Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏಳೇಳು ಜನುಮ

ಇರಲಾರೆ ಕ್ಷಣಬಿಟ್ಟು ನಾ ನಿನ್ನನು
ನೀನಿರದ ಆ ಕ್ಷಣವೇ ನಾ ಬದುಕೆನು
ನಿಜ ಹೇಳು... ನಿನ್ನೊಳಗೆ ನಾನಿಲ್ಲವೆ ?
ಜೊತೆಯಲಿ ಬೆರೆತೆವು ಜಗವನೆ ಮರೆತೆವು
ಏಳೇಳು ಜನುಮದಲಿ
ನಿನ್ನಲಿ ಬೆರೆತು ಒಂದಾಗುವಾಸೆ
ನನಗೆ ನೀನು ನಿನಗೆ ನಾನು
ಬರೆಯಬಹುದು ಮನದಲಿ
ಬಿಡುವಿಲ್ಲದೆ ಕವನ
ನನಗರಿವಿಲ್ಲದೆ ನನ್ನನು
ಕವಿಯಾಗಿಸಿದ ನಿನಗೆ
ನನ್ನ ಕೋಟಿ ನಮನ

- Pb

06 May 2017, 06:00 pm

ಪ್ರೀತಿ ಕೊನೆಯಾಯಿತು.

ಪ್ರೀತಿ ಕೊನೆಯಾಯಿತು
ಹೃದಯ ಕೊಲೆಯಯಿತು
ಅಂತ್ಯ ಸಂಸ್ಕರಕ್ಕೆ ಬಂದಾ ನನ್ನ ನಯನಗಳು ಕಣ್ಣೀರು ಹಾಕುತ್ತವೆ
ನೆನಪುಗಳಿಂದ ಸುಡಬೇಕಾ??
ಇಲ್ಲಾ ಸಮಾಧಿಯಾಲ್ಲಿ ಕೋಳೆಯಾಬೇಕಾ??ಎಂದು ತಿಳಿಯಾದೆ ಬೀದಿಯಲ್ಲಿ
ಅನಾಧ ಶವವಾಗಿ ಬಿದ್ದಿದೆ ನನ್ನ ಹೃದಯ???
ಅನಾಮಿಕ...........✍

- ಅನಾಮಿಕ..........

06 May 2017, 05:51 pm

ಗೆಳೆತಿ

ದೀಪ ಆರಿತೆಂದು ಹಣತೆಯನ್ನು
ಎಸೆಯಬೇಡ ಗೆಳತಿ....
ಹೂ ಬಾಡಿತೆಂದು ಗಿಡ
ಕಿತ್ತೆಸೆಯಬೇಡ ಗೆಳತಿ
ಇನ್ನೋಬ್ಬ ಗೆಳೆಯ ಸಿಕ್ಕನೆಂದು
ಈ ಗೆಳೆಯನನ್ನು ಮರೆಯಾಬೇಡ
ಗೆಳತಿ. ..
ಅನಾಮಿಕ........

- ಅನಾಮಿಕ..........

06 May 2017, 03:25 pm

ಪ್ರೀತಿ.............

ಮನದ ಮಾತು ಮೌನದಲ್ಲಿ ಕಲಿತು
ಮರೆಯಲ್ಲಿ ನಿಂತು
ಮುದ್ದ ಮಗವ ಕಂಡು
ಎದುರು ನಿಂತರೆ
ತೋದಲ ಮಾತಲ್ಲಿ ಬೆರತು ಉಸಿರಾಡುತ್ತಾ
ಕಾಯುತ್ತಿರುವೆ ನಿನಗಾಗಿ ನಿನ್ನ ಪ್ರೀತಿಗಾಗಿ

.............

- stylish⭐⭐AA

06 May 2017, 03:22 pm

ನಿಂಗೋಸ್ಕರ

ಪ್ರೀತಿ , ಇಷ್ಟ ಅನ್ನೋದು ಭಾವನೆಗಳು...
ಬೇಕೆಂದರೆ ಬೆಳೆಯುವುದು...
ಬೇಡವೆಂದರೆ ಬೆಳೆಯದು...
ಅದ್ರೆ ನಾ ಪ್ರೀತುಸ್ತಿರೋದು ...
ನನ್ನ ಭಾವನೆಗಳನ್ನ ...
ನೀ ಎಷ್ಟೇ ದೊರ ಹೋದರು ..
ನಿನ್ನ ಭಾವನೆ ನನ್ನ ಬಳಿ ಉಳಿಯುವುದು...

- Harsha GR

06 May 2017, 09:56 am

ಸೆರೆಯಾಗಿರುವೆ ನಾನು

ಕವನದೊಳಗಡಗಿ ಕುಳಿತಿರುವೆ ನೀನು
ಬಿಡಿಸಲು ಹೋಗಿ ಅಲ್ಲೇ ಸೆರೆಯಾಗಿರುವೆ ನಾನು
ಪ್ರತಿ ಪದದಲ್ಲೂ ನಿನ್ನ ನೆನಪೇ ತುಂಬಿರಲು
ಕಾಡಿಸುತಿದೆ ಪ್ರತಿ ಘಳಿಗೆ ನಿನದೇ ನೆನಪು
ಚಡಪಡಿಸುತಿದೆ ಕ್ಷಣ ಕ್ಷಣವೂ
ಈ ನನ್ನ ಹೃದಯ
ಪ್ರತಿ ಉಸಿರಲ್ಲೂ ನಿನ್ನೆಸರ ಜಪಿಸುವೆ
ನನ್ನಿಂದ ನೀನೆಷ್ಟೇ ದೂರ ಹೋದರು 
ಮರೆಯಲಾರೆ ನೀ ನನ್ನ ಮರೆತರೂ 
ಕನಸಲೂ ನಾ ಕಾಣಬಯಸುವೆ ನಿನ್ನನೇ 
ನಿನ್ನ ಸನಿಹದ ಹೊರತು ಬೇರೇನೂ ಬೇಡೆನು 
ನೀ ಜೊತೆಗಿದ್ದರೆ ನಾ ಮರೆಯುವೆ ಈ ಜಗವನೆ 
ನಿನಗಾಗಿ ಮುಡಿಪಿಟ್ಟಿರುವೆ ನನ್ನ ತನು-ಮನವನು
ಹೇಗೆ ಹೇಳಲಿ ತಿಳಿಯದಾಗಿದೆ ಪ್ರೀತಿಯನು...

- Pb

06 May 2017, 08:52 am

ಒಡೆದ ನನ್ನ ಹೃದಯ ಸೆರಿಸು

ಗುತ್ತಿಗೆ ನೀಡುತೇನೆ ಗೆಳತಿ
ಒಡೆದ ನನ್ನಿ ಹೃದಯವ ಸೇರಿಸು
ಪ್ರೀತಿ ಎಂಬ ಸಿಮೆಂಟ್
ನಂಬಿಕೆ ಎಂಬ ಮರಳು
ಕರಣೆ ಎಂಬ ಇಟ್ಟಿಗೆಯಿಂದ.............

ನಾಗು.G

- Nagaraja A

06 May 2017, 08:36 am

ಕದನ

ನಿನ್ನನ್ನೇ ಮನದಲ್ಲಿರಿಸಿ ನಿನಗಾಗಿ ಬರೆದೆ ಚೆಲುವೆ ನೂರ್ರೆಂಟು ಕವನ
ನಿನಗೆ ಕೊಡಲ್ಲಾಗದೇ ಮನದಲ್ಲೇ ಮೂಡಿದೇ ಸಣ್ಣದೊಂದು ಕದನ

- ಅನಾಮಿಕ..........

06 May 2017, 07:50 am

ಮರುಕವಿತೆ

ನಾನು ಓದಿರುವ‌ ಎಲ್ಲ ಗ‌ದ್ಯ‌ ಪ‌ದ್ಯ‌ ಕ‌ಥೆ
ಕ‌ವ‌ನ‌ ಕ‌ವಿತೆಗ‌ಳಲ್ಲಿ‌ ನ‌ನ‌ಗಿಷ್ಟ‌ವಾದ‌ ಅತ್ಯಂತ‌
ಸ‌‌ರ್ವಶ್ರೇಷ್ಠ‌ವಾದ‌ ಸಾಲುಗ‌ಳ‌ನ್ನು ಹೆಕ್ಕಿ ಆಯ್ದು
ಜೋಡಿಸಿ ಮ‌ರುಜೋಡಿಸಿ ಪ್ರೇಮ‌ಕ‌ವಿತೆಯೊಂದ‌ನ್ನು ರ‌ಚಿಸಿ ನ‌ನ್ನ‌ವ‌ಳ‌ ಮುಂದಿಟ್ಟೆ "ಇದೇ ನ‌ನ್ನ‌ ಪ್ರೀತಿಯೆಂದು".
ಅಲ್ಲೇ ಇದ್ದ‌ ಬಂಡೆಯೊಂದ‌ರ‌ ಮೇಲೆ ಕುಳಿತು
ಓದಿ ಅರ್ಥೈಸಿ ವಿಮ‌ರ್ಶಿಸಿ ಪರಾಮ‌ರ್ಶಿಸಿ
ಸ್ವ‌ಲ್ಪ‌ ಹೊತ್ತು ಎತ್ತ‌ಲೋ ನೋಡುತ್ತ‌ ಮೌನ‌ದಿಂದ್ದ‌ಳು ನ‍ಂತ‌ರ‌ ನ‌ನ್ನೆಡೆಗೆ ನೋಡುತ್ತ‌
ಹೀಗೆಂದ‌ಳು "ಯಾರೋ ಇನ್ನಾರಿಗೋ ಬೇಯಿಸಿದ‌ ಮುೃಷ್ಟಾನ್ನ‌ವ‌ನ್ನು ನಿನ್ನ‌ ಪ್ರೀತಿಯೆನ್ನುವುದು ಎಷ್ಟು ಸ‌ರಿ"
ನಾನು ಎನ‌ನ್ನೊ ಯೋಚಿಸುತ್ತ‌ ಉತ್ತ‌ರಿಸಿದೆ
"ಈ ಪ್ರೀತಿ ಸ್ಪುರಿಸುವ‌ ಸಾಲುಗ‌ಳು ಸ‌ಮುದ್ರ‌ ಮಂಥ‌ನ‌ದ‌ಲ್ಲಿ ತೇಲಿ ಬಂದ‌ ಅಮುೃತ‌ದಂತೆ
ನ‌ಮ್ಮ‌ದೆ ಕ‌ನ‌ಸುಗ‌ಳ‌ ಕ‌ನ‌ವ‌ರಿಕೆಗ‌ಳ ಹಾಡಿನಂತೆ
ನ‌ಮ್ಮ‌ ಹೃದ‌ಯ‌ ಗೆದ್ದ‌ರೆ ಅವು ನ‌ಮ್ಮ‌ದೇ ಸಾಲುಗ‌ಳ‌ಲ್ಲ‌ವೆ"?
ಒಲ‌ವೇ ಸ‌ತ್ಯ‌ ಒಲ‌ವೇ ನಿತ್ಯ‌
ಒಲ‌ವೇ ನ‌ಮ್ಮ‌ಯ‌ ಜೀವ‌ನ‌.

- ಶಶಿಧರ ಹೆಚ್ ಎನ್

05 May 2017, 11:58 pm

ನೇಣು ಹಾಕಿದ ನಿವೇದನೆ

ಬೀಗ ಜಡಿದ ಬಿಗುಮಾನದ ಹಿಗ್ಗಿಗೆ ಒಗ್ಗಿಕೊಂಡವಳ ಸೊಗ್ಗಿನಲ್ಲಿ ನನ್ನತನದ ಕಳ್ಳತನವಾಗಿದ್ದು ತಿಳಿಯದೇ ಉಳಿಯಿತು
ಜಾಲಿ ಮರದ ನೆರಳಿನಲ್ಲಿ ನೇಣು ಹಾಕಿದ ನೀವೇದನೆಯ ಅಂತಿಮ ಸಂಸ್ಕಾರಕ್ಕೆ ಕ್ಷಣಗಣನೆ

ರೆಕ್ಕೆ ಮುರಿದ ಗಡಿಯಾರದ ಗಂಟಲಿಗೆ ಸಿಕ್ಕ ಸಮಯದ ಪುಕ್ಕಲು ವಾರ್ತೆಯನ್ನೊಮ್ಮೆ ನವಿರಾಗಿ ನೇವರಿಸುತ್ತೇನೆ
ಮದಿರೆ ನಶೆಯ ಕ್ಲಿಷೆಗಳು ಮಾತ್ರ ಒಡಲ ಉರಿಗೆ ಮುಲಾಮು ಹಚ್ಚುತ್ತದೆ

ತೇಗು ತಿಂದ ಆರ್ತನಾದ ಮೌನ
ರಾಗದಲ್ಲಿ ತಾಳ ತಪ್ಪುವಾಗ ಒಪ್ಪಲಾರದ ಒಕ್ಕಣೆಯೊಂದು
ಮುಂದೆ ದುರುಗುಟ್ಟುತ್ತಿರುತ್ತದೆ
ನನ್ನ ನಾಳೆಯ ತಿಕ್ಕಲು ಕನಸಿನ ಒಕ್ಕಲೇಳುವುದು ಆವಾಗಲೇ

ಬಿರಿದ ಮಲ್ಲಿಗೆ ಮುಡಿಯಿಲ್ಲದ
ಜಡೆಯಲ್ಲಿ ಮಡಿಯುವಾಗ
ಮಣಭಾರ ನೋವೊಂದು ಹೆಗಲೇರಿ
ಭುಜದಲ್ಲಿ ಸಂಸಾರ ಮಾಡುತ್ತದೆ
ನೇಣು ಹಾಕಿದ ನಿವೇದನೆಯ
ಸಂಸ್ಕಾರ ಆಗಿಯೇ ಹೋಗುತ್ತದೆ

ಅವಿಜ್ಞಾನಿ

- ಅವಿಜ್ಞಾನಿ

05 May 2017, 10:15 pm