Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಾಳೆಂಬ ರಥದಲ್ಲಿ ಚಕ್ರವಿಲ್ಲದ ರಥ
ಹೊರಟಿರುವ ಬಂಡ ಬದುಕು .
ಬಂಡ ಬದುಕಲ್ಲಿ ಬಯಸಿದೆ ಏನೋ ಒಂದು
ಅದೇಕೋ ಸಿಗದೇಹೋಹಿತು ಇಂದು
ಬರದ ಬದುಕಿನಲ್ಲಿ ಬಯಿಸಿದೆ ಅನುರಾಗದ ಕಲರವದ ಬಯಕೆಯ .
ಇದೆಲ್ಲ ನೀಲುಕದ ಸ್ವಪ್ನ ಲೋಕದ ಬಯಕೆಯ
ಬಯೀಸಿದ ಸಿರಿ
ಆಸೆಯ ಭಾವ ತಂದಳು ಮನದ ಆಗಸದಲ್ಲಿ
ಕೈಚಾಚಿ ಕರೆದಳು ಚಂದ್ರಚಕೋರಿ
ನೀಲಿ ಹಾಳೆ ಗಗನದಿ ಬಿಳಿ
ಚುಕ್ಕೆಯ ನಡುವೆ ಬೆಳ್ಳಿ ಚುಕ್ಕೆಯ ಬಯಸಿದ ಪರಿ
ಬಯಕೆ ಬರಿ ಕವಿದಕಾಲಿ ಮೋಡ ಚಲಿಸಿದ ಝರಿ
ಬಯಕೆ ಬರಿ ಸತ್ತು ಸರಿಗಮದ ಹೊಂಗನಸ ಕಲ್ಪನೆಯ ಮನದಾಟದ ನುಡಿ
ಬಯಸಿದೆ ಬಯಕೆಯ ಬರಿದಾದ ಬಾಳಲಿ
ಬಯಸು ಬರಿ ಬಯಕೆಯಾಗುಳಿದ ಗುರಿ......
✍✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
23 May 2017, 01:12 am
ಯಾರದೋ ನಗುವಿಗೆ
ನಲಗುವರಿದ್ದಾರೆ ಜಗದೊಳು
ಯಾರದೋ ನೋವಿಗೆ
ನಗುವವರಿದ್ದಾರೆ ಜಗದೊಳು
ನಿನ್ನ ನಗುವಿಗೆ ನಕ್ಕು
ನಿನ್ನ ಅಳುವಿಗೆ ಅತ್ತು
ಬದುಕುವವನಿದ್ದಾನೆ ನನ್ನೊಳು
- sureshsuri@gmail.com
22 May 2017, 11:56 pm
ಕೇಳೆನು ಗೆಳೆಯ ಆ ಕಾಮನಬಿಲ್ಲ ತಂದಿರಿಸು ನನಗಾಗಿ
ಆ ಬಣ್ಣಗಳ ನಾ ಮೋಹಿಸಿರುವೆನೆಂದು
ನಾ ಹೇಳೆನು ಆ ಶಶಿಯ ಕೊಂಡು ತಾ ನನಗಾಗಿ
ಆ ಕಾಂತಿಯು ಬೇಕಿದೆ ನನ್ನ ಸಿಂಗರಿಸಲೆಂದು
ನಾ ಆಸೆಪಡೆನು ತಾ ಆ ಇರುಳ ಎನಗಾಗಿ
ನನ್ನ ಕಣ್ಣ ಸಿಂಗರಿಸುವ ಕಣ್ಣ ಕಾಡಿಗೆಗೆಂದು
ನಾನು ಇಚ್ಛಿಸೆನು ನಕ್ಷತ್ರ ಪುಂಜವ ಕೊಂಡು ಬಾ ನನಗಾಗಿ
ಮಾಲೆ ಕಟ್ಟಿ ಮುಡಿಗೆ ಏರಿಸಿ ಆನಂದಿಸಬೇಕೆಂದು
ನಾ ಬಯಸೆನು ಆ ಸೂರ್ಯನ ಧರೆಗಿಳಿಸು ನನಗಾಗಿ
ಅವನು ನನ್ನಣೆಯ ಸಿಂಧೂರವಾಗಲೆಂದು
ನಾ ಗೊಣಗೆನು ತಾ ಆ ಮಳೆರಾಯನ ನನಗಾಗಿ
ನನ್ನೆಲ್ಲ ನೋವ ಕಣ್ಣೀರೆಲ್ಲ ಒರೆಸಲೆಂದು
ನನ್ನ ಬಯಕೆಗಳೇನಿದ್ದರು
ಆ ಕಾಮನಬಿಲ್ಲ ಕಂಡಾಗ ತೋರಿಸು ಕೈ ಹಿಡಿದು ಜೊತೆ ನಿಂತು ಮತ್ತೊಮ್ಮೆ ನನ್ನ ಮಗುವಾಗಿಸುವವನಾಗು
ಆ ಶಶಿಯಂದವ ನೋಡುತ ಮೈಮರೆತಾಗ ನಿನ್ನ ಪ್ರೀತಿಯ ಅಂದವ ನನಗುಣಿಸಿ ಅವನ ಮರೆಸುವವನಾಗು
ಆ ಇರುಳಲಿ ಬೆಚ್ಚಿ ನಿಂತಾಗ ಜೊತೆ ನಡೆದು ದಾರಿ ತೋರುವ ಸಹಪಾಠಿಯಾಗು
ಆ ನಕ್ಷತ್ರಗಳ ಪುಂಜವ ಜೋಡಿಸಿ ಚಿತ್ರ ಬರೆಯುವಾಗ ಜೊತೆಗಾರನಾಗು
ಸೂರ್ಯನ ಉರಿ ಬಿಸಿಲ ಕಂಡು ಸೋತಾಗ ನೆರಳ ಅರಸಿ ನೀಡುವವನಾಗು,
ಆ ಮಳೆರಾಯನ ಕಂಡು ಮನಸು ಕುಣಿವಾಗ, ನೋವಲಿ ಸೋತು ನಿಂತಾಗ ಅವನ ಹನಿಯ ಮಾಲೆಯೊಳಗೆ ನನ್ನ ನಲಿಸುವವನಾಗು
- ಶ್ರೀಕಾವ್ಯ
22 May 2017, 09:31 pm
ಅದುರುತಿರುವ ಎಡಗಣ್ಣ ನೋಡಿ
ಶುಭ ಸಂಕೇತವೆಂದು ತಿಳಿದು
ಕಾಯುತಿರುವೆ ಆ ಕ್ಷಣಕೆ ಮನ
ಕೋಲಾಹಲದಿಂದ ಕುಣಿಯುವ ಘಳಿಗೆಗೇ .
ಬಾಡಿದ ಹೂ ಬಳ್ಳಿ ಚಿಗುರಿ
ಸೊಗಸಾದ ಹೂ ಬಿಡುವ ದಿನಕ್ಕೆ.
ಎಂದು ಬಾಡದ ನಿನ್ನ ಕಣ್ಣ ಹೂಗಳು
ನನ್ನ ರೂಪ ತುಂಬಿ ನಗೆಬಿರುವ ಕ್ಷಣಕ್ಕೆ.
- ಚುಕ್ಕಿ
22 May 2017, 04:43 pm
ಒಂಟಿಯಾದರು ತುಟಿಯಂಚಲಿ ನಸು ನಗು ಮೂಡುತಿದೆ..
ಹೇಗೆ ಹೇಳಲಿ ನಾ, ಏನೆಂದು ವಿವರಿಸಲಿ ನಾ?
ಕಂಡು ಕಾಣದ ಆ ಗೆಳೆಯನ,
ದೂರವಿದ್ದರು ಕಾಡುವ ನನ್ನ ಇನಿಯನ..
ಪುಳಕದಲಿ ಹೃದಯವು ಅರಳುತ್ತಿದೆ ಹೂವಾಗಿ,
ಮತ್ತೆ ಮುದುಡುತ್ತಿದೆ ನಾಚುತ ಮೊಗ್ಗಾಗಿ..
ಅವನೊಂದಿಗೆ ಸ್ವಚ್ಚಂದವಾಗಿ ಹಕ್ಕಿಯಂತೆ ಹಾರಲೆ..?
ಇಲ್ಲ ಎದೆಯ ಗೂಡಲಿ ಪುಟ್ಟ ಗುಬ್ಬಿಯಂತೆ ಬಚ್ಚಿ ಕೂರಲೆ..?
ಎಲ್ಲಿರುವನೊ ? ಎಂದು ಬರುವನೊ ?
ಕಣ್ಣ ರೆಪ್ಪೆಯಂತೆ ಕಾಯಲು..
ಕಪ್ಪೆ ಚಿಪ್ಪಿನಂತೆ ಜೋಪಾನ ಮಾಡಲು..
- Acchu love
22 May 2017, 03:00 pm
ಲೆಕ್ಕವಿಲ್ಲದ ಅದೆಷ್ಟೋ ಹಗರಣಗಳು
ತೂಕಡಿಸುತ್ತ,ಸಾಗುತಿರುವ ತನಿಕೆಗಳು
ದಲಿತರ ಉದ್ದಾರದ ಮಂತ್ರ
ಅವರ ಮನೆಯಲ್ಲಿ
ಉಣ್ಣುವುದರಲ್ಲಿ ಮಾತ್ರ
ತನಿಕೆಯ ನೆಪದಲ್ಲಿ
ಬಡವರ ಸಂಹಾರ
ಅದೆ,ತನಿಕೆಯ ಮರೆಯಲ್ಲಿ
ಸಿರಿವಂತರ ಉದ್ದಾರ
ಇದೆ,ನಮ್ಮನಾಳುವವರ ಉದ್ಗಾರ
ಸಮಾಜವೆಂಬ ಸುಂದರ
ಹೂ-ದೋಟವು
ಹಗರಣಗಳೆಂಬ ಕೀಟಗಳ
ಹಾವಳಿಯಿಂದ ಸೊರಗಿಹವು
ತನಿಕೆಯೆಂಬ ಔಷಧಿ ಸಿಂಪರಣಿಕೆಯು
ಸಾಗಿದೆ ಆಮೆ- ಗತಿಯಲ್ಲಿ
ಸಾವಿರಾರು- ಸಮಸ್ಯೆಗಳು
ನೂರಾರು- ಹೋರಾಟಗಳು
ಹತ್ತಾರು- ಸಲಹೆಗಳು
ಆರ್ಥಿಕತೆಯ ಬೆನ್ನೆಲುಬು ನಾವು
ಅಭಿವೃದ್ಧಿಯ ನೆಪದಲ್ಲಿ ಮಣ್ಣಾದೆವು
ಹರಿಯುವುದು ಆಶ್ವಾಸನೆಯ
ಮಹಾಪೂರ
ಅರಿಯುವವರಿಲ್ಲ ನಮ್ಮೆದೆಯ
ದುಃಖದ ಸಾಗರ
ಬಿತ್ತಿ- ಬೆಳೆವವರು ನಾವು
ಕೂತು- ಉಣ್ಣುವವರು ನೀವು
ನಿಮ್ಮ ಒಪ್ಪಿಗೆ
ನಾವು ತಿನ್ನುವ ತುತ್ತಿಗೆ ....,,,,,,,,?
ದಿನವಿಡೀ ಶ್ರಮವಹಿಸಿ ದುಡಿವೆವು
ದೇಹವ ದಂಡಿಸಿ- ಕಬ್ಬಿಣವ ಬಗ್ಗಿಸಿ
ಬಂಡೆಗಳ ಬಡಿದು- ಬೆವರ ಸುರಿಸಿ
ವೈಭವದ ಮಹಡಿಯ ನಿರ್ಮಿಸಿವೆವು
ಬೇಸತ್ತು ಹೋಗಿದೆ ಮನ
ಆಶ್ವಾಸನೆ,ಪರಿಶೀಲನೆ, ಯೋಜನೆ ?
ಜಡತ್ವವ ಬಿಡಿ ,ನ್ಯಾಯವ ನೀಡಿ.
ಶಾರಧ
- ಶಕುಂತಲಾ
22 May 2017, 12:44 pm
ಕಣ್ಣಲ್ಲಿ ಕರಗಿದ್ದ ಸೊಗಸಾದ
ಕನಸು ನನಸಾಗಿ ಬಂತೆ ನೀನಾಗಿ
ಹೆಸರಿಡುವ ಮೊದಲೇ ತಿಳಿಸಿಹೊಯ್ತೆ
ನಿನ್ನ ನಗುವಾಗಿ
ಮರೆತಿದ್ದ ಮಾತೊಂದು ಮರೆಯದೆ
ನೆನಪಾಯ್ತೆ ಇಂದು ತಡವಾಗಿ
ಹೇಳೋಕು ಮುನ್ನ ಬದಲಾಯಿತೆ
ನಿನ್ನ ಪ್ರೀತಿಯ ರೂಪವಾಗಿ
- ಚುಕ್ಕಿ
21 May 2017, 11:24 pm
ಹುಡುಕಿ ನೋಡಿದೆ ನನ್ನ ನಗುವನ್ನು
ನನ್ನ ತುಟಿಯಲ್ಲಿ ಕಾಣಲಿಲ್ಲ..........
ಕಾಯುತ್ತಿದ್ದೆ ಬರಬಹುದೇನೋ ಅಂತ
ನನ್ನ ಕನಸಲ್ಲಿ ಬರಲಿಲ್ಲ.............
ಬಿಡದೆ ನೋಡುತ್ತಿದ್ದೆ ಅದು
ಕಾಣಬಹುದೇನೋ ಎಂದು ನನ್ನ
ನೆರಳಲ್ಲಿ ಕಂಡಿಲ್ಲ....................
ಕನ್ನಡಿಯ ಮುಂದೆ ನಿಂತು ನೋಡಿದೆ
ಅಡಗಿದಿಯೇನೋ ಎಂದು ಕನ್ನಡಿಯ
ಮರೆಯಲ್ಲಿ ಸಿಗಲಿಲ್ಲ................
ನಾನೆಂತ ದಡ್ಡಿ ಊರೆಲ್ಲಾ ಹುಡುಕುತ್ತಿದ್ದೆ
ಕಳೆದೊದ ನಗುವಿಗಾಗಿ ಮರೆತೇ ಹೋಗಿದ್ದೆ.................
ನಾನು ಅದನ್ನು ಬಚ್ಚಿಟ್ಟಿದ್ದು ಅಮ್ಮನ ಮನಸಲ್ಲಿ
ಅವರು ನನಗಾಗಿ ಮಾಡುವ ಮಾಡುವ ಪ್ರತಿ ಕೆಲಸದಲ್ಲಿ................
ಅವರ ನಗು ಮುಖದಲ್ಲಿ..................
- ಚುಕ್ಕಿ
21 May 2017, 08:16 pm
ಅಲೆಯ ಮೇಲಿನ ಗುಳ್ಳೆಯಂತೆ
ಕಂಡೆ, ಕ್ಷಣಕೆ ಮರೆಯಾದೆ...
ಸುಳಿವ ಕೋಮಲ ಕನಸಿನಲಿ
ಅದ್ದಿ ತೆಗೆಯುವೆ ನಿನ್ನ ರೂಪವ
ಮೂಡಿಸುವೆ ಆಗಸದಲಿ
ನಿನ್ನ ಮೋಹಕ ಚಿತ್ರವ
ತೇಲುವ ಮುಗಿಲಲಿ
ಹುಡುಕುವೆ ನಿನ್ನ ಮೈ ಮಾಟವ
ಅರಳುವ ಹೂವಲಿ
ಅರಸುವೆ ನಿನ್ನ ಗಂಧವ
ಹಗಲಿರುಳು ಅಲೆವ ಮನಕೆ
ನಿನ್ನ ನೆನಪು ಆಸರೆ
ಇಂದಲ್ಲ ನಾಳೆ ನೀ
ಸಿಗುವೆಯೆಂಬ ಭರವಸೆ...
- Indushekar Chinivar
21 May 2017, 07:33 pm
ಒಮ್ಮೊಮ್ಮೆ ಹೀಗೂನು ಇರುವೆನು
ಎತ್ತಲೊ ಸಾಗುವ ದಾರಿಯನೆ ನೋಡುತ ಕೂರುವೆನು
ನಾ ಹೋಗಬೇಕಿರುವ ದಾರಿಯನೆ ಮರೆಯುವೆನು
ಕಾಣದವರೊಮ್ಮೆ ಎದುರು ಬಂದಾಗ ಅರಿವಿಲ್ಲದೆ ನೋಡುತ್ತಿರುವೆನು
ಕಂಡವರು ಒಮ್ಮೆ ನೆಪ್ಪಿಡಿದು ಮಾತಿಗಿಳಿದರು ಮೌನಿಯಾಗುವೆನು
ಕಾರಿರುಳ ರಾತ್ರಿಯ ಪ್ರೀತಿಯಿಂದ ಅಪ್ಪಿ ಕೂರುವೆನು
ಅದೆ ರಾತ್ರಿಯನು ಶಪಿಸಿ ನೋಯುವೆನು
ನನ್ನೆದುರು ಇದ್ದುರು ನೋಡುತ್ತಿದ್ದರು ಅರಿವಿಗೆ ಬಾರದಂತೆ ಸ್ಮೃತಿಪಟಲ ಮುಚ್ಚಿರುವೆನು
ಇನ್ಯಾವುದೊ ಅರಿಯದ ಸಂಗತಿಯ ಮನಸೊಳಗಿಟ್ಟು ಅದರದೆ ಗೊಣಗಾಟದಲಿ ಸಾಗುವೆನು
ಮನಸೊಳಗೆ ಏನೇನೊ ಬಡಬಡಿಸುವೆನು
ಆದರು ಏನನು ಹೇಳದೆ ಏಕಾಂಗಿಯಾಗುವೆನು
ಸಾವಿರ ನೋವಿದ್ದರು ನಗುತ್ತ ಇರುವೆನು
ಕೆಲವೊಮ್ಮೆ ಖುಷಿಯ ಕಂಡಾಗಲು ಕಣ್ಣೀರು ಹಾಕುವೆನು
ನೋಟವ ಎಲ್ಲೊ ನೆಟ್ಟು ಅದರ ಅರಿವಿರದಂತೆ ಇನ್ನೇನೊ ಯೋಚಿಸುವೆನು
ಕೆಲವೊಮ್ಮೆ ಊಹೆಗು ನಿಲುಕದ್ದ ಮನಸಲೆ ನೋಡುತ ಕಳೆದೋಗುವೆನು
ಕೆಲವೊಮ್ಮೆ ಕೊನೆಯ ಕಾಣದ ಮುಗಿಲಿನಂತೆ ಹರಟುವೆನು
ಮಗದೊಮ್ಮೆ ಮಾತೆಬಾರದೆಂಬಂತೆ ಮೂಕಿಯಾಗುವೆನು
ಹಾಗೊಮ್ಮೆ ಹೀಗೆ, ಹೀಗೊಮ್ಮೆ ಹಾಗೆ
ನಾ ಈ ರೀತಿಯು ಇರುವೆನು
- ಶ್ರೀಕಾವ್ಯ
21 May 2017, 12:16 pm