Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಸೆ ಹೊತ್ತವರು

ಏನು ಕೇಳಿದಿರಿ?
ಕತ್ತಲ ಗೂಡಲ್ಲಿ ಚಿಮಿಣಿ ಬೆಳಕಲ್ಲಿ
ಬದುಕು ಸಾಗಿಸುವವರು ನಾವು
ನಿಮ್ಮ ಬಾಷಣಗಳಿಗೆ ಕಥೆ ಆದವರು ನಾವು
ನೀವು ಕೊಡುವ ನಾಕಾಣೆಗೆ
ನಮ್ಮ ಕನಸ ಮಾರಿಕೊಂಡವರು
ನಿಮ್ಮ ಆಶ್ವಾಸನೆಗಳು ಶಾಸನಗಳು
ನನಸಾಗುವವೆಂಬ ಕನಸಲ್ಲೆ ಸ್ಮಶಾನ ಸೇರುವವರು
ನಿಮ್ಮ ಬಾಸಣದಲ್ಲಿ ನಮ್ಮ ಕಥೆ ಕೇಳುವವರು
ನಾಕಾಣೆಗೆ ನಮ್ಮನ್ನು ಮಾರಿಕೊಂಡವರು
ಕತ್ತಲೆ ತುಂಬಿದ ಗುಡಿಸಿಲಿನಲ್ಲಿ
ಕಡೆಗೊಮ್ಮೆ ಆದರೂ ಬೆಳಕು ನೋಡಬೇಕೆಂದುಕೊಂಡವರು
ನಿಮ್ಮ ಮದುವೆ ದಿಬ್ಬಣದಲ್ಲಿ ಬೆಳಕು ಹಿಡಿದವರು
ನಮ್ಮ ಮುಖಗಳು ನಿಮಗೆ ಕಾಣಿಸದು ಬಿಡಿ
ಸುತ್ತಲೂ ಕತ್ತಲು ನಮ್ಮನ್ನು ಆವರಿಸಿರುತದೇ ನೋಡಿ
ಕಣ್ಣು ಮಂಜಾಗುವುದರೊಳಗೆ ನಮ್ಮ ಹಾಡಿಯಲ್ಲಿ
ಬೆಳಕು ನೋಡುವ ಬಯಕೆ ಹೊತ್ತವರು ನಾವು

- HarshaHL

09 May 2017, 06:56 am

ಹಲ್ಕಾ ಕವಿತೆಗಳು

ನಿಖರವಾಗಿ ಹೇಳಲಾಗದ ತೊದಲುಗಳಿಗೆ
ಬಲ್ಲವರಾರೋ ಒಲವೆಂದನ್ನುತ್ತಾರಂತೆ
ನಾನಂತೂ ದಟ್ಟ ಕಾಡಿನ ಒರಟುಮರದ
ಮುಳ್ಳಿನ ಮೇಲೆ ಬಿದ್ದ ಗುಲ್ಮೋಹರಿನ
ಎಸಳಿನಂತೆ ಭಾವಿಸುತ್ತೇನೆ

ಕಾರಣಗಳಿಲ್ಲದ ಕವಲೊಡೆಯುವ
ಏಕಾಂತದ ಬಳ್ಳಿ ನನ್ನ ಸುತ್ತಿ ಕೊಂಡಿದ್ದರ
ಪರಿಣಾಮ ಇನ್ನೂ
ಅಸ್ತವ್ಯಸ್ಥ ಉತ್ತರಗಳು ಮುಂದೆ ಕುಣಿಯುತ್ತದೆ
ನಿಮಗೇನಾದರೂ ಗೊತ್ತಿದ್ದರೆ ಬಿಡಿಸಿಬಿಡಿ

ನೀಲಜಡೆಯ ಮುಡಿಗೆ ಗಂಟಾಕಿದ ಮೊಗ್ಗನ್ನು
ನೋಡಿ ಒಲವಾಯಿತಂತೆ ನನಗೆ
ಹಾಗೆಯೇ ಗಾಳಿಯ ಕಡೆ ತೇಲಿಬಿಟ್ಟ
ಮುಂಗುರುಳಿನ ನಲಿದಾಟಕ್ಕೆ ನಾ ಸೋತದ್ದು
ಅನ್ನೋವಾಗ ಇನ್ನೂ ಗೊಜಲು

ಸವೆಯುವುದಕ್ಕಿರುವ ಇದೇ ಜನ್ಮದಲ್ಲಿ
ಸಂಗ ಬರುವವಳಾದರೆ ಸ್ವಾಗತವಿತ್ತು
ಮುಂದಿನ ಜನ್ಮಕ್ಕೆ ಕಾಯುವಷ್ಟು
ದೃಢ ಮನಸ್ಸು ನನ್ನಲ್ಲಿ ಇಲ್ಲ ಹುಡುಗೀ.!!


#ಅವಿಜ್ಞಾನಿ

- ಅವಿಜ್ಞಾನಿ

08 May 2017, 08:33 pm

ನಿಲುಗಡೆ ಇಲ್ಲದ ನಡುಗೆ

ಬೆಳ್ಳಿ ರಥದಲಿ ಬರುವ ಭಾನು
ಬಾನ ಬೆಳಗುವ ಮುನ್ನ
ಬಾಗಿಲ ತೊಳೆಯುವೆ ನೀನು

ಗಡಿ- ಬಿಡಿಯಲಿ ಗಂಟೆ ನೋಡಿ
ರಜ- ಬಳಿದು ಶುಚಿ ಮಾಡಿ
ಹಣಿಗೊಳಿಸುವೆ ಕಾಫಿ- ತಿಂಡಿ

ಎಲ್ಲರ ಆಗು-ಹೊಗುಗಳನು
‌ನೀ ನೋಡಲು ,ಅಳೆಯುವೆ
ಮನೆಯ ಒಳ- ಹೊರಾಂಗಣವನು
ಅಳತೆಯಿಲ್ಲದ ನಡಿಗೆಯಲಿ

ಜ್ಞಾನಕ್ಕೆ ಒಡತಿ ಶಾರದೆ
ಸಂಪತ್ತಿಗೆ ಒಡತಿ ಲಕ್ಷ್ಮಿ
ಮನೆಯ ಸುಖ- ಶಾಂತಿಗೆ
ಒಡತಿ ಸೌಮ್ಯ ವತಿ ತಾಯಿ
ನಿನಗೆ ನನ್ನ ಕೋಟಿ ವಂದನೆ


ಶಾರಧ






- ಶಕುಂತಲಾ

08 May 2017, 07:11 pm

ಪ್ರೇಮಪತ್ರ...

ಸಂಗಾತಿಯ ನೋಡಲು ಕನಸಿನ ಲೋಕಕ್ಕೆ ನಾ ಹೋಗುವೆ..
ಕನಸ್ಸಿನ ಲೋಕದಲ್ಲಿ ಹುಡುಕುವೆ ಅವಳ ಪ್ರತಿ ಗಲ್ಲಿಗಳಲ್ಲಿ...
ಸಿಕ್ಕಾಗ ಹಾಡುವೆ ನಾ , ನೀನೆ ನನ್ನವಳೆಂದು....
ಹಿಂಬಾಲಿಸು ಪ್ರಿಯೆ ನನ್ನ ಪ್ರತಿ ಹೆಜ್ಜೆಗಳನ್ನ...
ಪ್ರಮಾಣ ಮಾಡಿ ಹೇಳುವೆನು....
ಬರಿ ಸುಖವನ್ನೆ ತೋರುವೆ ನನ್ನ ಹೆಜ್ಜೆಗಳಲ್ಲಿ...
ಕೊಡುವೆಯ ಹುಡುಗಿ ನಿನ್ನ ಕಿರುಬೆರಳನ್ನ...
ಹಿಡಿಯುವೆನು ನನ್ನ ಕಿರುಬೆರಳಿನೊಂದಿಗೆ...
ಪ್ರಮಾಣಿಸುವೆನು ಬರಿ ಏಳು ಸುತ್ತಲ್ಲಾ...
ಏಳೇಳು ಜನುಮದಲ್ಲಿಯು ಸುತ್ತುವೆ ನಿನ್ನೊಂದಿಗೆ...
ತಲೆಯ ಬಾಗಿಸುವೆಯ ಒಮ್ಮೆ ನನಗಾಗಿ..
ಕಟ್ಟುವೆನು ಮಂಗಳ ಸೊತ್ರವ
ಬೆಸೆಯುವುದು ನಮ್ಮಿಬ್ಬರ ಸಂಬಂಧ ಶಾಶ್ವತವಾಗಿ...
ಮುಂದಿಡುವಿಯ ಗೆಳತಿ ನಿನ್ನ ಕಾಲ್ಬೆರಳುಗಳ...
ತೊಡಿಸುವೆನು ನಾ ಬೆಳ್ಳಿ ಕಾಲುಂಗುರವ...
ಇರಲಿ ನಿನ್ನ ಪ್ರತಿ ಹೆಜ್ಜೆಯಲ್ಲಿ ನನ್ನ ಗುರುತು...
ಕೊಡುವಿಯ ಪ್ರಿಯ ಸಖಿ ನಿನ್ನ ಕೈಯ...
ತೊಡಿಸುವೆನು ಹಸಿರು ಬಳೆಯ....
ನಮ್ಮ ಪ್ರೀತಿ ಸಂಕೇತವಾಗಿ ಇರಲಿ...
ಸದಾ ನಿನ್ನ ಕೈಗಳಲ್ಲಿ...
ಕೊನೆಉಸಿರೆಳೆಯುವ ಆಸೆಯಾಗಿದೆ ಇಂದು ನಿನ್ನ ಮಡಿಲಲ್ಲಿ..
ಹೊರಡುವೆನು ಕನಸ್ಸಿನ ಲೋಕಕ್ಕೆ ಮತ್ತೋಮ್ಮೆ...
ಹಿಂತಿರುಗಿ ಬರುವೆ ನಿನ್ನ ಮಡಿಲ ಸೇರಲು...
ಹಿಂದಿಗೊ , ಇಂದಿಗೊ , ಎಂದೆಂದಿಗೊ ನೀ ನನ್ನವಳೆ..

- Harsha GR

08 May 2017, 05:58 pm

ಆಧುನಿಕತೆಯಲಿ ಅವನತಿಯ ಗುಂಡಿ

ಚಿಂದಿ ತೊಟ್ಟು ಬಾಳಿದರು
ಅಂದು ಬಡತನದಲಿ
ಚಿಂದಿನೇ ಫ್ಯಾಷನ್ ಎನ್ನುವರು
ಇಂದು ಶ್ರೀಮಂತಿಕೆಯಲಿ

ಅಗುಳು ಅನ್ನವನ್ನು ಆಸ್ವಾದಿಸಿ
ಉಣ್ಣುತಿದ್ದರು ಅಂಗಲಾಚಿ
ಹಸಿವಿನಿಂದ ಬಳಲುವರನ್ನು ಅಲಕ್ಷಿಸಿ
ಮೆರೆವರು ಮೃಷ್ಠಾನ್ನವ ಮಣ್ಣಾಗಿಸಿ

ಕಾಲ ಹರಣ ಮಾಡಲು
ಮಾರ್ಗವು ಹಲವು ನೋಡಿ
ದೋಚುತಿಹರು ಬಹುಮಂದಿ
ಮೋಜಿನ ಮೋಡಿ ಮಾಡಿ

ವಿದ್ಯುತ್ ದೀಪಾಲಂಕಾರದಲಿ
ಕಾಣಬಯಸುವೆವು ನೆಮ್ಮದಿ
ಸತ್ಯಾ-ಅಸತ್ಯತೆಗಳ ಅರಿವಿಲ್ಲದೆ
ಸಾಗುವುದು ಈ ನಮ್ಮ ಜೀವನ-ನದಿ

ಮಹಿಳೆಗೆ ಮೌಲ್ಯಗಳ ಅರಿವಿಲ್ಲ
ಮಾನ ಉಳಿಸೆಂದು ಕೇಳುವರಲ್ಲ
ವಿದೇಶಿಯರ ಮೋಡಿಗೆ ಮನಚೆಲ್ಲಿ
ಕೊರಗುತಿರುವರು ಕಣ್ಣೀರಚೆಲ್ಲಿ

ಸ್ವಾಭಿಮಾನ ನಮಗೆ ಬಹುಮಾನ
ಆಗದಿರಲಿ ಎಂದೆಂದೂ ಅವಸಾನ
ನಾಡ ಸ್ತ್ರೀಯರ ಸಂರಕ್ಷಣೆ
ಭಾರತಮಾತೆಗೆ ಭೂಷಣ

ಇರಬೇಕು ಮಹಿಳೆಗೆ ಉತ್ತಮ
ನಡೆ- ನುಡಿ ಅದೆ ಅಂತಿಮ
ಕೆಲವು ಸ್ತ್ರೀಯರ ಫ್ಯಾಷನ್
ಇಂದಿನ ಅನಾಹುತಕ್ಕೆ ಆಹ್ವಾನ
ಇನ್ನೆಲ್ಲಿದೆ ನಮಗೆ ಸಮಾಧಾನ

ಶಾರಧ

- ಶಕುಂತಲಾ

08 May 2017, 03:33 pm

ಹಾಗೆ ಸುಮ್ಮನೆ ,ನೆನಪುಗಳು ಕಾಡುತಿದೆ ಮೆಲ್ಲನೆ...

ಅವಳ ಸವಿ ನೆನಪಲಿ
ಬರೆದ ಕವಿತೆಗಳು ಅದೆಷ್ಟೋ.....
ಇಂದಿಗೂ ನನ್ನೆದೆಯಲಿ ಉಳಿದಿರುವುದು ...
ಅವಳ ನೆನಪುಗಳು ಒಂದಿಷ್ಟು.....

ಅವಳ ಸವಿ ನೆನಪಲಿ
ಕಳೆಯುತ್ತಿರುವೆ ದಿನ ನಾ ಇಂದು...
ಅವಳು ದೂರಾದರೇನು
ನೆನಪುಗಳು ಸದಾ ಇರಲಿ ನನ್ನೆದೆಯಲಿ
ಇಂದು-ಎಂದೆಂದೂ....
Krishna billadi melbailu..

- krishna Billadi melbailu

08 May 2017, 02:22 pm

ನಗು?

ಪ್ರೀತಿಯ ಎಲ್ಲ ಅದ್ಭುತಗಳನ್ನು
ಒಂದೇ ಕವಿತೆಯಲ್ಲಿ ಸೆರೆ ಹಿಡಿಯೋಣವೆಂದು
ಬರೆಯುತ್ತಾ ಕುಳಿತೆ
ಈ ಇಬ್ಬರು ತಂದ ತಲೆನೋವಿನಿಂದ
ಮೌನದ ಕಗ್ಗತ್ತಲ ಕಾಡಿನಲ್ಲಿ ಬಾವಪೂರ್ಣ
ಅರ್ಥಪೂರ್ಣ ಶಬ್ದಗಳನ್ನ ಹುಡಕದಾದೆ.
ಅಕ್ಷರ ಕಾಣದ ಖಾಲಿ ಹಾಳೆಗಳು ಮೆಲ್ಲನೆ
ತೂರಿ ಬಂದ ಗಾಳಿಗೆ ಹಾರಾಡುತ್ತಾ ಹಾಡಾಗುತ್ತ
ಗುನುಗುಡುತ್ತಾ ಕಿವಿಯಲ್ಲಿ ಮಾತಾದವು
ಮನದ ಸಂವೇದನೆಗಳಿಗೆ ,
ನೆಮ್ಮದಿ ತಂದಿತ್ತು ಶೂನ್ಯ.
ಹೊರಗಡೆ ಹೋಗಿ ತಂಗಾಳಿಗೆ
ಮೈ ಒಡ್ಡಿ ಮೆತ್ತನೆ ಹುಲ್ಲು ಹಾಸಿಗೆ ಒರಗಿ
ಮೇಲೆ ದಿಟ್ಟಿಸಿದೆ
ಕೋಟಿ ಕೋಟಿ ನಕ್ಷತ್ರಗಳು
ಉಲ್ಲಾಸದಿಂದ ನಸು ನಕ್ಕಂತಾಯಿತು .

- ಶಶಿಧರ ಹೆಚ್ ಎನ್

08 May 2017, 11:44 am

ಮಿತ್ರ

ಜೀವನದ ಅತ್ಯಮೂಲ್ಯ ಕೊಡುಗೆ ಜೊತೆಗಿರುವ ಮಿತ್ರ
ಬರುವನು ಕನ್ನಿರಿಡಲು ನಾವು ಸತ್ರ!!
ಅವನದು ಕಪಟವಿಲ್ಲದ ಮನಸು, ನಿಮಗೆಲ್ಲ ಗೊತ್ರ?
ಅವನೆ ಕನ್ರಿ ಬಂಗಾರ ಇರೊದು ಎಲ್ಲರ ಹತ್ರ!
...ಶಂಕರ್ ಸಿ ಕೆ ಎಮ್

- Shankaralingaswamy ckm

08 May 2017, 08:39 am

ಮನಸ್ಸುಗಳ ಅಂತರಂಗದ ಚಳವಳಿ

ಪರಿಸರ ನಾಶಮಾಡುವುದು,
ಮಳೆ ಬರುವುದಿಲ್ಲ ಎ೦ದು ಬೊಬ್ಬೆ ಹೊಡೆಯುವುದು.
ಕಾಡಿನಲ್ಲಿ ಊರು ನಿರ್ಮಿಸುವುದು,
ಕಾಡು ಪ್ರಾಣಿಗಳ ಹಾವಳಿ ಎ೦ದು ಕೂಗುವುದು.
ಕೆರೆ ಜಾಗದಲ್ಲಿ ಮನೆ ಕಟ್ಟುವುದು,
ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎ೦ದು ದೂರುವುದು.
ಕೆರೆಗಳನ್ನು ನು೦ಗಿ ಬಿಡುವುದು,
ಕುಡಿಯಲು ನೀರಿಲ್ಲ, ಅ೦ತರ್ಜಲ ಬತ್ತಿದೆ ಎ೦ದು ಬಾಯಿ ಬಡಿದುಕೊಳ್ಳುವುದು.
ವಾಯು ಮಾಲಿನ್ಯ ಮಾಡುವುದು,
ಶುದ್ದ ಗಾಳಿ ಇಲ್ಲ ಎ೦ದು ಕೊರಗುವುದು.
ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು,
ಆರೋಗ್ಯ ಸರಿಯಿಲ್ಲ ಎನ್ನುವುದು.
ಆಹಾರ ಕಲಬೆರಕೆ ಮಾಡುವುದು,
ರೋಗಗಳಿಗೆ ಆಹ್ವಾನ ನೀಡುವುದು.
ದಿಡೀರ್ ಶ್ರೀಮ೦ತಿಕೆಗೆ ದುರಾಸೆ ಪಡುವುದು,
ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.
ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು,
Traffic jam ಎ೦ದು ಹಲುಬುವುದು.
ಸ೦ಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು,
ಕೋಪದಲ್ಲಿ ಡ್ಯೆವೋರ್ಸ್ ಮಾಡಿಕೊಳ್ಳುವುದು.
ಹಣ ಪಡೆದು, ಜಾತಿ ನೋಡಿ ಓಟಾಕುವುದು,
ಸರ್ಕಾರ ಸರಿಯಿಲ್ಲ ಎ೦ದು ಕೊರಗುವುದು.
ಈಗಲಾದರೂ ಎಚ್ಚೆತ್ತುಕೊಳ್ಳೋಣ,
ಪರಿಸ್ಥಿತಿ ಕ್ಯೆ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ.
ಇದೆಲ್ಲಾ ಖ೦ಡಿತ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ.
ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ನಮ್ಮನ್ನಾಳುವ ಸರ್ಕಾರಗಳಿಗೆ ಮಾತ್ರ.
ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ
ಪರಿವರ್ತನೆ ಮಾಡಿಕೊಳ್ಳೋಣ ಮನಸ್ಸುಗಳ ಅಂತರಂಗದ ಚಳವಳಿ...-sukhesh Gowda

- Sukhesh

08 May 2017, 06:30 am

ಪ್ರೀತಿ

ಪ್ರೀತಿಯಾಗಲು ಪರಿಚಯವೆ ಬೇಕೆ
ಸಾಲೊಲ್ಲವೆ,
ಪರಿ ಪರಿ ವಿಧದಿ ಕೆಣಕುವ ನೋಟ
ಸಾಲೊಲ್ಲವೆ,
ತುಟಿ ಅಂಚಿನ ಕಿರುನಗೆ ಎಂಬ ಬಾಣ.

ಒಮ್ಮೊಮ್ಮೆ ಅನಿಸಿವುದು
ಇರಬೇಕು ಹೀಗೆಯೆ
ಅದ್ಬುತ ಭಾವನೆ
ಕೊನೆಯ ವರೆಗೆ.

ಹೇಳಿತು ಕೊರಗುತ
ಎಲ್ಲಿ ತ್ಯಜಿಸುವಳೊ
ಇಲ್ಲ ಮರೆತೆಬಿಡುವಳೊ
ಎಂದು ಬೆದರಿದ ಮನಸು.

ಪಡೆಯಲೇಬೇಕು
ನನ್ನವಳು ಅವಳು
ನನಗಾಗಿ ಕಾದಿಹಳು
ಎಂದ ಚಲಗಾರ ಕನಸು.

ಕನ್ನಡಿಯಲ್ಲಿ ಒಮ್ಮೆ ಮೊಗವನ್ನು ನೋಡಿ
ಚೇ ಎಂದು ತಾನೇ ದೂರಿ
ಅವಳೆಲ್ಲಿ ಸಿಗುವಳು ನನಗೆ
ಇದೆ ಅಲ್ಲವೆ ನನಸು.

ಕನಸು ನನಸುಗಳ ನಡುವೆ
ಸಾಗುತಿಹುದು ಈ ಮನ
ಸಿಕ್ಕರೆ ಸ್ವರ್ಗ
ಇಲ್ಲವೆ ಹಳೆಮಾರ್ಗ
ಇದೆ ನನ್ನ ಜೀವನ.
-ವಿಜಯತೇಜಸ್ (Abhilash).. ☺☺

- Vijayatejas

07 May 2017, 11:28 pm