ರೆಕ್ಕೆ ಬಿಚ್ಚಿ ಹಾರುವ
ಕನಸು ಕಂಡಿದ್ದಳು
ತಾಳಿಯ ಕಟ್ಟಿ ತಾಳಲಿಕ್ಕೆ ಹೇಳಿದರು
ಮೃದು ಕೈಗಳಲ್ಲಿ ಪುಸ್ತಕ ಹಿಡಿಯಬೇಕೆಂದಿದ್ದಳು
ಕೈಗೆ ಮುದ್ದಾದ ಮಗು ಒಂದನ್ನು ಕೊಟ್ಟರು
ತನಗಾದ ಅನ್ಯಾಯಕ್ಕೆ ಕೂಗು ಹಾಕಬೇಕೆಂದಿದ್ದಳು
ಕೂಸು ಆಳುತ್ತಿದೇ ಸುಮ್ಮನಿರಿಸೆಂದರು....
ಅಂತರಾಳದಲಿ ದಿನನಿತ್ಯ ಚಳುವಳಿ..
ಕೊಡಬಾರದೆ ನಿನ್ನ ಪ್ರೀತಿಯ ಬಳುವಳಿ.
ನೀ ದೂರಾದರೆ ಈ ಜೀವಕೆ ಚೆಲುವಲ್ಲಿ..
ಕೊನೆಗೊಮ್ಮೆ ಬಂದು ನೆಲೆಸು ಈ ಹೃದಯ ಸ್ವರ್ಗದಲ್ಲಿ.
--ಇಂಗ್ಗ್ಕವಿ (Engg ಕವಿ)
ಪ್ರೀತಿಯ ಕಾತುರತೆಯಲಿ ಆಗಬಲ್ಲ
ಇಂಜಿನಿಯರ್ ಕೂಡ ಕವಿ
ಯಾರು ಮೆಚ್ಚಿದರು,
ಯಾರೂ ಮೆಚ್ಚದಿದ್ದರೂ
ನನ್ನಾಕೆ ಓದಿದರೆ
ಓದಿ ಮಾರುತ್ತರಿಸಿದರೆ
ತೇಲಾಡುವುದು ಈ ಸಣ್ಣ ಹೃದಯದ ಜೀವಿ..!!!
-- ಇಂಗ್ಗ್ಕವಿ (Engg ಕವಿ)
ಕಾಡುತ್ತಿರುವ ಈ ನಿನ್ನ ಮೌನ,
ಕಣ್ಣಕಟ್ಟಿ ಬಿಟ್ಟ ಭಯಾನಕ ಕಾನನ..|೨|
ನಾನರಿಯೆನು ಯಾವ ದಾರಿಯನ್ನ.
ಆದರೂ ಸೇರುವೆ ನಿನ್ನನ್ನ
ಅಯ್ಯ್ಯ ದೇವನೇ ಹೇಗಾದರೂ ಮಾಡಿಸಬಾರದೇ ಸಂಧಾನ..!
--ಇಂಗ್ಗ್ಕವಿ (Engg ಕವಿ)
ನಿನಗಾಗಿ ಬರೆಯುವೆ ನಾನಿಂದು ಕವನ
ಎಷ್ಟು ಬರೆದರೂ ಮುಗಿಯದ ಕವನ
ಸುಮಧುರ ಸವಿ ಕ್ಷಣಗಳ
ನನ್ನೆದೆಯ ಗೂಡಲ್ಲಿ ಬಚ್ಚಿಟ್ಟ ಭಾವನೆಗಳನು
ಏನೆಂದು ಹೇಳಲೀ ನಾ ?
ಏನೆಂದು ಬರೆಯಲಿ ಹೇಳು
ನೆನಪಾದೆ ಇಂದು ನೀನು ...
ಹಾಗೆ ಸುಮ್ಮನೆ....
ಪ್ರತಿದಿನ ಪ್ರತಿ ಕ್ಷಣ
ನೆನೆನೆನೆದು ನಿನ್ನನೆ ನಿನ್ನೆ ನಾಳೆಗಳ ನಡುವೆ
ನಿನಗಾಗಿ ನಾನಿಂದು ನುಡಿಯುವೆ
ಹೃದಯಾಳದಿಂದ ನಾಲ್ಕು ನುಡಿಗಳು
ನನ್ನ ಉಸಿರಲ್ಲಿ ಉಸಿರಾಗಿ ಅವಿತಿವೆ
ನಿನ್ನ ನೂರಾರು ನೆನಪುಗಳು...ನನ್ನ ಹೃದಯಲ್ಲಿ...
ಮರವೆಂಬ ಮಾನವನೊಳಗೆ
ಕವಲೊಡೆದ ಭಾವಗಳು ರೆಂಬೆಗಳಂತೆ
ರೆಂಬೆಗಳಲು ಸಾವಿರಾರು ಕನಸುಗಳು ಎಲೆಗಳಂತೆ
ಹುಟ್ಟುವ, ಸಾಯುವ ಭಾವನೆ ಕನಸುಗಳು ಚಿಗುರು ಒಣಗಿದ ಎಲೆಗಳಂತೆ
ಅಲ್ಲಲ್ಲಿ ನಗಿಸಿ ನಗುವ ಖುಷಿಗಳು ಮನವ ಉಲ್ಲಾಸಿಸುವ ಹೂವುಗಳಂತೆ
ಜೊತೆ ಇದ್ದರು ನನಸಾಗದ ಭಾವ ಕನಸು ನೋವು ಸೋಲು ಕಹಿ ನೆನಪುಗಳು ಕಾಯಿಯಂತೆ
ಕಲಿತ ಜೀವನ ಪಾಠ ನನಸಾದ ಕನಸುಗಳು ಸಿಹಿಯಾದ ನೆನಪುಗಳೇ ಹಣ್ಣಿನಂತೆ
ಇವೆಲ್ಲವ ಹೊತ್ತು ನಿಂತ ಮನಸೇ ಕಾಂಡದಂತೆ
ಎಲ್ಲವ ಮೀರಿ ಮನದೊಳಗೆ ಅಡಗಿ ಮಾನವನ ಗಟ್ಟಿಯಾಗಿಸಿ ನಡೆಸುವವೆಲ್ಲವು ಬೇರುಗಳಂತೆ
ಕತ್ತರಿಸಿದರೇನು ರೆಂಬೆಗಳನು
ಉದುರಿದರೇನು ಒಂದರೆಡು ಒಣಗೆಲೆ
ಬಿಸಿಲೆಂಬ ನೋವಿಗೆ ಬೋಳದರೇನು ಇಡಿ ಮರವೆ......
ಕಳೆದು ಕೊಂಡ ರೆಂಬೆಯ ನೆನೆದು ಪ್ರಾಣ ಬಿಡುವುದೇನು
ಒಣಗಿದಲಿ ಚಿಗುರದೆ ಮತ್ತೊಂದು ಎಲೆ
ವಸಂತನಾಗಮನದಲಿ ನಿಲ್ಲದೆ ಮತ್ತೆ ಹಸಿರು ಹೊತ್ತು ನಿಂತು
ಮರೆಯಾದರೇನು ನಗುವ ಸೂಸೊ ಹೂವುಗಳು
ಹಣ್ಣಗದಿದ್ದರೇನು ಕಾಯಿಗಳು
ಹಣ್ಣುಗಳನ್ನೆಲ್ಲ ಪರರ ಖುಷಿಗೆ ಕೋಯ್ದರೇನು.....
ಆ ಮರದಲಿ ಹೂವುಗಳ ಪುನರಾಗಮನವಗದೇನು
ಆ ಕಹಿ ಕಾಯಿಗಳೇನು ಮರದಲಿ ಶಾಶ್ವತವೇನು
ಮತ್ತೆ ಮರದಲಿ ಹಣ್ಣುಗಳು ಬರದೆ ಇರುವುದೇನು
ಕಾಂಡವ ಕತ್ತರಿಸಿದ ಮರವು ಬದುಕಿದ್ದು ಸತ್ತ ಜೀವವು
ಬೇರೆ ಇಲ್ಲದ ಮರಕ್ಕೆ ಎಲ್ಲಿಹುದು ಉಳಿವು
ಮರವಾಗೊ ಮಾನವ....
ಕತ್ತರಿಸದಿದ್ದರೆ ಎಲ್ಲವ ಹೊತ್ತು ನಿಂತ ಕಾಂಡವ
ಬುಡಮೇಲು ಮಾಡದಿದ್ದರೆ ಬದುಕ ದಾರಿಗೆ ಆದರವಾದ ಬೇರನು
ಎಲ್ಲಿಹುದು ಜಾಗ ಬದುಕು ದಾರಿಯಲಿ ನೋಡಲು ಸೋಲಿನ ಸಾವನು........