ಹೇ ಸತಿ ಕೇಳಿಲಿ ಈ ನಿನ್ನ ಪತಿಯಾಗುವವನ ಬಯಕೆ...
ಕಡಲ ತೀರದಲ್ಲಿ ನೀನು ನಾನು ಹೇಳುವ ನನ್ನ ಮನದ ಭಾವಗಳು ಬೇಸರ ಪಡದೆ ಕೇಳುವೆಯ?
ನಿನ್ನ ಮೇಲೆ ಪ್ರೀತಿಕ್ಕಿಂತ ನನ್ನ ಹೃದಕ್ಕೆ ನಿನ್ನ ಕಳೆದುಕೊಳ್ಳವ ಭಯನೇ ಜಾಸ್ತಿ ನನ್ನ ಹೊಟ್ಟೆಕಿಚ್ಚು ಯಾವಾಗ ಕಡಿಮೆ ಮಾಡುವೆ?
ನನ್ನಾಸೆ ನಿನ್ನ ಜೊತೆ ನಿನ್ನ ಕೈ ಹಿಡಿದ್ದು ಊರು ಸುತ್ಯಾಡಬೇಕು ಆಸೆ ಪೂರೈಸುವೆಯ?
-ಅಂಬಿಕಾ ಜಿ ಕುಲಕರ್ಣಿ
ಇರುವಂತಿದ್ದರೇ ನೀನು ಹರಿಯುವ ನದಿಯಂತಿರು, ಪರ್ವತದಷ್ಟು ಕಷ್ಟವನ್ನು ಹೊಂದಿದ್ದರು
ಆ ಕಷ್ಟವೆಂಬ ಪರ್ವತದಿಂದಲೇ ಚಿಮ್ಮಿ ಹರಿಯುವ ನದಿಯಂತೆ
ಸದಾ ನಿನ್ನ ಸಾಧನೆಯೆಡೆಗೆ ಮುನ್ನುಗ್ಗುವಂತಿರು,
ಇರುವಂತಿದ್ದರೇ ನೀನು ಹರಿಯುವ ನದಿಯಂತಿರು.
ಇರುವಂತಿದ್ದರೇ ನೀನು ಬಾಳೇಗಿಡದಂತಿರು,
ನಿನ್ನಲ್ಲಿರುವ ಒಳ್ಳೇಯ ಎಲ್ಲ ಗುಣಗಳಿಂದ ಮತ್ತೊಬ್ಬರಿಗೆ ಬಾಳೆಗಿಡದಂತೆ ಅವಶ್ಯಕನಾಗಿರು,
ಇರುವಂತಿದ್ದರೇ ನೀನು ಬಾಳೇಗಿಡದಂತಿರು.
ಇರುವಂತಿದ್ದರೇ ನೀನು ಮರಗಳಂತಿರು,
ಹೇಗೇ ಮರ ಪ್ರಾಣಿ ಪಕ್ಷಿಗಳಿಗೆ ಆಶ್ರಯಕೊಡುವುದೋ ಹಾಗೆ ನಿನ್ನ ನಂಬಿದವರಿಗೆ ಮರವಾಗಿ ಆಶ್ರಯದಾತನಂತಿರು,
ಇರುವಂತಿದ್ದರೇ ನೀನು ಮರಗಳಿಂತಿರು.
ಪ್ರತಿ ದಿನ ಪ್ರತಿ ಕ್ಷಣ ಕಳೆದೆವು ಜೊತೆಯಲಿ
ನಿನಗೆ ನಾನು, ನನಗೆ ನೀನು ಎಂಬ ಹುರುಪಲಿ
ಯಾವುದೇ ರಹಸ್ಯ ವಿರಲಿಲ್ಲ ನಮ್ಮಿಬ್ಬರ ಮದ್ಯದಲ್ಲಿ
ಕಳೆದ ಪ್ರತಿ ಕ್ಷಣವು ಅಮೂಲ್ಯವಾಗಿ ಉಳಿದಿದೆ ನನ್ನಿ ಮನದಲಿ
ಭಾವನೆಗಳ ಬವಣೆಯಲಿ ಬಳಲಿದ ಮನವೇ
ಕುಗ್ಗದಿರು, ನಿಲ್ಲದಿರು, ಮರೆಯಾಗದಿರು
ಸರಿಹೋಗುವುದು ಕಾಲ ಬರಲಿದೆ ಸಕಾಲ
ಕಳೆದುಹೋದ ಕಾಲಕ್ಕೆ ಚಿಂತಿಸದಿರು
ನಾಳೆಯ ಬದುಕಿಗೆ ಬರುವ ಆ ಹೊಸ
ನೇಸರನ ಕಾಯುತಿರು...
ಮರೆಯಾಗುವುದು ಎಲ್ಲದು ಎಲ್ಲವೂ
ಕಾಯಬೇಕು ನೀ ಕೊನೆವರೆಗೂ
ಬದುಕಿಗೆ ನೆಲೆ ಸಿಗೋವರೆಗೂ ನಮ್ಮವರು ನಮ್ಮನ್ನು ಗೌರವಿಸಿವರೆಗೂ...
- kiran
28 Apr 2024, 07:18 am
ಪ್ರೀತಿ ಅಂದ್ರೆ
ತನಗೆ ಯಷ್ಟೇ ಕಷ್ಟ ಇದ್ರು
ತನ್ನ ನಂಬಿ ಬಂದವಳನ್ನ ಸುಖದಿಂದ ನೋಡಿಕೊಳ್ಳಬೇಕು
ಅವಳ ಸೌಂದರ್ಯ ಮಾಸಿದರು
ಹಣ ಕರಗಿದರು
ವಯಸ್ಸು ಏರಿದಾಗಲು
ಅವಳನ್ನು ಪುಟ್ಟ ಮಗುವಂತೆ ನೋಡಿಕೊಂಡು ಹೋಗುವುದೇ ನಿಜವಾದ ಪ್ರೀತಿ