Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಂಕಿ ಮಡಿಲ ಸತ್ಯ

ಯಾರು, ಯಾರು ಹೇಳಿದರು ನಿನಗೆ
ಈ ಪ್ರೀತಿ ಕತೆಯ? ನಿನ್ನ ಹುಟ್ಟಿನ ಮೂಲ
ಬಚ್ವಿಟ್ಟಷ್ಟೂ ಬೆಟ್ಟದಷ್ಟು ಬೆಳೆಯುತ್ತಿದೆ,
ಸಮಾಜ ಬೊಬ್ಬಿರಿದು ಹೇಳುತ್ತಿದೆ
ಯಾವ ಸೂಳೆಯ ಮಗನೋ ನೀನು..?!

ಎರಡೂ ಕೈ ಸೇರಿ ಚಪ್ಪಾಳೆ, ತಪ್ಪುಗಳ
ತಿದ್ದಿಕೊಂಡು ನಡೆವ ದಾರಿಗುಂಟ
ಅನುಮಾನಗಳ ಮೈಲಿಗಲ್ಲು.
ಬಿಟ್ಟು ಹೋದನೋ? ಬಿಟ್ಟು ಬಂದಳೋ?
ಅಗಲಿದ್ದಷ್ಟೇ ಸತ್ಯ. ಆಮೇಲೆ ಹುಟ್ಟಿದ್ದು
ನೀನು. ಯಾವ ಸೂಳೆಯ ಮಗನೋ?

ಯಾರು
ಹೇಳಿದರು ನಿನಗೆ ಈ ಪ್ರೀತಿ ಕತೆಯ?
ಸುಳ್ಳುಗಳು ಜೋಡಿಸಿಟ್ಟ ಕಡ್ಡಿಪೆಟ್ಟಿಗೆ...
ಸಣ್ಣ ಬೆಂಕಿಯೇ ನಿಜ, ತನ್ನ
ಮನೆಯ ಸುಟ್ಟೀತೆಂದು
ಮಡಿಲೊಳಗೆ ಕಟ್ಟಿಕೊಂಡು ಅವಳು
ತಾಯಿಯಾದಳು, ನೀನೆಂಥ ಮಗನಾದೆ?

ಎರಡು ದೇಹಗಳು ಮನಸಾರೆ ಬೆರೆತಾಗ
ಬೆವರುಂಡು ಬೆಳೆದ ಮುದ್ದಿನ ಮಗ ನೀನು,
ಬದುಕು ಬದಲಾದಂತೆಲ್ಲ ನಿನ್ನಪ್ಪನಿಗೂ
ಮೊಸದ ಕೊಡಲಿ ತಲೆಯನೇ ಕತ್ತರಿಸಿತು,
ವಿಷವಾದ ಎದೆಹಾಲನೇ ನೀ ದಕ್ಕಿಸಿಕೊಂಡೆ.
ಸತ್ಯ ಸಮಾಧಿಯಾಯ್ತು. ಅರಿಯದೇ
ಬದುಕಿ ನೀನು ಸೂಳೆಯ ಮಗನಾದೆ.

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:11 am

ಬೇಲಿಯ ಕಟ್ಟದಿರು ಬಯಲಿಗೆ.

ತಣ್ಣಗಿನ
ನನ್ನೆದೆಯೊಳಗಿನಿಂದ
ಅದ್ಯಾವ ಸ್ಫೂರ್ಥಿ ಸಿಕ್ಕಿದೆ ನಿನಗೆ?

ಭಾವಗಳ ದಕ್ಕಿಸಿಕೊಂಡು
ಕವಿತೆಯಾಗಿಸುವ ಭರದಲ್ಲಿ
ನನ್ನೊಳಗಿನ ನನ್ನನ್ನೂ ಬಿಡದೇ
ತೆಕ್ಕೆಗೆಳೆದುಕೊಂಡು, ಬದುಕಿನ
ತಿಕ್ಕಾಟಕೆ ಅಣಿಯಾದೆಯಲ್ಲಾ?
ಮತ್ತಾವ ಕವಿತೆಯ ಹುಟ್ಟಿಗೆ
ಕಾರಣವಾಗಿಸುವಿ ನೀ ನನ್ನ...!?

ಇದೇನು ನಿನಗೂ ಹೊಸ ಹಾಡೇನಲ್ಲ,
ನಿತ್ಯದ ಪಾಡು. ಸತ್ಯವ ಮರೆಮಾಚಿ
ಶಕ್ತಪ್ರದರ್ಶನ ಸಲ್ಲದು. ಸಾದ್ಯವಾದರೆ
ಹೊಸ ಕನಸುಗಳ ಬೀಜ ಬಿತ್ತು
ಹೂ,ಕಾಯಿ,ಹಣ್ಣು...
ಬದುಕಿಗೊಂದಿಷ್ಟು ನೆರಳೂ ಸಿಕ್ಕೀತು.
ಬೇಲಿಯ ಕಟ್ಟದಿರು ಬಯಲಿಗೆ.

ನಾನು ಸರ್ವಾಂತರ್ಯಾಮಿ,
ಪ್ರೇಮ ಕಾಮ ವಿರಹ ನೋವು ನಲಿವು
ತವಕ ತಲ್ಲಣಗಳೆನ್ನ ಅಸ್ತಿತ್ವ.
ಹೊಸ ತತ್ವಗಳನು ನಿನ್ನ ಕವಿತೆ
ಹುಟ್ಟು ಹಾಕುವುದಾದರೆ
ಮೊದಲು ನನ್ನ ಗುಡಿಸಲರಮನೆಯ
ಹಿತ್ತಿಲಿನಲ್ಲಿ ಅರಳಿದ ಹೂವಿನ
ಮಾಧುರ್ಯವನು ನೀ ಸವಿದು ನೋಡು.
ಹುಟ್ಟೀತು ಹೊಸ ಹಾಡು...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:09 am

ಹನಿ..

ತನ್ನ ಕಿರಣಕುಂಚದಿ
ಬೆಳ್ಚುಕ್ಕಿಗಳನು
ಮರೆಮಾಡುತಾ
ದಿನವ ಮುನ್ನಡೆಸಲು
ದಿನಕರ
ಅಡಿಯಿಟ್ಟ ಬೆಳಗು...

- Indushekar Chinivar

17 May 2017, 06:32 am

ಹನಿಮುತ್ತು

ರಾತ್ರಿ ಕನಸಿಗಾದರೂ ಬಂದಾಳೆಂದು
ನಿದ್ರೆ ಬಾರದೇ ಕಾಯುತಲೇ ಇದ್ದೆ.
ಹಗಲುಗನಸಾದಾಳು..!
*
ಬೆಳಕಿರಲಿ ಅಂತ ದೀಪವ ಹಚ್ಚಿಟ್ಟೆ,
ಚಂದಿರನ ಪ್ರೇಯಸಿಗೆ ಮೈಯಲ್ಲಾ ಉರಿ
ತಾರೆಗಳು ಕುಹಕದಿಂದ ನಕ್ಕವು...!
*
ಮನೆ ಮುಂದಿನ ರಂಗೋಲಿಯಲಿ
ಸೂರ್ಯ ಮೊದಲ ಹೆಜ್ಜೆಯನಿಟ್ಟ,
ತುಳಸಿಕಟ್ಟೆಯ ಸುತ್ತುವ ಹುಡುಗಿಗೆ ಕಣ್ಣೆಲ್ಲಾ ಮಂಜು...!
*
ಮಾಳಿಗೆಯ ಮೇಲೆ ಮಲ್ಲಿಗೆಯಂತವಳ
ಮನದೊಳಗೆ ಎಳೆಬಿಸಿಲ ಧ್ಯಾನ,
ಮೈಯ ಮೇಲೆಲ್ಲಾ ತಣ್ಣನೆಯ ಬೆವರ ಹನಿ...!
*
ಕಾಫೀ ಹೀರುವ ತುಟಿಗಳ ಸೋಕಿದ
ಗಾಜಿನ ಕಪ್ಪು ಹತ್ತು ಹನ್ನೊಂದು ಚೂರು,
ನಾನೇ ಬಚಾವ್, ತೊಗಲೆಲುಬಿನ ಮಾನವ...!
*
ಹಗಲು ಹೊತ್ತಿನಲೂ ಬಿಡದೇ ಕಾಡಿದ್ದು
ಅದೇ ಕಾಡಿಗೆ ಕಣ್ಣು, ಬಾಡಿಗೆ ಚಾಳೀಸು
ಕಂಡಿದ್ದೆಲ್ಲಾ ತಂಪು ತಂಪು ಕೂಲ್ ಕೂಲ್...!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

16 May 2017, 11:33 pm

ಹನಿ..

ತನ್ನ ತಂಪು ಕೈಯಲಿ
ಗಾಳಿ ಬೀಸುತ
ಶಶಿ
ಹಗಲ ತಾಪಕೆ ಬೆಂದ
ಭುವಿಯ
ಸಂತೈಸುವ
ಇರುಳು...

- Indushekar Chinivar

16 May 2017, 09:48 pm

ತಾಯಿಯ ನೆರಳು

ಭದ್ರ ಕವಚದ ವಜ್ರದ ಹರಳು..ಕಂದನಿಗೆ ಪಂಜರ ಹಾಕಿದ ತಾಯಿಯ ಕರಳು..ಶೋದಿಸಿ -.ಭೋದಿಸಿ ಬೆಳೆಸಿದವಳು..ತುತ್ತು ಮಾಡಿ ಉಣಿಸಿದವಳು ಕೈಯಿಂದ ಹಿಡಿದು ಕೈಬೆರಳು..ಸದಾ ತಾಯಿಯ ಪ್ರೀತಿ ಮಗುವಿಗೆ ನೆರಳು....ತಾಯಿಯ ದಿನದ ಶುಭಾಶಯಗಳು...

- jnanadev

16 May 2017, 09:38 pm

ಅಪರಿಚಿವಾಗಬೇಕಿದೆ.........

ಅಪರಿಚಿತವಾಗಬೇಕಿದೆ ಒಮ್ಮೆ ನಾನು ನನ್ನೊಳಗೆ
ಚಿರಪರಿಚಿತ ನಾನು ಮನಸಿನೊಳಗಿನ ಬಲೆಗೆ
ಕನಸುಗಳದೆ ಸುನಾಮಿ ನನ್ನ ಎದೆಯೊಳಗೆ
ಕೊಚ್ಚಿ ಹೋಗುತಿರುವೆ ನಾ‌ ಇವುಗಳ ಅಲೆಗೆ

ಕೊಚ್ಚಿ ಹೋಗಲೇನು ಅದರೊಳಗೆ ಎಲ್ಲಾ ಮರೆತಂತೆ
ತೋರದೆ ದಡವ ಕಾಡುತಿವೆ ಕಾಣದ ಸಾವಿನಂತೆ
ಬಿಡುಗಡೆಯ ಬಾಗಿಲಿಲ್ಲವೆ ಈ ನೋವಿನ ಸೆರೆಮನೆಗೆ
ಅರಿಯದೆ ಸೋತು ಶರಣಾಗಲೇನು ಸಾವಿನ ಮನೆಗೆ

ಆಪ್ತವಾಗಬೇಕಿದೆ ನಾನೆಂದು ಅರಿಯದ ದಾರಿಗೆ
ಸೇರಿ ಬಿಡಲೇನು ಅವು ಎಳೆದು ಸಾಗುವ ಕನಸಿಗೆ
ಬದುಕಿನ ದಾರಿಯಲಿ ಎಂದೂ ನಿಲ್ಲದ ವಲಸಿಗಳು ನಾನು
ನನಗೂ ಸೇರಲು ಅಂತಿಮ ಸ್ಥಳವಿರಬಹುದೇನು?

- ಶ್ರೀಕಾವ್ಯ

16 May 2017, 09:06 pm

ನೀನಾಗು

ಹಣೆಯ ಮೇಲಿನ ಸಿಂದೂರ ನೀನಾಗು
ಆ ಹಣೆಬರಹ ಸುಂದವಾಗಿ ಬರೆಯುವ
ಲೇಖನಿಯಾಗು..............

ಕಣ್ಣಲ್ಲಿನ ತಂಪಾದ ಕಾಡಿಗೆಯಾಗು
ಆ ಕಣ್ಣಲ್ಲಿ ಕಂಬನಿ ಕರಗಿಸುವ
ನಗುವಾಗು...................

ಮುದ್ದಾದ ಮೂಗಿಗೆ ಬಂಗಾರದ
ಮೂಗುತಿಯಾಗು ಉಸಿರು ನಿಲ್ಲುವವರೆಗು
ಮರೆಯಾಗದ ಸ್ನೇಹವಾಗು........

ತುಟಿಯಲ್ಲಿ ಕೆಂಪಾದ ಬಣ್ಣನಿನಾಗು
ಪ್ರತಿಕ್ಷಣ ಆ ತುಟಿ ಕರೆಯುವ ಪ್ರೀತಿಯ
ಹೆಸರಾಗು...............

ಕೈಯಲ್ಲಿ ಗಾಜಿನ ಬಳೆಯಾಗು
ಆ ಕೈಹಿಡುದು ಈ ಜೀವ ಹೋಗುವವರೆಗೆ
ಜೊತೆಗಿರುವ ಸಂಗಾತಿಯಾಗು.........

ಸೊಗಸಾದ ಕಾಲಿಗೆ ಗೆಜ್ಜೆಯಾಗು
ಆ ಕಾಲಿನ ನಡಿಗೆ ನಿಲ್ಲುವವರೆಗೂ
ಕಾಯುವ ನೆರಳಾಗು..........

- ಚುಕ್ಕಿ

16 May 2017, 05:30 pm

ಮನಸಿನ ಮಾತು

ಬಾವನೆಗಳ ಬಳಿ ನಿಂತು ,ಕಾರಣಗಳ ಹುಡುಕುವ ಈ ಮನಸ್ಸು ,,,,
ಹುಡುಕಿ ಹುಡುಕಿ ಮೌನದ ಮನೆ ಕಟ್ಟಿತು ಮನಸ್ಸು,,,,
ಆಸೆಗಳ ಸರಮಳೆಯ ಮಾಡಿ ನಿನ್ನ ಪ್ರೀತಿಗಾಗಿ ಕಾತರದಿ ಕಾಯುತಿರುವೆ.........

- Acchu love

16 May 2017, 05:06 pm

ಮಳೆ ಹನಿ

ಮೌನದಲ್ಲಿ ಮನ ಕರಗುವ ಮಾತಿದೆ
ಎಂದು ತಿಳಿದದ್ದು ನಿನ್ನ ಕಣ್ಣ ಕಂಬನಿ ಕಂಡಾಗ.
ಹಗಲಲ್ಲಿ ಮನದಲಿ ಕತ್ತಲೆ ಮೂಡಿತು,
ನಿನ್ನ ಪ್ರಜ್ವಲಿಸುವ ಮುಖ ಕಾಣದಾಗ.
ಬಾಡಿ ಹೋದ ಗಿಡದಂತಿಹ ಈ ಜೀವಕ್ಕೆ,
ಮಳೆ ಹನಿಯಾಗಿ ಬರಬಾರದೆ ನೀನು.

- ಅಕ್ಷತ

16 May 2017, 02:06 pm