Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಗ್ದ ಹಕ್ಕಿಯ ಮನದ ನೋವು

ಮರ- ಗಿಡಗಳ
ಕೊಂಬೆ- ರೆಂಬೆಗಳ
ಎಲೆಗಳ ಮರೆಯಲ್ಲಿ
ಅವಿತು ಕುಳಿತು
ಚಿಲಿ....ಪಿಲಿ....ಸದ್ದು
ಮಾಡುವ ಮುದ್ದು
ಹಕ್ಕಿಯು ನಾನು
ನನ್ನ ಪುಟ್ಟ ಮನೆಯ ಕದ್ದು ಮಲಗಿರುವೆ ನೀನು

ಉಸಿರಾಡುವ ಗಾಳಿಯು
ಇಂದು ನನಗೆ ಯಮಪಾಶವು
ನೀ ಬಳಸುವ ತಂತ್ರಜ್ಞಾನವು
ನನಗಾಗಿದೆ ನೇಣು ಕುಣಿಕೆಯು
ನಿನ್ನ ದುರಾಸೆಗೆ ಇರಲಿ ಮಿತಿ
ಅಲಕ್ಷಿಸಿದರೆ,ಮುಂದೆ ನಿನ್ನ ಅವನತಿ

ನನ್ನವರೆ ತುಂಬಿದ್ದರು ಸುತ್ತಲು ಅಂದು
ದರ್ಪದಿ ನೀನೆ ಮೆರೆಯುವೆ ಇಂದು
ನಿನಂತೆಯೆ ನಾನು
ಬದುಕಲು ಬಿಡು ನೀನು
ಸರ್ವಾಧಿಕಾರಿಗಳೆ ಸರ್ವನಾಶವಾದರು
ನೀನೆನ ಕೊಂಡೊಯ್ಯುವೆ ಎಷ್ಟು ಬಾಚಿದರು
ಬಿಡು ದುರಾಸೆಯ!
ಬೆಳೆಸಿಕೊ ಮಾನವೀಯತೆಯ!


ಶಾರಧ

- ಶಕುಂತಲಾ

17 May 2017, 09:41 am

ಮನಸ್ಸಿನ ಮಾತು

ಮನ ಎಂಬ ಮಂದಿರದಲ್ಲಿ
ಬಾವನೇ ಎಂ ದೇಗುಲದಲ್ಲಿ
ಪ್ರೀತಿ ಎಂಬ ಜೋತಿ ಹಚಿದೇ
ನಿನು ಗೆಳತಿ..

- sadashiv

17 May 2017, 08:21 am

ಹನಿ ಹನಿ ಪ್ರೇಮ್ ಕಹಾನಿ..

ಇರುಳ
ಬಳಲಿಕೆಗಳು ನಿನ್ನ
ಕೂಡಿ-ಕಳೆದು
ನಿದ್ರೆಯ ಕಸಿದು
ಕೊಂಡಿವೆ,
ರೋಮಾಂಚನದ
ನಿನ್ನ ಸಖ್ಯದಲಿ
ಅದಲು ಬದಲಾಗುವ
ತಲೆದಿಂಬುಗಳು
ಪ್ರೇಮಕತೆಯ ಹೇಳಿಕೊಂಡಿವೆ...!
*
ಈ ಇರುಳ ಕತ್ತಲಿಗೆ
ನಿನ್ನ ಹೆರಳು ಸುಗಂಧವ ಬೀರಿವೆ,
ಕೊರಳ ಬಳಸಿ ಬಳಸಿ
ಉಸಿರ ಬಿಗಿಹಿಡಿದು
ವಿರಹವ ಬೆವರಾಗಿಸಿದ
ಅಮೃತಘಳಿಗೆಗೆ ಸಾಕ್ಷಿಯಾದ
ತಂಪಾದ ಸೂರ್ಯ, ಇಗೋ ಕೆಂಪಾದ.
ಇಂಪಾದ ಸುಪ್ರಭಾತವ
ಕೇಳಿ ಜಗಕೆ ಬೆಳಗಾಯಿತೇನೋ...!
*
ಹೀಗೆ ಸಣ್ಣನೆಯ ಚಳಿಗೆ
ಬೆಚ್ಚಗಿನ ಬೆಳಕು.
ಹಬೆಯಾಡುವ ಕಾಫೀ ಹೀರುವ
ತುಟಿಗಳಿಗೇಕೋ ನಿನ್ನ
ಕೆಂದುಟಿಗಳ ಮೇಲೆಯೇ ಕಣ್ಣು.
ನೀನು ನೀರೊಲೆಯ ಉರಿಸು
ನಾ ಅಣಿಯಾಗುವೆ
ನಿನ್ನೊಲವ ಮಜ್ಜನಕೆ...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:17 am

ಅವಳಿಗಾಗಿ ಸುರಿದ ಹನಿಗಳು

ಅವಳ ಬರುವಿಕೆಗಾಗಿ
ಕಾಯುವಿಕೆ ಇನ್ನು ವ್ಯರ್ಥ!?
ಅದೆಷ್ಟು ಹಗಲು ರಾತ್ರಿಗಳು
ಸಾಕ್ಷಿಯಾದವೋ ಲೆಕ್ಕವೇ ಇಲ್ಲ.
ಅವಳ ಮನ, ಮನೆಯ ಬಾಗಿಲು
ಬಡಿಯುತ್ತಲೇ ಇದ್ದೆ.
ಬಹುಶಃ ನನ್ನೆದೆಬಡಿತ
ಅವಳಿಗೆ ಕೇಳದಾಯಿತು..!
*
ಈಗವಳು
ಕಾಲಗೆಜ್ಜೆಯ ಬಿಚ್ಚಿಟ್ಟಿದ್ದಾಳೆ,
ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದಾಳೆ.
ನಾನ್ಯಾವತ್ತೋ ಸತ್ತಿರುವೆನೆಂಬ ಸತ್ಯ
ಬಹುಶಃ ಅವಳಿಗೆ ತಿಳಿಯದಾಯಿತು.
*
ನನ್ನ ಆತ್ಮ ಮತ್ತು
ಅಂತರಾತ್ಮದ ದೇವತೆಯಾಗಿದ್ದವಳು,
ಆರಾಧನೆಯನು ವಿರೋಧಿಸಿದಾಕೆ.
ನನ್ನ ಸವಿನೆನಪುಗಳ ಅಂತ್ಯ-
ಕ್ರಿಯೆಗಾಗಿ ಕುಳ್ಳು ಕಟ್ಟಿಗೆಯ ಮೇಲೆ
ನನ್ನ ಕೂರಿಸಿ ಅಂತಿಮ ನಮನ
ಹೇಳುತ್ತಿರುವಾಕೆಯ ಹೊಟ್ಟೆ ತಣ್ಣಗಿರಲಿ.
*
ಮಣ್ಣಲ್ಲಿ ಮಣ್ಣಾಗುವ
ಮಸಣವೆಂಬ ಮನೆಗೆ
ಗೃಹಪ್ರವೇಶದ ಕಾರ್ಯ, ನೀವದನ್ನು
ಅಂತಿಮ ನಮನವೆನ್ನುವಿರಿ.
ಪ್ರೇಮದ ಗೋರಿಯೊಳಗಿನ
ನನ್ನ ನೋವುಗಳಿಗೆ ಲೆಕ್ಕ
ಅವಳೇ ಕೊಡಬೇಕು...!
*
ಕನಸುಗಳೇ
ದಯವಿಟ್ಟು ಕಸಿಯದಿರಿ
ನನ್ನ ನಿದಿರೆಯ, ಅವಳ
ಕಾಲಿಗೆ ಗೆಜ್ಜೆಯ ಕಟ್ಟದಿರಿ.
ಅವಳು ನಡೆದು ಬರುವಾಗೆಲ್ಲ
ಘಲ್ಲೆನುವ ನಾದಕೆ ಸ್ವರ್ಗದ ಬಾಗಿಲೊಂದು
ತಂತಾನೇ ತೆರೆದು
ನನಗೆ ಮರುಹುಟ್ಟು ಕರುಣಿಸದಿರಲಿ.
*
ನಾ ಕೊಟ್ಟ ಹೂವು,ಕುಂಕುಮ,
ಒಂದಿಷ್ಟು ಪ್ರೇಮವ
ಗಾಳಿಗೆ ತೂರಿ ನಿಂತವಳು.
ನನ್ನ ಸಮಾಧಿಯ ಮೇಲಿಟ್ಟ
ಹೂವಿಗೆ ಮುತ್ತಿಟ್ಟು ಹೋದಳು,
ತಿರುಗಿ ನೋಡಿದ್ದರೆ ಗೊತ್ತಾಗುತ್ತಿತ್ತೇನೋ
ಗುಲಾಬಿಯೊಂದು ರಕ್ತಕಾರಿದ
ಕಹಿಸತ್ಯ...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:15 am

ಮಳೆಯಾಗಿ ಬಾ..

ಅಂತರ್ಜಲವೂ
ಬತ್ತಿ ಹೋಯಿತು.
ಭಾವ ಭಿತ್ತಿಯಲಿ
ಉತ್ತಿ ಬಿತ್ತುವುದಕ್ಕೆ
ಅಡ್ಡಿಯಾಗಿದೆ ಬರಗಾಲ...!

ಈಗ ಕಣ್ಣೊಳಗೆ
ನೀರೂ ಇಲ್ಲ, ನೀನೂ ಇಲ್ಲ.
ಮಣ್ಣೊಳಗೆ ತೇವವಿಲ್ಲ
ನನ್ನೊಳಗೆ ಭಾವವಿಲ್ಲ...!

ಎದೆಯಂತೆ
ಭುವಿಯಾಗಿದೆ ಕಾಯ್ದ ತವೆ.
ಕಾಲಿಡದಿರು ಇಲ್ಲಿ,
ನಿನಗೆ ಕಾಲವೇ
ಉತ್ತರಿಸುವುದು ಅಲ್ಲಿ...!

ಬರುವುದಾದರೆ
ಮಳೆಯಾಗಿ ಬಾ ನೀನು,
ಸಾಕಿನ್ನು ವಿರಹ
ರಾಗ ದ್ವೇಷಗಳ ಮರೆತು
ಒಗ್ಗೂಡಲಿ ಭುವಿ ಭಾನು..!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:14 am

ಹನಿಮುತ್ತು

ಗುರಿಯಿಟ್ಟು ಹೊಡೆದಳು
ಹೃದಯಕ್ಕೆ, ಗೋರಿ ಕಟ್ಟಿ
ಮೇಲೊಂದಿಷ್ಟು ಹೂವಿಟ್ಟಳು.
*
ನಿಯಮಾನುಸಾರ ಬದುಕು
ಸಾಗುತ್ತಲೇ ಇತ್ತು, ಗಡಿಯಾರವೇಕೋ
ಟೈಮ್ ಸೆನ್ಸ್ ಕಳೆದುಕೊಂಡಿತ್ತು.
*
ಜೀವನ ರಥಕೆ ಚಕ್ರಗಳ ಜೋಡಿಸಿ
ರೋಧಿಸಿದಳು,ಹಗ್ಗ ಹಿಡಿಯಲು
ನೂರು ಜನ ಸೇರಿ ಜಾತ್ರೆಯೇ ನೆರೆಯಿತು.

© ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:13 am

ಹನಿಮುತ್ತು

ತಾನಿಲ್ಲದೇ
ನಾನೂ ಒಬ್ಬಂಟಿಯೆಂದು
ಆಕೆಗೂ ತಿಳಿದಿತ್ತು,
ಅಯ್ಯೋ
ಊರ ಮುಂದಿನ ಮಸಣದಲಿ
ಹೆಣಗಳಿಗೇನು ಕಮ್ಮಿ?
ಎಲ್ಲರೊಳಗೊಂದಾಗೆಂದು
ಉಪದೇಶವಿತ್ತಳು.
ಹಾಡು ಹಗಲೇ ಬದುಕು ಕತ್ತಲು..!
ಬದುಕಲಿನ್ನೇನಿದೆ?
ತಯಾರಾಗಿ ಸಿದಗಿಯನೆತ್ತಲು...!!

© ಚಂದ್ರಶೇಖರ ಮಾಡಲಗೇರಿ

- ಚಂದ್ರಶೇಖರಮಾಡಲಗೇರಿ

17 May 2017, 08:12 am

ಬೆಂಕಿ ಮಡಿಲ ಸತ್ಯ

ಯಾರು, ಯಾರು ಹೇಳಿದರು ನಿನಗೆ
ಈ ಪ್ರೀತಿ ಕತೆಯ? ನಿನ್ನ ಹುಟ್ಟಿನ ಮೂಲ
ಬಚ್ವಿಟ್ಟಷ್ಟೂ ಬೆಟ್ಟದಷ್ಟು ಬೆಳೆಯುತ್ತಿದೆ,
ಸಮಾಜ ಬೊಬ್ಬಿರಿದು ಹೇಳುತ್ತಿದೆ
ಯಾವ ಸೂಳೆಯ ಮಗನೋ ನೀನು..?!

ಎರಡೂ ಕೈ ಸೇರಿ ಚಪ್ಪಾಳೆ, ತಪ್ಪುಗಳ
ತಿದ್ದಿಕೊಂಡು ನಡೆವ ದಾರಿಗುಂಟ
ಅನುಮಾನಗಳ ಮೈಲಿಗಲ್ಲು.
ಬಿಟ್ಟು ಹೋದನೋ? ಬಿಟ್ಟು ಬಂದಳೋ?
ಅಗಲಿದ್ದಷ್ಟೇ ಸತ್ಯ. ಆಮೇಲೆ ಹುಟ್ಟಿದ್ದು
ನೀನು. ಯಾವ ಸೂಳೆಯ ಮಗನೋ?

ಯಾರು
ಹೇಳಿದರು ನಿನಗೆ ಈ ಪ್ರೀತಿ ಕತೆಯ?
ಸುಳ್ಳುಗಳು ಜೋಡಿಸಿಟ್ಟ ಕಡ್ಡಿಪೆಟ್ಟಿಗೆ...
ಸಣ್ಣ ಬೆಂಕಿಯೇ ನಿಜ, ತನ್ನ
ಮನೆಯ ಸುಟ್ಟೀತೆಂದು
ಮಡಿಲೊಳಗೆ ಕಟ್ಟಿಕೊಂಡು ಅವಳು
ತಾಯಿಯಾದಳು, ನೀನೆಂಥ ಮಗನಾದೆ?

ಎರಡು ದೇಹಗಳು ಮನಸಾರೆ ಬೆರೆತಾಗ
ಬೆವರುಂಡು ಬೆಳೆದ ಮುದ್ದಿನ ಮಗ ನೀನು,
ಬದುಕು ಬದಲಾದಂತೆಲ್ಲ ನಿನ್ನಪ್ಪನಿಗೂ
ಮೊಸದ ಕೊಡಲಿ ತಲೆಯನೇ ಕತ್ತರಿಸಿತು,
ವಿಷವಾದ ಎದೆಹಾಲನೇ ನೀ ದಕ್ಕಿಸಿಕೊಂಡೆ.
ಸತ್ಯ ಸಮಾಧಿಯಾಯ್ತು. ಅರಿಯದೇ
ಬದುಕಿ ನೀನು ಸೂಳೆಯ ಮಗನಾದೆ.

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:11 am

ಬೇಲಿಯ ಕಟ್ಟದಿರು ಬಯಲಿಗೆ.

ತಣ್ಣಗಿನ
ನನ್ನೆದೆಯೊಳಗಿನಿಂದ
ಅದ್ಯಾವ ಸ್ಫೂರ್ಥಿ ಸಿಕ್ಕಿದೆ ನಿನಗೆ?

ಭಾವಗಳ ದಕ್ಕಿಸಿಕೊಂಡು
ಕವಿತೆಯಾಗಿಸುವ ಭರದಲ್ಲಿ
ನನ್ನೊಳಗಿನ ನನ್ನನ್ನೂ ಬಿಡದೇ
ತೆಕ್ಕೆಗೆಳೆದುಕೊಂಡು, ಬದುಕಿನ
ತಿಕ್ಕಾಟಕೆ ಅಣಿಯಾದೆಯಲ್ಲಾ?
ಮತ್ತಾವ ಕವಿತೆಯ ಹುಟ್ಟಿಗೆ
ಕಾರಣವಾಗಿಸುವಿ ನೀ ನನ್ನ...!?

ಇದೇನು ನಿನಗೂ ಹೊಸ ಹಾಡೇನಲ್ಲ,
ನಿತ್ಯದ ಪಾಡು. ಸತ್ಯವ ಮರೆಮಾಚಿ
ಶಕ್ತಪ್ರದರ್ಶನ ಸಲ್ಲದು. ಸಾದ್ಯವಾದರೆ
ಹೊಸ ಕನಸುಗಳ ಬೀಜ ಬಿತ್ತು
ಹೂ,ಕಾಯಿ,ಹಣ್ಣು...
ಬದುಕಿಗೊಂದಿಷ್ಟು ನೆರಳೂ ಸಿಕ್ಕೀತು.
ಬೇಲಿಯ ಕಟ್ಟದಿರು ಬಯಲಿಗೆ.

ನಾನು ಸರ್ವಾಂತರ್ಯಾಮಿ,
ಪ್ರೇಮ ಕಾಮ ವಿರಹ ನೋವು ನಲಿವು
ತವಕ ತಲ್ಲಣಗಳೆನ್ನ ಅಸ್ತಿತ್ವ.
ಹೊಸ ತತ್ವಗಳನು ನಿನ್ನ ಕವಿತೆ
ಹುಟ್ಟು ಹಾಕುವುದಾದರೆ
ಮೊದಲು ನನ್ನ ಗುಡಿಸಲರಮನೆಯ
ಹಿತ್ತಿಲಿನಲ್ಲಿ ಅರಳಿದ ಹೂವಿನ
ಮಾಧುರ್ಯವನು ನೀ ಸವಿದು ನೋಡು.
ಹುಟ್ಟೀತು ಹೊಸ ಹಾಡು...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:09 am

ಹನಿ..

ತನ್ನ ಕಿರಣಕುಂಚದಿ
ಬೆಳ್ಚುಕ್ಕಿಗಳನು
ಮರೆಮಾಡುತಾ
ದಿನವ ಮುನ್ನಡೆಸಲು
ದಿನಕರ
ಅಡಿಯಿಟ್ಟ ಬೆಳಗು...

- Indushekar Chinivar

17 May 2017, 06:32 am