Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾನಾರೆಂದು ಎಲ್ಲರು ಬಲ್ಲರು
ಒಂದು ತುತ್ತು ನೀಡರು ಯಾರು?
ನನ್ನ ಬಡಕಲು ಕಾಯವ ನೋಡಿ
ಸುಂದರನಿರುವ ಇಲ್ಲಿ ಅದ ಒಡಿ
ಎಂದು ,ಬೆತ್ತದಿ ಬಡಿದು ತಗಳುವರು
ಬಡತನ- ಸಿರಿತನ ನರರನ್ನು ಭಕ್ಷಿಸುವ
ಭಕ್ಷಕನೆಂದು ಅರಿತಿದ್ದೆ ನಾ ಅಂದು
ಅದರ ಕೆನ್ನಾಲಿಗೆ ಆಕ್ರಮಿಸಿದೆ
ಸಕಲ ಜೀವರಾಶಿಗಳನು ಇಂದು
ಇರುಳೆಲ್ಲ ಕಾವಲುಗಾರನಾಗಿ
ಕಾಯುವೆ ನರರ ಮಾನ- ಪ್ರಾಣಗಳನು
ಅವರಾಕುವ ತುತ್ತು ಕೂಳಿಗೆ
ಜೀವಮಾನವೆಲ್ಲ ಋಣಿಯಾಗಿ
ನನ್ನ ಕಾಯವು ದುರ್ಬಲವಾದಾಗ
ನನ್ನ ಕಣ್ಣು ಮಂಜಾದಾಗ
ನನ್ನ ಅಂದವು ವಿರೂಪವಾದಾಗ
ಮಾನವೀಯತೆ, ಮರೆಯಾಗಿ ತಗಳುವರಾಗ....,,,,,,,!
ನಾನೊಂದು ಶ್ವಾನ
ನಿಯತ್ತೆ ನನ್ನ ಪ್ರಾಣ
ನಾನೆಂದು ಕೂಡಿಡುವುದಿಲ್ಲ
ವ್ಯಮೊಹವೆಂದು ನನಗಿಲ್ಲ
ಒಡೆಯನಿಗಾಗೆ ತನುವೆಲ್ಲ
ನೀ, ನಿಯತ್ತಾಗಿ ಬಾಳುವೆಯಲ್ಲ ?
ಶಾರಧ
- ಶಕುಂತಲಾ
21 May 2017, 11:43 am
ತಿಳಿ ನೀರ ಬಾವಿಯಲ್ಲಿ ಬಂದಿಯಾದ ಚಂದ್ರನ
ಬಿಡಿಸಲು ಸಾಧ್ಯವೆ
(ನನ್ನ ಹೃದಯದಲ್ಲಿ ಬಂದಿಯಾದ ಚಂದ್ರಿಕೆಯಾ
ಬಿಡಿಸಲು ಸಾಧ್ಯವೆ) ಚೆಲುವೆ
ಬಿಡಿಸುವ ನೆಪದಲ್ಲಿ ಬಳಿ ಬಂದು
ಹೃದಯಕ್ಕೆ ಬಾಣ ವಾ ಬಿಟ್ಟು, ಬಿಳಿಯಾಳೆ ಕೊಟ್ಟೆಯಾ...ಚೆಲುವೆ
ಪ್ರದೀಪ್. ಡಿ ಸೊಬಗು
- ಪ್ರದೀಪ್.ಡಿ
21 May 2017, 09:00 am
ದಿನಚರಿಯ
ಬರೆಯಲು
ದಿನಕರ
ಹೊಸ ಪುಟ
ತೆರೆದ ಬೆಳಗು...
- Indushekar Chinivar
21 May 2017, 06:35 am
ಮನಸಲ್ಲಿ ತುಂಬಿದೆ ನೂರಾರು ಕನಸು...
ಹೇಳಾಲಾಗುತ್ತಿಲ್ಲ ಮನಸಲ್ಲೇ ಮುನಿಸು...
ಕಣ್ಣಲ್ಲಿ ತುಂಬಿದೆ ಆ ಮನಸಿನ ಕನಸು..
ಕಣ್ಣಿರಾಗಿ ಹರಿಯುತ್ತಿದೆ ಅ ಮುನಿಸು...
ಆದರೂ ಸುಮ್ಮನಿದೆ ಈ ನಿಗೂಢ ಮನಸು..
ಇದನ್ನು ಅರಿತವರೇ ಬಾಳೂದು ಏಲ್ಲವನ್ನು ಮರೆತು...
ಇದರಲ್ಲಿರುವ ಭಾವನೆ ಒಂದೇ ಅದುವೇ...............
ಈ ನೀರವ ಮೌನ ........
- Shru Sush
20 May 2017, 11:04 pm
ಜೀವನ ಒಂದು ನಾಟಕ ರಂಗ,
ಸೂತ್ರದಾರಿ ಅವನೆ ಪಾಂಡುರಂಗ,
ಇದ ತಿಳಿದವ ದಾಟುವ ಜೀವದ ಹಂಗ,
ತಿಳಿಯದವ ಸಿಲುಕುವ ರೇಷ್ಮೆ ಹುಳುವಿನಾಂಗ. . .
- tippu
20 May 2017, 10:45 pm
ಹೊಸತು ಹೊಸತೆಂದೇಕೆ
ಹಳತನು ದೂರುವೆ ನಾಳಿಗದು ಹಳತೆ
ಹೊಸತು ಬರುವ ತನಕ ಹಳತಿನ
ಒಳಿತು ನೆನೆದು ಬದುಕು ಓ ಮನುಜ
ಬಾ ಬಾ ಎನ್ನುವುದ ಬಿಡು
ಬಂದಿರುವುದ ನೆನೆದು ಮನುಜ
ಇಲ್ಲ ಇಲ್ಲೆಂದೇಕೆ ಸಿಡುಕುವೆ
ಬದುಕು ಇರುವುದ ನೆನೆದು
ಹರ್ಷವಿಲ್ಲೆಂದೇಕೆ ಮರುಗುವೆ
ಕುರುಡು ಕತ್ತಲ ಆಚೆ ದಿಟ್ಟಿಸು
ಹರ್ಷ ತಾನಾಗಿಯೇ ಬರುವುದು
ಸೊರಗಬೇಡ ಹೊಸ ಚಿತ್ತವಿರಲಿ ಸುತ್ತ
ಇರುವುದರಲ್ಲಿ ಇತರರಿಗಿಕ್ಕಿ ತಣಿಸಿದೆಡೆ
ಬಂದಗಳು ಬಾಂಧವ್ಯ ಬೆಸೆಯುವುವು
ಇತರರನ್ನು ಕಸಿದುಕೊಂಡು ಕುಣಿದೆಡೆ
ಬಂಧಗಳು ಬೇಸತ್ತು ಬರಡಾಗುವವು ಓ ಮನುಜ
ಭಕ್ತಿಯ ಹಾದಿಯಲಿ
ಮುಕ್ತಿಯಾಕಂಡುಕೊಂಡ
ಪುಣ್ಯಾತ್ಮರು ನೂರಾರು ಅದರ್ಶವಾಗಿರುವಾಗ
ಶಕ್ತಿಯಿಂದ ಮುಕ್ತಿ ಗೆಲ್ಲ ಹೊರಟ
ಮೂಡ ನೀ ಓ ಮನುಜ....
-ಅನಿಲ್ ಕುಮಾರ್. ಜಿ.
- ಅನಿಲಕುಮಾರ್.ಜಿ.
20 May 2017, 03:15 pm
ಕವಿ ಅಲ್ಲ ನಾನು
ಆದರು ಬರೆಯುವೆನು
ಪದಪುಂಜಗಳ ಕಡಲ ಈಜಲಾರೆನು
ಆದರು ನಿಂತಿಲ್ಲ ಬರೆಯುವ ವ್ಯಾಮೋಹವಿನ್ನು
ಮನಸೊಳಗೆ ಪದಗಳದೆ ಗೊಣಗಾಟ
ಮಾತಿಗೆ ನಿಲುಕದ ಪರದಾಟ
ಬರೆಯಬೇಕೆಂಬ ಆಸೆ ಆಡುವುದು ಬಯಲಾಟ
ಬರೆಯಲಾರದೆ ಅನುಭವಿಸಲಾರೆನು ಈ ತೊಳಲಾಟ
ಮನಸಿನಲಿ ಕಟ್ಟುತ್ತಿರುವೆ ಪದಗಳ ಹೂದೋಟ
ಒಂದೊಂದು ಹೂವ ಹೆಕ್ಕಿ ಭಾವಗಳ ಸೇರಿಸಿ ಸಾಲುಗಳ ಕಟ್ಟುವುದೆ ಆಟ
ನಿಲ್ಲದು ಸುಂದರ ಸಾಲುಗಳ ಮಾಲೆಯ ಕಟ್ಟಬೇಕೆಂಬ ಚಟ
ಎಂದಿಗೂ ನಿಲ್ಲದಿರಲೆಂದು ಬಯಸುವೆ ಈ ಚಟದ ಆರ್ಭಟ
ಸಹಸ್ರ ಸುಂದರ ಪದಗಳ ಹೆಕ್ಕುವುದ ಅರಿಯೆನು
ಆದರೂ ತಿಳಿದಷ್ಟು ಪದಗಳ ಪೋಣಿಸಿ ಭಾವ ಸೇರಿಸುವೆನು
ನಾ ಬರೆಯುವ ಸಾಲುಗಳ ಸೊಗಸನ್ನು ನಾನು ತಿಳಿಯೆನು
ಬರೆಯುವಾಗಲೆಲ್ಲ ಮನಕೆ ಕಂಪು ಸೂಸಿ ಖುಷಿ ಮೂಡಲೆಂದೆ ಬರೆಯುವೆನು
ತಪ್ಪಿದ್ದರೆ ಮನ್ನಿಸಿ ತಿದ್ದಿ ಎನ್ನನು
ಕವಿ ಅಲ್ಲ ನಾನು
ಆದರೂ ಬರೆಯುವೆನು.....
- ಶ್ರೀಕಾವ್ಯ
20 May 2017, 12:54 pm
ನನ್ನ ನಲ್ಲನ ನೆನೆವುದೆ ಒಂದು ಸುಂದರ ಕನವರಿಕೆ.......
ಅದು ಅವನಿಗೆ ಯಾವಾಗ ಆಗುವುದೂ ಮನವರಿಕೆ.....
ನನ್ನ ಮನದ ತುಂಬಾ ಅವನದೇ ಚಡಪಡಿಕೆ...
ಅದನ್ನು ಅರಿತು ಯಾವಾಗ ಬರುವನೂ ಸನಿಹಕೆ.....
ಏನೇ ಆದರೂ ಕೊನೆ ವರೆಗೂ ಕಯುವೆ ಗೆಳೆಯ...
ಆಗಲಾದರು ತಿಳಿ ನನ್ನ ಮನದ ಸಿಹಿಯ...
ಇಂತಿ
ನಿನ್ನ ಕಯುತ್ತಿರುವ ಹೃದಯ
- Shru Sush
20 May 2017, 12:33 pm
*ಸುಂದರ ನಲ್ಲೆ*
By *ಮಂಜು*
"ನಲ್ಲೆ ನೀ ಮುಡಿದ ಮಲಿಗೆಯ ಹುವಿನ ಕಂಪಿಗೆ ದಿನಕರನ ಬಿಸಿಉಸಿರಿನ ಗಾಳಿ ತಂಪಾಗಿದೆ ."
"ನಲ್ಲೆ ನೀ ನಡೆವ ಕಲ್ಲು ಮುಳ್ಳಿನ ಹಾದಿ ನಿನ್ನ ನೇೂಡಿ ಹೂ ಮಳೆಯನ್ನೇತರಿಸಿದೆ."
"ನಲ್ಲೆ ನಿನ್ನ ಬಳುಕುವ ವೈಯಾರದ ನಡು ನೇೂಡಿ ಹಂಸದ ನಡುಜಾರಿದೆ."
"ನಲ್ಲೆ ನಿನ್ನ ಈ ಸುಂದರ ಮೊಗವ ಕಂಡ ಆ ಚಂದಿರ ನಾಚಿ ನೀರಾಗಿ ಈ ಭೂಮಿಗೆ ಬಂದು ನಿನ್ನನು ಸ್ಪರ್ಷಿಸಿದ...."
"ನಲ್ಲೆ ತಂಗಾಳಿಗು ಕೂಡ ನಿನ್ನ ಮೈ ಸವರೊ ಆಸೆ....."
*ಮಂಜು.ಸಿ*
- Manjunatha.c
19 May 2017, 11:04 pm
ಓ ನನ್ನ ಮುದ್ದು ಕಂದಮ್ಮ....
ನಿನ್ನ ಮುದ್ದು ನಗೆಯ ನೋಡಲು ಏನೂ ಚಂದವಮ್ಮ....
ನಿನ್ನ ಮುಗ್ದ ನಗುವೆ ನನ್ನ ನೋವಿನ ಕೂನೆಯಮ್ಮ ..
ನೀ ನಕ್ಕರೆ ಅದುವೇ ನನ್ನ ಸ್ವರ್ಗವಮ್ಮ....
ನೀ ಎಂದು ಈಗೆ ನಗುತಿರು .......
ಓ ನನ್ನ ಮುದ್ದು ಕಂದಮ್ಮ........
- Shru Sush
19 May 2017, 08:09 pm