Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹರಿದ ಜೋಳಿಗೆ

ಒಂಟಿ ಶವದ ವಾಸನೆಯು
ಹರಿದ ಮೂಗಿಗೆ ಬಡಿಯುತ್ತಿಲ್ಲ....!
ಕೀವು ಸುರಿವ ಹುಣ್ಣೊಂದು
ಕಟ್ಟು ಬಿಚ್ಚಿಡು ಎನ್ನುತಿದೆ...!!!!
ಶೋಕಾಚಾರಣೆಯ ಮಡುವಿನಲ್ಲಿ ಕಾಲು ಮುರಿದ ರಾಗವೊಂದು ಶೃತಿಯ ತಪಾಸನೆ ಮಾಡುತಿದೆ....!!!

ಬೆಂದ ಬೂದಿಯಲ್ಲಿ ಬಂಜೆಯಾದ ಬಯಕೆಗೊಂದು ಶ್ರಾದ್ಧ ನಡೆಯುತ್ತಿದೆ..!!!
ಬಳ್ಳಿ ಕಡಿದು ಬೀಳಲು ಮೊಗ್ಗೊಂದು ಬಯಸುತಿದೆ...!!
ಬಳಲಿಹೋದ ಎಸಲು ಕೂಡ ಮತಿಭ್ರಮಣೆಯಾಗುವಂತೆ ಬೇರು ಹಿಡಿದು ಅಲುಗಾಡಿಸುತ್ತದೆ...!!!

ಹಸಿದ ಹಲ್ಲುಗಳು ಕೊಳೆತು ನಾರುವಾಗ ಮುಸಿನಗುವ ಒಸಡಿಗೆ ಮುಂಜಿ ನಡೆಯುತಿದೆ....!!
ಉಚ್ಚೆ ಬರದೆ ಶ್ವಾಸವು ರಟ್ಟೆ ಕಚ್ಚುವಾಗ ಹೆಪ್ಪು ಗಟ್ಟಿದ ರಕ್ತಕ್ಕೆ ಜೋಗುಳ ಹಾಡುತ್ತಾರೆ....!!

ಬಿಸಿಲ ಬೆವರು ಬೆಂದು
ಬೇಯುವಾಗ ಮುರಿದ ಬೆನ್ನಿನ ಬಾಸುಂಡೆ ಲೆಕ್ಕವಾಗುತ್ತದೆ...!!
ಹೊಡೆದ ತಮಟೆ ಮೌನ ಹಾಡಿಗೆ ತಾಳವಾಗುವಾಗ ಬೊಬ್ಬಿಡುವ ಬಾಯಿಗೆಲ್ಲ ಬಂದೋಬಸ್ತ್ ಮಾಡಲಾಗುತ್ತದೆ...!!!!

ಅವಿಜ್ಞಾನಿ

- ಅವಿಜ್ಞಾನಿ

05 May 2017, 10:15 pm

ಕನಸು.....

ನೀನು ನನ್ನ ಜೀವನದ ಒಂದು ಸುಂದರ ಕನಸಷ್ಟೆ.... ಕನಸು ಕನಸಾಗೆ ಇರಲಿ ಬಿಡು....!
ಕನಸಾಗೇ ಉಳಿದುಬಿಡು......!
ಬದುಕಿರುವಷ್ಟೂ ದಿನ ಕನಸಾಗೇ ಬರುವೆಯಾ?
ಕಷ್ಟವಾದರೂ ಸರಿಯೇ ನಿದ್ರಿಸಿಯೇ ಇರುವೆ, ಚಿರನಿದ್ರೆಗೆ ಜಾರುವವರೆಗೂ.
ಕನಸಲ್ಲೂ ನಿನ್ನ ಜೋಪಾನಮಾಡುವ ಹಠ ಮನಸಿಗದ್ಯಾಕೊ.
ಜೋಪಾನ...... !
ನಿನ್ನ ಕನಸುಗಳ ಸಾಕಾರ ಮಾಡುವ ಹೊಣೆಯೂ ನನ್ನದೆ.
ನನ್ನ ಕನಸೂ ನಿನ್ನದೆ.
ನನ್ನ ಉಸಿರೂ ನಿನ್ನದೆ.
ಅನಾಮಿಕ.........

- ಅನಾಮಿಕ..........

05 May 2017, 08:56 pm

ನವಿಲುಗರಿ

ನೀನಿತ್ತ ನವಿಲುಗರಿ ಮರಿಯಿಡುವುದ ಮರೆತಿಹುದು ಬಂದೊಮ್ಮೆ ತಿಳಿಹೇಳಬಾರದೆ......
ನನ್ನೆಲ್ಲ ಕನಸುಗಳ ನಿನಗೇ ಅರ್ಪಿಸುವೆ ಬಂದೆಲ್ಲ ಕದ್ದೊಯ್ಯಬಾರದೆ....
ಅನಾಮಿಕ......

- ಅನಾಮಿಕ..........

05 May 2017, 08:52 pm

ಕಣ್ಣಹನಿ....

ಕಾಣಿಸದ ಹನಿಯೊಂದು
ಕಣ್ಣಲ್ಲೆ ಕುತೂ
ಮುತ್ತಾಯಿತೆ.....
ಗೆಳೆಯ.....

- chinmayi.....chinni

05 May 2017, 06:57 pm

ಜೀವಗಳ ಭಾವಬಂದನ....

ಮೂರು ಗಂಟಿನಲಿ ನಂಟಾಗಿ
ಏಳು ಹೆಜ್ಜೆಗಳು ನಡೆದು ಜಂಟಿಯಾಗಿ
ಕೈ ಹಿಡಿದು ಅಗ್ನಿಸಾಕ್ಷಿಯಾಗಿ
ಬದುಕಬೇಕು ಮನಸಾಕ್ಷಿಯಾಗಿ

ಭಾವಗಳು ಮನಸುಗಳ ಬೆಸೆದು
ಬೆಸೆದ ‌ಜೀವಗಳ ಮನಸುಗಳು
ಸಾವಿರ ಕನಸುಗಳ ಹೊಸೆದು
ಅಡಿ ಇಡುವರು ನವ ಜೀವನಕೆ

ಮೂರು ಗಂಟಿನೊಳಗಿದೆ ಸಾವಿರ ಮರ್ಮ
ನಗು ನಗುತ ಬಾಳುವುದು ಸತಿ ಪತಿಗಳ ಧರ್ಮ
ಎರಡು ಜೀವಗಳ‌ ಕೈಗಳ ಬೆಸುಗೆ
ಎರಡು ಸಂಸಾರಗಳಿಗೆ ಬಾಳ ತುಂಬ ಹೊಸುಗೆ

ಸೋಲಿಸಲು ಹವಣಿಸದೆ ಒಬ್ಬರನೊಬ್ಬರು
ನಂಬಿಕೊಂಡು ಮನಸಾರೆ ಎಂದೂ ಒಂದೇ ನಾವಿಬ್ಬರು
ತಿಳಿದು ಬೆಸುಗೆಯ ಜೊತೆ ಬಂದವರೆಲ್ಲ ನಮ್ಮವರು
ಅರಿತು ಜೊತೆಗೆ ನಡೆಯುತ ಕೆಡಿಸುವವರು ಯಾರಿದ್ದರು
ನಗಿಸಿ ‌ನಗುತ‌ ಸಾಗಬೇಕು‌ ಸಾವಿರ ನೋವಿದ್ದರು

- ಶ್ರೀಕಾವ್ಯ

05 May 2017, 04:38 pm

ಪ್ರತಿರೂಪವು ನೀನಾಗಿ

ಕಣ್ಣು ಕಣ್ಣಲ್ಲೇ ಕವನ 
ಮೂಡಿದ ಕ್ಷಣವೇ ಮೌನ 
ಒಂದೊಂದು ಪದಗಳ ಪ್ರತಿರೂಪವು ನೀನಾಗಿ
ಬರೆದೆ ನಿನಗಾಗಿ ನಾ ಕವಿಯಾಗಿ
ಭಾವನೆಗಳು ತುಂಬಿರುವ ಈ ಕವನ 
ಅನುದಿನ ಪ್ರತಿಕ್ಷಣ
ನಾ ನೆನೆಯುವೆ ನಿನ್ನನು 
ನಿನ್ನ ನೆನೆನೆನೆದ ಪ್ರತಿಕ್ಷಣವು
ಜನನವಾಗುತಿವೆ ಒಂದೊಂದು ಕವನ
ಕಳೆದು ಹೋಗಿದ್ದೆನೆ ನನ್ನೊಳಗೆ ನಾನು 
ಉಸಿರಲ್ಲಿ ಉಸಿರಾಗಿ ಬೆರೆತು ನಾನು ನೀನಾಗಿ
ಹಗಲಿಲ್ಲ ಇರುಳಿಲ್ಲ ನೀನಿರುವೆ ಮನವೆಲ್ಲ
ಮನವಿದು ನಿನ್ನ ನೆನೆಯದ ಕ್ಷಣವಿಲ್ಲ..
ಮರೆತರೂ ಮರೆಯಲಾಗದ
ನೆನೆಸಿಕೊಂಡಷ್ಟು  ಖುಷಿ ಕೊಡುವ  
ದೂರವಾದರೂ ಬೇಕೆನಿಸುವ  
ಹಸಿವಿದ್ದರೂ ಊಟಮಾಡಲಾಗದ
ಮಲಗಿದ್ದರೂ ನಿದ್ರಿಸಲಾಗದ
ನೋಡಿದರೆ  ಮತ್ತೆ ನೋಡಬೇಕೆನಿಸುವ
ಮನಸ್ಸಿನಲ್ಲಿದ್ದರೂ ಹೇಳಲಾಗದ
ಭಾವನೆಗಳು ಮನದಲಿ ತುಂಬಿರಲು…
ನಿನ್ನೆ ಪ್ರೀತಿಸುವೆ ಈ ಜನುಮ ಇರೊವರೆಗೆ
ನೆರಳಾಗುವೇ ಬದುಕಾಗುವೆ
ಎದೆ ಬಡಿತ ನಿಲ್ಲೋ ಕ್ಷಣದವರೆಗೂ...
ನಿನ್ನವನಾಗಿರುವೆ ನಿನ್ನವನಾಗಿರುವೆ

- Pb

05 May 2017, 12:40 pm

ಬಿಸಿಲ ನಾಡು

ಬಿಸಿಲಿನಂಚಿನ ಭಾಸ್ಕರ ಮಿತ್ರ
ವಿವಿಧ ಜನಾಂಗದ ಸಹಮತ ಸೂತ್ರ
ರಾಜಕೀಯವೋ? ಇಂದ್ರಜಾಲವೋ? ಸಂಗಮನಾಳಿದ ರಾಜತಂತ್ರವೋ?
ಅರಿಯದ ಯೋಜನೆ ಪ್ರತಿಫಲ ಸಜವೋ?
ದಾಹವಾಗಿದೆ....! ಸ್ಥಿತಿಯನು ನೋಡಿ
ಬಳ್ಳಾರಿ ಜನರ ಮತಿಯನು ನೋಡಿ!

ಇತಿಹಾಸ ಪುಟವ ಮೆಲ್ಲಗೆ ತೆರೆದಿರೆ
ಕಾನಿಷ್ಕ ದೊರೆಯು ಬಾಳಿದ ನೆರೆಹೊರೆ
ಸಂಪತ್ಭರಿತ ನಿಗೂಢ ಧನಸೆರೆ
ಗಣಿಧಣಿ ನಾಡಿನ ಸಂಗ್ರಾಮ ಮೆರೆದಿರೆ

ಕೃಷಿಯ ಮಕ್ಕಳಿರೊ ಅಧಿಕವು ಭೂಮಿ
ತುಂಗಭದ್ರೆಯು ನಮ್ಮಯ ತಾಯಿ
ಆದರೆ....
ಕೃತಕ ಫ್ಯಾಕ್ಟ್ರಿಯ ಅಟ್ಟಹಾಸದಿ
ಪರಿಸರ ಮಾತೆಯು ದುಃಖವು ಮರುಕದಿ
ಸರ್ವೋತ್ತಮವೂ ದುಡಿದಿರೆ ತವಕದಿ

- Dev

05 May 2017, 11:42 am

ಗೆಳತೀ..........

ಗೆಳತೀ.
ಇನ್ನೂ ಒಂದು ಜನ್ಮವಿರುವುದಾದರೇ
ನಿನ್ನ ಕಣ್ಣೀರಾಗಿ ಜನಿಸುವೆ...
ಕಾರಣ.
ನಿನ್ನ ಮನಸ್ಸಿನ ಅಣತಿಯತೆ
ಕಣ್ಣಲ್ಲಿ ಜನಿಸಿ
ಮೃದು ಕೆನ್ನೆಯ ಸವರಿ
ನಿನ್ನ ಮಡಿಲಲ್ಲಿ ಬಿದ್ದು ಸಾಯಬಹುದಲ್ಲವೇ

ಅನಾಮಿಕ..........✍

- ಅನಾಮಿಕ..........

05 May 2017, 07:06 am

ಸಂಪತ್ತಿಗೆ ಸ್ವಾಭಿಮಾನಿಯ ಸವಾಲ್!

ಮನಸ್ಸು ಭಾರ ವಾಯ್ತು.
ಹೃದಯಕ್ಕೆ ನೋವಾಯ್ತು.
ಸ್ವಾಭಿಮಾನಕ್ಕೆ ದಕ್ಕೆಯಾಯ್ತು.

ಹೀಯಾಳಿಸುವ ಜನಕ್ಕೆ ಸಾಧಿಸಿ ತೋರಿಸುವ ಛಲವಾಯ್ತು
ಜೀವನವೆಂಬ ರಣರಂಗದಲಿ ಚರಿತ್ರೆ ಸೃಷ್ಠಿಸುವ ಕಾಲ ಬಂದಾಯ್ತು
ಚರಿತ್ರೆಯ ಪುಟ ಪುಟದಲ್ಲೂ ಮಿಂಚುವ ರೋಷ ಉಕ್ಕಾಯ್ತು
ಇದೋ ನಿನ್ನ ಸಂಪತ್ತಿಗೆ ಈ ಸ್ವಾಭಿಮಾನಿಯ ಸವಾಲ್ !

- ವೇಣು ಆರ್ ಚಿನ್ನದೂರು

05 May 2017, 12:20 am

ಕವನ

ಕಣ್ಣಲ್ಲಿ ಕಾಣಿಸೊ ಕಲ್ಪನೆಯೆ ಕವನ
ನನ್ನಲಿ ಮೂಡೊ ಬಾವನೆಯೆ ಕವನ
ಮನಸ್ಸು ಮನಸ್ಸುಗಳ ಮಾತೇ ಕವನ
ನೆನಪಿನ ಹಾದಿಯಲಿ ಸಾಗೊ ಕವನ
ಹರಿವ ನೀರಲ್ಲೂ ಕೇಳೊ ಕವನ
ಇಂಪಾಗಿ ಬೀಸೊ ತಂಗಾಳಿಯಲ್ಲೂ ಕವನ
ನೊಂದ ಹ್ರುದಯದಿ ಬೆಂದ ಕವನ
ಬಿಳಿ ಹಾಳೆಯ ಮೇಲೆ ಅರಳಿದ ಕವನ
ಬಿಡದೆ ಕಾಡೊ ನೆನಪುಗಳೆ ಕವನ……

- Pb

04 May 2017, 10:48 pm