೊಗಸ ನೋಡುವುದ ಮರೆಯಲೇನು
ಹಾರುವ ದಾರಿ ಜೊತೆಗಿನ ಪಯಣಿಗರ ಜೊತೆ ನಗುತ ಸೇರಲೇನು
ಜೊತೆಗೆ ಸರಿದು ಹೋಗಬೇಕಿರುವವರ ನೆನೆದು ಅವರ ಅರಿಯಲಾಗದೆಂದು ಮೌನವಾಗಲೇನು
ಹಾರಿ ಸುತ್ತಿ ಜಗವ ನೋಡ ಬಯಸುತಿದೆ ಮನಸು
ಹಾರಿ ಬಿಡಲೇನು ಕಲ್ಪನೆಗಳ ಮರೆತು ಕನಸಾಗಲೆಂದು ನನಸು
- ಶ್ರೀಕಾವ್ಯ
07 May 2017, 06:16 pm
ಒಂದೊಳ್ಳೆ ಕವಿತೆ ಮಾಸಿತು
ಅವಳ ನೆನಪಿನಂಚಲಿ
ಬಿಡದೆ ಕಾಡಿದ ನೆನಪುಗಳು ಯುಗದಾಚೆಗೆ ಎಳೆದೊಯ್ದವು
ಕನಸಿಗೆ ದೊರೆಯದ ಮುಕ್ತಿ
ಮರೆವು ಬಾರದ ನೆನಪು ಕನಸಾಗಿ ಬಂದಿಸಿತ್ತು
ಅವಳ ಮೌನ ಕಥೆಗೆ ಶೃಂಗಾರ ಕಾಣದೆ ಬಂದಿಯಾಗಿತ್ತು.
- ರವಿಕುಮಾರ
07 May 2017, 05:34 pm
ಮೂರನೇ ಬಾರಿ ಅದೇ ದಾರಿಗೆ
ಹೆಜ್ಜೆಯಾದೆ ಹುಡುಗೀ
ಖಾಲಿ ಕಲ್ಲಿನ ಬೆಂಚು ಒಂದಿಷ್ಟು
ಹಳೆಯ ನೆನಪು ಮಾತ್ರ ಜೋಳಿಗೆ ತುಂಬಿಸಿ ಹಿಂದಿರುಗುತ್ತಿರುವೆ
ಬಿಸಿಲ ನೆಪಕ್ಕೆ ಮರದ ವಾರೆ ನಿಂತ
ಬೇಸಿಗೆಕಾಲ ಪದೇ ಪದೇ
ಕೊರೆಯುತ್ತದೆ ನಿನ್ನಂತೆ
ಮೌನ ಒಡೆಯಬೇಕೆಂಬ ನನ್ನ
ಉಮೇದು ಕಾಡಿಗೆ ಕಣ್ಣಿಗೆ
ಪದೇ ಪದೇ ಸೋಲುತ್ತಿತ್ತು
ಮುಗಿಲೂರಿನ ಚೆಲುವೆ
ನನ್ನ ತೊದಲುವಿಕೆಗೆ ಅರ್ಥ ಕೊಡುತ್ತಾಳೆ
ಹೊಸತೊಂದು ಅಧ್ಯಾಯ ಬರೆಯಬೇಕೆಂಬ ನನ್ನ ಹುಂಬತನ ಮರಿ ಹಾಕಿದ್ದು ಆವಾಗಲೇ
ನಿನ್ನ ಅತೀ ಸಮೀಪದಲ್ಲಿ
ತೊರೆದು ಬಂದ ಗರಿಷ್ಟ ಮಟ್ಟದ
ಆಶೆಯೊಂದಕ್ಕೆ ತಿಲಾಂಜಲಿ ಇಡದಿರು
ಒಲವಿನ ಪಾಠಶಾಲೆಗೆ
ನೂತನ ವಿದ್ಯಾರ್ಥಿ ನಾ
-ಅವಿಜ್ಞಾನಿ
- ಅವಿಜ್ಞಾನಿ
07 May 2017, 04:55 pm
ಒಮ್ಮೆ ನಗಿಸಿದೆ,ಒಮ್ಮೆ ಕಣ್ಣೋರಿಸಿದೆ
ನಿ ಯಾರೆಂದು ತಿಳಿಸದೆ!
ಕುಟುಂಬವೋ ಸ್ನೇಹಿತೆಯೋ..
ಎಂದು ನಾ ಕೊನೆಗೂ ಅರಿಯದೆ ಹೋದೆ...
- Vinuu
07 May 2017, 02:56 pm
ನನ್ನ ನಗುವನ್ನು ಕಳೆದುಕೊಂಡೆನೆ
ಮಗುವಿನ ರೂಪದಲ್ಲಿ.......
ಕಣ್ಣೀರ ಕೊನೆಗೂ ಕರುಣೆ ಇಲ್ಲ
ಅವಳ ನೆನೆಯಲು ಇದು ಅಡ್ಡಿಯಾಗಿದೆಯಲ್ಲಾ....
ನೋಡೇ ನನ್ನ ಮುದ್ದು ಮಗಳೇ
ಮಾತಿಲ್ಲದೆ ಮಲಗಬೇಡ ನನ್ನ ಉಸಿರೆ ನಿಂತೋಗುತ್ತೆ...........
ನಿನ್ನ ಮುದ್ದು ಮಾತಲ್ಲಿ ನನ್ನ ಅಪ್ಪ
ಎಂದು ಕರಿಯಮ್ಮಾ ಪುಟ್ಟಿ............
ಇನ್ಮುಂದೆ ನೀನಿಲ್ಲವೆಂಬ ಕನಸಲ್ಲೂ
ಒಪ್ಪಲು ಸಾಧ್ಯವಿಲ್ಲ ನನ್ನಿಂದ ಪಾಪು..........
ಇವರೆಲ್ಲಾ ನೀನಿಲ್ಲವೆಂದು ಆ ದೇವರ ಬಳಿ
ಹೋಗಿರುವೆಯೆಂದು ಅಳುತ್ತಿದ್ದಾರೆ ಚಿನ್ನ.......
ನೀ ನನಗೆ ಕೊಟ್ಟ ಮಾತು ಈ ಜನರಿಗೆ
ತಿಳಿದಿಲ್ಲ ಅಲ್ವಾ ಅಪ್ಪ ನಿನ್ನ ನಾನೆಂದು
ಬಿಟ್ಟಿರಲಾರೆ ಎಂದೂ............
- ಶಶಿ
07 May 2017, 10:54 am
ನಿಂತಾಗಲೊಮ್ಮೆ ಮನವ ಸೇರಿದ ಸೊಲ್ಲ ನೆನೆದು
ಕುಳಿತಾಗಲೊಮ್ಮೆ ಕಲಿತ ನುಡಿಯ ಸೇರಿಸಿ
ಮನಸೊಳಗೆ ಕಾಣದೆ ಬಚ್ಚಿಟ್ಟು ಕುಳಿತ ಪದವ ಹುಡುಕಿ
ಮರೆಯಾಗದೆ ಕಣ್ಮುಂದೆ ಸುಳಿದಾಡುವ ಶಬ್ಧವ ಹೆಕ್ಕಿ
ಮನಸ ಕಾಡುತಿರುವ ಮರೆಯಲಾಗದ ನೆನಪ ಪದಗಳಲೆ ಜರಿದು
ಬದುಕ ಹಸನಾಗಿಸಿದ ಸವಿಯ ನನಸ ಮತ್ತೊಮ್ಮೆ ನೆನೆದು
ಜೊತೆಯಾಗಿಯೇ ಇದ್ದು ನನಸಾಗದ ಕನಸ ಮೇಲೆ ಮುನಿದು
ಬದುಕ ಜೊತೆ ಜೊತೆಗೆ ಬಂದವರ ಹರಸಿ ಹಾರೈಸಿ
ಅರ್ಧಹಾದಿಯಲೆ ಸರಿದು ನಿಂತವರ ಮೇಲೆ ವರದಿ ಒಪ್ಪಿಸಿ
ಪಾಠ ಕಲಿಸಿದ ಕ್ಷಣ ಮನಕೆ ಮತ್ತೊಮ್ಮೆ ವಂದಿಸಿ
ಕಾಪಾಡಿದ ಜೀವಗಳಿಗೆ ಧನ್ಯವಾದ ಅರ್ಪಿಸಿ
ಹೇಳಬೇಕಾದ ಮಾತು ರೀತಿ ನೀತಿ ಶಾಂತಿ ಕ್ರಾಂತಿಗಳ ಪದಗಳಲೇ ಬೆರೆಸಿ
ಜೀವ ಜೀವಗಳ ವಿವಿಧ ಭಾವ ಭಾವನೆಗಳ ಸಾಲುಗಳಲಿ ಮೇಳೈಸಿ
ಮೂಡುತಿರುವ ಕವಿತೆಗಳು
ಮಾಡುತಿಹುದು ಮನವ ಸೊಗಸು,
ಅಡಗಿ ಕುಳಿತಿದ್ದ ಕವಿ ಮನವ ಜಗಕೆ ಪರಿಚಯಿಸಿ
- ಶ್ರೀಕಾವ್ಯ
06 May 2017, 10:40 pm
ಬನ್ನಿರಿ ಬನ್ನಿರಿ ಸಾಗೋಣ
ಗುರಿ ತಲುಪಲು ಸೇರೋಣ
ಭಿನ್ನಗಳನ್ನು ಮರೆಯೋಣ
ಸಮಭಾವಗಳನ್ನು ಬಿತ್ತೋಣ
ಹಮ್ಮುಗಳನ್ನು ಕಳೆಯೋಣ
ಹೆಮ್ಮೆಯ ನಾವು ಗಳಿಸೋಣ
ತರ್ಕಕೆ ನಾವು ಕಾಯೋಣ
ಸಗ್ಗದ ಯಶವ ಪಡೆಯೋಣ
ಕಗ್ಗದ ಅರ್ಥವ ತಿಳಿಯೋಣ
ಬಗ್ಗದ ರೀತಿ ನಡೆಯೋಣ
ಬಂಡಾಯವ ನಾವು ಏಳೋಣ
ಗರ್ವದಿ ಗೆದ್ದು ಬೀಗೋಣ
ಕನಸಿನ ಮಹಾಮನೆ ಕಟ್ಟೋಣ
ಅದರೊಳು ಗಂಧದಿ ಮಥಿಸೋಣ
ಕ್ರಾಂತಿಯ ಹಾದಿಯ ಕ್ರಮಿಸೋಣ
ಶಾಂತಿಯ ತ್ರಿಪಿಟಿಕ ಕೇಳೋಣ
ಮಹೋನ್ನತ ಚಿಂತನೆ ಬೆಳೆಸೋಣ
ಜಗಕೆ ಮಾದರಿಯ ತೋರೋಣ
ಗ
- ಚಂದ್ರಶೇಖರ ಹೆಗಡೆ
06 May 2017, 09:00 pm
ನೀ..... ದೂರ ಹೋದ ಮೇಲೆ ಎಲ್ಲಿದೆ
ಮನಸ್ಸಿಗೆ ಶಾಂತಿ?
ನೋವುಗಳು ತುಂಬಿ ಸೃಷ್ಟಿಯಾಗಿದೆ ಅಶಾಂತಿ
ನೀ.... ದೂರ ಹೋದ ಮೇಲೆ ಎಲ್ಲವೂ, ಸತ್ತು ಹೋಗಿದೆ ಗೆಳತಿ,
ಅದಕ್ಕಾಗಿ ಬೇಕಿದೆ ಈಗ ನನಗೆ ವಿಶ್ರಾಂತಿ
✍ ಶೇಖರ್ ಬೆಳಾಲ್
- ಎಸ್.ಬಿ
06 May 2017, 07:43 pm
ನೀ..... ದೂರ ಹೋದ ಮೇಲೆ ಎಲ್ಲಿದೆ
ಮನಸ್ಸಿಗೆ ಶಾಂತಿ?
ನೋವುಗಳು ತುಂಬಿ ಸೃಷ್ಟಿಯಾಗಿದೆ ಅಶಾಂತಿ
ನೀ.... ದೂರ ಹೋದ ಮೇಲೆ ಎಲ್ಲವೂ, ಸತ್ತು ಹೋಗಿದೆ ಗೆಳತಿ,
ಅದಕ್ಕಾಗಿ ಬೇಕಿದೆ ಈಗ ನನಗೆ ವಿಶ್ರಾಂತಿ
- ಎಸ್.ಬಿ
06 May 2017, 07:41 pm
ಇರಲಾರೆ ಕ್ಷಣಬಿಟ್ಟು ನಾ ನಿನ್ನನು
ನೀನಿರದ ಆ ಕ್ಷಣವೇ ನಾ ಬದುಕೆನು
ನಿಜ ಹೇಳು... ನಿನ್ನೊಳಗೆ ನಾನಿಲ್ಲವೆ ?
ಜೊತೆಯಲಿ ಬೆರೆತೆವು ಜಗವನೆ ಮರೆತೆವು
ಏಳೇಳು ಜನುಮದಲಿ
ನಿನ್ನಲಿ ಬೆರೆತು ಒಂದಾಗುವಾಸೆ
ನನಗೆ ನೀನು ನಿನಗೆ ನಾನು
ಬರೆಯಬಹುದು ಮನದಲಿ
ಬಿಡುವಿಲ್ಲದೆ ಕವನ
ನನಗರಿವಿಲ್ಲದೆ ನನ್ನನು
ಕವಿಯಾಗಿಸಿದ ನಿನಗೆ
ನನ್ನ ಕೋಟಿ ನಮನ
- Pb
06 May 2017, 06:00 pm